Homeಕರ್ನಾಟಕಗೃಹ ಸಚಿವರ ಜಿಲ್ಲೆಯಲ್ಲೇ ಕಾಂಗ್ರೆಸ್ ನಾಯಕಿಯ ಭೀಕರ ಹತ್ಯೆ: ಒಂದು ಕೊಲೆಯ ಸುತ್ತ...

ಗೃಹ ಸಚಿವರ ಜಿಲ್ಲೆಯಲ್ಲೇ ಕಾಂಗ್ರೆಸ್ ನಾಯಕಿಯ ಭೀಕರ ಹತ್ಯೆ: ಒಂದು ಕೊಲೆಯ ಸುತ್ತ…

ವಾಟ್ಸಾಫ್, ಫೇಸ್ಬುಕ್‍ನಲ್ಲಿ ರೇಷ್ಮಾ ಪಡೇಕನೂರ ಸಾವಿನ ಕುರಿತು ದಿನಕ್ಕೊಂದು ಸುದ್ದಿಗಳು ರೆಕ್ಕೆ, ಪುಕ್ಕ ಕಟ್ಟಿಕೊಂಡು ಹಾರಾಡುತ್ತಿವೆ.

- Advertisement -
- Advertisement -

| ಶಿವಾ |

ಮಳೆ ನಿಂತರೂ ಮಳೆ ಹನಿ ನಿಲ್ಲುತ್ತಿಲ್ಲ ಎನ್ನುವಂತೆ, ಭೀಮೆಯ ಒಡಲು ಕೊಂಚಮಟ್ಟಿಗೆ ತಣ್ಣಗಾದರೂ; ಸೂಫಿ, ಸಂತರ ನಾಡಾದ ವಿಜಯಪುರದಲ್ಲಿ ಮಾತ್ರ ರಕ್ತದ ಹನಿ ಹನಿಯುತ್ತಲೇ ಇದೆ. ವೈಯಕ್ತಿಕ ದ್ವೇಷ, ಹಗೆತನಕ್ಕೆ ಈ ಹಿಂದೆ ಸಾಕಷ್ಟು ಹೆಣಗಳು ಬಿದ್ದಿವೆ. ಆದರೆ ಈಚೆಗೆ ನಡೆದ ಕಾಂಗ್ರೆಸ್ ನಾಯಕಿ ರೇಷ್ಮಾ ಪಡೇಕನೂರ ಭೀಕರ ಹತ್ಯೆ ಜಿಲ್ಲೆಯ ಜನರನ್ನು ಮತ್ತೆ ಬೆಚ್ಚಿ ಬೀಳುವಂತೆ ಮಾಡಿದ್ದು, ಗೃಹ ಸಚಿವ ಎಂ.ಬಿ. ಪಾಟೀಲರ ತವರೂರಲ್ಲಿಯೇ ತಮ್ಮದೇ ಪಕ್ಷದ ನಾಯಕಿಯೊಬ್ಬರು ಹೀಗೆ ಭೀಕರವಾಗಿ ಕೊಲೆಯಾಗಿರುವುದು ದುರಂತದ ಸಂಗತಿ.

ಮೊದಲೆಲ್ಲಾ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ರೇಷ್ಮಾ ಪಡೇಕನೂರ ರಾಜಕೀಯ ನಾಯಕಿ ಆಗಬೇಕೆನ್ನುವ ಹಂಬಲದಿಂದ ರಾಜಕೀಯಕ್ಕೆ ಧುಮ್ಮುಕ್ಕಿದ್ದಳು. ಇದೇ ಹತ್ತು, ಹನ್ನೆರಡು ವರ್ಷಗಳ ಹಿಂದೆ ಸಾಮಾನ್ಯ ಮಹಿಳೆಯಂತಿದ್ದ ರೇಷ್ಮಾ ಪಡೇಕನೂರ; ನೋಡುನೋಡುತ್ತಿದ್ದಂತೆ ಪ್ರಮುಖ ರಾಜಕೀಯ ನಾಯಕರೊಂದಿಗೆ ಆತ್ಮೀಯ ಒಡನಾಟ ಬೆಳೆಸಿಕೊಂಡು ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ತನ್ನ ವರ್ಚಸ್ಸು ಬೆಳೆಸಿಕೊಂಡಿದ್ದಳು. ಹೀಗೆ ರಾಜಕೀಯವಾಗಿ ಬೆಳೆದವಳು ಕೆಲವರೊಂದಿಗೆ ಹಣಕಾಸಿನ ವ್ಯವಹಾರ ಹೊಂದಿದ್ದಳು ಎಂದು ಹೇಳಲಾಗುತ್ತಿದ್ದು, ಈ ಹಣಕಾಸಿನ ವ್ಯವಹಾರದ ವೈಮನಸ್ಸಿಗೆ ರೇಷ್ಮಾ ಪಡೇಕನೂರ ಬಲಿಯಾದಳಾ? ಇಲ್ಲಾ ಅವಳು ರಾಜಕಾರಣಿ ಆಗಲು ಹೊರಟಿದ್ದ ಆ ರಾಜಕಾರಣವೇ ರೇಷ್ಮಾಳ ಬದುಕಿಗೆ ಮುಳ್ಳಾಯಿತಾ? ಅದ್ಯಾವ ಹಗೆತನ, ದ್ವೇಷಕ್ಕಾಗಿ ರೇಷ್ಮಾ ಕೊಲೆಯಾದಳು ಎನ್ನುವ ಪ್ರಶ್ನೆಗೆ ಪೊಲೀಸ್ ಇಲಾಖೆ ಉತ್ತರ ನೀಡಬೇಕಿದೆ.

ದಯೆ ಸ್ವಯಂ ಸೇವಾಸಂಸ್ಥೆ ಸಂಸ್ಥಾಪಕ ಅಧ್ಯಕ್ಷೆಯಾದ ರೇಷ್ಮಾ ಪಡೇಕನೂರ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಹಾಗೂ ಈ ಹಿಂದೆ ಜೆಡಿಎಸ್ ವಿಜಯಪುರ ಜಿಲ್ಲಾಧ್ಯಕ್ಷೆಯಾಗಿ ಸೇವೆ ಸಲ್ಲಿಸಿ, ಕಳೆದ ವರ್ಷವಷ್ಟೇ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಳು. ಇಂತಹ ರಾಜಕೀಯ ಧುರೀಣೆಯನ್ನು ದುಷ್ಕರ್ಮಿಗಳು ಕೊಲೆ ಮಾಡಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಕೊಲೆಯಾದ ರೇಷ್ಮಾ ಪತಿ ಖಾಜಾ ಬಂದೇನವಾಜ್ ಪಡೇಕನೂರ ಸೊಲ್ಲಾಪುರದ ಎಐಎಂಐಎಂ ಪಕ್ಷದ ಮುಖಂಡ ಫೈಲವಾನ್ ತೌಫೀಕ್ ಇಸ್ಮಾಯಿಲ್ ಶೇಖ್ ಎಂಬವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ತೌಫೀಕ್ ಶೇಖ ಜೊತೆಗೆ ರೇಷ್ಮಾ ಪಡೇಕನೂರಳ ಹಣಕಾಸಿನ ವ್ಯವಹಾರವಿತ್ತು. ಈ ಕುರಿತು ಕೆಲ ದಿನಗಳ ಹಿಂದೆ ಇಬ್ಬರ ನಡುವೆ ಜಗಳವೂ ನಡೆದಿತ್ತು. ಈ ಸಂಬಂಧ ಸೊಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಲಾಗಿತ್ತು. ಈತನೇ ಮೊನ್ನೆ ರಾತ್ರಿ, ಹಣಕಾಸಿನ ವಿಷಯ ಮಾತನಾಡಲಿಕ್ಕಾಗಿಯೇ ರೇಷ್ಮಾಳನ್ನು ಮನೆಯಿಂದ ಹೊರಗೆ ಕರೆದೊಯ್ದಿದ್ದ. ಈತನೇ ಕೊಲೆ ಮಾಡಿರಬಹುದು ಎಂದು ದೂರು ನೀಡಲಾಗಿದೆ.

ಅಲ್ಲದೆ ಈ ಹಿಂದೆ ಎಂಐಎಂ ಮುಖಂಡ ತೌಫೀಕ್ ಶೇಖನ ಹೆಂಡತಿ, ವಿಜಯಪುರದ ರೇಷ್ಮಾಳ ಮನೆಗೆ ಬಂದು, ನನ್ನ ಗಂಡನ ಜೊತೆ ವಾಟ್ಸಾಫ್‍ನಲ್ಲಿ ಚಾಟಿಂಗ್ ಮಾಡುತ್ತೀ? ಅವನಿಗೂ ನಿನಗೂ ಏನು ಸಂಬಂಧ? ಎಂದು ಕ್ಯಾತೆ ತೆಗೆದು, ಜಗಳ ಮಾಡಿದ್ದಳು ಎನ್ನಲಾಗಿದೆ. ತೌಫೀಕ್ ಶೇಖ್ ಮತ್ತು ನನ್ನ ಮಧ್ಯೆ ಹಣಕಾಸಿನ ಸಂಬಂಧವಿದ್ದು, ಆತನ ಹೆಂಡತಿ ಇನ್ನಿಲ್ಲದ ಖ್ಯಾತೆ ತೆಗೆಯುತ್ತಿದ್ದಾಳೆ ಎಂದು ಆಕೆಯ ವಿರುದ್ಧ, ರೇಷ್ಮಾ ಪಡೇಕನೂರ ವಿಜಯಪುರದ ಜಲನಗರ ಠಾಣೆಯಲ್ಲಿ ದೂರು ನೀಡಿದ್ದಳು.

ರಾತ್ರಿ ಹೋದವಳು ಹೆಣವಾದಳು.

ಕೊಲೆ ನಡೆದ ದಿನ ರೇಷ್ಮಾ ಪಡೇಕನೂರ ರಾತ್ರಿ ತನ್ನ ವಿಜಯಪುರ ನಗರದ ಮನೆಯಿಂದ ಆಗಂತುಕನೊಂದಿಗೆ ಹೋದವಳು ಬೆಳಗಾಗುತ್ತಿದ್ದಂತೆ ಬಸವನಬಾಗೇವಾಡಿ ತಾಲೂಕಿನ ಕೊರ್ತಿ- ಕೊಲ್ಹಾರ ಸೇತುವೆ ಕೆಳಗೆ ಶವವಾಗಿ ಸುದ್ದಿಯಾದಳು. ಈ ನಿಗೂಢ ಕೊಲೆಗೆ ಜಿಲ್ಲೆಯ ಜನರು ತಲ್ಲಣಗೊಂಡದ್ದು ಒಂದೆಡೆಯಾದರೆ, ಇನ್ನೊಂದೆಡೆ ಹಲವು ಅನುಮಾನಗಳನ್ನು ಸಾರ್ವಜನಿಕರಲ್ಲಿ ಹುಟ್ಟು ಹಾಕಿದೆ.

ಜೆಡಿಎಸ್ ರಾಜ್ಯಾಧ್ಯಕ್ಷ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ, ಮಾಜಿ ಸಚಿವ ಎಸ್.ಆರ್. ಪಾಟೀಲ (ಬಾಡಗಂಡಿ), ಸಚಿವ ಎಂ.ಸಿ. ಮನಗೂಳಿ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ರೇಷ್ಮಾ ಪಡೇಕನೂರ ಕಳೆದ ವರ್ಷ ಎಂ.ಬಿ. ಪಾಟೀಲರ ಸಮ್ಮುಖದಲ್ಲಿ ಕಾಂಗ್ರೆಸ್‍ಗೆ ಸೇರ್ಪಡೆಗೊಂಡಿದ್ದಳು. ಆದರೆ ಮೊನ್ನೆ ಬರ್ಬರ ಹತ್ಯೆಯಾಗಿ, ಕೊಲ್ಹಾರ ಸೇತುವೆ ಕಳೆಗೆ ಬಿದ್ದಿದ್ದು ವಿಪರ್ಯಾಸ.

ವೈರಲ್ ಸುದ್ದಿ
ವಾಟ್ಸಾಫ್, ಫೇಸ್ಬುಕ್‍ನಲ್ಲಿ ರೇಷ್ಮಾ ಪಡೇಕನೂರ ಸಾವಿನ ಕುರಿತು ದಿನಕ್ಕೊಂದು ಸುದ್ದಿಗಳು ರೆಕ್ಕೆ, ಪುಕ್ಕ ಕಟ್ಟಿಕೊಂಡು ಹಾರಾಡುತ್ತಿವೆ. ತೌಫೀಕ್ ಶೇಖ್ ಮತ್ತು ರೇಷ್ಮಾ ಪಡೇಕನೂರ ನಡುವೆ ನಡೆದ ಸಂಭಾಷಣೆ ಸೇರಿದಂತೆ ಮೂರು ಆಡಿಯೋ ತುಣುಕುಗಳು ಜಿಲ್ಲೆಯಾದ್ಯಂತ ವೈರಲ್ ಆಗಿವೆ.

ಪೈಲ್ವಾನನ ಬಗ್ಗೆ ಹಗುರವಾಗಿ ಮಾತನಾಡಿದ ರೇಷ್ಮಾ ಪಡೇಕನೂರ ಅವರ ಧ್ವನಿ ಬಹುಶಃ ಕೊಲೆಗೆ ಕಾರಣವಾಗಿರಬಹುದೇ? ಫೈಲವಾನನ ಆಪ್ತರ ಮುಂದೆ ರೇಷ್ಮಾ ಪಡೇಕನೂರ ಅತ್ಯಂತ ಹೀನಾಯವಾಗಿ ಮಾತನಾಡಿದ್ದು, ಈ ಧ್ವನಿ ಮುದ್ರಿಕೆಯಲ್ಲಿ ಸ್ಪಷ್ಟವಾಗಿ ಕೇಳಿಬರುತ್ತದೆ. ಹಾಗಂತ ಇದನ್ನೆ ಪ್ರಮುಖ ಸಾಕ್ಷಿಯಾಗಿ ನಂಬುವಂತಿಲ್ಲ. ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಈ ಧ್ವನಿ ಮುದ್ರಿಕೆಗಳನ್ನು ಕಳಿಸಿ, ಸತ್ಯಾಸತ್ಯತೆಯನ್ನು ಪರೀಕ್ಷಿಸುವ ಅವಶ್ಯಕತೆಯೂ ಇದೆ. ದಿನ ಕಳೆದಂತೆ ರೇಷ್ಮಾ ಪಡೇಕನೂರ ಕಗ್ಗೊಲೆಯ ಹಿಂದಿನ ರಹಸ್ಯ ತೆರೆದಿಡುವ ಹೊಣೆಗಾರಿಕೆ ಜಿಲ್ಲೆ ಮತ್ತು ರಾಜ್ಯ ಪೊಲೀಸರ ಮೇಲಿದೆ. ಕೊಲೆಗೆ ಕಾರಣ ಏನೇ ಇರಲಿ ಆದರೆ ಜಿಲ್ಲೆಯಲ್ಲಿ ಕಾನೂನಿನ ಸುವ್ಯವಸ್ಥೆ ಹದಗೆಟ್ಟಿದೆ ಎಂಬುದಕ್ಕೆ ಈ ಕೊಲೆಯೇ ನಿಚ್ಚಳ ನಿದರ್ಶನವಾಗಿದೆ.

ಡಾ.ಎಂ.ಬಿ. ಪಾಟೀಲರು ಗೃಹ ಸಚಿವರಾದ ಮೇಲೆ ಹಳೇ ಕ್ರಿಮಿನಲ್‍ಗಳು ಹೊಸ ಅಪರಾಧ ಮಾಡಲು ಮುಂದಾಗುತ್ತಿದ್ದಾರೆ. ಜಿಲ್ಲೆಯಲ್ಲಿ ದಿನಕ್ಕೆ ಐದಾರು ಅಪರಾಧ ಪ್ರಕರಣಗಳು ಸಂಭವಿಸುತ್ತಿವೆ. ಇವುಗಳಿಗೆ ರಾಜಿ ಪಂಚಾಯಿತಿಯಲ್ಲಿ ಮುಕ್ತಿ ಕಾಣಿಸಲಾಗುತ್ತಿದೆ. ಇನ್ನುಳಿದಂತೆ ರೇಷ್ಮಾ ಪಡೇಕನೂರ ಕೊಲೆ ಪ್ರಕರಣಗಳನ್ನು ಗಂಭೀರವಾಗಿ ಹಾಗೂ ಸರಿಯಾದ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ತನಿಖೆಗೆ ಮುಂದಾಗಬೇಕು. ಅಂದಾಗ ಮಾತ್ರ ಈ ನಿಗೂಢ ಕೊಲೆಯ ಹಿಂದಿರುವ ಸಂಚು ಬಯಲಾಗಲು ಸಾಧ್ಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...