Homeಮುಖಪುಟಅಮೆರಿಕನ್ ಕುಕೇಶಿಯನ್ (ಶ್ವೇತವರ್ಣಿಯ)ರ ನಿಜಮುಖ ಬಯಲಿಗಿಡುವ ಸಿನಿಮಾ 'ಗೆಟ್ ಔಟ್'!

ಅಮೆರಿಕನ್ ಕುಕೇಶಿಯನ್ (ಶ್ವೇತವರ್ಣಿಯ)ರ ನಿಜಮುಖ ಬಯಲಿಗಿಡುವ ಸಿನಿಮಾ ‘ಗೆಟ್ ಔಟ್’!

2017ರ ಫೆಬ್ರವರಿಯಲ್ಲಿ ಅಮೆರಿಕಾದಲ್ಲಿ ತೆರೆಕಂಡ ಈ ಸಿನೆಮಾ ಅತ್ಯುತ್ತಮ ಚಿತ್ರಕಥೆಗಾಗಿ ಆಸ್ಕರ್ ಪುರಸ್ಕಾರವನ್ನೂ ಪಡೆದಿರುವುದು ಗಮನಾರ್ಹ

- Advertisement -
- Advertisement -

ಅಮೆರಿಕಾ ಸಮಾಜದೊಳಗೊಂದು ಪಾತಾಳಗರುಡಿ ಬಿಟ್ಟು ಸಮಾಜೋ-ರಾಜಕೀಯ ದೃಷ್ಟಿಕೋನದಿಂದ ನೋಡುತ್ತಾ ಆಲ್ಲಿನ ಸಂಗತಿಗಳನ್ನು ಅತ್ಯುತ್ತಮ ರೀತಿಯಲ್ಲಿ ಸಿನೆಮ್ಯಾಟಿಕ್ ಪರಿಭಾಷೆಯಲ್ಲಿ ಕಟ್ಟಿಕೊಟ್ಟಿರುವ “ಗೆಟೌಟ್” ನಾನಾ ಕಾರಣಗಳಿಂದ ಈ ಕಾಲಘಟ್ಟದ ಬಹುಮುಖ್ಯವಾದ ಸಿನೆಮಾ. ಇದರ ಬಗ್ಗೆ ಅಲ್ಲಿ ತೀವ್ರವಾದ ಚರ್ಚೆಗಳಾಗುತ್ತಿವೆ. ಇದರಿಂದಾಗಿ ಈ ಚಿತ್ರ ಅಲ್ಲಿ ಎಬ್ಬಿಸಿರುವ ಕಂಪನಗಳ ಮಹತ್ವದ ಅರಿವಾಗುತ್ತದೆ. ಇನ್ನೊಂದು ಮಹತ್ವದ ಸಂಗತಿಯೆಂದರೆ ಈ ಚಿತ್ರ ನೋಡಿದ ನಂತರ ಅಮೆರಿಕಾದ ಕರಿಯರು; ಹೀಗೆನ್ನುವ ಬದಲು ಅಮೆರಿಕಾದ ದಲಿತರು ಎನ್ನುವುದೇ ಹೆಚ್ಚು ಸೂಕ್ತ. ಇವರ ಮತ್ತು ಭಾರತದ ದಲಿತರ ಸಾಮಾಜಿಕ ಸ್ಥಿತಿಗತಿಗಳು ಒಂದೇ… ಇವರಿಬ್ಬರೂ ಸಮಾಜೋ –ರಾಜಕೀಯ ಸ್ಥಾನಮಾನಗಳಿಂದ ನಿಜವಾದ ಅರ್ಥದಲ್ಲಿ ವಂಚಿತರು ಎನಿಸುತ್ತದೆ.

ಇಂಥದ್ದೊಂದು ಥಿಯರಿಯನ್ನು ಹಾಲಿವುಡ್ ನಿರ್ದೇಶಕ ಜೋರ್ಡನ್ ಪಿಲೇ ಮುಂದಿಟ್ಟಿದ್ದಾರೆ ಎನಿಸುತ್ತದೆ. ಅವರ “ಗೆಟೌಟ್” ಸಿನೆಮಾ ಇಂಥದೊಂದು ಅಭಿಪ್ರಾಯವನ್ನು ಹುದುಗಿಸಿಕೊಂಡಿದೆ. ಇಂಥ ಥಿಯರಿ ಸುಮ್ಮನೆ ಮೂಡಿದ್ದಲ್ಲ. ಶತಶತಮಾನಗಳಿಂದಲೂ ಅಮೆರಿಕಾದಲ್ಲಿರುವ ಆಫ್ರಿಕನ್ –ಅಮೆರಿಕನ್ ಪ್ರಜೆಗಳು ತಾತ್ಸಾರ, ನಿಂದನೆ, ಅವಮಾನ, ಕಗ್ಗೊಲೆಗಳನ್ನು ಅನುಭವಿಸುತ್ತಲೇ ಬಂದಿದ್ದಾರೆ. ಅವರನ್ನು ಅವಮಾನಿಸುವ ಪ್ರಕರಣಗಳೂ ಇಂದಿಗೂ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಗೆಟೌಟ್ ಸಿನೆಮಾ ಮೂಡಿರುವಂತೆ ಕಾಣುತ್ತದೆ.

ಅಮೆರಿಕಾ ಸಿನೆ-ಟಿವಿರಂಗದಲ್ಲಿ ಜೋರ್ಡನ್ ಪಿಲೆಯದು ಖ್ಯಾತ ಹೆಸರು. ಹಲವು ಯಶಸ್ವಿ ಚಿತ್ರಗಳನ್ನು ಕೊಟ್ಟಿದ್ದಾರೆ. ಗೆಟೌಟ್ ಸಿನೆಮಾದ ವಿಶೇಷ ಸಂಗತಿಯೆಂದರೆ ನಿರ್ದೇಶಕರೇ ಕಥೆ-ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಅಂದಹಾಗೆ ಪಿಲೆ ಕೂಡ ಆಫ್ರಿಕನ್ ಅಮೆರಿಕನ್. ಇದು ಕೂಡ ಇಥದ್ದೊಂದು ಥಿಯರಿಗೆ ಮತ್ತಷ್ಟೂ ಬಲಕೊಟ್ಟಿದೆ.

ಅಮೆರಿಕಾದ ಕುಕೇಶಿಯನ್ (ಶ್ವೇತವರ್ಣಿಯರು) ಆಫ್ರಿಕಾದವರನ್ನು ಶತಶತಮಾನಗಳ ಕಾಲ ಗುಲಾಮರನ್ನಾಗಿ ನಡೆಸಿಕೊಂಡಿದೆ. ಇಂದು ಗುಲಾಮಗಿರಿ ಪದ್ಧತಿ ಅಳಿದಿದೆ. ಆದರೆ ಅದನ್ನು ಕುಕೇಶಿಯನ್ ಸಮಾಜ ಬೇರೊಂದು ರೀತಿಯಲ್ಲಿ ಮುಂದುವರಿಸಿಕೊಂಡು ಬರುತ್ತಿದೆ ಎಂಬ ವಾದವನ್ನು ಜೋರ್ಡನ್ ಪಿಲೆ ನಮ್ಮ ಮುಂದಿಡುತ್ತಾರೆ.

ತಮ್ಮ ವಾದವನ್ನು ಕಥಾರೂಪಕ್ಕೆ ತಂದಿರುವ ಪಿಲೆ ಅದಕ್ಕೆ ಸಶಕ್ತ ಚಿತ್ರಕಥೆ ಸ್ವರೂಪ ನೀಡಿದ್ದಾರೆ. ಇದು ಎಷ್ಟು ಪರಿಪಕ್ವವಾಗಿದೆ ಎಂದರೆ ಎಲ್ಲಿಯೂ ಗೋಜಲು – ಗೊಂದಲವಿಲ್ಲ. ಸಂಭಾಷಣೆ ಕೂಡ ಅಷ್ಟೆ ಸ್ಪಷ್ಟತೆ-ನಿಖರತೆ ಹೊಂದಿದೆ. ಇದನ್ನು ಪಿಲೆ ಮತ್ತು ಅವರ ಸಂಗಡಿಗ ತಂತ್ರಜ್ಞರು ತೆರೆ ಮುಂದೆ ಕಾಣಿಸಿರುವ ರೀತಿ ಅನನ್ಯ.

“ಗೆಟೌಟ್” ಸಾಮಾಜಿಕ-ರಾಜಕೀಯ ಕಥನ. ಕೊಂಚ ಹಳಿ ತಪ್ಪಿದ್ದರೂ ಇದೊಂದು ನಿರ್ದೇಶಕನ ಹಳಹಳಿಕೆಯ ದುರ್ಬಲ ಡಾಕ್ಯುಮೆಂಟರಿಯಾಗುವ ಸಾಧ್ಯತೆ ದಟ್ಟವಾಗಿತ್ತು. ಆದರೆ ಜೋರ್ಡನ್ ಪಿಲೆಯ ಪರಿಶ‍್ರಮ ಅದಕ್ಕೆ ಅವಕಾಶ ನೀಡಿಲ್ಲ. ಈ ಕಾರಣದಿಂದ ಸಿನೆಮಾದ ಎಲ್ಲ ದೃಷ್ಟಿಕೋನಗಳಲ್ಲಿಯೂ ಇದು ಅತ್ಯುತ್ತಮ.

ಗೆಟೌಟ್ ಹಂತಹಂತವಾಗಿ ಬೆಳೆಯುತ್ತಾ ಹೋಗುತ್ತದೆ. ಆಗರ್ಭ ಶ್ರೀಮಂತ ಕುಕೇಶಿಯನ್ ಮನೆತನದ ಯುವತಿ ರೋಸಿ ಆರ್ಮಿಟೆಜ್ ತನ್ನ ಆಫ್ರಿಕನ್ –ಅಮೆರಿನ್ ಬಾಯ್ ಫ್ರೆಂಡ್ ಕ್ರಿಸ್ ಜೊತೆ ತನ್ನ ಅರಮನೆಯಂಥ ಮನೆಗೆ ಅಡಿಯಿಡುತ್ತಾಳೆ. ಕಾಲಿಟ್ಟ ಗಳಿಗೆಯಿಂದಲೂ ಕ್ರಿಸ್ ಗೆ ನಾನಾರೀತಿಯ ಮಾನಸಿಕ ಯಾತನೆಗಳು ಶುರುವಾಗುತ್ತವೆ. ರೋಸಿ ಅಪ್ಪ ಡೀನ್ ಅರ್ಮಿಟೇಜ್ ನರರೋಗ ಶಾಸ್ತ್ರಜ್ಞ. ಅಮ್ಮ ಕ್ಯಾಥ್ರೆನ್ ಕೀನರ್ ಸಮ್ಮೋಹಿನಿ ತಜ್ಞೆ.

ಈ ಎರಡು ಪಾತ್ರಗಳು ಮಾಡುತ್ತಿರುವ ವೃತ್ತಿಗಳು ಕೂಡ ಸಾಂಕೇತಿಕ. ಡೀನ್ ಅರ್ಮಿಟೇಜ್ ತನ್ನ ಮನೆತನದ ಹೆಗ್ಗಳಿಕೆಗಳನ್ನು ಹೇಳಿಕೊಳ್ಳುತ್ತಾ ಹೋಗುತ್ತಾನೆ. ಪ್ರತಿಹಂತದಲ್ಲಿಯೂ ಆ ಎಲ್ಲ ಮಾತುಗಳು ಆತ ಆಫ್ರಿಕನ್ –ಅಮೆರಿಕನ್ ಸಮುದಾಯ (ಕರಿಯರು) ದವರ ಬಗ್ಗೆ ಹೊಂದಿರುವ ಹೇವರಿಕೆಗಳನ್ನು ವ್ಯಕ್ತ ಮಾಡುತ್ತಲೇ ಹೋಗುತ್ತವೆ. ಈತನ ಹೆಂಡತಿ, ಮಗ ಕೂಡ ಇದೇ ಸ್ವಭಾವದವರು: ಚಿತ್ರದ ಕೊನೆಕೊನೆ ಹಂತ ನಮ್ಮನ್ನು ಮತ್ತೊಂದು ಮಹಾನ್ ಶಾಕ್ ಗೆ ದೂಡುತ್ತದೆ. ಅದನ್ನು ನಾನಿಲ್ಲಿ ವಿವರಿಸಲು ಹೋಗುವುದಿಲ್ಲ.

ಗೆಟ್ ಔಟ್ ಚಿತ್ರದ ದೃಶ್ಯ

ಡೀನ್ ಅರ್ಮಿಟೇಜ್ ತಾನು ಲಿಬರಲ್ ಧೋರಣೆಯುಳ್ಳವನು, ಅಮೆರಿಕಾದ ಅಧ್ಯಕ್ಷಿಯ ಚುನಾವಣೆಯಲ್ಲಿ ಬರಾಕ್ ಒಬಾಮನನ್ನು ಬೆಂಬಲಿಸಿದೆ ಎನ್ನುತ್ತಾನೆ. ಮಾತುಗಳು ಪ್ರಗತಿಪರತೆಯ ಮುಖವಾಡ ಹೊಂದಿವೆ. ಆದರೆ ಆತನ ಅಂತರಂಗದಲ್ಲಿ ಜನಾಂಗೀಯ ದ್ವೇಷ ಮಡುಗಟ್ಟಿದೆ.

ಡೀನ್ ಅರ್ಮಿಟೇಜ್ ಮನೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಆಫ್ರಿಕನ್ –ಅಮೆರಿಕನ್ ಸಮುದಾಯದವರು. ಇವರ ವರ್ತನೆ, ಹಾವಭಾವ-ಸ್ವಭಾವ ಎಲ್ಲವೂ ಕೃತಕ ಎಂದು ಕ್ರಿಸ್ ಗೆ ಮೇಲಿಂದ ಮೇಲೆ ಅನಿಸತೊಡಗುತ್ತದೆ. ಈ ದೊಡ್ಡಮನೆಯ ಪಾರ್ಟಿಗೆ ಬಂದ ಕುಕೇಶಿಯನ್ ಸಮುದಾಯದವರಿಗೂ ಕೂಡ ಆಫ್ರಿಕನ್ –ಅಮೆರಿಕನ್ ಸಮುದಾಯದ ಬಗ್ಗೆ ಹೇವರಿಕೆ ನೋಟ. ಅಲ್ಲೊಬ್ಬ ಕಪ್ಪುವರ್ಣೀಯ ಯುವಕನ ಜೊತೆ ಆತನಿಗಿಂತ ವಯಸಿನಲ್ಲಿ ಸಾಕಷ್ಟು ಹಿರಿಯಳಾದ ಮಹಿಳೆ ಸಾಂಗತ್ಯ ಹೊಂದಿರುತ್ತಾಳೆ. ಅದ್ಹೇಕೆ ಎಂದು ಚಿತ್ರ ತನ್ನದೇ ಧಾಟಿಯಲ್ಲಿ ವಿವರಿಸುತ್ತದೆ.

ತನ್ನ ಗ್ರಹಿಕೆಗಳೆಲ್ಲವನ್ನೂ ಕ್ರಿಶ್ ತನ್ನ ಪೊಲೀಸ್ ಗೆಳೆಯನ ಜೊತೆ ಪೋನಿನಲ್ಲಿ ಹಂಚಿಕೊಳ್ಳುತ್ತಿರುತ್ತಾನೆ. ಅದು ಕೂಡ ಕೊನೆಯಲ್ಲಿ ಈತನ ನೆರವಿಗೆ ಬರುತ್ತದೆ. ಕ್ರಿಸ್ ಗೆ ಕುಕೇಶಿಯನ್ ರೋಸಿ ಮನೆತನದ ಎಲ್ಲರ  ಸ್ವಭಾವ ಆಷಾಢಭೂತಿತನದಿಂದ ಕೂಡಿದೆ, ಬೇಗನೆ ಇಲ್ಲಿಂದ ಪಾರಾಗಬೇಕು ಎಂದು ಮನದಟ್ಟಾಗುತ್ತದೆ. ಹೊರಡಲು ಅನುವಾಗುತ್ತಾನೆ. ಅಷ್ಟರಲ್ಲೆ ಆತನ ಕೊಲೆಯ ಪಿತೂರಿ ನಡೆಯುತ್ತದೆ. ಇದರಿಂದ ಕ್ರಿಸ್ ಹೇಗೆ ಪಾರಾದ ಎನ್ನುವುದನ್ನು ಸಿನೆಮಾ ನೋಡಿ ಅರಿಯುವುದೇ ಸೂಕ್ತ.

ಇಂದಿಗೂ ಅಮೆರಿಕಾದಲ್ಲಿ ಜನಾಂಗೀಯ ದ್ವೇಷ ನಿಂತಿಲ್ಲ. ಕುಕೇಶಿಯನ್ (ಶ್ವೇತವರ್ಣೀಯರು) ಆಫ್ರಿಕನ್ –ಅಮೆರಿಕನ್ಸ್ ವ್ಯಕ್ತಿಗಳನ್ನು ಕಗ್ಗೊಲೆ ಮಾಡಿದ ವರದಿಗಳು ಆಗಾಗ್ಗೆ ಬರುತ್ತಲೇ ಇವೆ. ಅಲ್ಲಿನ ಪೊಲೀಸ್ ಇಲಾಖೆಯ ಕುಕೇಶಿಯನ್ಸ್ ಗಳಲ್ಲಿಯೂ ಇಂಥ ಜನಾಂಗೀಯ ದ್ವೇಷವಿದೆ. ಕಪ್ಪುವರ್ಣೀಯರು, ಶ್ವೇತವರ್ಣೀಯ ಪೊಲೀಸ್ ಅಧಿಕಾರಿಗಳ ಗುಂಡೇಟಿಗೆ ವಿನಾಃಕಾರಣ ಬಲಿಯಾದ ಉದಾಹರಣೆಗಳು ಸಾಕಷ್ಟು.

ಇಂಥ ಉದಾಹರಣೆಗಳು ಕೂಡ “ಗೆಟೌಟ್” ಸಿನೆಮಾದ ಅಂತ್ಯ ಬದಲಾಗಲು ಕಾರಣವಾಗಿದೆ. ಈ ಮೊದಲು ಇದರ ಕ್ಲೈಮ್ಯಾಕ್ಸ್ ಬೇರೆಯದೇ ಆಗಿತ್ತು. ಯಾವಾಗ ಅಲ್ಲಿನ ಪೊಲೀಸರ ಎನ್ ಕೌಂಟರಿಗೆ ಕಪ್ಪುವರ್ಣೀಯರು ಬಲಿಯಾಗುವ ಪ್ರಕರಣಗಳು ಹೆಚ್ಚಾಯಿತೋ ಆಗ ನಿರ್ದೇಶಕ ಜೋರ್ಡನ್ ಪಿಲೆ ಮತ್ತು ತಂಡದವರು ಕ್ಲೈಮ್ಯಾಕ್ಸ್ ಗೆ ಬೇರೆಯದೇ ಸ್ವರೂಪ ನೀಡಲು ನಿರ್ಧರಿಸಿದರು.

ಕುಕೇಶಿಯನ್ ಸಮಾಜದಲ್ಲಿ ಮಡುಗಟ್ಟಿರುವ ಜನಾಂಗೀಯ ದ್ವೇಷ ಯಾವ ಆಯಾಮಗಳನ್ನು ತೆಗೆದುಕೊಂಡಿದೆ, ಅದು ಯಾವ ಸ್ವರೂಪದಲ್ಲಿ ಮುಂದುವರಿದಿದೆ ಎನ್ನುವುದನ್ನು ನಿರ್ದೇಶಕ ಜೋರ್ಡನ್ ಪಿಲೆ ಗ್ರಹಿಸಿ  ಮುಂದಿಟ್ಟಿರುವ ರೀತಿ ನಮ್ಮನ್ನು ಬೆಚ್ಚಿಬೀಳಿಸುತ್ತದೆ.

ಜೋರ್ಡನ್ ಪಿಲೆ

ಈ ಸಿನೆಮಾಕ್ಕೆ ಟೊನಿ ಲಿವರ್ ಕ್ಯಾಮೆರಾ ಹಿಡಿದಿದ್ದಾರೆ. ಅದು ಚಿತ್ರಕಥೆಯ ಸಶಕ್ತತೆಯನ್ನು ಮತ್ತಷ್ಟೂ ಹೆಚ್ಚಿಸಿದೆ. ಮೈಕೆಲ್ ಅಬ್ಲಸ್ ನೀಡಿರುವ ಸಂಗೀತಕ್ಕೂ ಇದೇ ಮಾತು ಸಲ್ಲುತ್ತದೆ. 2017ರ ಫೆಬ್ರವರಿಯಲ್ಲಿ ಅಮೆರಿಕಾದಲ್ಲಿ ತೆರೆಕಂಡ ಈ ಸಿನೆಮಾ ಅತ್ಯುತ್ತಮ ಚಿತ್ರಕಥೆಗಾಗಿ ಆಸ್ಕರ್ ಪುರಸ್ಕಾರವನ್ನೂ ಪಡೆದಿರುವುದು ಗಮನಾರ್ಹ.

ಅಭಿನಯದ ಬಗ್ಗೆ ಹೇಳುವುದಾದರೆ ಕ್ರಿಸ್ ಆಗಿರುವ ಡ್ಯಾನಿಯಲ್ ಅಭಿನಯ ಅನನ್ಯ. ಈತನ ಕಂಗಳೇ ಸಂಭಾಷಣೆಗಳನ್ನು ಹೇಳುತ್ತವೆ. ಕೆಲವೊಂದು ದೃಶ್ಯಗಳಲ್ಲಿ ಈತನ ಅಭಿನಯ ಅಬ್ಬಾ ಎಂಬ ಉದ್ಗಾರದೊಡನೆ ಮೆಚ್ಚುಗೆ ಪಡೆಯುತ್ತದೆ. ರೋಸ್ ಅರ್ಮಿಟೇಜ್ ಆಗಿರುವ ಆಲಿಸನ್ ವಿಲಿಯಮ್ಸ್, ಮಿಸ್ಸಿ ಅರ್ಮಿಟೇಜ್ ಆಗಿರುವ ಕ್ಯಾಥೆರಿನ್ ಕೀರ್ನರ್, ಡೀನ್ ಅರ್ಮಿಟೇಜ್ ಪಾತ್ರಧಾರಿ ಬ್ರಾಡ್ಲಿ, ಜಿಮ್ ಹಡ್ಸನ್ ಆಗಿ ಅಭಿನಯಿಸಿರುವ ಸ್ಟಿಫನ್ ರೂಟ್ ಅಭಿನಯ ಮನೋಜ್ಞ.

ಅಮೆರಿಕಾ ಸಮಾಜದೊಳಗೊಂದು ಪಾತಾಳಗರುಡಿ ಬಿಟ್ಟು ಸಮಾಜೋ-ರಾಜಕೀಯ ದೃಷ್ಟಿಕೋನದಿಂದ ನೋಡುತ್ತಾ ಆಲ್ಲಿನ ಸಂಗತಿಗಳನ್ನು ಅತ್ಯುತ್ತಮ ರೀತಿಯಲ್ಲಿ ಸಿನೆಮ್ಯಾಟಿಕ್ ಪರಿಭಾಷೆಯಲ್ಲಿ ಕಟ್ಟಿಕೊಟ್ಟಿರುವ “ಗೆಟೌಟ್” ನಾನಾ ಕಾರಣಗಳಿಂದ ಈ ಕಾಲಘಟ್ಟದ ಬಹುಮುಖ್ಯವಾದ ಸಿನೆಮಾ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗೌರಿಯಕ್ಕ, ಸುರೇಶ್ ಭಟ್ರ ಬಗ್ಗೆ ತಿಳಿಯಲು ಎಕ್ಸ್ ಆರೆಸ್ಸೆಸ್‌ನವರ ಪ್ರಮಾಣ ಪತ್ರ ಬೇಕಿಲ್ಲ

ಕರ್ನಾಟಕ ಕೋಮು ಸೌಹಾರ್ದ ವೇದಿಕೆಯಲ್ಲಿ ನಮ್ಮ ಒಡನಾಡಿಯಾಗಿದ್ದ ಎ‌ಐಸಿಸಿ ಕಾರ್ಯದರ್ಶಿಯೂ ಆಗಿರುವ ಪಿ.ವಿ.ಮೋಹನ್‌ರಿಗೆ ವಿಧಾನ ಪರಿಷತ್ ಸದಸ್ಯತ್ವ ಸಿಕ್ಕಿದ್ದು ಸಹಜವಾಗಿಯೇ ನಮಗೆ ಖುಷಿಯಾಗಿತ್ತು. ಈ ನಿಟ್ಟಿನಲ್ಲಿ ಮಂಗಳೂರಿನ ವುಡ್‌ಲ್ಯಾಂಡ್ಸ್ ಹೋಟೆಲಲ್ಲಿ ಕೋಮು ಸೌಹಾರ್ದ...

ಡ್ರಗ್ಸ್ ಮುಕ್ತ ಕರ್ನಾಟಕ ನಮ್ಮ ಗುರಿ: ‘ಆಪರೇಷನ್ RISE’ ಮತ್ತು ‘ಬೇಡ BRO’ ಅಭಿಯಾನಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಕರೆ

ಬೆಂಗಳೂರು: ಮಾದಕ ದ್ರವ್ಯ ಮುಕ್ತ ಕರ್ನಾಟಕವನ್ನು ನಿರ್ಮಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಮಾದಕ ವ್ಯಸನದ ವಿರುದ್ಧ ಯುವಜನತೆ ಮತ್ತು ಸಾರ್ವಜನಿಕರು ಕೈಜೋಡಿಸಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ...

ಬೆಂಗಳೂರಿನ 3 ಪ್ರಮುಖ ಮಾರ್ಗಗಳಲ್ಲಿ ಟೋಲ್ ದರ ಭಾರಿ ಹೆಚ್ಚಳ: ಇಂದಿನಿಂದಲೇ ಜಾರಿ 

ಬೆಂಗಳೂರು: ಸಿಲಿಕಾನ್ ಸಿಟಿಯ ವಾಹನ ಸವಾರರಿಗೆ ಜುಲೈ ಒಂದರಿಂದಲೇ ಅನ್ವಯವಾಗುವಂತೆ ಬೆಲೆ ಏರಿಕೆಯ ಭಾರಿ ಬಿಸಿ ತಟ್ಟಿದೆ. ಬೆಂಗಳೂರಿನ ಪ್ರಮುಖ ಸಂಪರ್ಕ ರಸ್ತೆಗಳಾದ ನೈಸ್ ರಸ್ತೆ (NICE Road), ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್...

ಕೊಪ್ಪಳದ ಬೋಚನಹಳ್ಳಿಯಲ್ಲಿ ದಲಿತರ ಮೇಲೆ ಹಲ್ಲೆ: ದೂರು-ಪ್ರತಿದೂರು; ಹೋರಾಟಕ್ಕೆ ಸಂಘಟನೆಗಳ ನಿರ್ಧಾರ

ಮೊಹರಂ ಮೆರವಣಿಗೆ ವೇಳೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ದಲಿತರ ಮನೆಗಳಿಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಕೊಪ್ಪಳ ತಾಲೂಕಿನ ಅಳವಂಡಿ ಬಳಿಯ ಬೋಚನಹಳ್ಳಿ ಗ್ರಾಮದಲ್ಲಿ ನಡೆದಿದೆ. ಜೂನ್ 25ರಂದು ಗ್ರಾಮದಲ್ಲಿ ಮೊಹರಂ ಮೆರವಣಿಗೆ...

ಎನ್ಯೂಮರೇಷನ್ ಫಾರಂ ಭರ್ತಿ ಮಾಡುವ ಮೂಲಕ SIR ಗೆ ಚಾಲನೆ ನೀಡಿದ ಸಿಎಂ ಡಿ.ಕೆ ಶಿವಕುಮಾರ್

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು (ಜೂನ್ 30) ಮಂಗಳವಾರ ತಮ್ಮ ಸದಾಶಿವನಗರ ನಿವಾಸದಲ್ಲಿ ದಾಖಲಾತಿ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸುವ ಮೂಲಕ ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (SIR) ಅಭಿಯಾನಕ್ಕೆ ಅಧಿಕೃತವಾಗಿ...

‘ಆಪರೇಷನ್ ಸಿಂಧೂರ್‌’ ಕುರಿತು ಸಂಸತ್ತಿಗೆ ಸುಳ್ಳು ಮಾಹಿತಿ: ರಾಜನಾಥ್ ಸಿಂಗ್ ವಿರುದ್ಧ ಕಾಂಗ್ರೆಸ್‌ನಿಂದ ಹಕ್ಕುಚ್ಯುತಿ ನೋಟಿಸ್

ಕೇಂದ್ರ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ವಿರುದ್ಧ ಕಾಂಗ್ರೆಸ್ ಪಕ್ಷ ಲೋಕಸಭೆಯಲ್ಲಿ ಹಕ್ಕುಚ್ಯುತಿ ನೋಟಿಸ್ ನೀಡಿದೆ. ಕಾಂಗ್ರೆಸ್ ಸಂಸದ ಕೆ. ಸಿ. ವೇಣುಗೋಪಾಲ್ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಈ ಕುರಿತು ಪತ್ರ ಬರೆದಿದ್ದು,...

SIR | ಮತದಾರರ ಪಟ್ಟಿಯಲ್ಲಿ ಹೆಸರಿದ್ದರೆ ಮಾತ್ರ ಸರ್ಕಾರಿ ಸೌಲಭ್ಯ: ಸಿಎಂ

ರಾಜ್ಯ ಸರ್ಕಾರದ ಐದು ಪ್ರಮುಖ ಗ್ಯಾರಂಟಿ ಯೋಜನೆಗಳು ಹಾಗೂ ಇತರ ಸರ್ಕಾರಿ ಸವಲತ್ತುಗಳನ್ನು ಪಡೆಯುತ್ತಿರುವ ಫಲಾನುಭವಿಗಳಿಗೆ ಮುಖ್ಯಮಂತ್ರಿಗಳು ಗಂಭೀರ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಪ್ರತಿಯೊಬ್ಬ ಫಲಾನುಭವಿಯೂ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದನ್ನು ಕಡ್ಡಾಯವಾಗಿ...

SIR, ಚುನಾವಣಾ ಆಯೋಗದ ಕಾರ್ಯನಿರ್ವಹಣೆ ಕುರಿತು 23 ವಿಪಕ್ಷಗಳಿಂದ ಸಿಜೆಐಗೆ ಜಂಟಿ ಪತ್ರ

ಭಾರತೀಯ ಚುನಾವಣಾ ಆಯೋಗವು (ಇಸಿಐ) ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಹಾಗೂ ಇತರ ಚುನಾವಣೆ ಸಂಬಂಧಿತ ವಿಷಯಗಳ ವಿರುದ್ಧ ಇಂಡಿಯಾ ಮೈತ್ರಿಕೂಟದ ಹೊರಗಿರುವ ದ್ರಾವಿಡ ಮುನ್ನೇತ್ರ ಕಳಗಂ...

SIR: ಮತದಾರರ ಅನುಕೂಲಕ್ಕಾಗಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರದ ಆದೇಶ

ರಾಜ್ಯಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-2026 (SIR) ಕಾರ್ಯವು ಜೂನ್ 30ರಿಂದ (ಇಂದಿನಿಂದ) ಅಧಿಕೃತವಾಗಿ ಆರಂಭವಾಗಿದೆ. ಜುಲೈ 29ರವರೆಗೆ ಒಂದು ತಿಂಗಳ ಕಾಲ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ...

SIR: ಕೇಂದ್ರ ಸರ್ಕಾರದ SIRಗೆ ಕೌಂಟರ್‌, ಮಹತ್ವದ ಆದೇಶಗಳನ್ನು ಹೊರಡಿಸಿದ ಕರ್ನಾಟಕ ಸರ್ಕಾರ

ಕೇಂದ್ರ ಸರ್ಕಾರ ಚುನಾವಣಾ ಆಯೋಗದ ಮೂಲಕ ನಡೆಸುತ್ತಿರುವ ವಿಶೇಷ ಮತದಾರ ಪಟ್ಟಿ ಪರಿಷ್ಕರಣೆ ಕುರಿತಂತೆ ದೇಶದಾದ್ಯಂತ ಭಾರೀ ವಿರೋಧ ವ್ಯಕ್ತವಾಗಿದ್ದವು. ಸುಪ್ರೀಂ ಕೋರ್ಟ್‌ ಆ ಪ್ರಕ್ರಿಯೆಯನ್ನು ಮಾನ್ಯ ಮಾಡಿತ್ತು. ಕರ್ನಾಟಕದಲ್ಲಿ ನಾಳೆಯಿಂದ (ಜೂನ್.30)‌...