Homeಕರ್ನಾಟಕಗಣರಾಜ್ಯೋತ್ಸವ ದಿನದಂದು ಮಾನವ ಹಕ್ಕುಗಳ ಹೋರಾಟಗಾರ ಹರ್ಷ್‌ ಮಂದರ್‌ ಮಂಗಳೂರಿಗೆ

ಗಣರಾಜ್ಯೋತ್ಸವ ದಿನದಂದು ಮಾನವ ಹಕ್ಕುಗಳ ಹೋರಾಟಗಾರ ಹರ್ಷ್‌ ಮಂದರ್‌ ಮಂಗಳೂರಿಗೆ

‘EWS 10% ಮಹಾವಂಚನೆ’ ಪುಸ್ತಕ ಬಿಡುಗಡೆ ಶನಿವಾರ ಬೆಂಗಳೂರಿನಲ್ಲಿ ನಡೆಯಲಿದೆ

- Advertisement -
- Advertisement -

ನಿವೃತ್ತ ಐಎಎಸ್‌ ಅಧಿಕಾರಿ, ದೇಶದ ಖ್ಯಾತ ಮಾನವ ಹಕ್ಕುಗಳ ಹೋರಾಟಗಾರ ಹರ್ಷ್‌ ಮಂದರ್‌ ಅವರು ಗಣರಾಜ್ಯೋತ್ಸವ ದಿನವಾದ ಗುರುವಾರದಂದು ಮಂಗಳೂರಿನಲ್ಲಿ ನಡೆಯುವ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಲಿದ್ದಾರೆ.

ಹಿರಿಯ ಪತ್ರಕರ್ತ ನವೀನ್ ಸೂರಿಂಜೆ ಅವರ ಹೊಸ ಪುಸ್ತಕ ‘ಕುತ್ಲೂರು ಕಥನ’ವನ್ನು ಹರ್ಷ್ ಮಂದರ್‌ ಬಿಡುಗಡೆ ಮಾಡಲಿದ್ದಾರೆ. ಕಾರ್ಯಕ್ರಮವು ಮಂಗಳೂರಿನ ನಂತೂರು ಬಳಿಯ ಶಾಂತಿ ಕಿರಣದಲ್ಲಿ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ, ಹಿರಿಯ ವಕೀಲರಾದ ದಿನೇಶ್‌ ಹೆಗ್ದೆ ಉಳೆಪಾಡಿ ಹಾಗೂ ಪತ್ರಕರ್ತ ವಿಠಲ ಮಲೆಕುಡಿಯ ಅವರು ಆಗಮಿಸಲಿದ್ದಾರೆ. ಅಹರ್ನಿಶಿ ಪ್ರಕಾಶನದ ಅಕ್ಷತಾ ಹುಂಚದಕಟ್ಟೆ ಹಾಗೂ ಪುಸ್ತಕದ ಲೇಖಕ ನವೀನ್ ಸೂರಿಂಜೆ ಕೂಡಾ ಕಾರ್ಯಕ್ರಮದಲ್ಲಿ ಇರಲಿದ್ದಾರೆ.

ಜನವರಿ 28ರ ಶನಿವಾರ ಬೆಂಗಳೂರಿನಲ್ಲಿ,EWS 10% ಮಹಾವಂಚನೆಪುಸ್ತಕ ಬಿಡುಗಡೆ

ದಲಿತ ಹಕ್ಕುಗಳ ಖ್ಯಾತ ಹೋರಾಟಗಾರ ಮಾವಳ್ಳಿ ಶಂಕರ್‌‌, ಚಿಂತಕ ಬಿ. ಶ್ರೀಪಾದ ಭಟ್‌, ಲೇಖಕ ವಿಕಾಸ್ ಆರ್‌. ಮೌರ್ಯ ಅವರು ಸಂಪಾದಿಸಿರುವ ‘EWS 10% ಮಹಾವಂಚನೆ’ ಪುಸ್ತಕ ಬಿಡುಗಡೆ ಜನವರಿ 28ರ ಶನಿವಾರದಂದು ಬೆಂಗಳೂರಿನ ನ್ಯಾಷನಲ್‌ ಕಾಲೇಜಿನ ಎಚ್‌.ಎನ್‌. ಮಲ್ಟಿಮೀಡಿಯಾ ಸಭಾಂಗಣದಲ್ಲಿ ನಡೆಯಲಿದೆ.

ಮಾವಳ್ಳಿ ಶಂಕರ್‌ ಅವರ ಅಧ್ಯಕ್ಷೆತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದ ಉದ್ಘಾಟನೆ ಮತ್ತು ಪುಸ್ತಕ ಬಿಡುಗಡೆಯನ್ನು ಹಿರಿಯ ನ್ಯಾಯವಾದಿಗಳಾದ ಪ್ರೊ. ರವಿವರ್ಮ ಕುಮಾರ್‌ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರೊ. ಬಾಬು ಮ್ಯಾಥ್ಯೂ, ಸಂಶೋಧಕರಾದ ಅಶ್ವಿನಿ ಓಬುಳೇಶ್, ಹಿರಿಯ ಪತ್ರಕರ್ತರಾದ ಡಿ. ಉಮಾಪತಿ ಅವರು ಭಾಗವಹಿಸಲಿದ್ದಾರೆ. ಪ್ರಾಧ್ಯಾಪಕರಾದ ರವಿಕುಮಾರ್‌ ಬಾಗಿ ಅವರು ಕಾರ್ಯಕ್ರಮದ ನಿರ್ವಹಣೆ ನಡೆಸಿಕೊಡಲಿದ್ದಾರೆ.

 

ಇದನ್ನೂ ಓದಿ: ನಜತ್ ಓಝ್ಕಾಯಾನ ಆರು ಪದ್ಯಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...