ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗದ ನಡುವೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡದಿರುವ ಬಗ್ಗೆ ಪ್ರಸ್ತಾಪಿಸಿರುವ ಬಿಜೆಪಿ ಸಂಸದ ವರುಣ್ ಗಾಂಧಿ, ಸಿಟಿಇಟಿ ಬರೆದಿರುವ ಯುವಕ ಇ-ರಿಕ್ಷಾ ಓಡಿಸುವ ವೀಡಿಯೊವನ್ನು ಟ್ವಿಟರ್‌ನಲ್ಲಿ ಸೋಮವಾರ ಹಂಚಿಕೊಂಡು ಆಕ್ರೊಶ ವ್ಯಕ್ತಪಡಿಸಿದ್ದಾರೆ.
“ಕೆಲಸದಲ್ಲಿ ಚಿಕ್ಕದು ಅಥವಾ ದೊಡ್ಡದು ಎಂಬುವುದಿಲ್ಲ. ಆದರೆ ಒಬ್ಬ ನುರಿತ ಮತ್ತು ವಿದ್ಯಾವಂತ ವ್ಯಕ್ತಿಗೆ ಸಾಮರ್ಥ್ಯಕ್ಕೆ ಅನುಗುಣವಾಗಿ ಉದ್ಯೋಗ ಸಿಗದಿದ್ದಾಗ ದುಃಖವಾಗುತ್ತದೆ” ಎಂದು ಅವರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ದೇಶದಲ್ಲಿ 60 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಬಿದ್ದಿರುವಾಗ, ಸಿಟಿಇಟಿ ಪಾಸಾದ ಈ ಯುವಕ ಇ-ರಿಕ್ಷಾದಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದಾನೆ. ಇದು ನಮ್ಮ ಸಂಸತ್ತಿನ ಸಾಮೂಹಿಕ ವೈಫಲ್ಯವಾಗಿದೆ” ಎಂದು ಸಂಸದ ವರುಣ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಆರೆಸ್ಸೆಸ್ಸಿನಲ್ಲಿ ದಲಿತರ ಸ್ಥಾನ ಏನು ಎಂಬುವುದಕ್ಕೆ ಛಲವಾದಿ ನಾರಾಯಣ ಸ್ವಾಮಿ ಉತ್ತರ: ಸಿದ್ದರಾಮಯ್ಯ
ದೇಶದ ನಿರುದ್ಯೋಗ ಸಮಸ್ಯೆಯ ಬಗ್ಗೆ ಧ್ವನಿ ಎತ್ತಿರುವ ವರುಣ್ ಗಾಂಧಿ ಅವರನ್ನು ಅಮನ್ ಖಾನ್ ಎಂಬವರು ಶ್ಲಾಘಿಸಿದ್ದು, ತಾನು ಆರ್‌ಆರ್‌ಬಿ- ಎನ್‌ಟಿಪಿಸಿ ಪರೀಕ್ಷೆಯ ಸಮಯದಲ್ಲಿ ವರುಣ್ ಗಾಂಧಿ ಮಾಡಿದ್ದ ಸಹಾಯಕ್ಕಾಗಿ ಧನ್ಯವಾದ ಸಲ್ಲಿಸಿದ್ದಾರೆ.
“ನಮ್ಮ ಕುಟುಂಬ ಮತ್ತು ನಾನು ನಿಮಗೆ ಆಭಾರಿಯಾಗಿದ್ದೇವೆ. ನಮ್ಮಂತಹ ಯುವಜನರಿಗೆ ಮಾರ್ಗದರ್ಶನ ನೀಡಬಲ್ಲ ನಿಮ್ಮಂತಹ ನಾಯಕರ ಅಗತ್ಯ ದೇಶಕ್ಕಿದೆ” ಎಂದು ಅವರ ಟ್ವೀಟ್ ಮಾಡಿದ್ದಾರೆ.
कोई काम छोटा या बड़ा नहीं होता!
पर दुःख होता है जब एक कुशल एवं शिक्षित व्यक्ति को योग्यता और क्षमता के अनुरूप रोजगार का अवसर नहीं मिलता।
जब देश में 60 लाख से अधिक ‘स्वीकृत पद’ खाली पड़े हैं, तब CTET पास यह नौजवान रिक्शा चलाने को मजबूर है यह हमारी संसद की ‘संयुक्त असफलता’ है। pic.twitter.com/whsKyaYbVg
— Varun Gandhi (@varungandhi80) June 6, 2022
ಝಾನ್ಸಿ ನಿವಾಸಿಯಾಗಿರುವ ಅಮನ್ ಖಾನ್‌ಗೆ ಅವರ ಮನೆಯಿಂದ 950 ಕಿಮೀ ದೂರದಲ್ಲಿರುವ ಮಹಾರಾಷ್ಟ್ರದ ನಾಸಿಕ್ ನಗರದಲ್ಲಿ ಪರೀಕ್ಷಾ ಕೇಂದ್ರ ನೀಡಲಾಗಿತ್ತು. ಆದರೆ ಆರ್ಥಿಕ ಅಡಚಣೆಯಿಂದಾಗಿ ಅವರಿಗೆ ಅಷ್ಟು ದೂರ ಪ್ರಯಾಣಿಸುವುದು ಅಸಾಧ್ಯವಾಗಿತ್ತು.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್-ಇದು ತಮಿಳುನಾಡೂ ಅಲ್ಲ, ಧ್ವಜ ಬಿಜೆಪಿಯದ್ದೂ ಅಲ್ಲ; ಎಡಿಟ್ ಚಿತ್ರ ಹಂಚಿದ ಸಿಟಿ ರವಿ
ಈ ವೇಳೆ ವರುಣ್ ಗಾಂಧಿ ಅವರು ರೈಲ್ವೆ ಸಚಿವರಿಗೆ ಪತ್ರ ಬರೆದು ದೂರದ ಪರೀಕ್ಷಾ ಕೇಂದ್ರಗಳಿಗೆ ತೆರಳುವವರಿಗೆ ಸಹಾಯ ಮಾಡಲು ರೈಲು ಟಿಕೆಟ್ ದರಗಳಲ್ಲಿ ರಿಯಾಯಿತಿ ಹಾಗೂ ಹೆಚ್ಚುವರಿ ಬೋಗಿಗಳ ಸೇರ್ಪಡೆಗೆ ಕೋರಿದ್ದರು.


