Homeಮುಖಪುಟಮಾನವ ಹಕ್ಕು ಹೋರಾಟಗಾರರಾದ ಪ್ರೊ. ಜಿ. ಎನ್. ಸಾಯಿಬಾಬಾ ದೋಷಮುಕ್ತ: ಕೂಡಲೇ ಬಿಡುಗಡೆಗೆ ಕೋರ್ಟ್ ಆದೇಶ

ಮಾನವ ಹಕ್ಕು ಹೋರಾಟಗಾರರಾದ ಪ್ರೊ. ಜಿ. ಎನ್. ಸಾಯಿಬಾಬಾ ದೋಷಮುಕ್ತ: ಕೂಡಲೇ ಬಿಡುಗಡೆಗೆ ಕೋರ್ಟ್ ಆದೇಶ

- Advertisement -
- Advertisement -

ಮಾವೋವಾದಿಗಳೊಂದಿಗೆ ಸಂಬಂಧದ ಆರೋಪದ ಮೇಲೆ ಶಿಕ್ಷೆಗೊಳಗಾಗಿದ್ದ ಮಾನವ ಹಕ್ಕು ಹೋರಾಟಗಾರ ಪ್ರೊ. ಜಿ. ಎನ್. ಸಾಯಿಬಾಬಾ ದೋಷಮುಕ್ತರಾಗಿದ್ದಾರೆ. ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠವು ಅವರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಆದೇಶಿಸಿದೆ.

ಶೇ.90 ರಷ್ಟು ದೈಹಿಕ ನ್ಯೂನತೆ ಹೊಂದಿರುವ ಮತ್ತು ಹಲವು ರೋಗಗಳಿಗೆ ತುತ್ತಾಗಿರುವ 47 ವರ್ಷ ಪ್ರಾಯದ ಡಾ. ಜಿ.ಎನ್. ಸಾಯಿಬಾಬಾ ಮಾವೋವಾದಿಗಳೊಂದಿಗೆ ಸಂಪರ್ಕ ಹೊಂದಿದ ಆರೋಪದ ಮೇಲೆ 2017ರಲ್ಲಿ ಗಡ್‌ಚಿರೋಲಿ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೊಳಗಾಗಿದ್ದಾರೆ. ಅವರಿಗೆ ಕೊರೊನಾ ವೈರಸ್ ಸಾಂಕ್ರಾಮಿಕ ಕಾಲದಲ್ಲಿಯೂ ಸಹ ಮೆಡಿಕಲ್ ಪೆರೋಲ್ ಸಿಕ್ಕಿರಲಿಲ್ಲ.

2017ರ ವಿಚಾರಣಾ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಜಿ.ಎನ್ ಸಾಯಿಬಾಬಾ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ರೋಹಿತ್ ಡಿಯೊ ಮತ್ತು ಅನಿಲ್ ಪನ್ಸಾರೆ ಅವರ ವಿಭಾಗೀಯ ಪೀಠವು ಪುರಸ್ಕರಿಸಿ ಆದೇಶ ನೀಡಿದೆ.

ಪ್ರಕರಣದ ಇತರ ಐವರು ಆರೋಪಿಗಳನ್ನು ಸಹ ಪೀಠ ಖುಲಾಸೆಗೊಳಿಸಿದೆ. ಆದರೆ ಅವರಲ್ಲಿ ಒಬ್ಬರು ಜೈಲಿನಲ್ಲಿಯೇ ಮೃತಪಟ್ಟಿದ್ದರು. ಉಳಿದವರು ಬೇರೆ ಯಾವುದೇ ಪ್ರಕರಣದಲ್ಲಿ ಆರೋಪಿಗಳಾಗಿರದಿದ್ದರೆ ಅವರನ್ನು ಕೂಡಲೇ ಜೈಲಿನಿಂದ ಬಿಡುಗಡೆ ಮಾಡುವಂತೆ ಪೀಠವು ಸೂಚಿಸಿದೆ.

ನಾಗ್ಪುರದ ಕೇಂದ್ರ ಕಾರಾಗೃಹದಲ್ಲಿ ಪಾಶ್ವವಾಯು ಪೀಡಿತರಾಗಿ ಗಾಲಿಕುರ್ಚಿಯಲ್ಲೇ ಇರುವ ಸಾಯಿಬಾಬಾರವರು ನಡೆಸಿದ ಧೀರ್ಘ ಕಾನೂನು ಹೋರಾಟಕ್ಕೆ ಕೊನೆಗೂ ಜಯ ಸಂದಿದೆ.

ದಿಲ್ಲಿ ವಿಶ್ವವಿದ್ಯಾಲಯದ ರಾಮ್‌ಲಾಲ್ ಆನಂದ್ ಕಾಲೇಜಿನ ಪ್ರಾಧ್ಯಾಪಕರಾದ 47 ವರ್ಷ ಪ್ರಾಯದ ಡಾ. ಜಿ.ಎನ್. ಸಾಯಿಬಾಬಾ ಅವರು ಆಂಧ್ರಪ್ರದೇಶ ಕರಾವಳಿಯ ಚಿಕ್ಕ ಜಿಲ್ಲೆಯಿಂದ ಬಂದವರು. ನಿತ್ಯ ಜೀವನ ನಡೆಸಲೂ ಕಷ್ಟವಾಗುವ ಚಿಕ್ಕ ಜಮೀನು ಹೊಂದಿದ್ದ ಬಡ ಕುಟುಂಬವೊಂದರಲ್ಲಿ ಅವರು ಜನಿಸಿದ್ದು. ಹೀಗೆ ಜೀವನ ನಡೆಸಲೇ ಕಷ್ಟವಾಗುತ್ತಿರುವಾಗ ಮತ್ತು ಇದ್ದ ಚಿಕ್ಕ ಜಮೀನೂ ಕರಗುತ್ತಿರುವಾಗ ಐದು ವರ್ಷಗಳ ಬಾಲಕನಾಗಿದ್ದ ಸಾಯಿಬಾಬ ಅವರಿಗೆ ಪೋಲಿಯೋಗೆ ತುತ್ತಾಗಿ ಅವರು ಕಾಲುಗಳನ್ನು ಬಳಸಲು ಸಾಧ್ಯವಾಗದಂತಹ ಸ್ಥಿತಿಗೆ ತಲುಪಿದರು.

ಈ ದೈಹಿಕ ಅಡೆತಡೆಗಳ ಹೊರತಾಗಿಯೂ ಅದಮ್ಯ ಚೈತನ್ಯದಿಂದ ಮತ್ತು ಉದಾರ ಮನೋಭಾವದ ಕೆಲವು ಶಿಕ್ಷಕರ ಸಹಾಯದಿಂದ ಅವರೊಂದು ಶಾಲೆಯನ್ನು ಕಂಡುಕೊಂಡರು. ಅಲ್ಲಿ ಅವರ ಮನಸ್ಸು ವಿಕಸಿತಗೊಳ್ಳುತ್ತಾ ಹೋಯಿತು. ಮತ್ತೆ ಪೂರ್ವ ಗೋದಾವರಿಯ ಅಮಲಾಪುರಂ ಜಿಲ್ಲಾ ಪದವಿ ಕಾಲೇಜಿನಲ್ಲಿ ಕಲಿಯುತ್ತಿದ್ದಾಗ ಅವರ ಬುದ್ಧಿಮತ್ತೆ ಮತ್ತಷ್ಟು ವಿಕಸನಗೊಂಡು ಸಾಹಿತ್ಯದ ಕುರಿತು ಅವರಿಗಿದ್ದ ಒಲವು ಅರಳಿತು. ಸಾಹಿತ್ಯ ಅವರ ತೀವ್ರ ಆಸಕ್ತಿಯ ವಿಷಯವಾಗಿತ್ತು.

ತೊಂಬತ್ತರ ದಶಕದ ಆರಂಭದಲ್ಲಿ ತನ್ನ ಕಾಲೇಜು ದಿನಗಳಲ್ಲಿ ವರ್ಷವರ್ಷಗಳಿಂದ ನಡೆದುಕೊಂಡುಬರುತ್ತಿದ್ದ ಸಂಪ್ರದಾಯ ಮತ್ತು ಶೋಷಣೆಯ ಸಾಧನಗಳ ವಿರುದ್ಧ ಜನರು ನಡೆಸುತ್ತಿದ್ದ ಹೋರಾಟದ ವಾತಾವರಣದ ಕುರಿತು ಹೆಚ್ಚುಹೆಚ್ಚು ಅರಿವು ಅವರಿಗೆ ಉಂಟಾಯಿತು. ಕ್ರಾಂತಿಗೀತೆಗಳ ಲಾವಣಿಕಾರ ಜನ ನಾಟ್ಯ ಮಂಡಳಿಯ ಗದ್ದರ್ ಅವರು ಕವಿಗಳು, ಬುದ್ಧಿಜೀವಿಗಳು, ರಾಜಕೀಯ ಕಾರ್ಯಕರ್ತರನ್ನು ಒಳಗೊಂಡು ಸಾವಿರಾರು ಯುವಕರನ್ನು ಪ್ರೇರೇಪಿಸುತ್ತಿದ್ದ ಸಂದರ್ಭದಲ್ಲಿಯೇ ಅವರು ಆಲ್ ಇಂಡಿಯಾ ಪೀಪಲ್ಸ್ ರೆಸಿಸ್ಟೆನ್ಸ್ ಫೋರಂ (ಎಐಪಿಓಆರ್‌ಇ – ಅಖಿಲ ಭಾರತ ಜನಪ್ರತಿರೋಧ ವೇದಿಕೆ) ಸಂಘಟನೆಯನ್ನು ಸೇರಿದರು.

ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿದ್ದಾಗಲೇ, 1992ರಲ್ಲಿ ಅವರು ಅದರ ಆಂಧ್ರಪ್ರದೇಶ ರಾಜ್ಯ ಕಾರ್ಯದರ್ಶಿಯಾದರು. 1995ರ ಹೊತ್ತಿಗೆ ಅವರು ಅದರ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಅವರು ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಇಂಗ್ಲಿಷ್ ಎಂಡ್ ಫಾರಿನ್ ಲ್ಯಾಂಗ್ವೇಜಸ್ (ಸಿಐಇಎಫ್‌ಎಲ್) (ಈಗ ಇಎಫ್‌ಎಲ್‌ಯು ಎಂದು ಕರೆಯಲ್ಪಡುತ್ತಿದೆ)ನಲ್ಲಿಯೂ ಅಧ್ಯಯನ ಮಾಡುತ್ತಿದ್ದು, ತನ್ನ ಜೀವನ ಸಂಗಾತಿ ಮತ್ತು ಗೆಳೆಯರಾದ ವಸಂತಾ ಮತ್ತು ಮಗಳು ಮಂಜೀರಾ ಅವರನ್ನು ಹೈದರಾಬಾದಿನಲ್ಲಿಯೇ ಬಿಟ್ಟು ದಿಲ್ಲಿಗೆ ಹೋಗಬೇಕಾಯಿತು.

ಡಾ. ಸಾಯಿಬಾಬಾ ಅವರು ಸಾಮ್ರಾಜ್ಯಶಾಹಿ ಜಾಗತೀಕರಣದ ವಿರುದ್ಧ ರಾಷ್ಟ್ರೀಯವಾದಿ ಹೋರಾಟಗಳ ಪರವಾಗಿ ಬರೆಯುತ್ತಾ, ಉಪನ್ಯಾಸಗಳನ್ನು ನೀಡುತ್ತಾ, ಪ್ರತಿಭಟನಾ ಸಭೆಗಳನ್ನು ಆಯೋಜಿಸುತ್ತಾ ಇದ್ದರು. ಅವರು ದಲಿತರು ಮತ್ತು ಆದಿವಾಸಿಗಳ ಸಮಸ್ಯೆಗಳನ್ನು ಮುನ್ನೆಲೆಗೆ ತರುತ್ತಲೇ ಇದ್ದರು. 1997 ಹೊತ್ತಿಗೆ ಅವರು ರಾಷ್ಟ್ರೀಯತೆಯ ಪ್ರಶ್ನೆ ಮತ್ತು ಪ್ರತ್ಯೇಕತೆಯ ಹಕ್ಕು ಸೇರಿದಂತೆ ಜನರ ಸ್ವಾಯತ್ತತೆಯ ಕುರಿತು ಅಂತಾರಾಷ್ಟ್ರೀಯ ಸಮಾವೇಶವೊಂದನ್ನು ಆಯೋಜಿಸಿದರು. ಅವರು ರೈತಾಪಿ ವರ್ಗ, ಕಾರ್ಮಿಕರು ಹಾಗೂ ಇತರ ದಮನಿತ ವರ್ಗಗಳನ್ನು ಜೊತೆಸೇರಿಸಿ, 2001ರಲ್ಲಿ ಫೋರಂ ಎಗೇನ್ಸ್ಟ್ ಇಂಪೀರಿಯಲಿಸ್ಟ್ ಗ್ಲೋಬಲಿಸೈಸೇಶನ್ (ಎಫ್‌ಎಐಜಿ – ಸಾಮ್ರಾಜ್ಯಶಾಹಿ ಜಾಗತೀಕರಣ ವಿರೋಧಿ ವೇದಿಕೆ) ಎಂಬ ಸಂಘಟನೆಯನ್ನು ಕಟ್ಟಲೂ ನೆರವಾದರು.

ಇದನ್ನೂ ಓದಿ; ಕ್ರಾಂತಿಕಾರಿ ರಾಜಕೀಯವನ್ನು ಜೀವನದ ಭಾಗವಾಗಿಸಿಕೊಂಡ ಡಾ.ಜಿ.ಎನ್. ಸಾಯಿಬಾಬಾ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...