Homeಕರ್ನಾಟಕದೀರ್ಘವಾದ ಸಮರಕ್ಕೆ ತಯಾರಿ ಮಾಡಿಕೊಳ್ಳಬೇಕೆಂಬ ಸೂಚನೆ ಇದು : ಯೋಗೇಂದ್ರ ಯಾದವ್

ದೀರ್ಘವಾದ ಸಮರಕ್ಕೆ ತಯಾರಿ ಮಾಡಿಕೊಳ್ಳಬೇಕೆಂಬ ಸೂಚನೆ ಇದು : ಯೋಗೇಂದ್ರ ಯಾದವ್

- Advertisement -
- Advertisement -

| ಯೋಗೇಂದ್ರ ಯಾದವ್ |

ಲೇಖಕರು ಸ್ವರಾಜ್ ಇಂಡಿಯಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು

ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಿ ಹತ್ತಿಕ್ಕುವ ಪ್ರಯತ್ನದಲ್ಲಿ ಕರ್ನಾಟಕವು ಉತ್ತರ ಭಾರತವನ್ನು ಅನುಸರಿಸಲು ಶುರು ಮಾಡಿದೆಯೇ? ಇದು ಇಂತಹ ಕ್ರಮಗಳ ಸರಣಿಯಲ್ಲಿ ಮೊದಲನೆಯದೆಂದು ಮುಂದೆ ಗೊತ್ತಾಗುವುದೇ? ಇಲ್ಲಿ ನಮ್ಮ ಕಣ್ಣಿಗೆ ಕಾಣುತ್ತಿರುವುದಷ್ಟೇ ಇದೆಯೋ, ಅಥವಾ ಇದರಾಳದಲ್ಲಿ ಮತ್ತೇನಾದರೂ ಹುದುಗಿದೆಯೋ? ದೊಡ್ಡಿಪಾಳ್ಯ ನರಸಿಂಹಮೂರ್ತಿ ಯವರನ್ನು ಮೊದಲು ವಶಕ್ಕೆ ತೆಗೆದುಕೊಂಡು ನಂತರ ಬಂಧಿಸಿದ ಸುದ್ದಿ ಕೇಳಿದ ತಕ್ಷಣ ತನ್ನ ತಲೆಯೊಳಗೆ ಉದ್ಭವಿಸಿದ ಪ್ರಶ್ನೆಗಳಿವು.

ನರಸಿಂಹಮೂರ್ತಿ ಯನ್ನು ನಾನು ಸುಮಾರು 7 ವರ್ಷಗಳಿಂದ ಬಲ್ಲೆ. ನನಗನಿಸುವಂತೆ ಆಮ್ ಆದ್ಮಿ ಪಾರ್ಟಿಯನ್ನು ರಚಿಸುವ ಆರಂಭಿಕ ಹಂತದಲ್ಲಿ ಕರ್ನಾಟಕದಲ್ಲಿಯ ರಾಜಕೀಯ ಕಾರ್ಯಕರ್ತರನ್ನು ಭೇಟಿ ಮಾಡುತ್ತಿರುವಾಗ ನಾನು ಅವರನ್ನು ಮೊದಲ ಬಾರಿ ಭೇಟಿಯಾದೆ. ಕರ್ನಾಟಕದ ಚಳವಳಿಗಳ ಮತ್ತು ಕಾರ್ಯಕರ್ತರ ಆಳ ಹಾಗೂ ಅಲ್ಲಿಯ ತಿಳುವಳಿಕೆಯ ಶ್ರೀಮಂತಿಕೆಯನ್ನು ನಾನು ಯಾವಾಗಲೂ ಮೆಚ್ಚಿದ್ದೇನೆ.

ರೈತ ಚಳವಳಿಗಳಿಂದ ದಲಿತ ಚಳವಳಿಗಳವರೆಗೆ, ಉದಾರವಾದಿ ಪ್ರಗತಿಪರ ಮಾನವ ಹಕ್ಕುಗಳ ಗುಂಪುಗಳಿಂದ ಎಡಪಂಥೀಯ ಗುಂಪುಗಳವರೆಗೆ, ಹೀಗೆ ಇಡೀ ರಾಜಕೀಯ ಮತ್ತು ಸೈದ್ಧಾಂತಿಕ ಉದ್ದಗಲಗಳ ಬಗ್ಗೆ ತಿಳುವಳಿಕೆ ಹೊಂದಿರುವ ಮತ್ತು ಅವುಗಳನ್ನು ಉದಾರವಾಗಿ ಒಪ್ಪಿಕೊಳ್ಳುವ ವಿರಳ ವ್ಯಕ್ತಿಗಳಲ್ಲಿ ನರಸಿಂಹಮೂರ್ತಿ ಒಬ್ಬರಾಗಿದ್ದರು. ನನಗೆ ಅವರ ಬಗ್ಗೆ ಅಚ್ಚರಿಗೊಳಿಸಿದ್ದೇನೆಂದರೆ, ಯಾವುದೇ ವೈಯಕ್ತಿಕ ಒಲವು, ಪೂರ್ವಗ್ರಹಿಕೆಗಳು ಕಿಂಚಿತ್ತೂ ಕಾಣಿಸಿಕೊಳ್ಳದ ಅವರ ರಾಜಕೀಯ ತಿಳುವಳಿಕೆಯ ಪ್ರಬುದ್ಧತೆ.

ಅವರು ಎಡಪಂಥದಿಂದ ಬಂದವರಾಗಿದ್ದರು. ಆದರೆ ಪ್ರಜಾತಾಂತ್ರಿಕ ಪ್ರಕ್ರಿಯೆಗಳಲ್ಲಿ ಅವರ ಬದ್ಧತೆ ಇತರರಿಗಿಂತ ಹೆಚ್ಚು ಕಾಣುತ್ತಿತ್ತು. ಹಿಂಸೆಯನ್ನಂತೂ ಮರೆತೇಬಿಡಿ, ರಾಜಕೀಯ ಅಥವಾ ಸಾಮಾಜಿಕ ಚಳವಳಿಗಳಲ್ಲಿ ಅವರು ಎಂದೂ ಸಾಹಸಗಳಿಗೆ ಪ್ರೋತ್ಸಾಹಿಸಲಿಲ್ಲ. ಅವರು ಗೌರಿ ಲಂಕೇಶ್ ಟ್ರಸ್ಟ್‌ನ  ಕೆಲಸಗಳಲ್ಲಿ ನಿರತರಾಗಿ, ಪಕ್ಷದ ಅಥವಾ ಯಾವುದೇ ಪದಾಧಿಕಾರಿಯಾಗಲು ಹಿಂಜರಿಕೆ ತೋರಿದರೂ ಕರ್ನಾಟಕದ ಎಲ್ಲಾ ಸಂಗಾತಿಗಳು ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಬೇಕೆಂದು ಸೂಚಿಸಿದ್ದು ನನಗೆ ಸ್ವಲ್ಪ ಆಶ್ಚರ್ಯ ಉಂಟುಮಾಡಿತ್ತು.

ನರಸಿಂಹಮೂರ್ತಿ ಅವರ ಬಗ್ಗೆ ನನಗೆ ಗೊತ್ತಿರುವುದನ್ನು ಪರಿಗಣಿಸಿದಲ್ಲಿ, ಅವರ ಮೇಲೆ ಪೊಲೀಸರು ಹೊರೆಸಿರುವ ಆರೋಪಗಳನ್ನು ಕೇಳಿ ನನಗೆ ಆಘಾತವಾಯಿತು. ಅವರು ಉಲ್ಲೇಖಿಸಿರುವ ಪ್ರಕರಣಗಳು ತುಂಬಾ ಹಳೆಯ ಪ್ರಕರಣಗಳಾಗಿದ್ದರಿಂದ, ಅವುಗಳ ಬಗ್ಗೆ ನನಗೆ ತಿಳುವಳಿಕೆ ಇದೆಯೆಂದೋ ಅಥವಾ ಅವರು ಮುಗ್ಧ ಎಂದು ನಾನು ತೀರ್ಪು ನೀಡುವುದು ಸರಿಯಾಗುವುದಿಲ್ಲ. ಆದರೆ, ಕೆಲವು ತುಂಬಾ ಸರಳವಾದ ಮತ್ತು ಸ್ಪಷ್ಟವಾದ ಪ್ರಶ್ನೆಗಳಿವೆ. ಈ ಸರಳ ಪ್ರಶ್ನೆಗಳಿಗೆ ಪೊಲೀಸರು ಉತ್ತರಿಸುವಲ್ಲಿ ವಿಫಲವಾಗಿದ್ದಾರೆ. ಪೊಲೀಸರು ಹೇಳುವಂತೆ, ಅವರು ಕಳೆದ ಎರಡು ದಶಕಗಳಿಂದ ತಲೆಮರೆಸಿಕೊಂಡಿದ್ದೇ ಆದರೆ ಸಾರ್ವಜನಿಕ ಜೀವನದಲ್ಲಿ ಇಷ್ಟೊಂದು ಸಕ್ರಿಯರಾಗಿ, ಎಲ್ಲೆಡೆಯೂ ಕಾಣಿಸಿಕೊಳ್ಳುತ್ತಿದ್ದು ಹೇಗೆ? ಒಂದು ವೇಳೆ ಅವರು ಅಪರಾಧ ಪ್ರಕರಣದಲ್ಲಿ ವಾಂಟೆಡ್ ಆಗಿದ್ದರು ಎಂದರೆ, ತಾವು ಹುಡುಕುತ್ತಿರುವ ವ್ಯಕ್ತಿ ನರಸಿಂಹಮೂರ್ತಿ ಎಂದು ಸಂಶಯವಿದ್ದರೆ ಪೊಲೀಸರಿಗೆ ಅವರನ್ನು ಈ ಮೊದಲೇ ಏಕೆ ಬಂಧಿಸಲು ಆಗಲಿಲ್ಲ? ಪೊಲೀಸರು ಅವರ ವಿಚಾರಣೆ ಮಾಡಿ, ತಮ್ಮ ತನಿಖೆಯನ್ನು ಪೂರ್ಣಗೊಳಿಸಿದ ನಂತರ ಅವರನ್ನು ಬಂಧಿಸಬಹುದಿತ್ತಲ್ಲವೇ? ಪೊಲೀಸರು ಹೇಳುವ ಅಪರಾಧೀ ಕೃತ್ಯಗಳು ನಡೆದ ಸಮಯದಲ್ಲಿ ನರಸಿಂಹಮೂರ್ತಿ ಅವರು ತಮ್ಮ ಬಿಸಿನೆಸ್‍ನಲ್ಲಿ ತೊಡಗಿದ್ದರು ಎನ್ನುವ ನರಸಿಂಹಮೂರ್ತಿ ಅವರ ಆವೃತ್ತಿಯನ್ನು ಪೊಲೀಸರು ಏಕೆ ಪರಿಶೀಲಿಸಲು ಹೋಗಲಿಲ್ಲ? ನರಸಿಂಹಮೂರ್ತಿ ಅವರು ತನಿಖೆಗೆ ಸಂಪೂರ್ಣವಾಗಿ ಸಹಕರಿಸುವುದಕ್ಕೆ ಇಚ್ಛೆ ವ್ಯಕ್ತಪಡಿಸಿದಾಗ ಹಾಗೂ ಅವರು ಇಷ್ಟೊಂದು ಸುಲಭವಾಗಿ ಹಾಗೂ ಸಾರ್ವಜನಿಕವಾಗಿ ಲಭ್ಯವಾಗಿರುವಾಗ ಅವರನ್ನು ಬಂಧಿಸುವ ಅವಸರ ಏಕೆ?

ನನಗೆ ಕಾಣಿಸಿದಂತೆ, ಈ ಪ್ರಶ್ನೆಗಳಿಗೆ ಯಾವುದೇ ಉತ್ತರಗಳಿಲ್ಲ. ಹಾಗಾಗಿ, ನರಸಿಂಹಮೂರ್ತಿ ಅವರನ್ನು ಬಂಧಿಸುವ ಈ ಹಠಾತ್ ಕ್ರಮವನ್ನು ಐಸ್‍ಬರ್ಗ್‍ನ ಒಂದು ತುದಿ ಎಂತಲೂ, ಮುಂದಿನ ದಿನಗಳಲ್ಲಿ ಕಾಣಬಹುದಾದ ದೊಡ್ಡ ಕ್ರಮಗಳ ಒಂದು ಸಂಕೇತವೆಂದು ಪರಿಗಣಿಸುವುದನ್ನು ಬಿಟ್ಟರೆ ನಮಗೆ ಬೇರೆ ಆಯ್ಕೆಗಳಿಲ್ಲ. ಕರ್ನಾಟಕದ ಅತ್ಯಂತ ಜೀವಂತಿಕೆಯುಳ್ಳ ನಾಗರಿಕ ಸಮಾಜವು ಇದಕ್ಕೆ ಅಗತ್ಯವಿರುವ ತ್ವರಿತತೆ ಮತ್ತು ದೃಢತೆಯಿಂದ ಪ್ರತಿಕ್ರಿಯೆ ನೀಡುತ್ತಿರುವುದು ಅತ್ಯಂತ ಹೃದಯಸ್ಪರ್ಶಿಯಾಗಿದೆ. ನರಸಿಂಹಮೂರ್ತಿ ಅವರ ಮೇಲೆ ಹೊರೆಸಲಾದ ಆರೋಪಗಳನ್ನು ಹಿಂತೆಗೆದುಕೊಂಡು, ಅವರ ಬಿಡುಗಡೆಯಾಗಿ ನಮ್ಮೊಂದಿಗೆ ಹೋರಾಟದಲ್ಲಿ ಜೊತೆಗೂಡುವರೆಂದು ನಾನು ಆಶಿಸುತ್ತಿರುವಾಗಲೇ, ನಾವೆಲ್ಲರೂ ಒಂದು ದೀರ್ಘ ಪ್ರಜಾತಾಂತ್ರಿಕ ಸಮರಕ್ಕಾಗಿ ತಯಾರಿ ಮಾಡಿಕೊಳ್ಳಬೇಕು ಎನ್ನುವ ಸಂದೇಶ ಸ್ಪಷ್ಟವಾಗಿ ತೇಲಿಬರುತ್ತಿದೆ.

ಅನುವಾದ: ರಾಜಶೇಖರ್‌ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...