ದಲಿತರಿಗೆ ಅಂಬೇಡ್ಕರ್, ಲಿಂಗಾಯತರಿಗೆ ಬಸವಣ್ಣ ಅರ್ಥವಾಗಿದ್ದರೆ ಈ ನೆಲದಲ್ಲಿ ಕೋಮುವಾದಿಗಳು ಅಧಿಕಾರಕ್ಕೆ ಬರುತ್ತಿರಲಿಲ್ಲ ಎಂದು ಪ್ರೊ. ಎ.ಬಿ ರಾಮಚಂದ್ರಪ್ಪ ಹೇಳಿದರು.
ದಾವಣಗೆರೆಯ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ನಡೆಯುತ್ತಿರುವ ‘ಸಂವಿಧಾನ ಸಂರಕ್ಷಕರ ಸಮಾವೇಶ’ದಲ್ಲಿ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಇವತ್ತು ದೇಶ ಅಪಾಯದಲ್ಲಿದೆ. ಯಾವ ಮಟ್ಟದಲ್ಲಿ ಅಪಾಯದಲ್ಲಿದೆ ಎಂಬುವುದು ಎಲ್ಲರಿಗೂ ಗೊತ್ತಿದೆ.ಸಂವಿಧಾನವನ್ನು ಒಪ್ಪಿಕೊಂಡೆ ಅದನ್ನು ನಾಶ ಮಾಡುತ್ತಿದ್ದಾರೆ. ಭಾರತದ ಸಂವಿಧಾನವು ನಾವೆಲ್ಲರೂ ಒಂದೇ ಎಂಬ ಪ್ರಜ್ಞೆಯನ್ನು ಮೂಡಿಸಿದ್ದಕ್ಕಾಗಿ ಅದನ್ನು ಇಲ್ಲವಾಗಿಸುವುದಕ್ಕೆ ಮನುವಾದಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.
ಈ ದೇಶದ ಆಯಕಟ್ಟಿನಲ್ಲಿ ಇರುವವರು ಸಂವಿಧಾನವನ್ನು ದ್ವೇಷಿಸುತ್ತಿದ್ದಾರೆ. ದೆಹಲಿಯ ಜಂತರ್ ಮಂತರ್‌ನಲ್ಲಿ ಸಂವಿಧಾನವನ್ನು ಸುಟ್ಟರೂ ಕೂಡಾ ಅವರು ಮಾತೆತ್ತುವುದಿಲ್ಲ.ಹಾಗಾಗಿ,ಸಂವಿಧಾನವನ್ನು ಪ್ರೀತಿಸುವ ಬಿಡಿಬಿಡಿ ಸಂಘಟನೆಗಳು ಇದೀಗ ಒಂದೇ ವೇದಿಕೆಯಡಿ ಬಂದಿರುವುದು ಎಂದರು.
ಈಗ ಸಾವಿನಲ್ಲೂ ರಾಜಕೀಯ ಮಾಡುತ್ತಿದ್ದಾರೆ. ನಮ್ಮ ಸಂವಿಧಾನಕ್ಕೆ ಅಡ್ಡಿಯಾಗಿರುವ ಜಾತಿವಾದಿಗಳು, ಬಂಡವಾಳ ಶಾಹಿಗಳು, ಕೋಮುವಾದಿಗಳನ್ನು ಎದುರಿಸಬೇಕಾಗಿದೆ.ಯಾರು ಸಂವಿಧಾನದ ವಿರುದ್ಧ ಇದ್ದಾರೆಯೋ ಅವರ ವಿರುದ್ಧ ನಾವು ಕೆಲಸ ಮಾಡಬೇಕಾಗಿದೆ ಎಂದು ಕರೆ ನೀಡಿದರು.
ಸಂವಿಧಾನ ಸಂರಕ್ಷಕರ ಸಮಾವೇಶ-ದಾವಣಗೆರೆ | ನಗರದ ಪ್ರಮುಖ ರಸ್ತೆಗಳಲ್ಲಿ ಪರೇಡ್ ಮೂಲಕ ಅದ್ದೂರಿ ಚಾಲನೆ