Homeಮುಖಪುಟನಾನು ಪೌರವಾಣಿ ಪತ್ರಿಕೆಯ ಸಂಪಾದಕನಾಗಿದ್ದು ಹೇಗೆ? ದೊರೆಸ್ವಾಮಿಯವರ ನೆನಪುಗಳು...

ನಾನು ಪೌರವಾಣಿ ಪತ್ರಿಕೆಯ ಸಂಪಾದಕನಾಗಿದ್ದು ಹೇಗೆ? ದೊರೆಸ್ವಾಮಿಯವರ ನೆನಪುಗಳು…

38 ದಿನಗಳ ಕಳಪೆ ಸಂಪಾದಕ ಎಂದು ದೊರೆಸ್ವಾಮಿಯವರನ್ನು ಹಂಗಿಸಿದ್ದಕ್ಕೆ ಅವರು ಕೊಟ್ಟ ಉತ್ತರ ಇಲ್ಲಿದೆ.

- Advertisement -
- Advertisement -

ಬಾಬು ಕೃಷ್ಣಮೂರ್ತಿಯವರು ಪತ್ರಕರ್ತರು, ಬರಹಗಾರರು, ಒಳ್ಳೆಯ ಚಾರಿತ್ರಿಕ ಪುಸ್ತಕಗಳನ್ನು ಬರೆದಿದ್ದಾರೆ. ನನಗೆ ಅವರಲ್ಲಿ ಇಂದಿಗೂ ಪ್ರೀತಿ ಇದೆ. ಬಾಬು ಕೃಷ್ಣಮೂರ್ತಿಯವರನ್ನು ಅವರು ಮಗುವಾಗಿದ್ದಾಗಿನಿಂದಲು ಬಲ್ಲೆ. ಅವರ ತಾಯಿ ಸೀತಮ್ಮ, ತಂದೆ ಶಾಸ್ತ್ರಿ ಆಯುರ್ವೇದ ಪಂಡಿತರು. ಸೀತಮ್ಮನವರು ನಿಧನರಾಗುವುದಕ್ಕೆ­ ಮೊದಲು ನಾನು ಅವರನ್ನು ಭಾರತಿ ನರ್ಸಿಂಗ್ ಹೋಂಗೆ ಹೋಗಿ ಮಾತನಾಡಿಸಿಕೊಂಡು ಬಂದಿದ್ದೆ.

ಬಾಬು ನನ್ನನ್ನು ಮೊದಲ ಬಾರಿಗೆ ಈಗ ತರಾಟೆಗೆ ತೆಗೆದುಕೊಂಡಿದ್ದಾರೆ. ಗೋಡ್ಸೆ ವಿಚಾರದಲ್ಲಿ ಅವರು ನನ್ನ ಮೇಲೆ ಆಗ್ರಹ ಮಾಡಿರುವುದಕ್ಕೆ ನಾನು ಅವರ ಬಗೆಗೆ ಈ ರೀತಿ ಹೇಳುತ್ತಿಲ್ಲ. ಗೋಡ್ಸೆ ಬೆಂಗಳೂರಿಗೆ ಬಂದಿದ್ದ ವಿಚಾರವನ್ನು ನಾನು ಆನಂತರ ಪ್ರಸ್ತಾಪಿಸುತ್ತೇನೆ.

ಬಾಬು ಕೃಷ್ಣಮೂರ್ತಿ ನನ್ನನ್ನು ಕೆಲಸಕ್ಕೆ ಬಾರದ 38 ದಿನಗಳ ಪತ್ರಿಕಾ ಸಂಪಾದಕ ಎಂದು ಕರೆದು ಹಂಗಿಸಿದ್ದಾರೆ. ಈ ಮಾತು ನನ್ನನ್ನು ಇರಿಯಿತು. ಜೂಲಿಯಸ್ ಸೀಸರ್ ತನ್ನ ಪರಮ ಸ್ನೇಹಿತ ಎಂದುಕೊಂಡಿದ್ದ ಬ್ರೂಟಸ್ ತನ್ನನ್ನು ಇರಿದಾಗ `Yours is the  most unkindest cut of all’  ಎಂದು ಜರಿದ.

ಪತ್ರಿಕಾ ಸಂಪಾದಕರಾಗಿದ್ದ ಬಾಬು ಕೃಷ್ಣಮೂರ್ತಿ ನನ್ನನ್ನು 38 ದಿನಗಳ ಕಳಪೆ ಸಂಪಾದಕ ಎಂದು ಹೇಳಿರುವುದನ್ನು ಕುರಿತು ನಾನೂ ಕೂಡ Yours is the most unkindest cut of all’ಎಂದು ಹೇಳಬೇಕಿದೆ. ಸೀಸರ್ ಬ್ರೂಟಸ್‍ನ ಈ ಗೆಯ್ಮೆಯನ್ನುSuperlatives ನಲ್ಲಿ Unkindest ಎಂದು ಮಾತ್ರ ಹೇಳದೆ Most ಎಂಬ ಇನ್ನೊಂದು Superlatives ಕೂಡಾ ಬಳಸಿದ್ದಾನೆ. ಬ್ರೂಟಸ್‍ನ ಈ ಕೃತ್ಯ ಸೀಜರ್‌ನನ್ನು ದಿಗ್ಭ್ರಮೆಗೋಳಿಸಿದೆ. ಬಾಬುಕೃಷ್ಣಮೂರ್ತಿಯವರ ಈ ಮಾತು ನನ್ನನ್ನು ಸೀಜರ್‌ನಷ್ಟೇ ದಿಗ್ಭ್ರಮೆಗೊಳಿಸಿದೆ.

ಪೌರವಾಣಿ ಪತ್ರಿಕೆಯನ್ನು ಆರಂಭಿಸಿದ ನಮಗೆ – ಸ್ವಾತಂತ್ರ್ಯ ಹೋರಾಟಗಾರ ಯುವಕರು – ಸ್ವಾತಂತ್ರ್ಯ ಬೇಗ ದೊರಕಿಸಿಕೊಳ್ಳಬೇಕು ಎಂಬ ತವಕವಿತ್ತು. ನಮ್ಮ ನಾಯಕರನ್ನು ಪ್ರತಿ ಎಂಪಿಸಿಸಿ ಸಭೆಯಲ್ಲೂ ಜವಾಬ್ದಾರಿ ಸರ್ಕಾರ ಪಡೆಯಲು ತಡಮಾಡದೆ ಹೋರಾಟ ಆರಂಭಿಸಬೇಕೆಂದು ಒತ್ತಾಯ ತರುತ್ತಿದ್ದೆವು. ಇದಕ್ಕೆ ಪೂರಕವಾಗಿ ಒಂದು ಪತ್ರಿಕೆಯನ್ನು ಆರಂಭಿಸಲೂ ತೀರ್ಮಾನಿಸಿದೆವು. ಪೌರವಾಣಿ ಬೆಂಗಳೂರಿನಲ್ಲಿ ಜನ್ಮ ತಾಳಿತು. ಬೆಂಗಳೂರು ಜಿಲ್ಲಾ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷರಾಗಿದ್ದ ದೊಡ್ಡಬಳ್ಳಾಪುರದ ರುಮಾಲೆ ಭದ್ರಣ್ಣನವರು ಪೌರವಾಣಿಯ ಮೊದಲ ಸಂಪಾದಕರಾದರು. ಪೌರವಾಣಿ ದಿನಪತ್ರಿಕೆ ಬೆಲೆ 3 ಕಾಸು. ರಾಯಟರ್ಸ್ ಮತ್ತು ಪಿಟಿಐ ಸುದ್ದಿಗಳನ್ನು ತರಿಸಿಕೊಳ್ಳುತ್ತಿದ್ದೆವು.

ಪತ್ರಿಕೆ ಬಹಳ ಬೇಗ ಜನಾದರಣೆ ಗಳಿಸಿತು. ಭದ್ರಣ್ಣನವರು ನಾಯಿ ಕಚ್ಚಿ ಹೈಡ್ರೋಫೋಬಿಯಾ ಎಂಬ ರೋಗಕ್ಕೆ ಬಲಿಯಾದರು. ಅವರು ಸಾಯುವ ಮೊದಲು ನಮ್ಮ ಯುವಬಳಗವೆಲ್ಲ ಆಸ್ಪತ್ರೆಗೆ ಹೋಗಿ ಅವರನ್ನು ಕಂಡೆವು. ಅವರು ನಮ್ಮೆಲ್ಲರನ್ನು ಕುರಿತು “ಭಾರತಕ್ಕೆ ಸ್ವಾತಂತ್ರ್ಯ ಬಂತು. ಆದರೆ ಮೈಸೂರಿನ ಪ್ರಜೆಗಳಿಗೆ ಸ್ವಾತಂತ್ರ್ಯ ಬಂದಿಲ್ಲ. ಮಹಾರಾಜರು Accession  ಒಪ್ಪುತ್ತಿಲ್ಲ. ಅವರನ್ನು ಒಪ್ಪಿಸುವುದಕ್ಕಾಗಿ ಹೋರಾಟ ಮಾಡಬೇಕಾಗಿದೆ. ಪೌರವಾಣಿ ಪತ್ರಿಕೆ ಈ ಹೋರಾಟಕ್ಕೆ ಹೊಯ್‍ಕೈಯಾಗಿಸಿಲ್ಲ ಬೆಂಬಲಿಸಿದೆ. ಪೌರವಾಣಿ ಪತ್ರಿಕೆ ಈಗ ಜನಪ್ರಿಯವಾಗಿದೆ ನೀವು ಈ ಪತ್ರಿಕೆಯನ್ನು ಅಂತಿಮ ಗುರಿ ಮುಟ್ಟುವವರೆಗೂ ನಡೆಸಿಕೊಂಡು ಹೋಗಬೇಕು” ಎಂದು ಕೈಮುಗಿದು ಕೇಳಿಕೊಂಡರು.

ಕೆಲಹೊತ್ತಿನಲ್ಲಿ ಅವರ ಪ್ರಾಣಪಕ್ಷಿ ಹಾರಿಹೋಯಿತು. ಭದ್ರಣ್ಣನವರ ನೆಂಟರು, ನಾವೂ ಸೇರಿ ಅವರ ಅಂತ್ಯಕ್ರಿಯೆ ಮುಗಿಸಿದೆವು. ರಾತ್ರಿ ಪೌರವಾಣಿ ಕಚೇರಿಯಲ್ಲಿ ಸೇರಿದ್ದ ನಾವೆಲ್ಲ ಮುಂದೆ ಯಾರು ಸಂಪಾದಕರಾಗಬೇಕೆಂದು ಚರ್ಚಿಸಿದೆವು. ಕೊನೆಗೆ ನನ್ನನ್ನು ಸಂಪಾದಕನಾಗುವಂತೆ ಒತ್ತಾಯಿಸಿದರು. ನಾನು ಆಗ ಮೈಸೂರಿನಲ್ಲಿ ಸಾಹಿತ್ಯ ಮಂದಿರ ಎಂಬ ಪುಸ್ತಕದಂಗಡಿ ಮತ್ತು ಪ್ರಕಾಶನ ಸಂಸ್ಥೆ ನಡೆಸುತ್ತಿದ್ದೆ. ನಾನು ಪುಸ್ತಕದಂಗಡಿ ಮುಚ್ಚಿ ಇದ್ದ ಪುಸ್ತಕದ ದಾಸ್ತಾನನೆಲ್ಲ ಕಾಂಗ್ರೆಸ್ ಮುಖಂಡ ಎಂ.ಎನ್.ಜೋಯಿಸರ ಮನೆಯಲ್ಲಿಟ್ಟು, ಬೆಂಗಳೂರಿಗೆ ಬಂದು ಪೌರವಾಣಿ ಪತ್ರಿಕೆ ಸಂಪಾದಕನಾಗಿ ನೋಂದಾಯಿಸಿಕೊಂಡೆ. ಮೈಸೂರು ಕಾಂಗ್ರೆಸ್ ಕಮಿಟಿ ಆಗ `ಮೈಸೂರ್ ಚಲೋ’ ಕೊನೆಯ ಚಳವಳಿಯನ್ನು ಆರಂಭಿಸುವ ವಿಚಾರ ಮಾಡುತ್ತಿತ್ತು.

ಪೌರವಾಣಿ ಪತ್ರಿಕೆಯಲ್ಲಿ ಮೈಸೂರು ಮಹಾರಾಜರ ಆಡಳಿತ ವೈಖರಿ ಕುರಿತು ವಿಶ್ವ ಕರ್ನಾಟಕ ಸಂಪಾದಕರಾಗಿದ್ದ ತಿರುಮಲ ತಾತಾಚಾರ್ಯ ಶರ್ಮರು 8 ಲೇಖನಗಳನ್ನು ಬರೆದುಕೊಟ್ಟರು. ಆರು ಲೇಖನಗಳನ್ನು ಪ್ರಕಟಿಸಿ ಆಗಿತ್ತು. ಆಗ ಚೀಫ್ ಸೆಕ್ರೆಟರಿಯವರು ನಮಗೊಂದು ನೋಟಿಸ್ ನೀಡಿ ಇನ್ನು ಮೇಲೆ ಯಾವುದೇ ಲೇಖನಗಳನ್ನು ಮತ್ತು ಅಗ್ರ ಲೇಖನಗಳನ್ನು ಪ್ರಕಟಿಸುವ ಮುನ್ನ ನಮಗೆ ಅದನ್ನು ಕಳುಹಿಸಿ, ಸರ್ಕಾರಕ್ಕೆ ಒಪ್ಪಿಗೆಯಾಗುವ ಲೇಖನಗಳನ್ನು ಮಾತ್ರ ಪ್ರಕಟಿಸತಕ್ಕದ್ದು. ಈ ಆಜ್ಞೆಯನ್ನು ಮಿರಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು.

ಸರ್ಕಾರಕ್ಕೆ ಉಳಿದ ಲೇಖನಗಳನ್ನು ಕಳಿಸದೆಯೇ 7 ಮತ್ತು 8ನೇ ಕಂತಿನ ಲೇಖನಗಳನ್ನು ಅಚ್ಚುಮಾಡಿ ಅದರ ಜೊತೆಗೆ ಒಂದು Box news ಅನ್ನು ಹಾಕಿದೆವು. ಸರ್ಕಾರ ನಮ್ಮ ಮೇಲೆ ಪ್ರತಿಬಂಧಕಗಳನ್ನು ಹೇರಲು ತೊಡಗಿದೆ. ಸರ್ಕಾರದ ಈ ಬೆದರಿಕೆಗೆ ಸೊಪ್ಪು ಹಾಕದೆ 7 ಮತ್ತು 8ನೇ ಕಂತಿನ ಲೇಖನಗಳನ್ನು ಸರ್ಕಾರಕ್ಕೆ ಕಳಿಸದೆ ಪ್ರಕಟಿಸುತ್ತಿದ್ದೇವೆ. ಸರ್ಕಾರದ ಧೋರಣೆಯನ್ನು ಒಪ್ಪದೆ ಪ್ರತಿಭಟನಾರ್ಥವಾಗಿ ನಾಳೆಯಿಂದ ಪತ್ರಿಕೆಯನ್ನು ನಿಲ್ಲಿಸಿದ್ದೇವೆ ಎಂದು ಅಚ್ಚು ಮಾಡಲಾಯಿತು. ಮೂರು ದಿನದ ನಂತರ ಪೊಲೀಸರು ಬಂದು ಪತ್ರಿಕಾಲಯಕ್ಕೆ ಬೀಗ ಹಾಕಿದರು.

ಇನ್ನು ಇಲ್ಲಿದ್ದರೆ ಬಂಧಿಸಲಿದ್ದಾರೆ, ಬೇರೆ ಪ್ರಾಂತಕ್ಕೆ ಹೋಗಿ ಪೌರವಾಣಿಯನ್ನು ಅಲ್ಲಿ ಅಚ್ಚು ಮಾಡಿಸಿ, ಮೈಸೂರು ಸಂಸ್ಥಾನದ ಊರುಗಳಿಗೆ ಏಕೆ ಕಳುಹಿಸಬಾರದು ಎಂದು ಆಲೋಚಿಸಿದೆ. ನಾನು ಮತ್ತು ನನ್ನ ಸ್ನೇಹಿತ ಶ್ರೀಧರಮೂರ್ತಿ ಪಕ್ಕದ ಹಿಂದೂಪುರಕ್ಕೆ ಹೋದೆವು ಸುದರ್ಶನ ಪ್ರೆಸ್‍ನಲ್ಲಿ ಪತ್ರಿಕೆಯನ್ನು ಅಚ್ಚುಮಾಡಿ ಕೊಡಲು ಮಾಲಿಕರಲ್ಲೊಬ್ಬರಾದ ಆದಯ್ಯ ಶೆಟ್ಟರು ಒಪ್ಪಿಕೊಂಡರು. ನಾನು ಪೌರವಾಣಿ, ಪೌರವೀರ ಪೌರಮಾರ್ತಾಂಡ, ಪೌರಭಾಸ್ಕರ ಈ ಹೆಸರುಗಳಲ್ಲಿ ಪತ್ರಿಕೆಯನ್ನು ನೋಂದಾಯಿಸಿಕೊಂಡೆ. ಮೈಸೂರು ಸಂಸ್ಥಾನದೊಳಕ್ಕೆ ಹೋಗುವ ಪೌರವಾಣಿ ಪತ್ರಿಕೆಯನ್ನು ಸರ್ಕಾರ ತಡೆಹಿಡಿದರೆ ಮತ್ತೊಂದು ಹೆಸರಿನಲ್ಲಿ ಪತ್ರಿಕೆಯನ್ನು ಕಳುಹಿಸಬಹುದಲ್ಲಾ ಎಂಬ ದೂರದೃಷ್ಟಿಯಿಂದ 5 ಹೆಸರಿನ ಪತ್ರಿಕೆಗಳನ್ನು ನೋಂದಾಯಿಸಿಕೊಂಡಿದ್ದೆ. ಕೆಲದಿನಗಳ ಮೇಲೆ ನಮ್ಮ ನಿರೀಕ್ಷೆಯಂತೆಯೇ ಪೌರವಾಣಿ ಪತ್ರಿಕೆ ಮೈಸೂರು ಸಂಸ್ಥಾನದೊಳಕ್ಕೆ ಬರದಂತೆ ತಡೆದರು. ನಾವು ಪೌರವೀರ ಹೆಸರಿನಲ್ಲಿ ಪತ್ರಿಕೆಯನ್ನು ಅಲ್ಲಿಂದಾಚೆಗೆ ಕಳುಹಿಸಿದೆವು.

ಮೈಸೂರು ಚಲೋ ಸತ್ಯಾಗ್ರಹ ನಡೆದ 38 ದಿನಗಳೂ ಪತ್ರಿಕೆ ಮೈಸೂರಿನ ಎಲ್ಲ ಕಡೆಗೆ ತಲುಪಿತು. ಬೆಂಗಳೂರಿಗೆ ದಿನಕ್ಕೊಬ್ಬ ಸತ್ಯಾಗ್ರಹಿಯ ಕೈಯಲ್ಲಿ ಪತ್ರಿಕೆಯನ್ನು ಕಳುಹಿಸುತ್ತಿದ್ದರು. ಪತ್ರಿಕೆ ಹೊರತರುವುದಕ್ಕೆ ಸಹಾಯಕರಾಗಿರುವ ರುಮಾಲೆ ಚನ್ನಬಸವಣ್ಣ, ಮೈಸೂರಿನ ಸುಬ್ಬರಾಯರು, ತಿರುಮಲ ಶ್ರೀರಂಗಾಚಾರ್ ಮುಂತಾದವರಿದ್ದರು.

38 ದಿನಗಳು ಪೌರವಾಣಿ ನಡೆದದ್ದು ಬೆಂಗಳೂರಿನಲ್ಲಲ್ಲ. ಪೌರವಾಣಿ ಪತ್ರಿಕೆಯನ್ನು ಮೈಸೂರು ಸಂಸ್ಥಾನದಲ್ಲಿ ಮುಟ್ಟುಗೋಲು ಹಾಕಿಕೊಂಡ ನಂತರ ನಾವು ಮಾಡಿದ ಈ ಸಾಹಸದ ನಮ್ಮ ಕೆಲಸವನ್ನು ಅರಿಯದ ಬಾಬು ಕೃಷ್ಣಮೂರ್ತಿ ನನ್ನನ್ನು ಮೂರು ಕಾಸಿಗೆ ಹರಾಜು ಹಾಕಿದ್ದಾರೆ.

ಬಾಬು ಕೃಷ್ಣಮೂರ್ತಿಯವರ ಮೂದಲಿಕೆ ಮಾತನ್ನ ಕೇಳಿದಮೇಲೆ ಈ ಸುಳ್ಳನ್ನು, ಉತ್ಪ್ರೇಕ್ಷೆಯ ಮಾತನಾಡಲು ಯಾರು ಇವರಿಗೆ ಪ್ರೇರಣೆ ನೀಡಿರಬಹುದೆಂದು ಯೋಚನೆ ಮಾಡಿದೆ. ಆರ್‌ಎಸ್‍ಎಸ್‍ನಲ್ಲಿ ಇದ್ದುಹೋದ ಕೃಷ್ಣಮೂರ್ತಿಗೆ ಬಹುಕಾಲ ಧರ್ಮಾಂಧತೆಯ ವಿಷವುಣಿಸಲಾಗಿದೆ. ಅದು ಈ ರೀತಿ ನನ್ನ ಮೇಲೆ ಎಂದೂ ಇಲ್ಲದಷ್ಟು ಹರಿಹಾಯಲು ಪ್ರೇರಣೆ ನೀಡಿರಬಹುದು ಅಥವಾ ಆರ್‌ಎಸ್‍ಎಸ್ ಮುಖ್ಯರ ಆಜ್ಞಾನುಸಾರ ಕೃಷ್ಣಮೂರ್ತಿ ನಡೆದುಕೊಂಡಿರಬಹುದು.

ನನಗೆ ಪತ್ರಿಕೆ ಅಕಾಡೆಮಿ ಅವಾರ್ಡ್ ಬಂದಿದೆ. ನಾನು 5 ವರ್ಷಕಾಲ ಪೌರವಾಣಿಯ ಸಂಪಾದಕನಾಗಿದ್ದೆ, 38 ದಿನಗಳಲ್ಲ. Freelance Journalist ಆಗಿ ಪತ್ರಿಕೆಗಳಿಗೆ ಲೇಖನಗಳನ್ನೂ ಬರೆಯುತ್ತೇನೆ. ಮೈಸೂರು ಸಂಸ್ಥಾನದ ಪತ್ರಿಕಾಸಂಘ ನನ್ನ ಸಕ್ರಿಯ ಪತ್ರಿಕೋದ್ಯಮವನ್ನು ಗುರುತಿಸಿ ನನಗೆ ಆ ಸಂಘದ ಅಧ್ಯಕ್ಷತೆಯನ್ನು ನೀಡಿ ಗೌರವಿಸಿದೆ ಎಂಬುದನ್ನು ಬಾಬುಕೃಷ್ಣಮೂರ್ತಿ ತಿಳಿಯಬೇಕು.

ಬಾಬುಕೃಷ್ಣಮೂರ್ತಿಯವರು ಗೋಡ್ಸೆ ಬೆಂಗಳೂರಿಗೆ ಬಂದಿದ್ದ ವಿಚಾರ ಪ್ರಸ್ತಾಪಿಸಿದ್ದಾರೆ. ಅದರ ಪ್ರಸ್ತಾಪ ಮುಂದಿನ ಸಂಚಿಕೆಯಲ್ಲಿ…..

– ಎಚ್.ಎಸ್.ದೊರೆಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...