Homeಚಳವಳಿವಲಸೆ ಕಾರ್ಮಿಕರ ಶೋಚನೀಯ ಪರಿಸ್ಥಿತಿಗೆ ಮಹಾನ್ ಕೋರ್ಟ್‍ಗಳು ಸ್ಪಂದಿಸಿದ್ದು ಹೇಗೆ?

ವಲಸೆ ಕಾರ್ಮಿಕರ ಶೋಚನೀಯ ಪರಿಸ್ಥಿತಿಗೆ ಮಹಾನ್ ಕೋರ್ಟ್‍ಗಳು ಸ್ಪಂದಿಸಿದ್ದು ಹೇಗೆ?

- Advertisement -
- Advertisement -

ಸಾರ್ವಜನಿಕ ಹಿತಾಸಕ್ತಿ ದಾವೆ (ಪಿಐಎಲ್) ಬಹಳ ಪ್ರಾಚೀನವಾದುದೇನಲ್ಲ. ಪ್ರಜಾಪ್ರಭುತ್ವಗಳಲ್ಲಿ ನ್ಯಾಯಾಲಯ ವ್ಯವಸ್ಥೆ ತಳವೂರಿದ ಎಷ್ಟೋ ವರ್ಷಗಳ ತರುವಾಯ ಇದು ಜಾಗೃತಗೊಂಡು ಜನಪ್ರಿಯವಾಗಿದೆ. ಪಿಐಎಲ್‍ಗಳು ಮತ್ತು ನ್ಯಾಯಾಲಯಗಳು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡು ವಿಚಾರಣೆ ನಡೆಸುವ ದೂರುಗಳು ಜ್ಯುಡಿಶಿಯಲ್ ಆಕ್ಟಿವಿಸಂ ಅಥವಾ ನ್ಯಾಯಾಂಗ ಸಮಾಜಕಾರ್ಯ ಎಂದೇ ಜನಪ್ರಿಯ. ಇದು ಕೂಡ ಹಲವು ವಿರೋಧ ಗಳನ್ನು ದಾಟಿ ಬಂದಿದೆ. ದಮನಿತರ, ಅವಕಾಶ ವಂಚಿತರ ಹಿತಕಾಯಲು ಪ್ರಭುತ್ವಗಳು-ಸರ್ಕಾರಗಳು ಸೋತಾಗ, ನಿರ್ಲಕ್ಷ್ಯ ಮಾಡಿದಾಗ ಕಡೆಗಣಿಸಿದ ಸಮುದಾಯಗಳಿಗೆ ಹಲವು ಬಾರಿ ಇದು ವರವಾಗಿ ಪರಿಣಮಿಸಿದೆ.

ಹುಸೈನಾರ ಖತೂನ್ ಮತ್ತು ಇತರರು ವರ್ಸಸ್ ಗೃಹ ಕಾರ್ಯದರ್ಶಿ, ಬಿಹಾರ ರಾಜ್ಯದ 1979ರ ಪ್ರಕರಣದಲ್ಲಿ ನ್ಯಾಯಾಧೀಶ ಪಿ.ಎನ್.ಭಗವತಿ ಅವರು ಸುಪ್ರೀಂ ಕೋರ್ಟ್ ಸಾಮಾಜಿಕ ಕಾರ್ಯಕರ್ತನ ಪಾತ್ರ ವಹಿಸಬಹುದು ಎಂದು ಹೇಳಿದ್ದಲ್ಲದೆ ಹಲವು ಜೈಲು ಸುಧಾರಣೆಗಳಿಗೆ ನಿರ್ದೇಶನ ನೀಡಿ ಕಾರಣಕರ್ತರಾಗಿದ್ದರು. ಮೂರರಿಂದ ಹತ್ತು ವರ್ಷಗಳವರೆಗೆ ವಿಚಾರಣೆ ನಡೆಯದೆ ಜೈಲುಗಳಲ್ಲಿ ಕೊಳೆಯುತ್ತಿದ್ದ ಆಪಾದಿತರ ಬಗ್ಗೆ ಬಂದ ಒಂದು ಪತ್ರಿಕಾ ವರದಿ ಆಧರಿಸಿ ಈ ಪ್ರಕರಣ ದಾಖಲಾಗಿತ್ತು. ವಿಚಾರಣೆ ಇಲ್ಲದೆ ಇಷ್ಟು ದೀರ್ಘಕಾಲ ಬಂಧಿಸಿ ಇಟ್ಟಿರುವುದು ಕಾನೂನುಬಾಹಿರ ಮತ್ತು ಇದು ಸಂವಿಧಾನದ 21ನೇ ವಿಧಿಯ ಮಾನವನ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಹೇಳಿ ಜೈಲಿನಲ್ಲಿರುವ ಮಹಿಳೆಯರು ಮತ್ತು ಮಕ್ಕಳನ್ನು ಪರಿಹಾರ ಗೃಹಗಳಲ್ಲಿ ಇರಿಸಬೇಕು ಎಂದು ತಿಳಿಸಿ ಹಲವು ಜನಪರವಾದ ಮಾರ್ಗದರ್ಶಿಗಳನ್ನು ಸರ್ಕಾರಕ್ಕೆ ಪಾಲಿಸುವಂತೆ ಅಂದು ಸುಪ್ರೀಂಕೋರ್ಟ್ ಹೇಳಿತ್ತು.

1982ರ ಪೀಪಲ್ಸ್ ಯೂನಿಯನ್ ಫಾರ್ ಡೆಮಾಕ್ರಟಿಕ್ ರೈಟ್ಸ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಏಶಿಯನ್ ಗೇಮ್ಸ್ ಕೂಟಕ್ಕಾಗಿ ನಿರ್ಮಿಸುತ್ತಿದ್ದ ರಸ್ತೆ, ಈಜುಕೊಳ ಮುಂತಾದ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಕಾರ್ಮಿಕರಿಗೆ ಕೊಡುವ ದಿನಗೂಲಿಯಲ್ಲಿ ಮಧ್ಯವರ್ತಿಗಳು ಲಿಂಗ ತಾರತಮ್ಯ ಮಾಡುತ್ತಿದ್ದುದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಇದನ್ನು ಸರಿಪಡಿಸುವುದಕ್ಕೆ ಆದೇಶ ನೀಡಿ ಬರೆದಿದ್ದ ತೀರ್ಪಿನ ಈ ಕೆಲವು ಸಾಲುಗಳು ಗಮನಾರ್ಹ. “ಜನ ಸಮೂಹಕ್ಕೆ ನ್ಯಾಯ ಕೈಗೆಟುಕುವಂತೆ ಮಾಡುವ ಕಾನೂನು ನೆರವಿನ ಚಳವಳಿಯ ಮುಖ್ಯ ಅಂಗವಾದ ಸಾರ್ವಜನಿಕ ಹಿತಾಸಕ್ತಿ ದಾವೆ, ವಿರೋಧಾತ್ಮಕ ಗುಣವುಳ್ಳ ಸಾಂಪ್ರದಾಯಿಕ ವ್ಯಾಜ್ಯಗಳಿಗಿಂತ ಭಿನ್ನವಾದುದು. ಒಬ್ಬ ವ್ಯಕ್ತಿಯ ಹಕ್ಕನ್ನು ಮತ್ತೊಬ್ಬನ ವಿರುದ್ಧ ಸಾಬೀತುಪಡಿಸುವುದನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮಾಡುವುದಿಲ್ಲ. ಅದಕ್ಕೆ ಭಿನ್ನವಾಗಿ, ಬಡಜನರು ಮತ್ತು ದಮನಿತ ಸಮುದಾಯಗಳ ಸಾಂವಿಧಾನಿಕ ಮತ್ತು ಕಾನೂನು ಹಕ್ಕುಗಳು ಉಲ್ಲಂಘನೆಯಾದಾಗ ಕಾನೂನು ಪರಿಹಾರಕ್ಕೆ ಆಗ್ರಹಿಸುವ ಸಾರ್ವಜನಿಕ ಹಿತಾಸಕ್ತಿ ಪ್ರಕರಣಗಳು ಸಾರ್ವಜನಿಕ ಹಿತಾಸಕ್ತಿಗಳ ಸಮರ್ಥನೆಗೆ ಮತ್ತು ಪ್ರೋತ್ಸಾಹಕ್ಕಾಗಿ ಕೋರ್ಟ್ ಮುಂದೆ ಬರುತ್ತವೆ. ಇವುಗಳಿಗೆ ಪರಿಹಾರ ನೀಡಲು ಸೋತರೆ ಪ್ರಜಾಪ್ರಭುತ್ವ ಮಾದರಿಯ ಸರ್ಕಾರಗಳ ಮೂಲ ಗುಣವಾದ ಕಾನೂನು ಆಡಳಿತಕ್ಕೆ ದಮನಕಾರಿಯಾಗುತ್ತದೆ. ಪ್ರತಿ ನಾಗರಿಕನಿಗೆ ಕಾನೂನು ರಕ್ಷಣೆ ದೊರಕಬೇಕು ಅನ್ನುವುದು ಕಾನೂನು ಆಡಳಿತದ ಬೇಡಿಕೆ. ನಾಗರಿಕ ಮತ್ತು ರಾಜಕೀಯ ಹಕ್ಕುಗಳನ್ನು ಗಳಿಸಿಕೊಳ್ಳುವ ಮುಖವಾಡದಲ್ಲಿ ಕೆಲವೇ ಕೆಲವು ಅದೃಷ್ಟವಂತರ ಸ್ವಹಿತಾಸಕ್ತಿಯನ್ನಷ್ಟೇ ರಕ್ಷಿಸಿ ಯಥಾಸ್ಥಿತಿಯನ್ನು ಎತ್ತಿಹಿಡಿಯುವುದಕ್ಕೆ ಮಾತ್ರ ಕಾನೂನು ಅವಕಾಶ ಕೊಡುತ್ತದೆ ಎಂದಾಗಬಾರದು……’’ ಎಂದು ವಿವರಿಸುತ್ತಾ ಸಾರ್ವಜನಿಕ ಹಿತಾಸಕ್ತಿ ದಾವೆಯ ಗುಣಲಕ್ಷಣಗಳನ್ನು ವಿವರಿಸುತ್ತಾ ಹೋಗುತ್ತಾರೆ.

ಕೊರೊನ ಸಂದರ್ಭದಲ್ಲಿ ಲಾಕ್‍ಡೌನ್‍ಗೆ ಒಳಗಾಗಿ ಅನಿಶ್ಚಿತತೆಯಿಂದ ಬದುಕು ಸಾಗಿಸುತ್ತಿದ್ದ ಲಕ್ಷಾಂತರ ಮಂದಿ ವಲಸೆ ಕಾರ್ಮಿಕರು, ಆಹಾರ ವಸತಿ ವಂಚಿತರಾಗಿ ತಮ್ಮ ಊರುಗಳಿಗೆ ಮರಳಲು ಸಾರಿಗೆ ವ್ಯವಸ್ಥೆಯೂ ಇಲ್ಲದೆ ಸಾವಿರಾರು ಕಿಲೋಮೀಟರ್ ದೂರ ನಡೆದು ಹೋಗುತ್ತಿರುವ ದೃಶ್ಯ ಮಾನವೀಯತೆ ಉಳಿಸಿಕೊಂಡಿರುವ ಯಾರಿಗಾದರೂ ಅಪರಾಧಿ ಪ್ರಜ್ಞೆ ಕಾಡಬೇಕಿತ್ತು. ವಿದೇಶಗಳಲ್ಲಿ ಸಿಲುಕಿದ್ದ ಭಾರತೀಯರನ್ನು ಹಿಂದಕ್ಕೆ ಕರೆತರಲು ‘ವಂದೇಭಾರತ ಮಿಶನ್’ ಹೆಸರಿನಲ್ಲಿ ಕಾರ್ಯಾಚರಣೆಗೆ ಇಳಿದ ಭಾರತ ಸರ್ಕಾರ ಅದೇ ಬದ್ಧತೆಯನ್ನು ಅಂತರರಾಜ್ಯ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಹಿಂದಿರುಗಿಸಲು ತೋರಿಸಲಿಲ್ಲ. ಕೆಲವು ರಾಜ್ಯಸರ್ಕಾರಗಳು ಅಲ್ಪ ಸ್ವಲ್ಪ ಸಹಾಯಕ್ಕೆ ಮುಂದಾದವಾದರೂ, ಕೇಂದ್ರ ಸರ್ಕಾರದ ರೈಲ್ವೇ ಇಲಾಖೆ ಮತ್ತು ಇತರ ಸಚಿವಾಲಯಗಳು ಹಾಗೂ ಸಂಬಂಧಿಸಿದ ಸಂಸ್ಥೆಗಳು ಸ್ಪಂದಿಸಿದ ರೀತಿ ಇಡೀ ದೇಶದ ವ್ಯವಸ್ಥೆ ಸೌಲಭ್ಯ-ಅವಕಾಶ ವಂಚಿತರ ಮೂಲಭೂತ ಅಗತ್ಯಗಳನ್ನು ಕಡೆಗಣಿಸಿ, ಉಳ್ಳವರ ಪಾಲಿಗೆ ಮಾತ್ರ ಮಹತ್ವದ ಜವಾಬ್ದಾರಿ ತೋರುವ ಕ್ರೌರ್ಯ ದಟ್ಟವಾಗಿ ಗೋಚರಿವಂತೆ ಮಾಡಿತ್ತು. ಇಂತಹ ಸಮಯದಲ್ಲಿ ಈ ದೇಶದ ಅತ್ಯುನ್ನತ ಕೋರ್ಟ್‍ನ ಮಧ್ಯ ಪ್ರವೇಶವನ್ನು ಜನರು ಭರವಸೆಯ ಬೆಳಕಾಗಿ ಎದುರು ನೋಡುತ್ತಿದ್ದರು.

ಆದರೆ ಈ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ನಡೆಸಿದ ವಿಚಾರಣೆ ಮತ್ತು ಕೊಟ್ಟ ತೀರ್ಪುಗಳು ಲಕ್ಷಾಂತರ ಜನರ ಆಘಾತಕ್ಕೆ ಕಾರಣವಾಗಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್‍ಗಳು ವಲಸೆ ಕಾರ್ಮಿಕರನ್ನು ಗುರುತಿಸಿ ಅವರಿಗೆ ಆಹಾರ, ವಸತಿ ಮತ್ತು ಉಚಿತ ಪ್ರಯಾಣಕ್ಕೆ ಅವಕಾಶ ನೀಡಲು ನಿರ್ದೇಶಿಸುವಂತೆ ಕೋರಿ ಸುಪ್ರೀಂಕೋರ್ಟ್‍ಗೆ ಹಾಕಿದ್ದ ಅರ್ಜಿ ಮೇ 15ರಂದು ತಿರಸ್ಕøತಗೊಂಡಿತು. ಆದರ ಮೇಲೆ “ಜನ ನಿಲ್ಲದೆ ನಡೆಯುತ್ತಿದ್ದಾರೆ. ನಾವು ಹೇಗೆ ನಿಲ್ಲಿಸಲು ಸಾಧ್ಯ” ಎಂಬ ಪ್ರತಿಕ್ರಿಯೆಯೊಂದಿಗೆ “ಪತ್ರಿಕಾ ವರದಿ ಓದಿ ಎಲ್ಲಾ ವಕೀಲರು ಎಲ್ಲ ವಿಷಯಗಳ ಮೇಲೆಯೂ ಜ್ಞಾನಿಗಳಾಗಿಬಿಡುತ್ತಾರೆ. ಪತ್ರಿಕಾ ವರದಿಯ ಮೇಲೆ ನಿಮ್ಮ ತಿಳುವಳಿಕೆ ಇದೆ ಮತ್ತು ಆರ್ಟಿಕಲ್ 32ರ ಅಡಿ ಕೋರ್ಟ್ ಇದರ ಬಗ್ಗೆ ನಿರ್ಣಯ ಕೊಡಬೇಕೆಂದು ಕೇಳಿಕೊಳ್ಳುತ್ತಿದ್ದೀರಿ. ರಾಜ್ಯಗಳು ನಿರ್ಧಾರ ತೆಗೆದುಕೊಳ್ಳಲಿ ಬಿಡಿ” ಎಂದು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಪೀಠ ಹೇಳಿದ್ದು ವರದಿಯಾಗಿದೆ.

ಇದಕ್ಕೂ ಮೊದಲು ಮಾರ್ಚ್ 31ರಂದು ಸರ್ಕಾರದ ಪರವಾಗಿ ವಾದ ಮಂಡಿಸಿ “ರಸ್ತೆಯ ಮೇಲೆ ಈಗ ಜನರು ಇಲ್ಲ, ಸರ್ಕಾರಗಳು ಅವರ ಅಗತ್ಯಗಳನ್ನು ಪೂರೈಸುತ್ತಿದೆ” ಎಂದು ಸುಳ್ಳು ಹೇಳಿದ್ದ ಸಾಲಿಸಿಟರ್ ಜನರಲ್ ತುಶಾರ್ ಗುಪ್ತ ಹೇಳಿಕೆಯನ್ನು ಹಾಗೂ “ವಲಸೆ ಕಾರ್ಮಿಕರ ಸನ್ನಿವೇಶ ಕೆಲವು ಪತ್ರಿಕೆಗಳು ಬರೆಯುತ್ತಿರುವ ತಪ್ಪು ಮತ್ತು ಸುಳ್ಳು ಸುದ್ದಿಗಳಿಂದ ಸೃಷ್ಟಿಯಾಗಿದೆ” ಎಂಬ ಕೇಂದ್ರ ಸರ್ಕಾರದ ವಾದವನ್ನು ಕೇಳಿಸಿಕೊಂಡಿದ್ದ ಸುಪ್ರೀಂಕೋರ್ಟ್, ಸುಳ್ಳು ಮತ್ತು ತಪ್ಪು ಸುದ್ದಿಗಳ ಕಡಿವಾಣಕ್ಕೆ ಕ್ರಮ ತೆಗೆದುಕೊಳ್ಳಿ ಎಂದಿತ್ತೇ ವಿನಃ ವಲಸೆ ಕಾರ್ಮಿಕರ ಪರವಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಗೋಜಿಗೆ ಹೋಗಲೇ ಇಲ್ಲ. ಇನ್ನು ಏಪ್ರಿಲ್ 7ರಂದು ವಲಸೆ ಕಾರ್ಮಿಕರಿಗೆ ಸರ್ಕಾರ ನೇರವಾಗಿ ಹಣ ವರ್ಗಾಯಿಸಲು ಸೂಚಿಸುವಂತೆ ಕೋರಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, “ಕಾರ್ಮಿಕರಿಗೆ ಆಹಾರ ಸಿಗುತ್ತಿರುವಾದ ನಗದು ಏಕೆ” ಎಂದು ವಕೀಲರನ್ನು ಪ್ರಶ್ನಿಸಿತ್ತು.

ಸುಪ್ರೀಂಕೋರ್ಟ್ ಇಂತಹ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ರೀತಿ ಹಲವು ವಕೀಲರಿಗೆ, ಮಾಜಿ ನ್ಯಾಯಾಧೀಶರಿಗೆ ಮತ್ತು ಸಾಮಾಜಿಕ ಕಾರ್ಯಕರ್ತರಿಗೆ ಅಸಮಾಧಾನ ತಂದಿದೆ. ಅಂದು ಪಿ.ಎನ್. ಭಗವತಿ ಅವರು ಹೇಳಿದ್ದ ಹಾಗೆ “ಪಿಐಎಲ್‍ಗಳು ಸರಿಯಾದ ದಾರಿಯಲ್ಲಿ ಇದ್ದರೆ ಸರ್ಕಾರ ಮತ್ತು ಪ್ರಭುತ್ವಗಳಿಗೆ ಅನ್ಯಾಯಗಳನ್ನು ಸರಿಪಡಿಸಿಕೊಳ್ಳಲು ಮತ್ತು ತಪ್ಪುಗಳನ್ನು ತಿದ್ದಿಕೊಂಡು ಸರಿದಾರಿಗೆ ಬರಲು ಅವಕಾಶ ನೀಡುತ್ತವೆ” ಎಂಬ ಮಾತು ವಲಸೆ ಕಾರ್ಮಿಕರ ವಿಷಯದಲ್ಲಿ ಸರ್ಕಾರಗಳು ನಡೆದುಕೊಳ್ಳುತ್ತಿರುವ ಅಮಾನವೀಯ ರೀತಿ ಯನ್ನು ಸರಿಪಡಿಸಲು ಸುಪ್ರೀಂಕೋರ್ಟ್‍ನಿಂದ ಸಾಧ್ಯ ಎಂಬ ನಂಬಿಕೆ ಹೊಂದಿದ್ದ ಹಲವರಿಗೆ ಭಾರಿ ನಿರಾಶೆ ತಂದಿದೆ.

ಹೈಕೋರ್ಟ್‍ಗಳ ಮಾನವೀಯ ಸ್ಪಂದನೆ

ಸುಪ್ರೀಂಕೋರ್ಟ್ ವಲಸೆ ಕಾರ್ಮಿಕರ ಸಮಸ್ಯೆಯನ್ನು ಗ್ರಹಿಸಿದ್ದಕ್ಕೂ ಕೆಲವು ಹೈಕೋರ್ಟ್‍ಗಳು ಈ ಸಮಸ್ಯೆಗಳಿಗೆ ಸ್ಪಂದಿಸಿದ್ದಕ್ಕೂ ಅಂತರವಿದ್ದು, ಅದರಲ್ಲೂ ಮದ್ರಾಸ್ ಹೈಕೋರ್ಟ್ ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸಿ ಸರ್ಕಾರಗಳಿಗೆ ಕೇಳಿದ ಪ್ರಶ್ನೆಗಳು ಮತ್ತು ಮಾರ್ಗದರ್ಶನಗಳು ಭರವಸೆ ನೀಡಿವೆ. “ಕಳೆದ ಒಂದು ತಿಂಗಳಿಂದ ಮಾಧ್ಯಮಗಳಲ್ಲಿ ತೋರಿಸುತ್ತಿರುವ ಕಾರ್ಮಿಕರ ಶೋಚನೀಯ ಸ್ಥಿತಿಗತಿಗಳನ್ನು ನೋಡಿದರೆ ಯಾರಿಗಾದರೂ ಕಣ್ಣಲ್ಲಿ ನೀರು ಸುರಿಯುತ್ತದೆ. ಇದು ಮಾನವ ದುರಂತವಲ್ಲದೆ ಏನಲ್ಲ.

“ಎಲ್ಲ ಅಧಿಕಾರವೂ ಈ ಜನರನ್ನು ಉಪೇಕ್ಷಿಸಿರುವುದು ದುರದೃಷ್ಟಕರ. ತಮ್ಮ ಮಕ್ಕಳೊಂದಿಗೆ ಮತ್ತು ತಮ್ಮ ಸಾಮಾನು ಸರಂಜಾಮುಗಳನ್ನು ತಲೆಯ ಮೇಲೆ ಹೊತ್ತುಕೊಂಡು ತಮ್ಮ ಊರುಗಳಿಗೆ ನಡೆದು ಹೋಗುತ್ತಿರುವ ಪರಿಸ್ಥಿತಿಗೆ ತುತ್ತಾಗಿರುವ ಹೃದಯ ವಿದ್ರಾವಕ ಕಥೆಗಳನ್ನು ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು ವರದಿ ಮಾಡುತ್ತಿವೆ ಮತ್ತು ತೋರಿಸುತ್ತಿವೆ.

ಅವರೆಲ್ಲ ಕೆಲವು ಒಳ್ಳೆಯ ಜನ ನೀಡುತ್ತಿರುವ ಆಹಾರದಿಂದ ಬದುಕುತ್ತಿದ್ದಾರೆ ಮತ್ತು ಅವರ ಸಹಾಯಕ್ಕೆ ಸರ್ಕಾರಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ತಮ್ಮ ಊರುಗಳಿಗೆ ಕೆಲವೊಮ್ಮೆ ದಿನಗಟ್ಟಲೆ ಮತ್ತೆ ಕೆಲವೊಮ್ಮೆ ಹಲವು ದಿನಗಳವರೆಗೆ ನಡೆದು ಹೋಗುತ್ತಿರುವುದು, ಆ ಪ್ರಕ್ರಿಯೆಯಲ್ಲಿ ಅಪಘಾತಗಳಿಂದ ಪ್ರಾಣ ಬಿಡುತ್ತಿರುವುದು ಕರುಣಾಜನಕ ಸನ್ನಿವೇಶವಾಗಿದೆ. ಎಲ್ಲ ರಾಜ್ಯಗಳ ಸರ್ಕಾರಿ ಅಧಿಕಾರಶಾಹಿ ಈ ವಲಸೆ ಕಾರ್ಮಿಕರಿಗೆ ಸಹಾಯ ಒದಗಿಸಬೇಕು” ಎಂದು ಹೇಳಿದ್ದಲ್ಲದೆ, ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ 12 ಪ್ರಶ್ನೆಗಳನ್ನು ಹಾಕಿ ಮೇ 22ರೊಳಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ವರದಿ ನೀಡುವಂತೆ ನ್ಯಾಯಮೂರ್ತಿಗಳಾದ ಎನ್.ಕಿರುಬಕರನ್ ಮತ್ತು ಆರ್.ಹೇಮಲತಾ ಅವರನ್ನೊಳಗೊಂಡ ನ್ಯಾಯಪೀಠ ಹೇಳಿತ್ತು. ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಸಿಲುಕಿಕೊಂಡಿದ್ದ 400 ತಮಿಳುನಾಡಿನ ವಲಸೆ ಕಾರ್ಮಿಕರ ಬಗ್ಗೆ ಕೋರ್ಟ್ ವಿಚಾರಣೆ ನಡೆಸಿತ್ತು.

ಅದೇ ದಿನ ಆಂಧ್ರಪ್ರದೇಶ ಹೈಕೋರ್ಟ್ ನಡೆದು ಹೋಗುತ್ತಿರುವ ಕಾರ್ಮಿಕರಿಗೆ ಮೂಲಭೂತ ಸೌಕರ್ಯ ಒದಗಿಸುವಂತೆ ಸರ್ಕಾರಕ್ಕೆ ತಾಕೀತು ಮಾಡಿ ”ಈ ಹಂತದಲ್ಲಿ ಕೋರ್ಟ್ ಪ್ರತಿಕ್ರಿಯಿಸದೆ ಅಥವ ಈ ಆದೇಶಗಳನ್ನು ನೀಡದೆ ಹೋದರೆ ದಮನಿತರ ರಕ್ಷಕನಾಗಿ ಕೋರ್ಟ್ ತನ್ನ ಪಾತ್ರದಿಂದ ತಪ್ಪಿಸಿಕೊಂಡಂತೆ. ಈ ಹಂತದಲ್ಲಿ ಅವರ ನೋವನ್ನು ನೀಗಿಸಬೇಕಿದೆ.

ಯಾರೋ ಒಬ್ಬನ ಹಂಗಿನಲ್ಲಿ ಬದುಕುವುದಕ್ಕಿಂತ, ತಲೆಯೆತ್ತಿಕೊಂಡು ತಮ್ಮ ಊರುಗಳಿಗೆ ಮರಳುತ್ತಿರುವ ಈ ಸಂದರ್ಭದಲ್ಲಂತೂ ಅವರಿಗೆ ಹೆಚ್ಚಿನ ನೆರವು ನೀಡುವ ಅವಶ್ಯಕತೆ ಇದೆ” ಎಂದು ಹೇಳಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಆಹಾರ, ನೀರು, ಗ್ಲೂಕೋಸ್, ತಾತ್ಕಾಲಿಕ ಶೌಚಾಲಯ, ಸ್ಯಾನಿಟರಿ ಪ್ಯಾಡ್ ಮುಂತಾದುವುಗಳನ್ನು ಒದಗಿಸುವಂತೆ ನಿರ್ದೇಶನ ನೀಡಿತ್ತು.

ಅಂದೇ ದೆಹಲಿ ಹೈಕೋರ್ಟ್ ಅರವಿಂದ್ ಕೇಜ್ರಿವಾಲ್ ಸರ್ಕಾರಕ್ಕೆ ನಿರ್ದೇಶನ ನೀಡಿ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಹಿಂದಿರುಗಲು ನೆರವು ನೀಡಲು ಇರುವ ಸಹಾಯವಾಣಿಗಳು ನಿರಂತರವಾಗಿ ಕೆಲಸ ಮಾಡುವಂತೆ ನೋಡಿಕೊಳ್ಳಲು ನಿರ್ದೇಶನ ಕೊಟ್ಟಿದ್ದರು.

ಮೇ 8 ರಂದು ಕರ್ನಾಟಕ ಹೈಕೋರ್ಟ್ ವಲಸೆ ಕಾರ್ಮಿಕರಿಗೆ ವಿಶೇಷ ರೈಲುಗಳನ್ನು ವ್ಯವಸ್ಥೆ ಮಾಡಿ ಕೋರ್ಟ್ ಗೆ ವರದಿ ಕೊಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತಲ್ಲದೆ, ಪರಿಹಾರ ಕೇಂದ್ರಗಳಲ್ಲಿ ಇರುವ, ಬೀದಿಗಳಲ್ಲಿ ಇರುವ ಮತ್ತು ಇತರ ಎಲ್ಲ ತರಹದ ವಲಸೆ ಕಾರ್ಮಿಕರ ಹಿತರಕ್ಷಣೆ ಮಾಡಬೇಕೆಂದು ನಿರ್ದೇಶಿಸಿತ್ತು.

“ರಸ್ತೆಗಳಲ್ಲಿ ಮತ್ತು ರೈಲ್ವೇ ಹಳಿಗಳ ಮೇಲೆ ನಡೆದ ಅಪಘಾತಗಳಲ್ಲಿ ಹಲವು ಕಾರ್ಮಿಕರು ಪ್ರಾಣ ಕಳೆದುಕೊಂಡಿರುವುದು ನಿರ್ವಿವಾದ. ಇನ್ನು ಕೆಲವು ಪ್ರಕರಣಗಳಲ್ಲಿ ಅತಿ ದೂರ ನಡೆದು ಹೋಗುತ್ತಿರು ವುದರಿಂದ ಮತ್ತು ಹಸುವಿನಿಂದ ಹಲವು ವಲಸೆ ಕಾರ್ಮಿಕರು ಅಸುನೀಗಿದ್ದಾರೆ” ಎಂದು ಕೂಡ ಹೇಳಿತ್ತು.

ಇದಕ್ಕೂ ಮೊದಲು ಒರಿಸ್ಸಾ, ಬಾಂಬೆ, ಹಿಮಾಚಲ, ತೆಲೆಂಗಾಣ ಹೈಕೋರ್ಟ್ ಗಳು ಕೂಡ ಕಾರ್ಮಿಕರ ಸ್ಥಿತಿಯನ್ನು ಸುಧಾರಿಸಲು ಕ್ರಮ ತೆಗೆದುಕೊಳ್ಳುವಂತೆ ಹಲವು ನಿರ್ದೇಶನಗಳನ್ನು ರಾಜ್ಯ ಸರ್ಕಾರಗಳಿಗೆ ನೀಡಿದ್ದವು. ಸರ್ಕಾರಗಳು ವಂಚಿತ ಸಮುದಾಯಗಳ ಬಗ್ಗೆ ತಮ್ಮ ಜವಾಬ್ದಾರಿ ಮರೆತು ನಿಷ್ಕ್ರಿಯವಾದಾಗ ಕೊನೆಯ ಆಶಾವಾದ ಕೋರ್ಟ್ ಎಂಬುದು ಇಂದಿಗೂ ಜನಸಾಮಾನ್ಯರ ನಂಬಿಕೆ. ಇಂತಹ ನಂಬಿಕೆಯನ್ನು ಉಳಿದುಕೊಳ್ಳಲು ಹಲವು ಹೈಕೋರ್ಟ್ ಗಳು ಒಂದು ಮಟ್ಟದಲ್ಲಿ ಸಹಕರಿಸಿವೆ. ಮುಂದೆ ಇಂತಹ ನಂಬಿಕೆ ಮತ್ತು ಬಡವರ ಪರ ಮಿಡಿಯುವ ಹಾಗೂ ಸರ್ಕಾರಗಳ ಜವಾಬ್ದಾರಿಯನ್ನು ನೆನಪಿಸಿ ತರಾಟೆಗೆ ತೆಗೆದುಕೊಂಡು ಅವಕಾಶ ವಂಚಿತರ ಪರವಾಗಿ ಕೆಲಸ ಮಾಡುವಂತೆ ಆದೇಶಿಸುವ ಜ್ಯುಡಿಷಿಯಲ್ ಆಕ್ಟಿವಿಸಂನ ಕಾನೂನು ಪ್ರಕ್ರಿಯೆ ಸಾಂಕ್ರಾಮಿಕದಂತೆ ಎಲ್ಲಾ ಕೋರ್ಟ್ ಗಳಿಗೂ ಹಬ್ಬಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...