Homeಮುಖಪುಟರಜೆ ನೀಡಿರುವುದು ಜನರು ಮತ್ತಷ್ಟು ಭೀತಿಗೊಳ್ಳಲು ಕಾರಣವಾಗಿದೆ ಅನ್ನುತ್ತಾರೆ ತುಮಕೂರು ಜನ..

ರಜೆ ನೀಡಿರುವುದು ಜನರು ಮತ್ತಷ್ಟು ಭೀತಿಗೊಳ್ಳಲು ಕಾರಣವಾಗಿದೆ ಅನ್ನುತ್ತಾರೆ ತುಮಕೂರು ಜನ..

ಕೊರೋನ ವೈರಸ್ ನೆಪದಲ್ಲಿ ಅಭಿವೃದ್ಧಿ ಕಾರ್ಯಗಳು ನಿಂತುಹೋಗುವ ಭೀತಿ ಎದುರಾಗಿದೆ. ಸರ್ಕಾರಗಳು ಜನರ ಬದುಕಿನ ಜೊತೆ ಚಲ್ಲಾಟವಾಡುತ್ತಿದ್ದಾರೆ ಎನ್ನುತ್ತಾರೆ ರಂಗಸ್ವಾಮಿ...

- Advertisement -
- Advertisement -

ಕೊರೋನ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ರಾಜ್ಯ ಸರ್ಕಾರ ಒಂದು ವಾರ ರಜೆ ಘೋಷಣೆ ಮಾಡಿರುವ ಬೆನ್ನಲ್ಲೇ ಜನರು ಕೂಡ ಮನೆಯಿಂದ ಹೊರಬಂದಿಲ್ಲ. ಬಿಸಿಲು, ಧೂಳು ಮತ್ತು ಕೊರೋನ ವೈರಸ್ ಭೀತಿಯಿಂದ ತುಮಕೂರು ನಗರದಲ್ಲಿ ಅಘೋಷಿತ ಬಂದ್ ವಾತಾವರಣ ಕಂಡುಬಂತು. ಸಾರ್ವಜನಿಕ ಸ್ಥಳಗಳು ಬಿಕೋ ಎನ್ನುತ್ತಿದ್ದವು. ಎರಡನೇ ಶನಿವಾರದ ಹಿನ್ನೆಲೆಯಲ್ಲಿ ಎಲ್ಲೆಡೆ ರಜೆಯ ವಾತಾವರಣವಿತ್ತು.

ಜನರಿಂದ ಗಿಜಿಗುಡುತ್ತಿದ್ದ ಬಿ.ಎಚ್.ರಸ್ತೆ, ಅಶೋಕ ರಸ್ತೆ, ಎಂ.ಜಿ.ರಸ್ತೆ, ಸೋಮೇಶ್ವರಪುರಂ ರಸ್ತೆ, ರೈಲ್ವೆ ಸ್ಟೇಷನ್ ರಸ್ತೆಗಳಲ್ಲಿ ಜನರೇ ಕಂಡುಬರಲಿಲ್ಲ. ಆಟೋಗಳು ಕೂಡ ರಸ್ತೆಗೆ ಇಳಿದಿರಲಿಲ್ಲ. ಕೆಎಸ್‌ಆರ್‌ಟಿಸಿ ಬಸ್ ಮತ್ತು ಖಾಸಗಿ ಬಸ್‌ಗಳ ಸಂಚಾರವು ಕ್ಷೀಣವಾಗಿತ್ತು. ಕೆಲವೇ ಮಂದಿ ಇದ್ದ ಪ್ರಯಾಣಿಕರು ತಮ್ಮ ಲಗೇಜುಗಳನ್ನು ತಲೆ ಮೇಲೆ ಹೊತ್ತು ಸಾಗಿದರು. ವಾಹನ ಸೌಲಭ್ಯವಿಲ್ಲದೆ ಪ್ರಯಾಣಿಕರ ಪರದಾಡಿದರು.

ರೈಲ್ವೆ ನಿಲ್ದಾಣ, ಸರ್ಕಾರಿ ಬಸ್‌ ನಿಲ್ದಾಣ ಮತ್ತು ಖಾಸಗಿ ಬಸ್ ನಿಲ್ದಾಣ ಮತ್ತು ಟೌನ್ ಹಾಲ್‌ನಲ್ಲಿ ಜನರ ಓಡಾಟ ವಿರಳವಾಗಿತ್ತು. ಶಾಲಾ ಕಾಲೇಜುಗಳು, ಚಿತ್ರಮಂದಿರಗಳು, ಸಭೆ ಸಮಾರಂಭಗಳು ನಡೆಸುವುದಕ್ಕೆ ನಿರ್ಬಂಧ ವಿಧಿಸಿದ್ದರಿಂದ ಎಲ್ಲೆಡೆಯೂ ಬಂದ್ ವಾತಾವರಣವಿತ್ತು. ಹೋಟೆಲ್‌ಗಳು, ಬೇಕರಿಗಳು ಮತ್ತು ಅಂಗಡಿ ಮಳಿಗೆಗಳಿಗೆ ಭೇಟಿ ನೀಡುವವರ ಸಂಖ್ಯೆಯೂ ಕೊರೋನಾ ಭೀತಿಯಿಂದ ಕಡಿಮೆಯಾಗಿದೆ.

ರಾಜ್ಯ ಸರ್ಕಾರ ಕೊರೋನಾ ವೈರಸ್ ಹರಡದಂತೆ ನಿಯಂತ್ರಣ ಹೇರಿರುವುದಕ್ಕೆ ಬಹುತೇಕರು ವಿರೋಧ ವ್ಯಕ್ತಪಡಿಸುತ್ತಿರುವುದು ಸಾಮಾನ್ಯವಾಗಿದೆ. ಕೊರೊನಾ ವೈರಸ್ ಬಾದಿತರು ದೇಶದಲ್ಲಿ ಕಂಡು ಬರುತ್ತಿದ್ದಂತೆಯೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದರೆ ಸ್ವಲ್ಪ ಪ್ರಮಾಣದಲ್ಲಾದರೂ ನಿಯಂತ್ರಿಸಬಹುದಿತ್ತು. ಆದರೆ 70ಕ್ಕೂ ಹೆಚ್ಚು ಪ್ರಕರಣಗಳು ಪತ್ರೆಯಾದ ನಂತರ ಬಹಳ ತಡವಾಗಿ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಈಗ ರಜೆ ನೀಡುವುದರಿಂದ ಪ್ರಯೋಜವಾಗುವುದಿಲ್ಲ. ರಜೆ ನೀಡಿರುವುದು ಜನರು ಮತ್ತಷ್ಟು ಭೀತಿಗೊಳ್ಳಲು ಕಾರಣವಾಗಿದೆ. ಸರ್ಕಾರ ಮಾಸ್ಕ್‌ಗಳನ್ನು ಧರಿಸಬೇಕು ಎಂದು ಹೇಳುತ್ತದೆ ಆದರೆ ಯಾವ ಭಾಗದಲ್ಲೂ ಮಾಸ್ಕ್ ಗಳು ದೊರೆಯುತ್ತಿಲ್ಲ ಎಂದು ಜನತೆ ಆಕ್ರೋಶ ವ್ಯಕ್ತಪಡಿಸಿದೆ.

ಹೋಟೆಲ್ ಉದ್ಯಮ ಲಾಸ್ ಆಗುತ್ತಿದೆ. ಕಟ್ಟಡ ಕಾರ್ಮಿಕರು, ದಿನಗೂಲಿ ನೌಕರರಿಗೆ ಕೆಲಸ  ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಾಧ್ಯಮಗಲು ಅಬ್ಬರದ ಪ್ರಚಾರದಲ್ಲಿ ತೊಡಗಿವೆ. ಇದೇ ಕಾರಣಕ್ಕೆ ಜನರು ಮತ್ತಷ್ಟು ಭಯಗ್ರಸ್ತರಾಗಿದ್ದಾರೆ. ರಾಜ್ಯದಲ್ಲಿ ಏನಾಗುತ್ತಿದೆ ಎಂದು ತಿಳಿಯುತ್ತಲೇ ಇಲ್ಲ. ಕೊರೋನ ವೈರಸ್ ನೆಪದಲ್ಲಿ ಅಭಿವೃದ್ಧಿ ಕಾರ್ಯಗಳು ನಿಂತುಹೋಗುವ ಭೀತಿ ಎದುರಾಗಿದೆ. ಸರ್ಕಾರಗಳು ಜನರ ಬದುಕಿನ ಜೊತೆ ಚಲ್ಲಾಟವಾಡುತ್ತಿದ್ದಾರೆ ಎಂದು ರಂಗಸ್ವಾಮಿ ಆರೋಪಿಸಿದರು.

ಬೀದಿಬದಿ ವ್ಯಾಪಾರಿಗಳು, ಹಣ್ಣಿನ ವ್ಯಾಪಾರಿಗಳು, ಕಾಫಿ ಟೀ ಅಂಗಡಿಗಳು ಜನರಿಲ್ಲದೆ ಬಿಕೋ ಎನ್ನುತ್ತಿವೆ. ಟೌನ್ ಹಾಲ್‌ನಲ್ಲಿ ಶೆಟ್ಟಿಹಳ್ಳಿ ಟೀ ಸ್ಟಾಲ್ ತುಮಕೂರಿನಲ್ಲೇ ಪ್ರಸಿದ್ದವಾದುದು. ಒಳ್ಳೆಯ ಟೀ ಕೊಡುತ್ತಿದ್ದರು. ಅದೇ ಕಾರಣಕ್ಕೆ ಜನರು ಹುಡುಕಿಕೊಂಡು ಹೋಗಿ ಶೆಟ್ಟಿಹಳ್ಳಿ ಟೀ ಸ್ಟಾಲ್ ನಲ್ಲಿ ಬಗೆಬಗೆಯ ಟೀ ಸವಿಯುತ್ತಿದ್ದರು. ಕೋವಿಡ್-19 ಬಂದ ಮೇಲೆ ಜನರೇ ಇಲ್ಲದಂತಾಗಿದೆ. ನಮಗೆ ವ್ಯಾಪಾರ ನಡೆಯುತ್ತಿಲ್ಲ. ಜೀವನ ನಡೆಯಬೇಕಲ್ಲ.ಅಂಗಡಿ ತೆರೆದಿದ್ದೇನೆ. ಜನರು ಬರುತ್ತಿಲ್ಲ. ಎಲ್ಲ ಭಯ ಬಿದ್ದಿದ್ದಾರೆ ಸರ್ ಎಂದು ನಗುತ್ತಲೇ ಹೇಳುತ್ತಾರೆ ಟೀ ಸ್ಟಾಲ್ ಉಮೇಶ್.

ಒಟ್ಟಾರೆ ಕೊರೊನಾ ವೈರಸ್ ಸುದ್ದಿ ಹರಡುತ್ತಿರುವ ವೇಗದಲ್ಲಿಯೇ ವ್ಯಾಪಾರ-ವಹಿವಾಟು ಕುಸಿಯುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಸರ್ಕಾರಕ್ಕೆ ಬರಬೇಕಾದ ಪರೋಕ್ಷ ತೆರಿಗೆಯ ಪ್ರಮಾಣದಲ್ಲೂ ಇಳಿಕೆ ಕಂಡುಬರುತ್ತದೆ. ಸರ್ಕಾರವನ್ನು ನಡೆಸುವುದು ಕಷ್ಟವಾಗುತ್ತದೆ. ಕೇಂದ್ರ ಸರ್ಕಾರವೂ ತನ್ನ ಪಾಲಿನ ಹಣವನ್ನು ನೀಡುತ್ತಿಲ್ಲ. ಕೊರೋನಾ ವೈರಸ್ ಆರ್ಥಿಕ ವ್ಯವಸ್ಥೆ ಮತ್ತಷ್ಟು ಕುಸಿಯಲು ಕಾರಣವಾಗಬಹುದು. ಹೀಗಾಗಿ ಸರ್ಕಾರ ತೀವ್ರ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಜನರನ್ನು ಬೀತಿಯಿಂದ ಹೊರತರಬೇಕು. ವ್ಯಾಪಾರ ವಹಿವಾಟು ಮತ್ತು ಆರ್ಥಿಕ ಚೇತರಿಕೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲದಿದ್ದರೆ ಸಮಸ್ಯೆ ಎದುರಿಸಲು ಸಾಧ್ಯವಾಗದು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...