Homeಮುಖಪುಟಬೋಧನಾ ಮಾಧ್ಯಮವಾಗಿ ಹಿಂದಿ ಹೇರಿಕೆ; ದಕ್ಷಿಣದ ರಾಜ್ಯಗಳು ಪ್ರತಿಭಟನೆ ನಡೆಸುತ್ತಿದ್ದರೂ ಒಕ್ಕೂಟ ಸರ್ಕಾರ ಮೌನ!

ಬೋಧನಾ ಮಾಧ್ಯಮವಾಗಿ ಹಿಂದಿ ಹೇರಿಕೆ; ದಕ್ಷಿಣದ ರಾಜ್ಯಗಳು ಪ್ರತಿಭಟನೆ ನಡೆಸುತ್ತಿದ್ದರೂ ಒಕ್ಕೂಟ ಸರ್ಕಾರ ಮೌನ!

ಹಿಂದಿಯನ್ನು ಕಡ್ಡಾಯಗೊಳಿಸಿದರೆ ಮತ್ತೊಂದು ಭಾಷಾಯುದ್ಧ ನಡೆಯುತ್ತದೆ ಎಂದು ತಮಿಳುನಾಡು ಸಿಎಂ ಸ್ಟಾಲಿನ್‌ ಎಚ್ಚರಿಸಿದ್ದರು

- Advertisement -
- Advertisement -

ಕೇಂದ್ರೀಯ ವಿಶ್ವವಿದ್ಯಾಲಯಗಳು ಸೇರಿದಂತೆ ಎಲ್ಲಾ ತಾಂತ್ರಿಕ ಮತ್ತು ತಾಂತ್ರಿಕೇತರ ಶಿಕ್ಷಣ ಸಂಸ್ಥೆಗಳಲ್ಲಿ ಇಂಗ್ಲಿಷ್ ಬದಲಿಗೆ ಹಿಂದಿ ಅಥವಾ ಸ್ಥಳೀಯ ಭಾಷೆಗಳನ್ನು ಬೋಧನಾ ಮಾಧ್ಯಮವನ್ನಾಗಿ ಮಾಡುವ ಯೋಜನೆಯನ್ನು ದಕ್ಷಿಣ ಭಾರತದ ಮೂರು ರಾಜ್ಯಗಳು ವಿರೋಧಿಸಿದ್ದು, ತನ್ನ ಪ್ರತಿಭಟನೆಯನ್ನು ದಾಖಲಿಸಿದೆ. ಆದರೆ ಈ ಪ್ರತಿಭಟನೆಗಳ ಬಗ್ಗೆ ಮೌನ ವಹಿಸಿರುವ ಒಕ್ಕೂಟ ಸರಕಾರ ಶಿಫಾರಸ್ಸುಗಳನ್ನು ಮುಂದುವರಿಸಲು ಮುಂದಾಗಿದೆ.

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಯೋಜನೆಗಳನ್ನು ಕೈಬಿಡುವಂತೆ ಕೇಳಿದರೆ, ತಮಿಳುನಾಡು ಸಿಎಂ ಒಕ್ಕೂಟ ಸರ್ಕಾರಕ್ಕೆ ಹಿಂದಿ ವಿರೋಧಿ ಆಂದೋಲನಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ತೆಲಂಗಾಣ ಸಚಿವ ಕೆ.ಟಿ. ರಾಮರಾವ್ ಕೂಡ ಈ ಯೋಜನೆಯನ್ನು ವಿರೋಧಿಸಿದ್ದು, ಇದು ಒಕ್ಕೂಟದ ಮನೋಭಾವದ ಉಲ್ಲಂಘನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಒಕ್ಕೂಟ ಸರ್ಕಾರದ ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಂಸತ್ತಿನ ಅಧಿಕೃತ ಭಾಷೆಗಳ ಸಮಿತಿಯು ವರದಿಯ 11 ನೇ ಸಂಪುಟದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯಗಳು ಸೇರಿದಂತೆ ಎಲ್ಲಾ ತಾಂತ್ರಿಕ ಮತ್ತು ತಾಂತ್ರಿಕೇತರ ಶಿಕ್ಷಣ ಸಂಸ್ಥೆಗಳಲ್ಲಿ ಬೋಧನಾ ಮಾಧ್ಯಮವು ಕಡ್ಡಾಯವಾಗಿ ಹಿಂದಿ ಮತ್ತು ಸ್ಥಳೀಯ ಭಾಷೆಯಾಗಿರಬೇಕು ಎಂದು ಶಿಫಾರಸು ಮಾಡಿದೆ.

ಇದನ್ನೂ ಓದಿ: ಶಿಕ್ಷಣ ಮಾಧ್ಯಮದಲ್ಲಿ ಹಿಂದಿ ಹೇರಿಕೆ: ಕೇಂದ್ರದ ನಡೆ ವಿರೋಧಿಸಿದ ಸ್ಟಾಲಿನ್ ಜೊತೆಗೂಡಿದ ಕೇರಳ ಸಿಎಂ

ಇದಲ್ಲದೆ, ನೇಮಕಾತಿ ಪರೀಕ್ಷೆಗಳಲ್ಲಿ ಕಡ್ಡಾಯ ಇಂಗ್ಲಿಷ್ ಭಾಷೆಯ ಪ್ರಶ್ನೆ ಪತ್ರಿಕೆಗಳನ್ನು ತೆಗೆದುಹಾಕುವಂತೆ ಸಮಿತಿಯು ಶಿಫಾರಸು ಮಾಡಿದೆ. ಇಂಗ್ಲೀಷನ್ನು ಸಂಪೂರ್ಣವಾಗಿ ಬೋಧನಾ ಮಾಧ್ಯಮವಾಗಿ ಮಾತ್ರ ಬಳಸಬೇಕು ಮತ್ತು ಕ್ರಮೇಣ ಅದನ್ನು ಹಿಂದಿಯಿಂದ ಬದಲಾಯಿಸಬೇಕು ಎಂದು ಅದು ಹೇಳಿದ್ದು, ವರದಿಯನ್ನು ಈಗಾಗಲೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸೆಪ್ಟೆಂಬರ್‌ನಲ್ಲಿ ಸಲ್ಲಿಸಲಾಗಿದೆ.

ಒಕ್ಕೂಟ ಸರ್ಕಾರ ಮತ್ತು ಸಮಿತಿಯ ಸದಸ್ಯರು ಶಿಫಾರಸುಗಳ ವಿರುದ್ಧ ಬಂದ ಟೀಕೆಗಳು ಮತ್ತು ವಿರೋಧಗಳಿಗೆ ಪ್ರತಿಕ್ರಿಯಿಸದಿದ್ದರೂ, ಅಮಿತ್ ಶಾ ಅವರು ಅಕ್ಟೋಬರ್ 16 ರಂದು ಹಿಂದಿಯಲ್ಲಿ ವೈದ್ಯಕೀಯ ಪುಸ್ತಕಗಳನ್ನು ಬಿಡುಗಡೆ ಮಾಡಲು ಸಿದ್ಧರಾಗಿದ್ದಾರೆ.

ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಅಂಗರಚನಾಶಾಸ್ತ್ರ, ಶರೀರಶಾಸ್ತ್ರ ಮತ್ತು ಜೀವರಸಾಯನಶಾಸ್ತ್ರ ಪುಸ್ತಕಗಳನ್ನು ಅಮಿತ್‌ ಶಾ ಮಧ್ಯಪ್ರದೇಶದಲ್ಲಿ ಬಿಡುಗಡೆ ಮಾಡಲಿದ್ದಾರೆ. ಇಂಜಿನಿಯರಿಂಗ್ ಕೋರ್ಸ್‌ಗಳು ಸೇರಿದಂತೆ ಹೆಚ್ಚಿನ ಪಠ್ಯಪುಸ್ತಕಗಳನ್ನು ಹಿಂದಿಗೆ ಭಾಷಾಂತರಿಸಲು ತಮ್ಮ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಸಂಸದ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.

ಇದನ್ನೂ ಓದಿ: ಹಿಂದಿಯೊಂದನ್ನೆ ರಾಷ್ಟ್ರಭಾಷೆ ಮಾಡಲು ಸಾಧ್ಯವಿಲ್ಲ: ಶಿಕ್ಷಣ ತಜ್ಞರೊಂದಿಗಿನ ಸಂವಾದದಲ್ಲಿ ರಾಹುಲ್ ಗಾಂಧಿ

ಒಂದು ವೇಳೆ ಶಿಫಾರಸುಗಳನ್ನು ಜಾರಿಗೆ ತಂದರೆ, 1965 ರಲ್ಲಿ ರಾಜ್ಯ ಕಂಡಂತಹ ಬೃಹತ್ ಪ್ರತಿಭಟನೆಗಳು ನಡೆಯಬಹುದು ಎಂದು ತಮಿಳುನಾಡು ಸಿಎಂ ಸ್ಟಾಲಿನ್‌ ಹೇಳಿದ್ದಾರೆ. “ಇತರ ಭಾಷೆಗಳಿಗಿಂತ ಹಿಂದಿಗೆ ನೀಡಲಾದ ಆದ್ಯತೆಯು ಅಸಾಂವಿಧಾನಿಕವಾಗಿದ್ದು, ಅಂತಹ ಕ್ರಮವು ರಾಷ್ಟ್ರದ ಸಮಗ್ರತೆಗೆ ಬೆದರಿಕೆಯಾಗಿದೆ” ಎಂದು ಸ್ಟಾಲಿನ್‌ ಹೇಳಿದ್ದಾರೆ.

ಹಿಂದಿಯನ್ನು ಕಡ್ಡಾಯಗೊಳಿಸುವ ಯಾವುದೇ ಪ್ರಯತ್ನವು ನಮ್ಮ ಮೇಲೆ ಮತ್ತೊಂದು ಭಾಷಾಯುದ್ಧ ಮಾಡುವಂತೆ ಪ್ರೇರೇಪಿಸುತ್ತದೆ ಎಂದು ಸ್ಟಾಲಿನ್‌ ಎಚ್ಚರಿಸಿದ್ದಾರೆ. ಹಿಂದಿಯನ್ನು ಹೇರುವ ಯಾವುದೇ ಕ್ರಮವು ಹಿಂದಿ ಮಾತನಾಡದ ನಾಗರಿಕರು ಮತ್ತು ಪ್ರದೇಶಗಳನ್ನು ಎರಡನೆ ದರ್ಜೆಯ ಸ್ಥಾನಮಾನಕ್ಕೆ ತಳ್ಳುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಇದೇ ವೇಳೆ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಪ್ರಧಾನಿ ಮೋದಿಗೆ ಪತ್ರ ಬರೆದು, ಸಂವಿಧಾನದ ಎಂಟನೇ ಶೆಡ್ಯೂಲ್‌ನಲ್ಲಿ ನಿರ್ದಿಷ್ಟಪಡಿಸಿದ ಎಲ್ಲಾ ಭಾಷೆಗಳಲ್ಲಿ ಪ್ರಶ್ನೆ ಪತ್ರಿಕೆಗಳನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಹಿಂದೂಗಳ ಸಂಪತ್ತನ್ನು ಕಿತ್ತು ಮುಸ್ಲಿಮರಿಗೆ ಹಂಚುತ್ತೇವೆ ಎಂದು ಮಲ್ಲಿಕಾರ್ಜುನ ಖರ್ಗೆ...

0
"ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಏನು ಮಾಡುತ್ತದೆ ಎಂದು ಅದರ ಅಧ್ಯಕ್ಷ ಖರ್ಗೆ ಯವರ ಬಾಯಿ ಇಂದಲೇ ಕೇಳಿ. ಕಾಂಗ್ರೆಸ್ ಹಿಂದೂಗಳ ಮನೆಗೆ ನುಗ್ಗಿ, ಅಲ್ಲಿರುವ ಬೀರುಗಳ ಬಾಗಿಲು ತೆರೆದು, ಅಲ್ಲಿರುವ ಹಣವನ್ನೆಲ್ಲ ದೋಚಿ...