ಈಶಾನ್ಯ ದೆಹಲಿಯ ಹಿಂಸಾಚಾರದಲ್ಲಿ ಮೃತಪಟ್ಟಿದ್ದ ಗುಪ್ತಚರ ಬ್ಯೂರೋ (ಐಬಿ) ಉದ್ಯೋಗಿ ಅಂಕಿತ್ ಶರ್ಮಾ ಅವರ ಹತ್ಯೆಯಲ್ಲಿ ತಮ್ಮ ಎಎಪಿ ನಾಯಕ ತಾಹೀರ್ ಹುಸೇನ್ ಭಾಗಿಯಾಗಿದ್ದಾರೆ ಎಂಬ ಆರೋಪಕ್ಕೆ ಅರವಿಂದ್ ಕೇಜ್ರಿವಾಲ್ ಇಂದು ಪ್ರತಿಕ್ರಿಯಿಸಿದ್ದಾರೆ.
“ಯಾರೂ, ಯಾವುದೇ ಪಕ್ಷವಾಗಲಿ, ಅವರು ಹಿಂಸಾಚಾರವನ್ನು ಪ್ರಚೋದಿಸುವ ಹೊಣೆಗಾರರಾಗಿದ್ದರೆ ಅವರನ್ನು ಬಿಡಬಾರದು. ಅವರು ನನ್ನ ಕ್ಯಾಬಿನೆಟ್‌ನ ಭಾಗವಾಗಿದ್ದರೂ ಸಹ ಅವರಿಗೆ ಶಿಕ್ಷೆಯಾಗಬೇಕು. ಎಎಪಿಯಿಂದ ಯಾರಾದರೂ ತಪ್ಪಿತಸ್ಥರೆಂದು ಕಂಡುಬಂದಲ್ಲಿ, ಅವರಿಗೆ ಎರಡು ಪಟ್ಟು ಶಿಕ್ಷೆ ಆಗಬೇಕು ಎಂದು ಕೇಜ್ರಿವಾಲ್ ಸುದ್ದಿಗಾರರಿಗೆ ಹೇಳಿದ್ದಾರೆ.
देश की सुरक्षा के साथ कोई राजनीति नहीं होनी चाहिए। दंगा भड़काने में जो भी दोषी पाया जाए उसे सख्त सज़ा दो। pic.twitter.com/Cnr5qffrXb
— Arvind Kejriwal (@ArvindKejriwal) February 27, 2020
“ರಾಷ್ಟ್ರೀಯ ಭದ್ರತೆ ಮತ್ತು ಘರ್ಷಣೆಗಳು ಬಂದಾಗ ಅವರು ಯಾರಾದರೂ ಸರಿಯೇ ಅವರಿಗೆ ಶಿಕ್ಷೆಯಾಗಬೇಕೆಂದು ನಾನು ವೈಯಕ್ತಿಕವಾಗಿ ನಂಬುತ್ತೇನೆ. ಇದನ್ನು ಬೆಳಿಗ್ಗೆಯಿಂದ ನೋಡುತ್ತಿದ್ದೇನೆ, ಈ ವಿಷಯವನ್ನು ರಾಜಕೀಯಗೊಳಿಸಬಾರದು” ಎಂದು ಕೇಜ್ರಿವಾಲ್ ಹೇಳಿದರು.
“ನೀವು ಯಾಕೆ ಟೀಕೆಗಳನ್ನು ಮಾಡುತ್ತಿದ್ದೀರಿ? … ನಮ್ಮ ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ನಾವು ಹೇಗೆ ನಡೆಸುತ್ತೇವೆ? ನಮ್ಮ ಕಡೆಯಿಂದ ಯಾರಾದರೂ ತಪ್ಪು ಮಾಡಿದ್ದರೆ ಅವರಿಗೆ ಎರಡು ಪಟ್ಟು ಶಿಕ್ಷೆಯನ್ನು ನೀಡಿ. ರಾಷ್ಟ್ರೀಯ ಸಮಸ್ಯೆಗಳನ್ನು ರಾಜಕೀಯಗೊಳಿಸುವುದನ್ನು ನಿಲ್ಲಿಸಿ” ಎಂದು ಅವರು ಹೇಳಿದ್ದಾರೆ.
ಬುಧವಾರ ಅಂಕಿತ್ ಶರ್ಮಾ ಶವ ಪತ್ತೆಯಾದ ನಂತರ, ಎಎಪಿ ಪುರಸಭೆಯ ಕೌನ್ಸಿಲರ್ ಆಗಿದ್ದ ತಾಹಿರ್ ಹುಸೇನ್ ಅವರ ಬೆಂಬಲಿಗರು ತಮ್ಮ ಮಗನನ್ನು ಕೊಂದಿದ್ದಾರೆ ಎಂದು ಅಂಕಿತ್ ಶರ್ಮಾ ಅವರ ತಂದೆ ರವೀಂದರ್ ಶರ್ಮಾ ಆರೋಪಿಸಿದ್ದಾರೆ. ತನ್ನ ಮಗನನ್ನು ಹೊಡೆದು ನಂತರ ಗುಂಡು ಹಾರಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.


