Homeರಂಜನೆಕ್ರೀಡೆಭಾನುವಾರ ಫೈನಲ್ ನಲ್ಲಿ ಯಾವುದೇ ತಂಡ ಗೆದ್ದರೂ, ಈ ವಿಶ್ವಕಪ್ ಹೊಸ ಇತಿಹಾಸ ಸೃಷ್ಠಿಸಲಿದೆ!

ಭಾನುವಾರ ಫೈನಲ್ ನಲ್ಲಿ ಯಾವುದೇ ತಂಡ ಗೆದ್ದರೂ, ಈ ವಿಶ್ವಕಪ್ ಹೊಸ ಇತಿಹಾಸ ಸೃಷ್ಠಿಸಲಿದೆ!

- Advertisement -
- Advertisement -

ಭಾನುವಾರ ಫೈನಲ್ ನಲ್ಲಿ ಯಾವುದೇ ತಂಡ ಗೆದ್ದರೂ, ಈ ವಿಶ್ವಕಪ್ ಹೊಸ ಇತಿಹಾಸ ಸೃಷ್ಠಿಸಲಿದೆ! ಹೇಗೆ ಗೊತ್ತೆ?

2019ರ ವಿಶ್ವಕಪ್ ನ ಎರಡನೇ ಸೆಮಿಫೈನಲ್ಸ್ ನಲ್ಲಿ ಆತಿಥೇಯ ಇಂಗ್ಲೆಂಡ್ ನ ಶಿಸ್ತುಬದ್ಧ ದಾಳಿಯಿಂದಾಗಿ ಐದು ಬಾರಿ ವಿಶ್ವಕಪ್ ಗೆದ್ದಿರುವ ಆಸ್ಟ್ರೇಲಿಯಾ ವಿರುದ್ಧ ಸುಲುಭದ 224 ರನ್ ಗುರಿಯನ್ನು ಮುಟ್ಟಿ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿ ಫೈನಲ್ ತಲುಪಿದೆ. ಮತ್ತೊಂದು ಕಡೆ ನಿನ್ನೆ ಸೆಮಿಫೈನಲ್ಸ್ ಒಂದರಲ್ಲಿ ಭಾರತವನ್ನು ಮಣಿಸಿ ನ್ಯೂಝಿಲೆಂಡ್ ಕೂಡ ಫೈನಲ್ ತಲುಪಿತ್ತು.

ಕಳೆದ 2015ರ ವಿಶ್ವಕಪ್ ಟೂರ್ನಿಯ ಫೈನಲ್ ವರೆಗೂ ನ್ಯೂಝಿಲೆಂಡ್ ತಲುಪಿತ್ತಾದರೆ ಕಪ್ ಗಲ್ಲಲು ಸಾಧ್ಯವಾಗಲಿಲ್ಲ. ಹಾಗೆಯೇ ಇಂಗ್ಲೆಂಡ್ 1992 ರ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ತಲುಪಿತ್ತು ಇದೀಗ ಬರೊಬ್ಬರಿ 27 ವರ್ಷದ ನಂತರ ಇಂಗ್ಲೆಂಡ್ ಫೈನಲ್ ಪ್ರವೇಶ ಮಾಡಿದೆ.

ಈ ಪಂದ್ಯ ಐತಿಹಾಸಿಕ ಯಾಕೆ?

1975 ರಲ್ಲಿ ಶುರುವಾಗಿದ್ದ ಮೊದಲ ವಿಶ್ವಕಪ್ ಟೂರ್ನಿಯಿಂದಲೂ ಇಂಗ್ಲೆಂಡ್ ಮತ್ತು ನ್ಯೂಝಿಲೆಂಡ್ ಒಂದು ಬಾರಿಯೂ ವಿಶ್ವಕಪ್ ಗೆದ್ದಿಲ್ಲ. ಇದೀಗ ನ್ಯೂಝಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳು ಫೈನಲ್ ನಲ್ಲಿ ಮುಖಾಮುಖಿ ಆಗಲಿದ್ದು ಯಾವುದೇ ತಂಡ ಗೆದ್ದರು ಹೊಸ ಇತಿಹಾಸ ಸೃಷ್ಠಿಯಾಗಲಿದೆ. ಎರಡೂ ತಂಡಗಳು ಹೆಚ್ಚಿನ ಆತ್ಮವಿಶ್ವಾಸದಲ್ಲಿದ್ದು ಯಾರು ಗೆಲ್ಲುತ್ತಾರೆ ಎನ್ನುವುದನ್ನು ಜುಲೈ 14 ರ ಭಾನುವಾರದಂದು ತಿಳಿಯಲಿದೆ.

ಯಾವ ತಂಡ ಎಷ್ಟು ಬಾರಿ ಚಾಂಪಿಯನ್ಸ್ ಆಗಿವೆ?

ಆಸ್ಟ್ರೇಲಿಯಾ – 5 ಬಾರಿ

ವೆಸ್ಟ್ ಇಂಡೀಸ್ – 2 ಬಾರಿ

ಭಾರತ – 2 ಬಾರಿ

ಶ್ರೀಲಂಕಾ – 1 ಬಾರಿ

ಪಾಕಿಸ್ತಾನ – 1 ಬಾರಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...