Homeಮುಖಪುಟಇವಿಎಂಗಳು ಎಷ್ಟು ಸುರಕ್ಷಿತ? ಚುನಾವಣೆ ಹಿನ್ನೆಲೆಯಲ್ಲಿ ಒಂದು ಗಂಭೀರ ಪ್ರಶ್ನೆ

ಇವಿಎಂಗಳು ಎಷ್ಟು ಸುರಕ್ಷಿತ? ಚುನಾವಣೆ ಹಿನ್ನೆಲೆಯಲ್ಲಿ ಒಂದು ಗಂಭೀರ ಪ್ರಶ್ನೆ

ಕ್ಯಾಲಿಫೋರ್ನಿಯಾದ ಸ್ಟ್ಯಾನ್‍ಫೊರ್ಡ್ ಯೂನಿವರ್ಸಿಟಿಯ ಕಂಪ್ಯೂಟರ್ ಸೈನ್ಸ್ ವಿಭಾಗದ ವಿಜ್ಞಾನಿ ಡೇವಿಡ್.ಎಲ್.ಡಿಲ್ ಅವರು ಇವಿಎಂ ಮತಯಂತ್ರ ಮತ್ತು ಆನ್‍ಲೈನ್ ವೋಟಿಂಗ್ ವಿರುದ್ಧದ ಚಳವಳಿಯಲ್ಲಿ ದಶಕಕ್ಕೂ ಹೆಚ್ಚು ಕಾಲದಿಂದ ಸಕ್ರಿಯವಾಗಿದ್ದಾರೆ.

- Advertisement -
- Advertisement -

| ದೊಡ್ಡಿಪಾಳ್ಯ ನರಸಿಂಹಮೂರ್ತಿ |

‘ಇವಿಎಂ ವಿರೋಧಿಗಳು ಆಧುನಿಕ ತಂತ್ರಜ್ಞಾನದ ವಿರೋಧಿಗಳು, ಇವರು ದೇಶವನ್ನು ಕತ್ತಲ ಯುಗಕ್ಕೆ ಕೊಂಡೊಯ್ಯಲು ಬಯಸಿದ್ದಾರೆ’ ಎಂತಲೂ, ‘ಇವಿಎಂ ನಲ್ಲಿ ದೋಷಾರೋಪಣೆ ಮಾಡುವುದು ಸೋತ ಪಕ್ಷಗಳ ಮಾಮೂಲಿ ವಾದ’ ಎಂತಲೂ, ‘ಇವಿಎಂ ಗಳನ್ನು ಹ್ಯಾಕ್ ಮಾಡಲು ಅಥವ ದುರ್ಬಳಕೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ, ಇಡೀ ಜಗತ್ತು ಇವಿಎಂಗಳನ್ನು ಒಪ್ಪಿಕೊಂಡಿದೆ’ ಎಂತಲೂ ಇವಿಎಂ ಪರ ವಕಾಲತ್ತು ವಹಿಸುವವರ ವಾದ. ಈ ವಾದ ಸರಣಿಯನ್ನು ಬೆಂಬಲಿಸುವವರಲ್ಲಿ ಬಹಳಷ್ಟು ಜನಪರ ಚಿಂತಕರು ಹಾಗೂ ಸಾಮಾಜಿಕ ಕಾರ್ಯಕರ್ತರೂ ಕೂಡ ಇದ್ದಾರೆ.

ಇವಿಎಂಗಳನ್ನು ಹ್ಯಾಕ್ ಮಾಡಲು ಸಾಧ್ಯವೆ, ಇಲ್ಲವೆ ಎಂಬುದನ್ನು ತೀರ್ಮಾನಿಸಬೇಕಾದವರು ರಾಜಕಾರಣಿಗಳೋ ಅಥವ ಮಾಧ್ಯಮದವರೋ ಅಲ್ಲ. ಚುನಾವಣಾ ಆಯೋಗದ ಅಧಿಕಾರಿಗಳೂ ಅಲ್ಲ. ಈ ತೀರ್ಮಾನ ಕೈಗೊಳ್ಳಬೇಕಾದವರು ಈ ಕ್ಷೇತ್ರದಲ್ಲಿ ಪರಿಣತಿಯುಳ್ಳ ತಂತ್ರಜ್ಞರು, ವಿಜ್ಞಾನಿಗಳು.

ಆದರೆ ನಮ್ಮಲ್ಲಿ ಇವಿಎಂಗಳ ವಿಶ್ವಾಸಾರ್ಹತೆಯನ್ನು ಸಮರ್ಥಿಸಿ ದೊಡ್ಡ ಗಂಟಲಿನಲ್ಲಿ ವಾದ ಮಂಡಿಸುತ್ತಿರುವವರು ರಾಜಕಾರಣಿಗಳು ಹಾಗೂ ಚುನಾವಣಾ ಆಯೋಗದ ಪ್ರಭೃತಿಗಳು. ಮಾಧ್ಯಮದವರು ಕೂಡ ಆಡಳಿತಾರೂಢ ಪಕ್ಷದ ಪರ ಬ್ಯಾಟಿಂಗ್‍ಗೆ ಇಳಿದಿರುವುದರಲ್ಲಿ ಯಾರಿಗೂ ಆಶ್ಚರ್ಯವಿಲ್ಲ.

ಆದರೆ ಎಲೆಕ್ಟ್ರಾನಿಕ್ ತಂತ್ರಜ್ಞಾನ ಕ್ಷೇತ್ರದ ಪರಿಣಿತರು ಈ ಬಗ್ಗೆ ಏನನ್ನುತ್ತಾರೆ? 2010ರ ಜುಲೈನಲ್ಲಿ ವಿಜ್ಞಾನ ವಿಷಯಗಳ ವರದಿಗಾರ ಜೂಲಿಯನ್ ಸಿಡಲ್ ಭಾರತದಲ್ಲಿ ಬಳಸಲಾಗುತ್ತಿರುವ ಇವಿಎಂಗಳ ಬಗ್ಗೆ ಬಿಬಿಸಿಗೆ ಒಂದು ವಿಸ್ತೃತ ವರದಿ ಮಾಡಿದರು. ಆ ವರದಿ ಹೇಳುವಂತೆ ಅಮೆರಿಕದ ಮಿಚಿಗನ್ ಯೂನಿವರ್ಸಿಟಿಯ ಸಂಶೋಧಕರ ತಂಡ ಭಾರತದ ಇವಿಎಂಗಳ ಕಾರ್ಯಕ್ಷಮತೆ ಬಗ್ಗೆ ಒಂದು ತನಿಖೆ ನಡೆಸಿ, ಯಾವುದೇ ಮೊಬೈಲ್‍ಗಳ ಮೂಲಕ ಇವಿಎಂ ಕೋಡ್ (ಆ ಕೋಡ್ ಗೊತ್ತಿರುವವರು) ಬಳಸಿ ಇವಿಎಂಗಳನ್ನು ಸುಲಭವಾಗಿ ಹ್ಯಾಕ್ ಮಾಡಬಹುದು ಮತ್ತು ಫಲಿತಾಂಶವನ್ನು ತಮಗೆ ಬೇಕಾದ ಹಾಗೆ ಬದಲಿಸಬಹುದು ಎಂಬುದನ್ನು ಸಾಬೀತು ಮಾಡಿದ್ದರು.

2009ರ ಜೂನ್ 21ರಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ತನ್ನ ಸಂಪಾದಕೀಯದಲ್ಲಿ ಹೀಗೆ ಬರೆದಿದೆ: “ಕಾಗದ ರಹಿತ ಎಲೆಕ್ಟ್ರಾನಿಕ್ ಮತಯಂತ್ರದಲ್ಲಿ ಮತದಾರರು ತಮ್ಮ ಆಯ್ಕೆಯ ಮತ ಚಲಾವಣೆ ಮಾಡುತ್ತಾರೆ. ಎಲ್ಲ ಮತಗಳ ಚಲಾವಣೆ ಮುಗಿದ ಮೇಲೆ ಮತಯಂತ್ರ ಫಲಿತಾಂಶ ತೋರಿಸುತ್ತದೆ. ಆದರೆ ಕುತಂತ್ರಪೂರಿತ ಸಾಫ್ಟ್‍ವೇರ್‍ಗಳ ಮೂಲಕ ಅಥವ ಇವಿಎಂ ಹ್ಯಾಕಿಂಗ್ ಮೂಲಕ ಅಕ್ರಮಗಳನ್ನೆಸಗುವುದು, ಮತಗಳನ್ನು ಕದಿಯುವುದು ಸಾಧ್ಯವಿಲ್ಲ ಎಂಬ ಯಾವ ಭರವಸೆಯೂ ಇಲ್ಲ. ಮತ್ತು ಅನುಮಾನ ಬಂದಾಗ ಮತಗಳ ಮರುಎಣಿಕೆಯೂ ಸಾಧ್ಯವಿಲ್ಲ.”

ಕ್ಯಾಲಿಫೋರ್ನಿಯಾದ ಸ್ಟ್ಯಾನ್‍ಫೊರ್ಡ್ ಯೂನಿವರ್ಸಿಟಿಯ ಕಂಪ್ಯೂಟರ್ ಸೈನ್ಸ್ ವಿಭಾಗದ ವಿಜ್ಞಾನಿ ಡೇವಿಡ್.ಎಲ್.ಡಿಲ್ ಅವರು ಇವಿಎಂ ಮತಯಂತ್ರ ಮತ್ತು ಆನ್‍ಲೈನ್ ವೋಟಿಂಗ್ ವಿರುದ್ಧದ ಚಳವಳಿಯಲ್ಲಿ ದಶಕಕ್ಕೂ ಹೆಚ್ಚು ಕಾಲದಿಂದ ಸಕ್ರಿಯವಾಗಿದ್ದಾರೆ. ತಮ್ಮ ಈ ಹೋರಾಟದಲ್ಲಿ ಬಹುತೇಕ ಯಶಸ್ವಿಯೂ ಆಗಿದ್ದಾರೆ. ಅವರ ಮಾತುಗಳನ್ನೇ ಕೇಳೋಣ. “ಪ್ರೋಗ್ರಾಮಿಂಗ್‍ನಲ್ಲಿ ತಪ್ಪುಗಳು, ಉಪಕರಣಗಳು ತಪ್ಪಾಗಿ ಕಾರ್ಯನಿರ್ವಹಿಸುವುದು (malfunctioning), ದುರುದ್ದೇಶಪೂರ್ವಕ ಟ್ಯಾಂಪರಿಂಗ್‍ಗಳಿಗೆ ತುತ್ತಾಗುವ ಅಪಾಯ ಯಾವುದೇ ಕಂಪ್ಯೂಟರೀಕೃತ ಮತಯಂತ್ರಗಳ ಅಂತರ್ಗತ ಗುಣವಾಗಿರುತ್ತದೆ. ಕಾಗದರಹಿತ ಇವಿಎಂ ಉಪಕರಣಗಳ ಮೇಲೆ ಸಾರ್ವಜನಿಕರು ವಿಶ್ವಾಸವಿಡಲು ಯಾವುದೇ ಸ್ಪಷ್ಟ ಆಧಾರವಿಲ್ಲ ಎಂಬ ಅಂಶವನ್ನು ಒಪ್ಪಿಕೊಳ್ಳಲು ಇದು ಸರಿಯಾದ ಸಮಯ.”

ಇಂತಹ ಗೊಂದಲಮಯ ಸಂದರ್ಭದಲ್ಲೇ ‘ಜನತಾ ಕಾ ರಿಪೋರ್ಟರ್’ ಎಂಬ ಜಾಲತಾಣ ಬಹಿರಂಗಗೊಳಿಸಿದ ಸುದ್ದಿ ಆಘಾತಕಾರಿಯಾಗಿದೆ.

ಮೋದಿ ಗುಜರಾತ್ ಸಿಎಂ ಆಗಿದ್ದಾಗ ಅಲ್ಲಿ ಭಾರೀ ಹಗರಣವೊಂದು ನಡೆದಿತ್ತು. ಸರ್ಕಾರಿ ಸ್ವಾಮ್ಯದ ಜಿಎಸ್‍ಪಿಸಿ ಕಂಪನಿಗೆ ಸೇರಿದ 20,000 ಕೋಟಿ ಮೌಲ್ಯದ ಷೇರುಗಳನ್ನು ಜಿಯೋ ಗ್ಲೋಬಲ್ ರಿಸೋರ್ಸಸ್ ಎಂಬ ಕಂಪನಿಯೊಂದಕ್ಕೆ ಅನಾಮತ್ತು ವರ್ಗಾಯಿಸಲಾಗಿತ್ತು. ಈಗ ಇವಿಎಂಗಳಲ್ಲಿ ಅಳವಡಿಸುತ್ತಿರುವ ಮೈಕ್ರೋಚಿಪ್‍ಗಳನ್ನು ಹಾಗೂ ಪ್ರೋಗ್ರಾಮಿಂಗ್ ಸಾಫ್ಟ್‍ವೇರ್‍ಗಳನ್ನು ಸಪ್ಲೈ ಮಾಡಲು ‘ಮೈಕ್ರೋಚಿಪ್ಸ್ ಇಂಕ್’ ಎಂಬ ಅಮೆರಿಕದ ಕಂಪನಿಯೊಂದಕ್ಕೆ ಗುತ್ತಿಗೆ ನೀಡಲಾಗಿದೆ. ಆಘಾತಕಾರಿ ವಿಷಯವೆಂದರೆ ಜಿಎಸ್‍ಪಿಸಿಯ 20,000 ಕೋಟಿ ಮೊತ್ತವನ್ನು ಗುಳುಂಮಾಡಿದ ಜಿಯೋ ರಿಸೋರ್ಸ್ ಮತ್ತು ಈ ಮೈಕ್ರೋ ಚಿಪ್ಸ್ ಇಂಕ್ ಕಂಪನಿಗಳೆರಡೂ ಅಮೆರಿಕದ ‘ಕೀ ಕ್ಯಾಪಿಟಲ್ ಕಾರ್ಪೊರೇಷನ್’ನ ಒಡೆತನದಲ್ಲಿವೆ ಎಂದು ನಾಸ್ಡಾಕ್‍ನ ದಾಖಲೆಗಳು ಹೇಳುತ್ತವೆ.
ತೆರೆಮರೆಯಲ್ಲಿ ಏನೆಲ್ಲ ನಡೆಯುತ್ತಿದೆ ಎಂಬುದನ್ನು ಬಲ್ಲವರಾರು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...