ಒಬ್ಬರ ಮೇಲೊಬ್ಬರು ನಿಂತು ಕಂಬಕ್ಕೆ ಬಿಜೆಪಿ ಧ್ವಜವನ್ನು ಕಟ್ಟುತ್ತಿರುವ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಈ ಚಿತ್ರವನ್ನು ಉಲ್ಲೇಖಿಸಿ “ತಮಿಳುನಾಡಿನಲ್ಲಿ ಬಿಜೆಪಿ ಅರಳುತ್ತಿದೆ” ಎಂದು ಎಂದು ಪ್ರತಿಪಾದಿಸಲಾಗುತ್ತಿದೆ.
ಮುಖ್ಯವಾಗಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ, ತಮಿಳುನಾಡು ಉಸ್ತುವಾರಿ ಸಿಟಿ ರವಿ ಅವರು ಇದನ್ನು ಟ್ವಿಟರ್‌ನನಲ್ಲಿ ಹಂಚಿಕೊಂಡಿದ್ದಾರೆ. ಸಿಟಿ ರವಿ ಅಲ್ಲದೆ ಬಿಜೆಪಿ ಇತರ ರಾಷ್ಟ್ರೀಯ ನಾಯಕರು ಮತ್ತು ಬೆಂಬಲಿಗರು ಈ ಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಇದನ್ನು ಹಂಚಿಕೊಂಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಹಿಮಾಚಲ ಪ್ರದೇಶದ ಬಿಜೆಪಿ ವಕ್ತಾರೆ ಪ್ರಜ್ವಲ್ ಬುಸ್ತಾ ಮತ್ತು ಉತ್ತರ ದೆಹಲಿಯ ಮಾಜಿ ಮೇಯರ್ ರವೀಂದರ್ ಗುಪ್ತಾ ಸೇರಿದಂತೆ ಅನೇಕ ಟ್ವಿಟರ್ ಖಾತೆಗಳು ಈ ಚಿತ್ರವನ್ನು ಹಂಚಿಕೊಂಡಿವೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಹಲಾಲ್ ಮಾಂಸ ವಿಷಕಾರಿಯೆ? ಬಜರಂಗದಳದ ಈ ಪೋಸ್ಟರ್‌ನಲ್ಲಿರುವ ಸುಳ್ಳುಗಳೇನು?
ಫ್ಯಾಕ್ಟ್‌ಚೆಕ್
ವೈರಲ್ ಪೋಸ್ಟ್‌ನ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಮೂಲ ಪೋಟೋದ ಮಾಹಿತಿ ಲಭ್ಯವಾಗಿದ್ದು, ಇದನ್ನು ಬಿಎಸ್‌ಪಿಯ ತೆಲಂಗಾಣ ಘಟಕದ ವಕ್ತಾರರಾದ ಶಿರಿಶಾ ಸ್ವೇರೊ ಅಕಿನಪಲ್ಲಿ ಅವರು ತಮ್ಮ ಖಾತೆಯಿಂದ ಮೇ 31 ರಂದು ಮಾಡಿದ ಟ್ವೀಟ್ ಮಾಡಿದ್ದರು.
ಬಿಜೆಪಿ ವೈರಲ್ ಮಾಡಿವುರ ಫೋಟೋದಲ್ಲಿ, ಯುವಕರು ಬಿಎಸ್ಪಿ ಧ್ವಜವನ್ನು ಹಾರಿಸುತ್ತಿರುವುದು ಕಾಣಬಹುದಾಗಿದೆ.
సంకల్పం గొప్పగా ఉన్నప్పుడు పరికరాలతో పని లేదు.
మా అన్నతమ్ముళ్లే నిచ్చెనగా మారి బహుజనుల గుండెచప్పుడు నీలి జెండాను ఎగురవేశారు.
ఇలాంటి లక్షలాదిమంది యువకులు తెలంగాణలో బహుజన రాజ్య స్థాపన కోసం @RSPraveenSwaero గారి అడుగుజాడల్లో నడుస్తున్నారు.@Mayawati @AnandAkash_BSP @ramjigautambsp pic.twitter.com/gkLh8FnnBz— Shirisha Swaero Akinapally (@ShirishaSwaero) May 31, 2022
ಇಷ್ಟೇ ಅಲ್ಲದೆ, ಇದೇ ಚಿತ್ರವನ್ನು “ಅಂಬೇಡ್ಕರ್ ಸ್ಟೇಟಸ್” ಎಂಬ Pinterest ಪೇಜ್‌ನಲ್ಲಿ ಕೂಡಾ ಅಪ್‌ಲೋಡ್ ಮಾಡಲಾಗಿದೆ. ಅದನ್ನು ಕೆಳಗೆ ನೋಡಬಹುದಾಗಿದೆ.
ಎರಡು ಫೋಟೋಗಳನ್ನು ವಿಶ್ಲೇಷಣೆಗಾಗಿ ‘ಫೋಟೊ ಫೋರೆನ್ಸಿಕ್ಸ್’ನಲ್ಲಿ ಹುಡುಕಿದಾಗ ಕೂಡಾ ಬಿಜೆಪಿ ಧ್ವಜವನ್ನು ಮತ್ತೆ ಸೇರಿಸಲಾಗಿದೆ ಎಂದು ಕಂಡುಕೊಳ್ಳಲಾಗಿದೆ.
ಬಿಜೆಪಿ ಧ್ವಜ ಇರುವ ಚಿತ್ರವು ಎಡಿಟ್ ಮಾಡಲಾಗಿದೆ ಎಂದು ಇಂಡಿಯಾ ಟುಡೆ ಕೂಡಾ ಫ್ಯಾಕ್ಟ್‌ಚೆಕ್ ಮಾಡಿದೆ. ವೈರಲ್ ಚಿತ್ರದಲ್ಲಿ ಮೂಲ ಫೋಟೋ BSP ಧ್ವಜವನ್ನು ಹೊಂದಿದೆ ಎಂದು ಅದು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಕಾಶ್ಮೀರದ ಈ ಎಲ್ಲಾ ಘಟನೆಗಳು ಮೋದಿ ಪ್ರಧಾನಿಯಾಗಿದ್ದಾಗಲೆ ನಡೆದಿದೆ!
ಒಟ್ಟಾರೆಯಾಗಿ ಹೇಳುವುದಾದರೆ, ಈ ಚಿತ್ರವೂ ತೆಲಂಗಾಣದ್ದಾಗಿದ್ದು, ಅದರಲ್ಲಿ ಯುವಕರು ಕಂಬವೊಂದಕ್ಕೆ BSPಯ ಧ್ವಜವನ್ನು ಒಬ್ಬರ ಮೇಲೆ ಒಬ್ಬರು ನಿಂತು ಕಟ್ಟಿದ್ದ ಧ್ವಜವನ್ನು ವಿಭಿನ್ನವಾಗಿ ಹಾರಿಸಿದ್ದರು. ಈ ಚಿತ್ರವನ್ನು ಕೆಲವು BJPಯ ಪ್ರಮುಖ ನಾಯಕರು ಸೇರಿದಂತೆ ಬೆಂಬಲಿಗರು, ತಮಿಳುನಾಡಿನಲ್ಲಿ BJP ಅರಳುತ್ತಿದೆ ಎಂದು ಪ್ರತಿಪಾದಿಸಿ, ಎಡಿಟೆಡ್ ಚಿತ್ರವನ್ನು ಹಂಚುತ್ತಿದ್ದಾರೆ.