Homeಕ್ರೀಡೆಕ್ರಿಕೆಟ್ICC ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಬಿಡುಗಡೆ; ಭಾರತ ತಂಡದ ಪಂದ್ಯಗಳ ವಿವರ ಇಲ್ಲಿದೆ..

ICC ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಬಿಡುಗಡೆ; ಭಾರತ ತಂಡದ ಪಂದ್ಯಗಳ ವಿವರ ಇಲ್ಲಿದೆ..

- Advertisement -
- Advertisement -

ಭಾರತದಲ್ಲಿ ನಡೆಯಲಿರುವ ಈ ಬಾರಿಯ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಬಿಡುಗಡೆ ಮಾಡಿದೆ.

ಈ ಟೂರ್ನಿಯು ಅಕ್ಟೋಬರ್ 5ರಿಂದ ನವೆಂಬರ್ 19ರ ವರೆಗೆ ದೇಶದ 10 ನಗರಗಳಲ್ಲಿ ನಡೆಯಲಿದ್ದು, ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ಆಯೋಜನೆಗೊಳ್ಳಲಿದೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್ ಇಂಗ್ಲೆಂಡ್ ಮತ್ತು ರನ್ನರ್ಸ್ ಅಪ್ ನ್ಯೂಜಿಲೆಂಡ್ ಕಣಕ್ಕಿಳಿಯಲಿವೆ.

ವಿಶ್ವಕಪ್‌ನ ಆತಿಥ್ಯ ವಹಿಸಿರುವ ಭಾರತ ಅಕ್ಟೋಬರ್ 8ರಂದು ತನ್ನ ಮೊದಲ ಪಂದ್ಯ ಆಡಲಿದೆ. ಈ ಹಣಾಹಣಿಯು ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ಎದುರು ಚೆನ್ನೈನಲ್ಲಿ ನಡೆಯಲಿದೆ.

ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಅಕ್ಟೋಬರ್‌ 15ರಂದು ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಜರುಗಲಿದೆ. ಈ ಟೂರ್ನಿಯಲ್ಲಿ ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಐದು ಬಾರಿಯ ವಿಶ್ವ ಚಾಂಪಿಯನ್ಸ್‌ ಆಸ್ಟ್ರೇಲಿಯಾ ಎದುರು ಆಡಲಿದ್ದು, ಈ ಹೈ-ವೋಲ್ಟೇಜ್‌ ಹಣಾಹಣಿ ಅಕ್ಟೋಬರ್ 8ರಂದು ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಜರುಗಲಿದೆ.

10 ತಂಡಗಳು ಭಾಗಿ

ಟೂರ್ನಿಯಲ್ಲಿ ಒಟ್ಟು 10 ತಂಡಗಳು ಕಣಕ್ಕಿಳಿಯಲಿವೆ. ಮೊದಲ ಎಂಟು ತಂಡಗಳು ಈಗಾಗಲೇ ಅರ್ಹತೆ ಗಿಟ್ಟಿಸಿವೆ. ಜಿಂಬಾಬ್ಬೆಯಲ್ಲಿ ನಡೆಯುತ್ತಿರುವ ಅರ್ಹತಾ ಸುತ್ತಿನ ಪಂದ್ಯಗಳು ಮುಗಿದ ಬಳಿಕ ಉಳಿದೆರಡು ತಂಡಗಳು ಯಾವುವು ಎಂಬುದು ಗೊತ್ತಾಗಲಿದೆ.

ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ನ್ಯೂಜಿಲೆಂಡ್, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ನೇರವಾಗಿ ಟೂರ್ನಿಯಲ್ಲಿ ಆಡಲಿವೆ. ಉಳಿದೆರಡು ಸ್ಥಾನಕ್ಕಾಗಿ ವೆಸ್ಟ್ ಇಂಡೀಸ್, ಶ್ರೀಲಂಕಾ, ಜಿಂಬಾಬ್ಬೆ ಹಾಗೂ ಇತರ ತಂಡಗಳು ಪೈಪೋಟಿ ನಡೆಸುತ್ತಿವೆ.

ಪ್ರತಿ ತಂಡ ತಲಾ 9 ಪಂದ್ಯಗಳನ್ನು ಆಡಲಿದೆ. ಅಗ್ರ 4 ಸ್ಥಾನಗಳಲ್ಲಿ ಉಳಿಯುವ ತಂಡಗಳು ಸೆಮಿಫೈನಲ್ ಟಿಕೆಟ್ ಗಿಟ್ಟಿಸಲಿವೆ.

2023ರ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಟೀಮ್ ಇಂಡಿಯಾ ಆಡಲಿರುವ ಪಂದ್ಯಗಳ ವೇಳಾಪಟ್ಟಿ

ಟೂರ್ನಿಯ 5ನೇ ಪಂದ್ಯ

ಭಾರತ vs ಆಸ್ಟ್ರೇಲಿಯಾ
ಅಕ್ಟೋಬರ್ 8, 2023 (ಭಾನುವಾರ)
ಮಧ್ಯಾಹ್ನ 2:00
ಎಂಎ ಚಿದಂಬರಂ, ಚೆನ್ನೈ

ಟೂರ್ನಿಯ 8ನೇ ಪಂದ್ಯ

ಭಾರತ vs ಅಫಘಾನಿಸ್ತಾನ
ಅಕ್ಟೋಬರ್ 11, 2023 (ಬುಧವಾರ)
ಮಧ್ಯಾಹ್ನ 2:00
ಅರುಣ್ ಜೇಟ್ಲಿ ಕ್ರೀಡಾಂಗಣ, ಹೊಸದಿಲ್ಲಿ

ಟೂರ್ನಿಯ 13ನೇ ಪಂದ್ಯ

ಭಾರತ vs ಪಾಕಿಸ್ತಾನ
ಅಕ್ಟೋಬರ್ 15, 2023 (ಭಾನುವಾರ)
ಮಧ್ಯಾಹ್ನ 2:00
ನರೇಂದ್ರ ಮೋದಿ ಸ್ಟೇಡಿಯಂ, ಅಹ್ಮದಾಬಾದ್

ಟೂರ್ನಿಯ 17ನೇ ಪಂದ್ಯ

ಭಾರತ vs ಬಾಂಗ್ಲಾದೇಶ
ಅಕ್ಟೋಬರ್ 19, 2023 (ಗುರುವಾರ)
ಮಧ್ಯಾಹ್ನ 2:00
ಎಂಸಿಎ ಸ್ಟೇಡಿಯಂ, ಪುಣೆ

ಟೂರ್ನಿಯ 21ನೇ ಪಂದ್ಯ

ಭಾರತ vs ನ್ಯೂಜಿಲೆಂಡ್‌
ಅಕ್ಟೋಬರ್ 22, 2023 (ಭಾನುವಾರ)
ಮಧ್ಯಾಹ್ನ 2:00
ಎಚ್‌ಪಿಸಿಎ ಸ್ಟೇಡಿಯಂ, ಧರ್ಮಶಾಲಾ

ಟೂರ್ನಿಯ 29ನೇ ಪಂದ್ಯ

ಭಾರತ vs ಇಂಗ್ಲೆಂಡ್‌
ಅಕ್ಟೋಬರ್ 29, 2023 (ಭಾನುವಾರ)
ಮಧ್ಯಾಹ್ನ 2:00, ಏಕನಾ ಸ್ಟೇಡಿಯಂ, ಲಖನೌ

ಟೂರ್ನಿಯ 33ನೇ ಪಂದ್ಯ

ಭಾರತ vs ಕ್ವಾಲಿಫೈಯರ್‌ 2
ನವೆಂಬರ್ 2, 2023 (ಗುರುವಾರ)
ಮಧ್ಯಾಹ್ನ 2:00
ವಾಂಖೆಡೆ ಸ್ಟೇಡಿಯಂ, ಮುಂಬೈ

ಟೂರ್ನಿಯ 37ನೇ ಪಂದ್ಯ

ಭಾರತ vs ದಕ್ಷಿಣ ಆಫ್ರಿಕಾ
ನವೆಂಬರ್ 5, 2023 (ಭಾನುವಾರ)
ಮಧ್ಯಾಹ್ನ 2:00
ಈಡನ್ ಗಾರ್ಡನ್ಸ್, ಕೋಲ್ಕತ್ತಾ

ಟೂರ್ನಿಯ 43ನೇ ಪಂದ್ಯ

ಭಾರತ vs ಕ್ವಾಲಿಫೈಯರ್‌ 1
ನವೆಂಬರ್ 11, 2023 (ಶನಿವಾರ)
ಮಧ್ಯಾಹ್ನ 2:00
ಎಂ ಚಿನ್ನಸ್ವಾಮಿ, ಬೆಂಗಳೂರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ವಿರುದ್ಧ ಪ್ರತಿಭಟಿಸಿ ಟ್ರೋಲ್ ಆದ ಗಾಲ್ಗೋಟಿಯಾಸ್ ವಿವಿ ವಿದ್ಯಾರ್ಥಿಗಳು: ಕ್ಷಮಿಸುವಂತೆ ಮನವಿ

0
ಕಾಂಗ್ರೆಸ್ ವಿರುದ್ದ ಪ್ರತಿಭಟಿಸುವ ಮೂಲಕ ಉತ್ತರ ಪ್ರದೇಶದ ಗಾಲ್ಗೋಟಿಯಾಸ್ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು ನಿನ್ನೆಯಿಂದ (ಮೇ 1) ಭಾರೀ ಸುದ್ದಿಯಲ್ಲಿದ್ದಾರೆ. ಕಾಂಗ್ರೆಸ್‌ ವಿರುದ್ದ ಹಲವು ಆರೋಪಗಳನ್ನು ಹೊರಿಸಿ ಗಾಲ್ಗೋಟಿಯಾಸ್ ವಿವಿ ವಿದ್ಯಾರ್ಥಿಗಳು ದೆಹಲಿಯಲ್ಲಿ ಪ್ರತಿಭಟನೆ...