Homeಮುಖಪುಟ'ದೊರೆ ಸದಾ ಜೊತೆಗಿದ್ದಾರೆ ಎಂದೇ ಭಾವಿಸಿದ್ದೇನೆ' : ಭಗವಾನ್

‘ದೊರೆ ಸದಾ ಜೊತೆಗಿದ್ದಾರೆ ಎಂದೇ ಭಾವಿಸಿದ್ದೇನೆ’ : ಭಗವಾನ್

ಇಂದು ದೊರೆ ಅವರ ಜನ್ಮದಿನ. ತಮ್ಮ ಯಶಸ್ವೀ ಸಿನಿಮಾ ಪಯಣದುದ್ದಕ್ಕೂ ಜೊತೆಯಾಗಿದ್ದ ಆತ್ಮೀಯ ಸ್ನೇಹಿತನನ್ನು ಭಗವಾನ್ ಅವರು ಇಲ್ಲಿ ಸ್ಮರಿಸಿಕೊಂಡಿದ್ದಾರೆ.

- Advertisement -
- Advertisement -

ದೊರೆ – ಭಗವಾನ್, ಕನ್ನಡ ಚಿತ್ರರಂಗದ ಪ್ರಭಾವಿ ನಿರ್ದೇಶಕದ್ವಯರು. ಸದಭಿರುಚಿಯ ಮತ್ತು ಕಾದಂಬರಿ ಆಧರಿಸಿದ ಚಿತ್ರಗಳ ಟ್ರೆಂಡ್ ಭದ್ರಗೊಳಿಸಿದ ಖ್ಯಾತಿ ಇವರದು. ಇಂದು ದೊರೆ ಅವರ ಜನ್ಮದಿನ. ತಮ್ಮ ಯಶಸ್ವೀ ಸಿನಿಮಾ ಪಯಣದುದ್ದಕ್ಕೂ ಜೊತೆಯಾಗಿದ್ದ ಆತ್ಮೀಯ ಸ್ನೇಹಿತನನ್ನು ಭಗವಾನ್ ಅವರು ಇಲ್ಲಿ ಸ್ಮರಿಸಿಕೊಂಡಿದ್ದಾರೆ.

***

ನಿರೂಪಣೆ: ಶಶಿಧರ ಚಿತ್ರದುರ್ಗ

ದೊರೆ ರಾಜ್ ನನಗೆ ಪರಿಚಯವಾಗಿದ್ದು 1956ರಲ್ಲಿ. ಅವರು ಪರಿಚಯದ ನಂತರ ನನ್ನ ಸಿನಿಮಾ ಬದುಕಿಗೆ ಹೊಸ ದಿಕ್ಕು ಸಿಕ್ಕಿತು. ಅಲ್ಲಿಂದ ಮುಂದೆ ಸುಮಾರು ಐದು ದಶಕಗಳ ಕಾಲ ನಾವಿಬ್ಬರು ಆತ್ಮೀಯ ಸ್ನೇಹಿತರಾಗಿದ್ದೆವು. ಸಾಕಷ್ಟು ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದರೂ ಎಂದೂ ಇಬ್ಬರ ಮಧ್ಯೆ ಒಡಕು ಬಂದಿಲ್ಲ. ಮೂಲತಃ ಛಾಯಾಗ್ರಾಹಕರಾದ ಅವರಿಗೆ ಕ್ಯಾಮರಾ ಬಗ್ಗೆ ಉತ್ತಮ ಸೆನ್ಸ್ ಇತ್ತು. ಮಿತಭಾಷಿಯಾದ ಅವರಿಗೆ ಓದು ಪ್ರಮುಖ ಹವ್ಯಾಸ. ನಮ್ಮಿಬ್ಬರ ಮಧ್ಯೆ ಸೂಕ್ತ ಹೊಂದಾಣಿಕೆ ಇದ್ದುದರಿಂದಲೇ ನಮ್ಮಿಂದ ಉತ್ತಮ ಮತ್ತು ಯಶಸ್ವೀ ಚಿತ್ರಗಳನ್ನು ನೀಡಲು ಸಾಧ್ಯವಾಯ್ತು ಎಂದು ನಾನು ಭಾವಿಸುತ್ತೇನೆ. 2000ದಲ್ಲಿ ಅವರು ಅಗಲಿದರೂ ನನ್ನ ಭಾಗಕ್ಕೆ ಅವರು ಹೋಗಿಲ್ಲ. ಸದಾ ಜೊತೆಯಲ್ಲೇ ಇದ್ದಾರೆ.

ದೊರೆ ಮೂಲತಃ ಮೈಸೂರಿನವರು. ಅವರ ತಂದೆ ಬಾಬು ನಾಯ್ಡು ದೊಡ್ಡ ಚಿತ್ರಕಲಾವಿದ. ನಗರದ ಮಂಡಿ ಮೊಹಲ್ಲಾದಲ್ಲಿ ಅವರ ಮನೆ. ಗುಬ್ಬಿ ಕಂಪನಿ ಸೇರಿದಂತೆ ಹಲವು ಪ್ರಮುಖ ನಾಟಕ ಕಂಪನಿಗಳಿಗೆ ಅವರು ನಾಟಕದ ಪರದೆಗಳನ್ನು ಬರೆಯುತ್ತಿದ್ದರು. ಅಪ್ಪನ ಚಿತ್ರಕಲೆ ಪುತ್ರ ದೊರೆಗೂ ಬಂದಿತ್ತು. ಓದಿನ ಜೊತೆ ಚಿತ್ರಕಲೆಯಲ್ಲೂ ಅವರು ಪಳಗಿದ್ದರು. ಆರ್ಥಿಕ ಅನುಕೂಲತೆಗಳು ಇಲ್ಲದ್ದರಿಂದ ದೊರೆ ಇಂಟರ್‍ಮೀಡಿಯಟ್‍ಗೆ ಓದು ನಿಲ್ಲಿಸಿದರು. ಆಗ ಅದೇಕೆ ಅವರಿಗೆ ಹಾಗನ್ನಿಸಿತೋ, ಮೈಸೂರಿನಲ್ಲಿದ್ದ ನವಜ್ಯೋತಿ ಶೂಟಿಂಗ್ ಸ್ಟುಡಿಯೋದಲ್ಲಿ ಕೆಲಸ ಕೇಳಲೆಂದು ಹೋದರು. ಅದೃಷ್ಟಕ್ಕೆ ಅಲ್ಲಿ ಛಾಯಾಗ್ರಾಹಕ ಜಾನಕಿರಾಮ್ ತಮ್ಮ ಸಹಾಯಕನಾಗಿ ಕೆಲಸ ಮಾಡುವಂತೆ ದೊರೆ ಅವರಿಗೆ ಅವಕಾಶ ಕಲ್ಪಿಸಿದರು.

ಒಮ್ಮೆ ಪ್ರೇಮ್‍ನಜೀರ್ ಹೀರೋ ಆಗಿ ನಟಿಸುತ್ತಿದ್ದ ಮಲಯಾಳಂ ಚಿತ್ರಕ್ಕೆ ಜಾನಕಿರಾಮ್ ಅವರು ಛಾಯಾಗ್ರಾಹಕರಾಗಿ ಕೆಲಸ ಮಾಡಬೇಕಿತ್ತು. ಆಗ ಜಾನಕಿರಾಮ್ ಬೇರೆ ಚಿತ್ರದಲ್ಲಿ ಬ್ಯುಸಿಯಾಗಿದ್ದರು. ಆ ವೇಳೆಗಾಗಲೇ ಕ್ಯಾಮರಾ ಕಲೆಗಳನ್ನು ಅರಗಿಸಿಕೊಂಡಿದ್ದ ದೊರೆ ಅವರನ್ನು ಮಲಯಾಳಂ ಸಿನಿಮಾಗೆ ಕೆಲಸ ಮಾಡಲು ಕಳುಹಿಸಿಕೊಟ್ಟರು. ಅಲ್ಲಿಂದ ಮುಂದೆ ದೊರೆ ಸ್ವತಂತ್ರ್ಯ ಛಾಯಾಗ್ರಾಹಕನಾಗಿ ಗುರುತಿಸಿಕೊಂಡರು. ಮೈಸೂರಿನಲ್ಲಿ ನವಜ್ಯೋತಿ ಸ್ಟುಡಿಯೋದಲ್ಲಿ ಶೂಟಿಂಗ್ ಚಟುವಟಿಕೆಗಳು ಕಡಿಮೆಯಾಗುತ್ತಿದ್ದಂತೆ ದೊರೆ ಮದರಾಸಿಗೆ ತೆರಳಿದರು. ಕನ್ನಡದವರು ಎನ್ನುವ ಅಭಿಮಾನದಿಂದ ಜಿ.ವಿ.ಅಯ್ಯರ್ ತಮ್ಮ ‘ಸೋದರಿ’ ಚಿತ್ರದ ಛಾಯಾಗ್ರಹಣದ ಹೊಣೆಯನ್ನು ದೊರೆ ಹೆಗಲಿಗೆ ಹೊರಿಸಿದರು. ಈ ಚಿತ್ರದೊಂದಿಗೆ ದೊರೆಗೆ ರಾಜಕುಮಾರ್ ಅವರು ಆತ್ಮೀಯರಾದರು.

ದೊರೆ ಛಾಯಾಗ್ರಹಣ ಮಾಡುತ್ತಿದ್ದ ಚಿತ್ರಗಳಿಗೆ ನಾನು ಸಹ ನಿರ್ದೇಶಕನಾಗಿರುತ್ತಿದ್ದೆ. ಸಾಮಾನ್ಯವಾಗಿ ಚಿತ್ರದ ಛಾಯಾಗ್ರಾಹಕ ಮತ್ತು ಸಹನಿರ್ದೇಶಕನ ಮಧ್ಯೆ ಒಳ್ಳೆಯ ಒಡನಾಟ ಇರುತ್ತದೆ. ಅದರಲ್ಲೂ ನಮ್ಮಿಬ್ಬರ ಅಭಿರುಚಿ, ಹವ್ಯಾಸಗಳಲ್ಲೂ ಸಾಮ್ಯತೆಯಿತ್ತು. ಇಬ್ಬರೂ ಸಾಹಿತ್ಯಾಸಕ್ತರೇ. ಇದು ನಮ್ಮಿಬ್ಬರ ಬಾಂಧವ್ಯ ಹೆಚ್ಚಿಸಿತು. ‘ಸಂಧ್ಯಾರಾಗ’, ‘ರಾಜದುರ್ಗದ ರಹಸ್ಯ’ ಚಿತ್ರಗಳಿಗೆ ನಾನು ಸಹನಿರ್ದೇಶಕನಾದರೆ, ಅವರು ಛಾಯಾಗ್ರಾಹಕ. ಮುಂದೆ ಇಬ್ಬರೂ ಸೇರಿ ಏನಾದರೂ ಮಾಡಬೇಕು ಎಂದು ನಿರ್ಧರಿಸಿದೆವು.

ಶೂಟಿಂಗ್ ಇಲ್ಲದಿದ್ದಾಗ ಮದರಾಸಿನಲ್ಲಿ ನಾವಿಬ್ಬರೂ ಸಿನಿಮಾಗಳನ್ನು ವೀಕ್ಷಿಸಲು ಹೋಗುತ್ತಿದ್ದೆವು. ರಾಜಕುಮಾರ್ ಮತ್ತು ವರದಪ್ಪ ಇಬ್ಬರೂ ನಮಗೆ ಜೊತೆಯಾಗುತ್ತಿದ್ದರು. ಒಮ್ಮೆ ಶಾನ್ ಕಾನರಿ ನಟಿಸಿದ್ದ ‘ಡಾ.ನೋ’ ಬಾಂಡ್ ಸಿನಿಮಾ ನೋಡಿದೆವು. ಸಿನಿಮಾ ವೀಕ್ಷಣೆ ನಂತರ ವುಡ್‍ಲ್ಯಾಂಡ್ ಹೋಟೆಲ್‍ನಲ್ಲಿ ಮಸಾಲೆ ದೋಸೆ ತಿನ್ನುತ್ತಿದ್ದಾಗ, “ನಾವೇಕೆ ಕನ್ನಡದಲ್ಲಿ ರಾಜಕುಮಾರ್ ಅವರಿಗೆ ಬಾಂಡ್ ಸಿನಿಮಾ ಮಾಡಬಾರದು?” ಎಂದು ಪ್ರಸ್ತಾಪಿಸಿದೆವು. ರಾಜಕುಮಾರ್ ಜೋರಾಗಿ ನಗುತ್ತಾ, “ಇಂಗ್ಲಿಷ್ ಸಿನಿಮಾ ನೋಡಿ ಕನ್ನಡ ಸಿನಿಮಾ ಮಾಡೋಕೆ ಆಗುತ್ತದೆಯೇ? ಎಲ್ಲಾದರೂ ಸಾಧ್ಯವೇ?” ಎಂದರು. “ನೀವು ಹೂ ಅನ್ನಿ. ನಾವು ಮಾಡುತ್ತೀವಿ” ಎಂದು ಆತ್ಮವಿಶ್ವಾಸದಿಂದ ಹೇಳುತ್ತಿದ್ದಂತೆ ರಾಜ್ ಓಕೆ ಎಂದರು. ಆಗ ರೂಪುಗೊಂಡಿದ್ದೇ ‘ಜೇಡರ ಬಲೆ’ ಸಿನಿಮಾ.

ಫೋಟೋ ಕೃಪೆ: ಪ್ರಗತಿ ಅಶ್ವತ್ಥ ನಾರಾಯಣ,”ಬಾಡದ ಹೂವು’ ಚಿತ್ರೀಕರಣ ಸಂದರ್ಭದಲ್ಲಿ…

ಮುಂದೆ ನಾನು ಮತ್ತು ದೊರೆ ಇಬ್ಬರೂ ಸಾಲು, ಸಾಲು ಚಿತ್ರಗಳನ್ನು ಮಾಡಿದೆವು. ರಾಜಕುಮಾರ್ ಅವರಿಗೇ ಹದಿನಾರು ಸಿನಿಮಾಗಳನ್ನು ಮಾಡಿದೆವು. ದೊರೆ ಅವರ ಬಗ್ಗೆ ರಾಜ್ ಅವರಿಗಂತೂ ವಿಶೇಷ ಅಭಿಮಾನ. ನಮ್ಮ ನಿರ್ದೇಶನದ ಚಿತ್ರವೆಂದರೆ ಅವರು ನಿರಾಳವಾಗಿರುತ್ತಿದ್ದರು. ನಮ್ಮಿಬ್ಬರ ನಿರ್ದೇಶನ, ನಿರ್ಮಾಣದಲ್ಲಿ ನಲವತ್ತು ಸಿನಿಮಾಗಳು ತಯಾರಾಗಿವೆ. ಯಾವುದೇ ಹಂತದಲ್ಲೂ ನಮ್ಮಿಬ್ಬರ ಮಧ್ಯೆ ಮನಸ್ತಾಪ ತಲೆದೋರಿಲ್ಲ. ಪ್ರತಿಯೊಂದು ವಿಚಾರದಲ್ಲಿಯೂ ಪರಸ್ಪರ ಸಲಹೆ, ಸೂಚನೆಗಳೊಂದಿಗೆ ಮುಂದುವರಿಯುತ್ತಿದ್ದೆವು. ಇದರಿಂದಾಗಿ ಒಳ್ಳೆಯ ಸಿನಿಮಾಗಳನ್ನು ಮಾಡಲು ಸಾಧ್ಯವಾಯ್ತು. ಅವರು ಈಗಲೂ ನನ್ನೊಂದಿಗಿದ್ದಾರೆ ಎಂದೇ ನಾನು ಭಾವಿಸಿದ್ದೇನೆ.

ದೊರೆ ಲವ್‍ಸ್ಟೋರಿ

ಎಚ್.ಎಲ್.ಎನ್.ಸಿಂಹ ನಿರ್ದೇಶನದ ’ಅಬ್ಬಾ ಆ ಹುಡುಗಿ’ (1959) ಸಿನಿಮಾ ತಯಾರಾಗುತ್ತಿದ್ದ ಸಂದರ್ಭ. ಮದ್ರಾಸ್‍ನ ವಾಹಿನಿ ಸ್ಟುಡಿಯೋದಲ್ಲಿ ಶೂಟಿಂಗ್ ನಡೆಯುತ್ತಿತ್ತು. ನಿರ್ದೇಶಕ ಸಿಂಹ ಅವರಿಗೆ ನಾನು ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದೆ. ದೊರೆರಾಜ್ ಚಿತ್ರದ ಕ್ಯಾಮರಾಮನ್. ಈ ಚಿತ್ರದೊಂದಿಗೆ ರಾಜಾಶಂಕರ್ ಮತ್ತು ಲೀಲಾಂಜಲಿ, ನಾಯಕ – ನಾಯಕಿಯಾಗಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ಆಗಿನ್ನೂ ಛಾಯಾಗ್ರಾಹಣ ಮಾಡುತ್ತಿದ್ದ ದೊರೆ ತಮ್ಮದೇ ಆದ ವಿಶಿಷ್ಟ ಕ್ಯಾಮರಾ ತಂತ್ರಗಳಿಗೆ ಹೆಸರಾಗಿದ್ದರು. ಸ್ಪೆಷಲ್ ಲೈಟಿಂಗ್‍ನಲ್ಲಿ ಅವರು ಸೆರೆಹಿಡಿಯುತ್ತಿದ್ದ ಕ್ಲೋಸ್‍ಅಪ್ ಶಾಟ್‍ಗಳು ಗಮನ ಸೆಳೆಯುತ್ತಿದ್ದವು.

ಚಿತ್ರೀಕರಣ ಆರಂಭವಾಗಿ ಕೆಲವು ದಿನಗಳಾಗಿತ್ತಷ್ಟೆ. ಛಾಯಾಗ್ರಾಹಕ ದೊರೆ, ನೂತನ ನಟಿ ಲೀಲಾಂಜಲಿ ಅವರಲ್ಲಿ ಅನುರಕ್ತರಾಗಿದ್ದರು! ಆಗ ಅವರು ನಟಿಯ ಕ್ಲೋಸ್‍ಅಪ್ ಶಾಟ್‍ಗಳನ್ನು ತೆಗೆದದ್ದೇ ತೆಗೆದದ್ದು!  ನಟಿ ಲೀಲಾಂಜಲಿ ಅವರ ಮನೆ ಮದರಾಸಿನ ಪಟೇಲ್ ಸ್ಟ್ರೀಟ್‍ನಲ್ಲಿತ್ತು. ಸಂಜೆ ಶೂಟಿಂಗ್ ಮುಗಿಯುತ್ತಲೇ ದೊರೆ, ಪಟೇಲ್ ಸ್ಟ್ರೀಟ್‍ನತ್ತ ಹೆಜ್ಜೆ ಹಾಕುತ್ತಿದ್ದರು! ಒಂದಷ್ಟು ದಿನ ಈ ಒನ್‍ವೇ ಪ್ರೀತಿ ಹೀಗೇ ಮುಂದುವರೆಯಿತು. ಅದೊಂದು ದಿನ ದೊರೆ ಧೈರ್ಯ ಮಾಡಿ ಲೀಲಾಂಜಲಿ ಅವರಿಗೆ ತಮ್ಮ ಪ್ರೀತಿ ನಿವೇದಿಸಿಕೊಂಡರು. ಮೈಸೂರಿನ ಸಂಪ್ರದಾಯಸ್ಥ ಕುಟುಂಬದಲ್ಲಿ ಬೆಳೆದವರು ಲೀಲಾಂಜಲಿ. ಅವರಿಗೆ ಕೂಡ ಸಿನಿಮಾದಲ್ಲಿ ಮುಂದುವರೆಯುವುದು ಇಷ್ಟವಿರಲಿಲ್ಲ. ಅಲ್ಲದೆ ದೊರೆಗೆ ಆಗ ಒಳ್ಳೆಯ ಹೆಸರಿತ್ತು. ಒಳ್ಳೆಯ ಘಳಿಗೆಯೊಂದರಲ್ಲಿ ದೊರೆ ಪ್ರೀತಿಯನ್ನು ಲೀಲಾಂಜಲಿ ಒಪ್ಪಿಕೊಂಡರು. ಹಾಗೆ, ಚಿತ್ರೀಕರಣ ಪೂರ್ಣಗೊಳ್ಳುವ ವೇಳೆಗೆ ದೊರೆ ಲವ್‍ಸ್ಟೋರಿಯೂ ಸುಖಾಂತ್ಯಗೊಂಡಿತು.

ಮುಂದೆ ಇವರಿಬ್ಬರಿಗೂ ಮದುವೆ ಮಾಡಿಸಬೇಕಾದ ಜವಾಬ್ದಾರಿ ನಮ್ಮ ಹೆಗಲೇರಿತು. ದೊರೆಗೆ ಮದುವೆ ಮಾಡಿಕೊಳ್ಳುವ ಧೈರ್ಯವೇನೋ ಇತ್ತು. ಆದರೆ ಹಣಕಾಸಿನ ಅನುಕೂಲತೆ ಇರಲಿಲ್ಲ. ಆಗ ನಮಗೆಲ್ಲಾ ಮಾರ್ಗದರ್ಶಕರಾಗಿದ್ದ ನಿರ್ದೇಶಕ ಜಿ.ವಿ.ಅಯ್ಯರ್ ನೆರವಿಗೆ ಧಾವಿಸಿದರು. ಅವರ ನೇತೃತ್ವದಲ್ಲಿ ತಿರುಪತಿಯಲ್ಲಿ ಮದುವೆ ಮಾಡಿಸುವುದೆಂದು ತೀರ್ಮಾನವಾಯ್ತು. ತಿರುಪತಿಯ ಛತ್ರದಲ್ಲಿ ಪುರೋಹಿತರ ಸಮಕ್ಷಮದೊಂದಿಗೆ ದೊರೆ – ಲೀಲಾಂಜಲಿ ವಿವಾಹ ನೆರವೇರಿತು. ’ಅಬ್ಬಾ ಆ ಹುಡುಗಿ’, ನಟಿ ಲೀಲಾಂಜಲಿ ಅವರ ಮೊದಲ ಮತ್ತು ಕಡೆಯ ಚಿತ್ರವಾಯ್ತು. ಮುಂದೆ ದೊರೆ-ಲೀಲಾಂಜಲಿ ಆದರ್ಶ ದಂಪತಿಯಾಗಿ ಬಾಳ್ವೆ ನಡೆಸಿದರು.


ಇದನ್ನೂ ಓದಿ: ಕನ್ನಡಿಗರು ಎಂದೂ ಮರೆಯದ ಡಾ.ರಾಜ್‌ ಅವರ ಟಾಪ್‌-5 ಚಿತ್ರಗಳು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...