Homeಮುಖಪುಟಚುನಾವಣೆ ಸಮಯದಲ್ಲಿ ಸಿನಿಮಾ ನಟರು ರಾಜಕಾರಣಕ್ಕೆ ಬರುವುದು ಎಷ್ಟು ಸರಿ?

ಚುನಾವಣೆ ಸಮಯದಲ್ಲಿ ಸಿನಿಮಾ ನಟರು ರಾಜಕಾರಣಕ್ಕೆ ಬರುವುದು ಎಷ್ಟು ಸರಿ?

ಕರ್ನಾಟಕದ ಜನತೆಗೆ ಪರಮ ಭ್ರಷ್ಟಾಚಾರದ ಮೂಲಕ ದ್ರೋಹ ಬಗೆದಿರುವ ಪಕ್ಷಕ್ಕೆ ದರ್ಶನ್-ಸುದೀಪ್ ಸೇರುವುದು ರಾಜ್ ಕುಮಾರ್ ಅವರ ಪರಂಪರೆಗೆ ಬಗೆಯುವ ದ್ರೋಹ ಎಂದು ಕೆ.ಪಿ ಸುರೇಶ್ ಅಭಿಪ್ರಾಯಪಟ್ಟಿದ್ದಾರೆ.

- Advertisement -
- Advertisement -

ಕರ್ನಾಟಕದ ವಿಧಾನಸಭಾ ಚುನಾವಣೆ ಕೇವಲ ಒಂದು ತಿಂಗಳು ಇರುವಾಗ ಕನ್ನಡದ ಖ್ಯಾತ ನಟರಾದ ದರ್ಶನ್ ತೂಗುದೀಪ ಮತ್ತು ಸುದೀಪ್ ಬಿಜೆಪಿ ಪಕ್ಷ ಸೇರುತ್ತಾರೆ ಎಂಬ ವರದಿಗಳು ಪ್ರಕಟವಾಗುತ್ತಿವೆ. ಹಾಗಾಗಿ ಚುನಾವಣೆ ಸಮಯದಲ್ಲಿ ಸಿನಿಮಾ ನಟರು ರಾಜಕಾರಣಕ್ಕೆ ಬರುವುದು ಎಷ್ಟು ಸರಿ ಎಂಬ ಚರ್ಚೆಗಳು ಸಹ ಆರಂಭವಾಗಿವೆ.

ಕೆಲ ತಿಂಗಳ ಹಿಂದೆ ಸುದೀಪ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಆಗ ಅವರು ಕಾಂಗ್ರೆಸ್ ಸೇರುತ್ತಾರೆ ಎಂಬ ಚರ್ಚೆಗಳು ಆರಂಭವಾಗಿದ್ದವು. ಆದರೆ ತನಿಖಾ ಸಂಸ್ಥೆಗಳ ಬೆದರಿಕೆಯಿಂದ ಅವರು ಬಿಜೆಪಿ ಸೇರುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ಈ ಕುರಿತು ಪ್ರತಿಕ್ರಿಯಿಸಿರುವ ಖ್ಯಾತ ಬಹುಭಾಷ ನಟ ಪ್ರಕಾಶ್ ರಾಜ್ ಇದು ಸುಳ್ಳು ಸುದ್ದಿ ಇರಬೇಕು ಎಂದಿದ್ದಾರೆ. “ಸುದೀಪ್ ಬಿಜೆಪಿ ಸೇರ್ಪಡೆ ಎಂಬುದು ಕರ್ನಾಟಕದಲ್ಲಿ ಸೋಲುವ ಭಯದಲ್ಲಿ ಭ್ರಷ್ಟ BJP ಪಕ್ಷ ಹರಡುತ್ತಿರುವ ಸುಳ್ಳು ಸುದ್ದಿ ಎಂದು ನಾನು ನಂಬುತ್ತೇನೆ. ನಮ್ಮ ಕಿಚ್ಚ ಸಂವೇದನಶೀಲ ನಾಗರೀಕರಾಗಿದ್ದು, ಈ ಸಂಚಿಗೆ ಬಲಿಯಾಗುವುದಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಚಿಂತಕ ಕೆ.ಪಿ ಸುರೇಶ್‌ರವರು ದರ್ಶನ್ ಮತ್ತು ಸುದೀಪ್‌ರವರಿಗೆ ಬಹಿರಂಗ ಪತ್ರ ಬರೆದಿದ್ದು ಡಾ.ರಾಜ್‌ಕುಮಾರ್ ಪರಂಪರೆಗೆ ಅವಮಾನ ಮಾಡಬೇಡಿ ಎಂದಿದ್ದಾರೆ. ಅದರ ಪೂರ್ಣ ಪಾಠ ಈ ಕೆಳಗಿನಂತಿದೆ.

“ಸುದೀಪ್- ದರ್ಶನ್ ಅವರೇ, ಅಣ್ಣಾವ್ರು ತೋರಿದ ನೈತಿಕ ಹಾದಿಗೆ ಅಪಚಾರವೆಸಗಬೇಡಿ

ಕನ್ನಡದ ಹೆಮ್ಮೆಯ ನಟರಾದ ಕಿಚ್ಚ ಸುದೀಪ್ ಮತ್ತು ದರ್ಶನ್ ಭಾಜಪ ಸೇರುತ್ತಿರುವ ಸುದ್ದಿ ಬಂದಿದೆ.
ಇದರ ಹಿಂದೆ, ED ಬೆದರಿಕೆ ಇದೆಯೋ ಗೊತ್ತಿಲ್ಲ. ತೆರೆಯ ಮೇಲೆ ಸುಪರ್ ಮ್ಯಾನ್ ಆಗುವ ನಟರು ನಿಜ ಜೀವನದಲ್ಲಿ ಪ್ರಭುತ್ವದ ನೆರಳಿಗೇ ಬೆದರುವುದಿದೆ.

ಆದರೆ ಕನ್ನಡದ ಕಲಾವಿದರಿಗೊಂದು ಧೀಮಂತ ಹಾದಿಯನ್ನು ಡಾ. ರಾಜಕುಮಾರ್, ಮತ್ರು ಅವರ ಮಗ ಅಪ್ಪು ಹಾಕಿಕೊಟ್ಟಿದ್ದಾರೆ. ಕನ್ನಡದ ನಾಡು ನುಡಿಯ ಪರವಾಗಿ ಬೀದಿಗಳಿದು ಜನ ಜಾಗೃತಿ ಮಾಡಿದ ಅಣ್ಣಾವ್ರು , ಯಾವ ರಾಜಕೀಯ ಪಕ್ಷಕ್ಕೂ ಸೇರಲಿಲ್ಲ. ಬೆಂಬಲಿಸಲೂ ಇಲ್ಲ.

“ಅಭಿಮಾನಿ ದೇವರುಗಳು ಎಲ್ಲಾ ಪಕ್ಷಗಳಲ್ಲೂ ಇದ್ದಾರೆ. ಅವರಿಗೆ ಅಪಚಾರ ಮಾಡಲಾರೆ” ಎಂಬ ಖಚಿತ ನಿಲುವು ಅಣ್ಣಾವರಿಗಿತ್ತು.

60ರ ದಶಕದಲ್ಲಿ ಅನಕೃ, ರಾಮಮೂರ್ತಿ ಮುಂತಾದ ಕನ್ನಡದ ಲೇಖಕರ ಆಶಯಕ್ಕೆ ಮನ್ನಣೆ ಕೊಟ್ಟು ಡಾ. ರಾಜಕುಮಾರ್ ಕನ್ನಡದ ಹಿತಾಸಕ್ತಿಗೆ ಕಂಕಣಬದ್ಧರಾಗಿದ್ದರು. ಕೊನೆ ಉಸಿರಿನ ವರೆಗೂ ಹಾಗೆಯೇ ಇದ್ದರು.
ಈ ಆದರ್ಶ- ಸುದೀಪ್, ದರ್ಶನ್ ಅವರೊಳಗೆ ಇಳಿದಿದ್ದರೆ ಅವರು ಈ ನಿರ್ಧಾರದಿಂದ ಹಿಂದೆ ಸರಿಯಬೇಕು.

ಇದಕ್ಕೆ ಇನ್ನೊಂದು ಆಯಾಮವಿದೆ. ಸ್ವತಃ ತಮ್ಮ ಬೀಗರಾದ ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ರಾಜ್ ಕುಮಾರ್ ಅವರು ಜೀವನ ಚೈತ್ರ ಸಿನೆಮಾದಲ್ಲಿ ಹೆಂಡದ ವಿರುದ್ಧ ಸೆಟೆದು ಹೋರಾಡುವ ಪಾತ್ರ ನಿರ್ವಹಿಸಿದ್ದರು.
ಇದು ನೈತಿಕ ನಿಲುವು.

ಕರ್ನಾಟಕದ ಇತಿಹಾಸದಲ್ಲೇ ಬ್ರಹ್ಮಾಂಡ ಭ್ರಷ್ಟಾಚಾರ ಮತ್ತು ಕೋಮು ವಿಷ ಹರಡುವ ಕೆಲಸವನ್ನು ಲಜ್ಜೆಗೆಟ್ಟು ಮಾಡಿದ ಪಕ್ಷ ಭಾಜಪ.

ಸ್ವತಃ ದರ್ಶನ್ ಸರಕಾರಿ ಶಾಲೆಗಳ ಇಶ್ಯೂ ಇದ್ದ ಕ್ರಾಂತಿ ಎಂಬ ಸಿನೆಮಾದಲ್ಲಿ ಸೂಪರ್ ಹೀರೋ ಆಗಿ ನಟಿಸಿದ್ದರು. ಆದರೆ ಕನ್ನಡ / ಸರಕಾರಿ ಶಾಲೆಗಳಿಗೆ ಆತ್ಯಂತಿಕ ಕೊಡಲಿಯೇಟು ಕೊಟ್ಟ ಪಕ್ಷ ಭಾಜಪ. ಕನ್ನಡ ಶಿಕ್ಷಣ ಮಾಧ್ಯಮವಾಗದಂತೆ ಸಂಘ ಪರಿವಾರದ ಸಂಸ್ಥೆ ಮೂಲಕ ತಡೆಯೊಡ್ಡಿದ್ದು ಹೌದಷ್ಟೇ.

ಇನ್ನು ಈ ಇಬ್ಬರ ಸಿನೆಮಾಗಳಲ್ಲೂ ಹಿಂದೂ- ಮುಸ್ಲಿಮ್ ಬಾಂಧವ್ಯ ಗಾಢವಾಗಿ ಪ್ರಸ್ತುತಪಡಿಸಿದ ಉದಾಹರಣೆಗಳಿವೆ. ಆದರೆ ಈ ಸರಕಾರ ಹೆಜ್ಜೆ ಹೆಜ್ಜೆಗೆ‌ ಮುಸ್ಲಿಮರನ್ನು ದುಷ್ಟೀಕರಿಸುತ್ತಾ ಮೀಸಲಾತಿಯನ್ನೂ ಕಿತ್ತುಕೊಂಡು ಅವರನ್ನು ಅಂಚಿಗೆ ಸರಿಸುವ ಕೆಲಸ ಮಾಡಿದೆ.

ಉರಿ- ನಂಜು ಸೃಷ್ಟಿ ಸ್ವತಃ ಮಂಡ್ಯದ ನಿರ್ವ್ಯಾಜ ಪ್ರೀತಿ ಪಡೆದಿರುವ ದರ್ಶನ್ ಗೆ ಗೊತ್ತಿರಬಹುದಷ್ಟೇ.
ಹೀಗಿರುವಾಗ ಕರ್ನಾಟಕದ ಜನತೆಗೆ ಪರಮ ಭ್ರಷ್ಟಾಚಾರದ ಮೂಲಕ ದ್ರೋಹ ಬಗೆದಿರುವ ಪಕ್ಷಕ್ಕೆ ಈ ಇಬ್ಬರು ಸೇರುವುದು ರಾಜ್ ಕುಮಾರ್ ಅವರ ಪರಂಪರೆಗೆ ಬಗೆಯುವ ದ್ರೋಹ.

ಈ ಇಬ್ಬರೂ ನೆನಪಿಡಬೇಕಾದ ಇನ್ನೊಂದು ಸತ್ಯವಿದೆ. ಜನಾಗ್ರಹಕ್ಕೆ ತುತ್ತಾಗಿರುವ ಪಕ್ಷಕ್ಕೆ ಈಗ ಸೇರಿದರೆ, ಆ ಪಕ್ಷದೊಂದಿಗೆ ನೀವೂ ಜನರ ತಿರಸ್ಕಾರಕ್ಕೊಳಗಾಗುವುದು ಖಂಡಿತ” ಎಂದು ಕೆ.ಪಿ.ಸುರೇಶ್‌ರವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ನಾಯಕರನ್ನು ಬೆದರಿಸಲು ಸಾವಿರಕ್ಕೂ ಹೆಚ್ಚು IT, ED, CBI ಅಧಿಕಾರಿಗಳು ಕರ್ನಾಟಕಕ್ಕೆ: ಸಿದ್ದರಾಮಯ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...