ಕೊರೊನಾ ವೈರಸ್ ಪ್ರಕರಣಗಳನ್ನು ಚೀನಾವು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿರುವುದು ಕಂಡುಬಂದಲ್ಲಿ ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
“ಇದು ಪ್ರಾರಂಭವಾಗುವ ಮೊದಲೇ ಚೀನಾದಲ್ಲಿ ಅದನ್ನು ನಿಲ್ಲಿಸಬಹುದಿತ್ತು ಆದರೆ ಅದು ಆಗಲಿಲ್ಲ, ಇದರಿಂದಾಗಿ ಇಡೀ ಪ್ರಪಂಚ ಬಳಲುತ್ತಿದೆ” ಎಂದು ಟ್ರಂಪ್ ಹೇಳಿದ್ದಾರೆ.
“ಒಂದು ವೇಳೆ ತಪ್ಪಾಗಿದ್ದರೆ, ತಪ್ಪು ತಪ್ಪೇ ಆಗಿದೆ, ಆದರೆ ಅವರು ಉದ್ದೇಶಪೂರ್ವಕವಾಗಿ ಜವಾಬ್ದಾರರಾಗಿದ್ದರೆ, ಖಂಡಿತವಾಗಿಯೂ ಅದರ ಪರಿಣಾಮ ಎದುರಿಸಬೇಕಾಗುತ್ತದೆ ” ಎಂದು ಹೇಳಿದ್ದಾರೆ.
ಕೊರೊನಾ ವೈರಸನ್ನು “ಚೈನೀಸ್ ವೈರಸ್” ಎಂದು ಈ ಹಿಂದೆಯೆ ಚೀನಾವನ್ನು ಮೂದಲಿಸಿದ್ದರು, ಇದರಿಂದಾಗಿ ಅಮೆರಿಕದಾದ್ಯಂತ ಏಷ್ಯಾ ವಿರೋಧಿ ಭಾವನೆಗಳಿಗೆ ಉತ್ತೇಜನ ನೀಡಿತು. ಸಾಂಕ್ರಾಮಿಕ ರೋಗವು ವುಹಾನ್ ನಲ್ಲಿ ಪ್ರಾರಂಭವಾಯಿತು ಎಂದು ನಂಬಲಾದ ನಂತರ ಇತರ ಅಮೆರಿಕಾದ ಅಧಿಕಾರಿಗಳು ಇದನ್ನು “ವುಹಾನ್ ವೈರಸ್” ಎಂದು ಕರೆಯತೊಡಗಿದ್ದರು.
ಇದನ್ನೂ ಓದಿ: ಟ್ರಂಪ್‌ಗೆ WHO ಮಹಾಕಾರ್ಯದರ್ಶಿ ಎಚ್ಚರಿಕೆ
ಕೆಲವು ಅಮೆರಿಕಾ ಅಧಿಕಾರಿಗಳು ಮತ್ತು ರಿಪಬ್ಲಿಕನ್ ಪಕ್ಷದ ಸಂಸದರು ಗುಪ್ತಚರ ವರದಿಗಳನ್ನು ಉಲ್ಲೇಖಿಸಿ, ಚೀನಾ ನಿಜವಾದ ಅಂಕಿ ಅಂಶವನ್ನು ನೀಡುತ್ತಿಲ್ಲ ಎಂದು ಆರೋಪ ಮಾಡಿದ್ದರು. ಅಧ್ಯಕ್ಷ ಟ್ರಂಪ್ ಅಮೆರಿಕಾಕ್ಕಿಂತ ಚೀನಾದಲ್ಲೇ ಹೆಚ್ಚು ಪ್ರಕರಣವಿದೆ ಎಂದು ಆರೋಪಿಸಿದ್ದರಾದರೂ ಅದಕ್ಕೆ ಯಾವುದೇ ಪುರಾವೆಯನ್ನು ಒದಗಿಸಿರಲಿಲ್ಲ.
ಅಮೆರಿಕಾ ಅಧ್ಯಕ್ಷ ಟ್ರಂಪ್ ತಮ್ಮ ಆಡಳಿತವೂ ಸಾಂಕ್ರಾಮಿಕದ ವಿರುದ್ದದ ಹೋರಾಟದಲ್ಲಿ ವಿಳಂಬ ಪ್ರತಿಕ್ರಿಯೆಗೆ ತೀವ್ರ ಟೀಕೆಗೆ ಗುರಿಯಾಗುತ್ತಿದ್ದಂತೆ, ಚೀನಾದ ಅಂಕಿ ಅಂಶ ಮರೆಮಾಚಲು ವಿಶ್ವ ಆರೋಗ್ಯ ಸಂಸ್ಥೆ ಸಹಾಯ ಮಾಡಿದೆ ಮತ್ತು ಬಿಕ್ಕಟ್ಟಿಗೆ ತನ್ನದೇ ಆದ ಪ್ರತಿಕ್ರಿಯೆಯನ್ನು ತಪ್ಪಾಗಿ ನಿರ್ವಹಿಸುತ್ತಿದೆ ಎಂದು ಆರೋಪಿಸಿದ್ದಾರೆ. ಅಂದಿನಿಂದ ಚೀನಾ ತನ್ನ ಸಂಖ್ಯೆಯನ್ನು ವುಹಾನ್‌ನಲ್ಲಿ 50% ರಷ್ಟು ಪರಿಷ್ಕರಿಸಿದೆ ಎನ್ನಲಾಗಿದೆ.
ಕೊರೊನಾ ವೈರಸ್ ಸಾಂಕ್ರಾಮಿಕದಿಂದಾಗಿ ನಿನ್ನೆ ಸಂಜೆ ತನಕ ವಿಶ್ವದಾದ್ಯಂತ 1,59,510 ಜನರು ಸಾವಿಗೀಡಾಗಿರುವುದು ವರದಿಯಾಗಿದೆ. 23,17,759 ಜನರು ಈ ಸೋಂಕಿನಿಂದ ಬಳಳುತ್ತಿದ್ದಾರೆ. ಅಮೆರಿಕಾ ದಲ್ಲಿ 38,664 ಜನರ ಸಾವಿನೊಂದಿಗೆ 7,32,197 ಪ್ರಕರಣಗಳನ್ನು ವರದಿಯಾಗಿದೆ.
ಮಾಹಿತಿ: ಹಿಂದುಸ್ತಾನ್ ಟೈಂಮ್ಸ್


