Homeಮುಖಪುಟಗಲಭೆಗಳು ಜೀವನದ ಒಂದು ಭಾಗ, ಅವು ನಡೆಯುತ್ತಲೇ ಇರುತ್ತವೆ: ಹರಿಯಾಣದ ಸಚಿವ

ಗಲಭೆಗಳು ಜೀವನದ ಒಂದು ಭಾಗ, ಅವು ನಡೆಯುತ್ತಲೇ ಇರುತ್ತವೆ: ಹರಿಯಾಣದ ಸಚಿವ

- Advertisement -
- Advertisement -

34 ಜೀವಗಳನ್ನು ಬಲಿ ತೆಗೆದುಕೊಂಡ ಈಶಾನ್ಯ ದೆಹಲಿಯ ಕೋಮು ಗಲಭೆಯ ಕುರಿತು ಹರಿಯಾಣ ವಿದ್ಯುತ್ ಸಚಿವ ರಂಜಿತ್ ಸಿಂಗ್ ಚೌತಲಾ “ಗಲಭೆಗಳು ಜೀವನದ ಒಂದು ಭಾಗ, ಅವು ನಡೆಯುತ್ತಲೇ ಇರುತ್ತದೆ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

“ಗಲಭೆಗಳು ನಡೆಯುತ್ತಲೇ ಇರುತ್ತವೆ. ಹಿಂದಿನಿಂದಲೂ ಅದು ನಡೆಯುತ್ತಿದೆ… ಇಂದಿರಾ ಗಾಂಧಿ ಹತ್ಯೆಯಾದಾಗ ಇಡೀ ದೆಹಲಿ ಉರಿದಿತ್ತು. ಇದು ಜೀವನದ ಒಂದು ಭಾಗವಾಗಿದೆ, ಅದು ನಡೆಯುತ್ತಲೇ ಇರುತ್ತದೆ” ಎಂದು ಚೌತಾಲ ಹೇಳಿದ್ದಾರೆ.

“ಸರ್ಕಾರವು ಗಲಭೆಯನ್ನು ತಕ್ಷಣವೇ ನಿಯಂತ್ರಿಸಿದೆ. ನಿನ್ನೆ ಆ ಭಾಗಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ….ಇದು ದೆಹಲಿಗೆ ಮತ್ತು ನ್ಯಾಯಾಂಗಕ್ಕೆ ಸಂಬಂಧಿಸಿದ ವಿಷಯವಾಗಿದೆ, ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ” ಎಂದು ಹೇಳಿದ್ದಾರೆ.

ಚೌತಲಾ ಅವರು ಹರಿಯಾಣ ವಿದ್ಯುತ್ ಮಂತ್ರಿಯಾದ ನಂತರ “ವಿದ್ಯುತ್ ಬಿಲ್ ಪಾವತಿಸದ ಗ್ರಾಹಕರ ಮಕ್ಕಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕುಳಿತುಕೊಳ್ಳಲು ಅನುಮತಿಸಬಾರದು” ಎಂದು ಹೇಳುವ ಮೂಲಕ ಈ ಹಿಂದೆಯೂ ವಿವಾದವನ್ನು ಸೃಷ್ಟಿಸಿದ್ದರು.

ಬಿಜೆಪಿ ಹರಿಯಾಣದ ವಿಧಾನಸಭೆಯಲ್ಲಿ ಸರಳ ಬಹುಮತ ಪಡೆಯುವಲ್ಲಿ ವಿಫಲವಾದಾಗ ಪಕ್ಷೇತರ ಶಾಸಕರಾದ ರಂಜಿತ್ ಚೌತಲಾರನ್ನು ಮನೋಹರ್ ಲಾಲ್ ಖಟ್ಟರ್ ಸಂಪುಟದಲ್ಲಿ ಸೇರಿಸಲಾಗಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಧಾರವಾಡ ಅಖಾಡ: ಕೇಸರಿ ಕೋಟೆಯಲ್ಲೇ ಸಂಘೀ ಸೇನಾಧಿಪತಿ ಪ್ರಹ್ಲಾದ್ ಜೋಶಿಗೆ ನಡುಕ!!

0
ಪೇಡಾ ನಗರಿ, ಸಾಂಸ್ಕೃತಿಕ ರಾಜಧಾನಿ, ಕರ್ನಾಟಕದ ಆಕ್ಸ್‌ಫರ್ಡ್ ಎಂದೆಲ್ಲ ಗುರುತಿಸಲ್ಪಡುವ ಧಾರವಾಡ ನಗರ ಕೇಂದ್ರವಾಗಿರುವ ಧಾರವಾಡ ಲೋಕಸಭಾ ಕ್ಷೇತ್ರ ಮಲೆನಾಡು, ಅರೆಮಲೆನಾಡು ಮತ್ತು ಬಯಲುನಾಡುಗಳ ವಿಭಿನ್ನ ನೈಸರ್ಗಿಕ ಗುಣ-ಧರ್ಮದ ಸೀಮೆ. ಖಡಕ್ ಜವಾರಿ...