Homeಮುಖಪುಟಕೊರೊನಾ ವೈರಸ್‌ ಹುಟ್ಟಿದ್ದು ಹೇಗೆ? ಅದರಿಂದ ದೂರವಿರುವುದು ಹೇಗೆ? - ಡಾ.ಕೆ.ಸಿ ರಘು

ಕೊರೊನಾ ವೈರಸ್‌ ಹುಟ್ಟಿದ್ದು ಹೇಗೆ? ಅದರಿಂದ ದೂರವಿರುವುದು ಹೇಗೆ? – ಡಾ.ಕೆ.ಸಿ ರಘು

ಕೇರಳ ಕಳೆದ ಬಾರಿ ಕಂಡು ಬಂದ ನಿಫಾ ವೈರಸ್‌ನ್ನು ಮತ್ತು ಇತ್ತೀಚೆಗೆ ಕರೋನಾ ಕಂಡುಬಂದಾಗ ವ್ಯವಹರಿಸಿದ ರೀತಿ ಇಡೀ ದೇಶಕ್ಕೆ ಮಾದರಿಯಾಗಿದೆ.

- Advertisement -
- Advertisement -

ಕೊರೊನಾ ವೈರಸ್‌ ಇದಾಗಲೇ ಜಾಗತೀಕರಣಗೊಂಡಿದೆ. 76 ದೇಶಗಳಿಗೆ ಹಬ್ಬಿ ಸುಮಾರು 3200 ಜನರನ್ನು ಬಲಿ ತೆಗೆದುಕೊಂಡಿದೆ. ಈ ಸೋಂಕು ತಗುಲಿದ 100 ಜನರಲ್ಲಿ ಸುಮಾರು 4 ಜನ ಮರಣ ಹೊಂದುತ್ತಾರೆಂದು ಅಂದಾಜುಮಾಡಲಾಗಿದೆ. ಅಂದರೆ ಉಳಿದ 96 ಜನ ಗುಣಮುಖರಾಗುತ್ತಾರೆ. 30ಕ್ಕೂ ಹೆಚ್ಚು ವಯಸ್ಸಿನವರಿಗೆ ಸಾಮಾನ್ಯವಾಗಿ ಕಾಯಿಲೆ ಕಂಡುಬರುವುದಾಗಿದೆ. 60 ದಾಟಿದವರಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿರುವುದಾಗಿದೆ. ಅದರಲ್ಲೂ ಸಿಗರೇಟ್ ಸೇವನೆಯಿಂದ ಶ್ವಾಸಕೋಶ ಹಾನಿಯಾಗಿದ್ದರೆ ಅಥವಾ ಅಸ್ತಮಾ ಮತ್ತು ಇತರೆ ಶ್ವಾಸಕೋಶದ ಕಾಯಿಲೆಗಳಿದ್ದರೆ ಸಾವಿಗೀಡಾಗುವ ಸಾಧ್ಯತೆ ಹೆಚ್ಚು.

ಈ ವೈರಾಣು ಒಂದು ಗುಂಪಿಗೆ ಸಂಬಂಧಪಟ್ಟಿದ್ದಾಗಿದ್ದರು ಇದು ಹೊಸತೇ ಆಗಿದೆ. ಗುಂಪು ಹಳೆಯದು ಅದರ ವೈರಾಣು ಇದುವರೆಗೂ ತಿಳಿದಿದ್ದಾಗಿಲ್ಲ. ಮೊನ್ನೆ ತಾನೆ ಇದಕ್ಕೆ ಕೋವಿಡ್-19 ಎಂದು ನಾಮಕರಣ ಮಾಡಲಾಗಿದೆ. ಇದರ ಹುಟ್ಟು ಚೈನಾದ ವೂಹಾನ್ ಪ್ರಾಂತ್ಯದಲ್ಲಿ ಮಾಂಸದ ಮಾರುಕಟ್ಟೆಯಲ್ಲಿ. ಅಲ್ಲಿ ಸಾಕಿದ ಪ್ರಾಣಿಗಳ ಮಾಂಸ, ಕಾಡು ಪ್ರಾಣಿಗಳ ಮಾಂಸ ಎಲ್ಲವನ್ನೂ ಒಂದೇ ಜಾಗದಲ್ಲಿ ಅಕ್ಕಪಕ್ಕದಲ್ಲಿ ಜನಜಂಗುಳಿಯ ನಡುವೆ ಮಾರಾಟ ಮಾಡಲಾಗುತ್ತದೆ. ಕಾಡು ಪ್ರಾಣಿಗಳ ಜೊತೆ ಹೊಂದಿಕೊಂಡು ಯಾವ ಕಾಟವೂ ಕೊಡದೇ ಶತಮಾನಗಳಿಂದ ಬದುಕುವ ವೈರಾಣುಗಳು ಬೇರೆ ಪ್ರಾಣಿಗಳ ಮಾಂಸಕ್ಕೆ ಸೇರಿ ರೋಗಾಣುವಾಗಿ ಪರಿಣಮಿಸುತ್ತವೆ. ಇವುಗಳು ಇಂತಹ ಸ್ಥಳಗಳಲ್ಲಿ ಹೊಸದಾಗಿ ಮಾರ್ಪಾಡಾಗುವ ಸಾಧ್ಯತೆಗಳು ಹೆಚ್ಚು.

ರೋಗಶಾಸ್ತ್ರದ ಹಳೆಯ ಮಾತಿನಂತೆ ವಿಚ್ಛೇದನ ಪಡೆದ ಗಂಡು ಮತ್ತು ಹೆಂಗಸು ಮರುಮದುವೆಯಾಗಿ ಸಂಸಾರ ಮಾಡುತ್ತಿದ್ದಾಗ ಮನೆಯಲ್ಲೊಂದು ದಿನ ಎಲ್ಲಿಲ್ಲದ ಗಲಾಟೆ ಗದ್ದಲ. ಆಗ ಹೆಂಡತಿ ಗಂಡನಿಗೆ “ನೋಡಿ ಇಲ್ಲಿ ನನ್ನೆರಡು ಮಕ್ಕಳು ನಿಮ್ಮೆರಡು ಮಕ್ಕಳು ನಮ್ಮಿಬ್ಬರ ಮಕ್ಕಳ ಜೊತೆ ಗಲಾಟೆ ಮಾಡುತ್ತಿದ್ದಾರೆ ಎನ್ನುತ್ತಾಳೆ” ಹೀಗೆ ಮಿಶ್ರಣಗೊಂಡ ವೈರಾಣುಗಳು ಹೊಸಜಾಗ, ಹೊಸತಾಣದಲ್ಲಿ ತನ್ನನ್ನು ತಾನು ಉಳುಸಿಕೊಳ್ಳಲು ಹೊಸದಾಗಿ ಮಾರ್ಪಾಟಾಗುತ್ತವೆ.

ಜಗತ್ತಿನಲ್ಲಿ ವೈರಾಣುಗಳೇ ಮೊದಲ ಜೀವಿಗಳೆಂದು ಪರಿಗಣಿಸುತ್ತಾರೆ. ಅವುಗಳು ಜೀವಿಗಳೆಂದು ಹೇಳುವುದು ಸುಲಭವಲ್ಲ. ಆದರೆ ಜೀವಕ್ಕೆ ಬೇಕಾಗಿರುವ ಮೂಲಧಾತು ಅಥವಾ Code ಎನ್ನಲಾಗುವ ಡಿಎನ್‌ಎ ಅಥವಾ ಆರ್‌ಎನ್‌ಎ ಯನ್ನು ಮಾತ್ರ ಒಳಗೊಂಡಿರುತ್ತದೆ. ಆದರೆ ಅದು ಅದರ ಸಂತಾನೋತ್ಪತ್ತಿಗೆ ಇನ್ನೊಂದು ಜೀವಿಯ ಜೀವಕೋಶಕ್ಕೆ ಹೊಕ್ಕು ಅದರ ಜೈವಿಕ ತಂತ್ರಗಾರಿಕೆಯನ್ನು ಅಪಹರಿಸಿ ತನ್ನದಾಗಿಸಿಕೊಂಡು ತನ್ನನ್ನು ತಾನೇ ಮಿಲಿಯನ್‌ ಗಟ್ಟಲೆ ವರ್ಷಗಳಲ್ಲಿ ಮರುಸೃಷ್ಟಿ ಮಾಡಿಕೊಳ್ಳುತ್ತದೆ. ಹಾಗೆ ಮಾಡಿದ ನಂತರ ತನಗೆ ಆಶ್ರಯ ಕೊಟ್ಟ ಜೀವಕೋಶವನ್ನು ಒಡೆದು ಪುಡಿ ಮಾಡುತ್ತದೆ. ಈ ಕರೋನಾ ವೈರಸ್‌ ಶ್ವಾಸಕೋಶಕ್ಕೆ ತಗುಲಿ ಅಲ್ಲಿ ದೇಹದ ರೋಗನಿರೋಧಕ ಶಕ್ತಿಯ ಹೋರಾಟದಿಂದ ದ್ರವಶ್ರಾವ್ಯ ಉಂಟಾಗಿ ಶ್ವಾಸಕೋಶದ ಮೂಲಕೆಲಸವಾದ ರಕ್ತಕ್ಕೆ ಆಮ್ಲಜನಕವನ್ನು ಪ್ರತಿ ಉಸಿರಿನಲ್ಲೂ ಒದಗಿಸುವ ಕಾರ್ಯಕ್ಕೆ ಕುತ್ತು ಬರುತ್ತದೆ. ಹಾಗೆಯೇ ವಿಷ ಅನಿಲ ಇಂಗಾಲದ ಡೈ ಆಕ್ಸೈಡನ್ನು ಹೊರಹಾಕುವ ಪ್ರಕ್ರಿಯೆಗೂ ತೊಂದರೆಯಾಗುತ್ತದೆ.

ಇಂತಹ ಸಂದರ್ಭದಲ್ಲಿ ಕೃತಕ ಉಸಿರಾಟದ ವ್ಯವಸ್ಥೆ ಅತ್ಯಂತ ಅವಶ್ಯಕ. ಭಾರತ ದೇಶದಲ್ಲಿ ಇದು ಹರಡಿದಲ್ಲಿ ಎಷ್ಟರ ಮಟ್ಟಿಗೆ ಆಸ್ಪತ್ರೆಯ ಹಾಸಿಗೆ, ಕೃತಕ ಉಸಿರಾಟದ ವ್ಯವಸ್ಥೆ, ರೋಗಿಗಳನ್ನು ಪ್ರತ್ಯೇಕಿಸಿ ಇಡುವ ವ್ಯವಸ್ಥೆಗೆ ನಾವು ಸಿದ್ಧರಾಗಿದ್ದೇವೆ ಎನ್ನುವುದು ದೊಡ್ಡ ಪ್ರಶ್ನೆಯೇ ಹೌದು. ಕೇರಳ ಕಳೆದ ಬಾರಿ ಕಂಡು ಬಂದ ನಿಫಾ ವೈರಸ್‌ನ್ನು ಮತ್ತು ಇತ್ತೀಚೆಗೆ ಕರೋನಾ ಕಂಡುಬಂದಾಗ ವ್ಯವಹರಿಸಿದ ರೀತಿ ಇಡೀ ದೇಶಕ್ಕೆ ಮಾದರಿಯಾಗಿದೆ.

ಕೃತಕ ಉಸಿರಾಟದ ಪ್ರಾತಿನಿಧಿಕ ಚಿತ್ರ

ಇಂತಹ ಸಂದರ್ಭದಲ್ಲಿ ಜ್ವರ, ಕೆಮ್ಮು, ಶೀತ ಅಥವಾ ಉಸಿರಾಟದ ತೊಂದರೆ ಕಂಡುಬಂದಾಗ ವೈದ್ಯರ ಬಳಿ ಹೋಗಿ ಪರೀಕ್ಷಿಸಿಕೊಳ್ಳುವುದು ಬಹಳ ಮುಖ್ಯ. ಇದಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ, ಮೊನ್ನೆ ಹುಟ್ಟಿದ ಕಾಯಿಲೆಗೆ ನಮ್ಮಲ್ಲಿ ಶತಮಾನಗಳಿಂದ ಔಷಧವಿದೆ ಎಂದೂ, ಕ್ರಿಸ್ತ ಪೂರ್ವದಲ್ಲೇ ಇದು ನಮಗೆ ತಿಳಿದಿತ್ತೆಂದು ಹೇಳುವವರಿದ್ದಾರೆ. ಗೋಮೂತ್ರ ಕುಡಿಸುವ ಕಾರ್ಯಕ್ರಮಗಳು ನಡೆಯುತ್ತಿವೆ. ಇವುಗಳನ್ನಾಗಲಿ ಅಥವಾ ಸಿರಿಧಾನ್ಯಗಳನ್ನು ತಿನ್ನಿ, ಕರೋನಾ ದೂರವಿಡಿ ಎನ್ನುವ ಮಾತುಗಳನ್ನು ನಂಬುವಂತದ್ದಲ್ಲ. ಆಯುರ್ವೇದ, ಹೋಮಿಯೋಪತಿ, ಇಲ್ಲವಾದಲ್ಲಿ ತಿರುಪತಿ ಎನ್ನುವ ಸಲಹೆಗಳೆಲ್ಲ ಉಂಟು.

ರೋಗ ನಿರೋಧಕ ಶಕ್ತಿಯನ್ನು ವೃದ್ಧಿಪಡಿಸಿಕೊಳ್ಳಲು ಉತ್ತಮ ಆಹಾರ, ಗಾಳಿ, ಬೆಳಕು, ಶುದ್ಧ ನೀರು ಅವಶ್ಯಕ. ಈ ಕಾಯಿಲೆ ಹರಡುವುದಕ್ಕೆ ಮುಖ್ಯ ಕಾರಣ: ಕೈ ತೊಳೆಯದೇ, ಬಾಯಿ, ಮೂಗು ಮತ್ತು ಕಣ್ಣನ್ನು ಸವರಿಕೊಳ್ಳುವುದರಿಂದ ದೇಹಕ್ಕೆ ರೋಗಾಣು ಸೇರಿಕೊಳ್ಳುವುದು. ಮಾಸ್ಕ್ ಹಾಕಿಕೊಳ್ಳುವುದು ಮುಖ್ಯವಾದರು ಕಣ್ಣಿಗೆ ಮಾಸ್ಕ್ ಹಾಕಿಕೊಳ್ಳಲಾಗುವುದಿಲ್ಲ. ಕಣ್ಣನ್ನು ಉಜ್ಜಿಕೊಂಡರು ಕಾಯಿಲೆ ತಗುಲಬಹುದು. ರೋಗ ಲಕ್ಷಣ ಚಿಹ್ನೆ ಇರುವವರು ಮಾಸ್ಕ್‌ ಹಾಕಿಕೊಳ್ಳುವುದು ಉತ್ತಮ. ಆಗಾಗ ಕೈ ತೊಳೆದುಕೊಳ್ಳುವುದು, ಹ್ಯಾಂಡ್‌ ಸ್ಯಾನಿಟೈಜರ್‌ಗಳನ್ನು ಬಳಸುವುದು ಇಲ್ಲವಾದಲ್ಲಿ ಶುದ್ಧ ನೀರಿನಲ್ಲಿ ಕೈ ತೊಳೆದರು ಸಾಕು. ಏಡ್ಸ್ ವೈರಾಣುವನ್ನು ಕಂಡು ಹಿಡಿದ ಜಾನ್‌ ಲೂಕ್ “ಇಂತಹ ವೈರಾಣು ಎಷ್ಟೇ ಭಯಾನಕವಾದರೂ ಶುದ್ಧ ನೀರಿನಲ್ಲಿ ತೊಳೆದರೆ ನಾಶವಾಗುತ್ತದೆ ಎನ್ನುತ್ತಿದ್ದ”.

ಈ ಕಾಯಿಲೆಯ ಬಗ್ಗೆ ನಾವು ನಮ್ಮ ವೈಯುಕ್ತಿಕ ಆಯ್ಕೆ, ಆಸಕ್ತಿಯನ್ನು ಮೀರಿ ಸಾಮಾಜಿಕ ಜವಬ್ದಾರಿಯಿಂದ ವರ್ತಿಸಿದಲ್ಲಿ ಈ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಬಹುದು ಎನ್ನುವುದರಲ್ಲಿ ಸಂಶಯವಿಲ್ಲ. ಇಂತಹ ಅನೇಕ ವೈರಾಣುಗಳು ಇಡೀ ಜಗತ್ತನ್ನೇ ನಡುಗಿಸಿ ನಾವು ಲಸಿಕೆ ಹುಡುಕಿಕೊಳ್ಳುವುದರೊಳಗೆ ಮಾಯವಾಗಿರುವುದು ಉಂಟು. Better be safe then sorry.

(ಲೇಖಕರು ವಿಜ್ಞಾನಿ, ಉದ್ಯಮಿ ಮತ್ತು ಚಿಂತಕರು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಬಿವಿಪಿ ದಾಂಧಲೆ : ಚರ್ಚಾ ಕಾರ್ಯಕ್ರಮ ಆಯೋಜಿಸಿದ್ದ ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಿಸಿದ ಅಜೀಂ ಪ್ರೇಮ್ ಜಿ ವಿವಿ

ಅಜೀಂ ಪ್ರೇಮ್‌ ಜಿ ವಿಶ್ವವಿದ್ಯಾಲಯಕ್ಕೆ (ಎಪಿಯು) ಎಬಿವಿಪಿ ಸದಸ್ಯರು ನುಗ್ಗಿ ದಾಂಧಲೆ ನಡೆಸಿದ ಬಳಿಕ, ಕ್ಯಾಂಪಸ್‌ನಲ್ಲಿ ಚರ್ಚಾ ಕಾರ್ಯಕ್ರಮ ಆಯೋಜಿಸಿದ್ದ 'ಸ್ಪಾರ್ಕ್ ರೀಡಿಂಗ್ ಸರ್ಕಲ್' ಎಂಬ ಸಾಮಾಜಿಕ ಮಾಧ್ಯಮ ಪುಟದ ವಿರುದ್ಧ ಕುಲಸಚಿವರು...

2019ರ ಈಸ್ಟರ್ ದಾಳಿಗೆ ಸಂಬಂಧಿಸಿದಂತೆ ಶ್ರೀಲಂಕಾದ ಮಾಜಿ ಗುಪ್ತಚರ ಮುಖ್ಯಸ್ಥರ ಬಂಧನ

2019ರ ಈಸ್ಟರ್ ಭಾನುವಾರದ ಬಾಂಬ್ ಸ್ಫೋಟಗಳಿಗೆ ಸಂಬಂಧಿಸಿದಂತೆ ಶ್ರೀಲಂಕಾದ ಅಪರಾಧ ತನಿಖಾಧಿಕಾರಿಗಳು ಮಾಜಿ ರಾಜ್ಯ ಗುಪ್ತಚರ ಸೇವೆ (SIS) ಮುಖ್ಯಸ್ಥ ನಿವೃತ್ತ ಮೇಜರ್ ಜನರಲ್ ಸುರೇಶ್ ಸಲ್ಲೇ ಅವರನ್ನು ಬಂಧಿಸಿದ್ದಾರೆ ಎಂದು ಪೊಲೀಸ್...

ಹೈದರಾಬಾದ್| ವಿಡಿಯೋ ಗೇಮ್ ಆಡಬೇಡ ಎಂದಿದ್ದಕ್ಕೆ ನೇಣಿಗೆ ಶರಣಾದ 12 ವರ್ಷದ ಬಾಲಕ

ವಿಡಿಯೋ ಗೇಮ್ ಆಡಿದ್ದಕ್ಕಾಗಿ ತಂದೆ ನಿರಂತರವಾಗಿ ಬೈಯುತ್ತಿದ್ದ ಕಾರಣ 12 ವರ್ಷದ ಬಾಲಕ (ಫೆ.26) ಗುರುವಾರ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ ಎಂದು 'ಸಿಯಾಸತ್' ವರದಿ ಮಾಡಿದೆ. ಬಂಜಾರಾ ಹಿಲ್ಸ್‌ನ...

‘ಕೋಮು ಸಾಮರಸ್ಯ ಕದಡುವ ಸಾಧ್ಯತೆ’: ‘ದಿ ಕೇರಳ ಸ್ಟೋರಿ-2’ ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ

'ಕೇರಳ ಸ್ಟೋರಿ 2 : ಗೋಸ್ ಬಿಯಾಂಡ್' ಸಿನಿಮಾದ ಸೆನ್ಸಾರ್ ಪ್ರಮಾಣೀಕರಣವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್, ಗುರುವಾರ (ಫೆ.26) ಸಿನಿಮಾದ ಬಿಡುಗಡೆಗೆ ತಡೆ ನೀಡಿದೆ. ಸಿನಿಮಾ ನಾಳೆ...

ಕೈದಿಗಳಿಗೆ ನಿಯತಕಾಲಿಕ ವೈದ್ಯಕೀಯ ತಪಾಸಣೆಯ ಹಕ್ಕಿದೆ: ಮದ್ರಾಸ್ ಹೈಕೋರ್ಟ್ 

ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು, ಪ್ರತಿಯೊಬ್ಬ ಕೈದಿಯೂ ನಿಯತಕಾಲಿಕ ವೈದ್ಯಕೀಯ ತಪಾಸಣೆಗೆ ಅರ್ಹನಾಗಿದ್ದು, ಅಂತಹ ಆರೋಗ್ಯ ರಕ್ಷಣೆ ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಲಾದ ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ವ್ಯಾಪ್ತಿಗೆ...

ಡಿಜೆ ಮ್ಯೂಸಿಕ್ ವಿವಾದ: ಅಲಿಗಢದಲ್ಲಿ ದಲಿತ ಕುಟುಂಬದ ಮದುವೆ ಮೆರವಣಿಗೆ ಮೇಲೆ ದಾಳಿ

ಉತ್ತರ ಪ್ರದೇಶ ರಾಜ್ಯದ ಅಲಿಗಢ ಸಮೀಪದ ಸುನಾನಾ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದ ಬಾರಾತ್ ಸಮಯದಲ್ಲಿ ಹಾಕಿದ್ದ ಡಿಜೆ ಮ್ಯೂಸಿಕ್‌ನಿಂದ ವಿವಾದ ಉಂಟಾಗಿದ್ದು, ದಲಿತ ಕುಟುಂಬದ ಮದುವೆ ಮೆರವಣಿಗೆಯ ಮೇಲೆ ದಾಳಿ ಮಾಡಲಾಗಿದೆ...

‘ನೆತನ್ಯಾಹು ಅವರ ನಿರ್ಲಜ್ಜ ಸಮರ್ಥನೆ’ : ಪ್ರಧಾನಿ ಮೋದಿಯ ನೆಸೆಟ್ ಭಾಷಣ ಟೀಕಿಸಿದ ಕಾಂಗ್ರೆಸ್

ಇಸ್ರೇಲ್ ಸಂಸತ್ ನೆಸೆಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣವನ್ನು ಕಾಂಗ್ರೆಸ್ ಗುರುವಾರ (ಫೆ.26) ತೀವ್ರವಾಗಿ ಟೀಕಿಸಿದ್ದು, ಇದು ಅವರ ಆತಿಥೇಯರಾದ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ 'ನಿರ್ಲಜ್ಜ ಸಮರ್ಥನೆ' ಎಂದಿದೆ. ಇಸ್ರೇಲ್ ರಾಷ್ಟ್ರದ...

ವಿವಾದಿತ ಎನ್‌ಸಿಇಆರ್‌ಟಿ ಪಠ್ಯಪುಸ್ತಕ ನಿಷೇಧಿಸಿದ ಸುಪ್ರೀಂ ಕೋರ್ಟ್

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಸಿದ್ದಪಡಿಸಿದ 8 ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿರುವ 'ನ್ಯಾಯಾಂಗದಲ್ಲಿನ ಭ್ರಷ್ಟಾಚಾರ' ಎಂಬ ಅಧ್ಯಾಯದ ಕುರಿತು ಸುಪ್ರೀಂ ಕೋರ್ಟ್ ಗುರುವಾರ (ಫೆ.26) ತೀವ್ರ ಅಸಮಾಧಾನ...

ಕ್ಯೂಬಾ ಜಲಪ್ರದೇಶ ಪ್ರವೇಶಿಸಿದ ಅಮೆರಿಕಾ ಮೂಲದ ಸ್ಪೀಡ್‌ಬೋಟ್ ಮೇಲೆ ಕ್ಯೂಬಾ ಪಡೆಗಳಿಂದ ಗುಂಡಿನದಾಳಿ, ನಾಲ್ವರು ಸಾವು 

ಕ್ಯೂಬಾ: ಬುಧವಾರ ಕ್ಯೂಬಾದ ಪ್ರಾದೇಶಿಕ ಜಲಪ್ರದೇಶವನ್ನು ಪ್ರವೇಶಿಸಿದ ಫ್ಲೋರಿಡಾ-ನೋಂದಾಯಿತ ಸ್ಪೀಡ್‌ಬೋಟ್‌ನ ಮೇಲೆ ಕ್ಯೂಬಾ ಭದ್ರತಾ ಪಡೆಗಳು ಗುಂಡು ಹಾರಿಸಿವೆ. ಈ ವೇಳೆ ಬೋಟ್ ನಲ್ಲಿದ್ದ ನಾಲ್ವರು ಸಾವನ್ನಪ್ಪಿದ್ದು, ಆರು ಜನರು ಗಾಯಗೊಂಡರುವುದಾಗಿ ವರದಿಯಾಗಿದೆ....

ಬಾಲಕಿಯೊಂದಿಗೆ ಅನುಚಿತ ವರ್ತನೆ : ಸ್ವಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪ್ರಕರಣ ದಾಖಲು

ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪ ಮೇಲೆ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಮಹಲ್ ರೋಝಾದ ಸ್ವಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪ್ರಕರಣ ದಾಖಲಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಶಹಾಪುರ...