Homeಕರ್ನಾಟಕಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವವರೇ ನೈಜ ದೇಶಪ್ರೇಮಿಗಳು: ಪ್ರೊ. ಬರಗೂರು ರಾಮಚಂದ್ರಪ್ಪ

ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವವರೇ ನೈಜ ದೇಶಪ್ರೇಮಿಗಳು: ಪ್ರೊ. ಬರಗೂರು ರಾಮಚಂದ್ರಪ್ಪ

- Advertisement -
- Advertisement -

‘ಯಾರು ಸಂವಿಧಾನವನ್ನು ಗೌರವಿಸುತ್ತಾರೊ, ಸಂವಿಧಾನದ ಆಶಯಗಳನ್ನು ಎತ್ತಿಹಿಡಿದು ಸೌರ್ಹಾರ್ದತೆಯನ್ನು ಬಯಸುತ್ತಾರೊ ಅವರೇ ನಿಜವಾದ ದೇಶಪ್ರೇಮಿಗಳು’ ಎಂದು ಪ್ರೊ. ಬರಗೂರು ರಾಮಚಂದ್ರಪ್ಪ ಪ್ರತಿಪಾದಿಸಿದರು.

ದಾವಣಗೆರೆಯ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ನಡೆಯುತ್ತಿರುವ ‘ಸಂವಿಧಾನ ಸಂರಕ್ಷಕರ ಸಮಾವೇಶ’ದಲ್ಲಿ ಉದ್ಘಾಟನಾ ಮಾತುಗಳನ್ನಾಡಿದ ಅವರು, “ಜನ ಒಂದುಗೂಡಿದರೆ ಯಾವೂದೂ ಅಸಾಧ್ಯವಲ್ಲ. ಆದ್ದರಿಂದ, ಜನಶಕ್ತಿಯೆ ಅಂತಿಮವಾಗಿದ್ದು. ಅಂತಹ ಜನಶಕ್ತಿಯನ್ನು ಸಂಘಟಿಸಿದರೆ ಸಂವಿಧಾನವನ್ನು ರಕ್ಷಣೆ ಮಾಡಲು ಸಾಧ್ಯ” ಎಂದರು.

“ಪ್ರಶ್ನೆ ಮಾಡುವುದು ಮತ್ತು ಪ್ರಶ್ನಿಸಿಕೊಳ್ಳುವುದು ಬಹಳ ಮುಖ್ಯ; ಪ್ರಪಂಚದ ಎಲ್ಲ ಕ್ರಾಂತಿಕಾರಿಗಳು ಇದನ್ನು ಮಾಡುತ್ತಾರೆ. ಸಂವಿಧಾನವನ್ನು ಕೈನಲ್ಲಿ ಹಿಡಿಕೊಂಡಿರುವ ಪಡೆ ಒಂದು ಕಡೆ, ಸಂವಿಧಾನವನ್ನು ಪಾಲಿಸದ ಪಡೆ ಮತ್ತೊಂದು ಕಡೆ. ಆದರೆ, ಸಂವಿಧಾನ ಹಿಡಿದಿರುವ ಈ ಪಡೆ ‘ಪರ್ಯಾಯ’ವನ್ನು ಸಾಧ್ಯವನ್ನಾಗಿಸುವ ಪಡೆಯಾಗಿದೆ” ಎಂದು ಅವರು ಹೇಳಿದರು.

“ಸಂವಿಧಾನ ಇದೆ ಎನ್ನುವುದು ಅಷ್ಟು ಮುಖ್ಯವಲ್ಲ; ಅದನ್ನು ಯಾರು ಬಳಸುತ್ತಾರೆ ಎನ್ನುವುದು ಮುಖ್ಯವಾಗಿದೆ. ಏಕೆಂದರೆ, ಪ್ರಾಮಾಣಿಕತೆ ಪತನಗೊಂಡ ಕಾಲವಿದು. ಭ್ರಷ್ಟಗೊಂಡ ಬೌದ್ಧಿಕ ವಲಯದ ಕಾಲವಿದೆ. ಅದು ಈಗ ಜಾತಿ, ಧರ್ಮ, ಪೂರ್ವಗ್ರಹ ಪೀಡಿತವಾಗಿ ಭ್ರಷ್ಟಗೊಂಡಿದೆ. ಜಾತಿ-ಧರ್ಮ ಮೂಲಭೂತವಾಗಬಾರದು. ಸಮಾದಲ್ಲಿ ಜಾತಿ-ಧರ್ಮಗಳಿವೆ; ಆದರೆ, ಅದು ಮೂಲಭೂತವಾಗಿರಬಾರದು. ಇಡೀ ಬೌದ್ಧಿಕ ವಲಯವೇ ವಿಭಜಿತವಾಗಿರುವ ಕಾಲವಿದು. ಯಾರು ಪ್ರಗತಿಪರ, ಯಾರು ದೇಶಪ್ರೇಮಿ ಅಲ್ಲ ಎನ್ನುವುದು ನಾವು ಹಿಂದೂ-ಮುಸ್ಲಿಂ ಎಂಬ ಆಧಾರದಲ್ಲಿ ನೋಡುತ್ತಿದ್ದೇವೆ” ಎಂದರು.

“ನಮ್ಮ ಪರಂಪರೆ ಬಹಳ ಮುಖ್ಯವಗಿದೆ; ಜನಸಾಮಾನ್ಯರನ್ನು ನಮ್ಮ ಪರಂಪರೆಯ ಮೂಲಕ ತಲುಪಬೇಕಾಗಿದೆ. ಹಿಂದೂ ಧರ್ಮ ಒಪ್ಪದ ಅಂಬೇಡ್ಕರ್‌ ಮತ್ತು ಹಿಂದೂ ಧರ್ಮವನ್ನು ಒಪ್ಪುವ ರಾಧಾಕೃಷ್ಣ ಅವರು ದೇಶದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಇರಬೇಕು ಎಂದು ಪ್ರತಿಪಾದಿಸುತ್ತಾರೆ. ರಾಮ್‌ ಪ್ರಸಾದ್ ಮತ್ತು ಅಸ್ಪಾಕುಲ್ಲಾ ಅವರು ಒಂದೇ ಸಮಯದಲ್ಲಿ ಸ್ವಾತಂತ್ಯ್ರಕ್ಕೋಸ್ಕರ ಹೋರಾಟ ಮಾಡಿ, ಒಂದೇ ದಿನ ಹುತಾತ್ಮರಾಗುತ್ತಾರೆ; ಇದು ನಮ್ಮ ಭಾರತ” ಎಂದು ವಿವರಿಸಿದರು.

“ಪೆಹಲ್ಗಾಮ್ ಅಮಾನವೀಯ ಘಟನೆನ್ನು ನಾವು ಉಗ್ರವಾಗಿ ಖಂಡಿಸಬೇಕಾಗಿದೆ. ಈ ದೇಶದಲ್ಲಿ ಭಯೋತ್ಪಾನೆ, ದ್ವೇಷೋತ್ಪಾದನೆ ಇದೆ. ಜೊತೆಗೆ ಪ್ರಪಂಚದಲ್ಲಿ ಯುದ್ದೋತ್ಪಾದನೆ ಇವೆ. ಆದರೆ, ನಮಗೆ ಇದು ಯಾವುದೂ ಬೇಡ. ಅಮಾನವೀಯ ಘಟನೆ ನಡೆದ ಸಂಧರ್ಭದಲ್ಲಿ ಮಾನವೀಯವಾಗಿ ಸ್ಪಂಧಿಸುವ ಮನಸ್ಸುಗಳು ಭಾರತದಲ್ಲಿ ಇವೆ ಎನ್ನುವುದು ಪೆಹಲ್ಗಾಮ್ ಘಟನೆ ನಮಗೆ ಉದಾಹರಣೆಯಾಗಿದೆ. ಒಂದು ಕಡೆ ಮೃತ ವ್ಯಕ್ತಿಯ ಮುಂದೆ ರೋಧಿಸುತ್ತಿರುವ ಮಹಿಳೆಯ ಚಿತ್ರವಿದೆ. ಮತ್ತೊಂದು ಕಡೆ, ಒಬ್ಬ ವ್ಯಕ್ತಿ ತನ್ನ ಬೆನ್ನಮೇಲೆ ಹೊತ್ತುಕೊಂಡು ಹೋಗಿ ಯುವಕನ ಜೀವ ರಕ್ಷಿಸುತ್ತಾನೆ. ಇವೆರೆಡೂ ನಮ್ಮ ಮುಂದೆ ಸಂಕೇತವಾಗಿದೆ” ಎಂದರು.

“ಸಂವಿಧಾನವನ್ನು ಪೂಜೆ ಮಾಡುವವರಿಗೆ, ಅದರ ಬಗ್ಗೆ ಗೌರವ ಇದೆಯೇ ಎಂಬುವುದನ್ನು ನಾವು ಪ್ರಶ್ನೆ ಮಾಡಬೇಕಾಗಿದೆ. ಆರಂಭದಲ್ಲಿ ‘ಸಮಾಜವಾದ’ ಎನ್ನುವ ಪದ ಪೀಠಿಕೆಯಲ್ಲಿ ಇರಲಿಲ್ಲ. ಆದರೆ, ಅಂಬೇಡ್ಕರ್ ಅವರು ತಮ್ಮ ಕೊನೆಯ ಸಂವಿಧಾನ ಸಭೆಯಲ್ಲಿ ಮಾತನಾಡುತ್ತಾ, ಸಂವಿಧಾನದ ಒಳಗೆ ಸಮಾಜವಾದದ ಆಶಯ ಅಡಗಿದೆ ಎಂದು ಹೇಳಿದ್ದರು” ಎಂದು ಹೇಳಿದರು.

“ಪಕ್ಷದಲ್ಲಿ ಇದ್ದೂ ಪಕ್ಷವನ್ನು ಮೀರಿ ನೋಡುವ ರಾಜಕೀಯ ನಾಯಕತ್ವ ಬೇಕು. ಧರ್ಮದಲ್ಲಿ ಇದ್ದೂ ಧಾರ್ಮಿಕತೆಯನ್ನು ಮೀರಿ ಧಾರ್ಮಿಕ ನಾಯಕತ್ವ ಈ ದೇಶಕ್ಕೆ ಬರಬೇಕು. ಸಂವಿಧಾನ ಅಸ್ಪೃಶ್ಯತೆ ನಿಷೇಧ ಮಾಡಿದೆ. ಆದರೆ, ಸಮಾಜದಲ್ಲಿ ಇನ್ನೂ ಚಾಲ್ತಿಯಲ್ಲಿದೆ. 1.87 ಲಕ್ಷ ಜನರು ಇನ್ನೂ ಕೈನಿಂದ ಮಲ ಎತ್ತುತ್ತಿದ್ದಾರೆ. ಇದು ಹೋಗಲಾಡಿಸಲು ನಮ್ಮ ಮನಸ್ಸಿನ ಮಲಿನತೆ ಹೋಗಬೇಕು. ಸಂಘಟಿತ ವಲಯದ ಜೊತೆಗೆ ಅಸಂಘಟಿತ ವಲಯದ ಬಗ್ಗೆ ಮಾತನಾಡುವ ತುರ್ತು ಇದೆ. ನಮ್ಮ ಸೈದ್ಧಾಂತಿಕ ಬದ್ಧತೆಯನ್ನು ಬಿಟ್ಟುಕೊಡದೆ, ಸೈದ್ಧಾಂತಿಕ ಸಂಕುಚಿತತೆಯನ್ನು ಮೀರಬೇಕು. ದೇಶದಲ್ಲಿ ಬದಲಾವಣೆ ಬರಬೇಕಿದ್ದರೆ, ಕೆಂಪು, ನೀಲಿ, ಹಸಿರು ಒಂದೇ ವೇದಿಕೆಯ ಮೇಲೆ ಬರಬೇಕು” ಎಂದು ಬರಗೂರು ರಾಮಚಂದ್ರಪ್ಪ ಸಲಹೆ ನೀಡಿದರು.

ದಲಿತರಿಗೆ ಅಂಬೇಡ್ಕರ್, ಲಿಂಗಾಯತರಿಗೆ ಬಸವಣ್ಣ ಅರ್ಥವಾಗಿದ್ದರೆ ಕೋಮುವಾದಿಗಳು ಅಧಿಕಾರಕ್ಕೆ ಬರುತ್ತಿರಲಿಲ್ಲ: ಪ್ರೊ. ಎ.ಬಿ ರಾಮಚಂದ್ರಪ್ಪ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸತೀಶ್‌ ಜಾರಕಿಹೊಳಿ ಮೇಲಿನ ಇಡಿ ದಾಳಿಯನ್ನು ‘ಚಾರಿತ್ರ್ಯ ಹರಣ’ ಎಂದ ವಿಜಯ್ ಮಲ್ಯ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯವು (ಇಡಿ) ನಡೆಸಿದ ದಾಳಿಯನ್ನು ಮಾಜಿ ಸಂಸದ ಮತ್ತು ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಸಾರ್ವಜನಿಕವಾಗಿ ಚಾರಿತ್ರ್ಯ...

ಒಗ್ಗಟ್ಟಿನ ಮಾತುಗಳಷ್ಟೇ ಸಾಲದು, ಕೃತಿಯಲ್ಲಿರಲಿ ದಿಟ್ಟತನ : ಬ್ರಿಕ್ಸ್ ವಿಚಾರದಲ್ಲಿ ಕೇಂದ್ರಕ್ಕೆ ಕಾಂಗ್ರೆಸ್ ಚಾಟಿ

ಜಾಗತಿಕ ಮಟ್ಟದಲ್ಲಿ ಬ್ರಿಕ್ಸ್ (BRICS) ಒಕ್ಕೂಟದ ಪ್ರಭಾವ ಹೆಚ್ಚುತ್ತಿರುವುದನ್ನು ಸ್ವಾಗತಿಸಿರುವ ಕಾಂಗ್ರೆಸ್, ಈ ಒಕ್ಕೂಟದ ಅಧ್ಯಕ್ಷತೆಯನ್ನು ವಹಿಸಿರುವ ಭಾರತವು ‘ಗ್ಲೋಬಲ್ ಸೌತ್’ (Global South) ರಾಷ್ಟ್ರಗಳ ನಡುವೆ ತನ್ನ ರಾಜತಾಂತ್ರಿಕ ಸ್ಥಾನಮಾನವನ್ನು ಮರುಸ್ಥಾಪಿಸಲು...

9/11 ರ ಹಿಂದಿನ ದಾಳಿಯನ್ನು ಇರಾನ್ ಜೊತೆಗಿನ ಇಂದಿನ ಯುದ್ಧಕ್ಕೆ ಜೋಡಿಸಿದ ಡೊನಾಲ್ಡ್‌ ಟ್ರಂಪ್

"ಸೆಪ್ಟೆಂಬರ್ 11, 2001 ರ ದಾಳಿಯನ್ನು ಯುನೈಟೆಡ್ ಸ್ಟೇಟ್ಸ್ ಎಂದಿಗೂ ಮರೆಯುವುದಿಲ್ಲ. 25 ವರ್ಷಗಳ ನಂತರವೂ ಇರಾನ್ ಮೇಲೆ ದಾಳಿ ಮಾಡುವ ಮೂಲಕ ದೇಶವು ಭಯೋತ್ಪಾದನೆ ವಿರುದ್ಧದ ಯುದ್ಧವನ್ನು ಮುಂದುವರೆಸಿದೆ" ಎಂದು ಅಧ್ಯಕ್ಷ...

SIR ನೋಟಿಸ್ ಮತ್ತು ವಿಚಾರಣೆಯಲ್ಲಿ ಅಕ್ರಮ : ಚು. ಆಯೋಗದ ವಿರುದ್ಧ ನಾಗರಿಕ ಸಂಘಟನೆಗಳಿಂದ 2ನೇ ಎಫ್‌ಐಆರ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಭಾಗವಾಗಿ, ಆಗಸ್ಟ್ 24ರಂದು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದ ಕರಡು ಮತದಾರರ ಪಟ್ಟಿಯನ್ನು ತಿರಸ್ಕರಿಸಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಫ್‌ಐಆರ್ ಬಿಡುಗಡೆ...

‘ಕೊಂಕಣಿ – ಮಾಲ್ವಣಿ ಸಮುದಾಯಗಳು ಹಿಂದುತ್ವದ ಬೆಂಬಲಿಗರು..’; ಮಹಾರಾಷ್ಟ್ರ ಬಿಜೆಪಿ ನಾಯಕ ಅಮೀತ್ ಸತಮ್

ಮುಂಬೈನಲ್ಲಿ ವಾಸಿಸುತ್ತಿರುವ ಕೊಂಕಣಿ ಮತ್ತು ಮಾಲ್ವಣಿ ಸಮುದಾಯಗಳು ಸೇರಿದಂತೆ ಕೊಂಕಣ ಪ್ರದೇಶದ ಜನರು ಹಿಂದುತ್ವವನ್ನು ಬೆಂಬಲಿಸುತ್ತಾರೆ ಎಂದು ಬಿಜೆಪಿ ನಾಯಕ ಅಮೀತ್ ಸತಮ್ ಹೇಳಿದ್ದಾರೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದ ಸಾವಂತವಾಡಿಗೆ ಗಣಪತಿ ಭಕ್ತರಿಗಾಗಿ ಛತ್ರಪತಿ...

SIR! ಸಾಮಾನ್ಯರಿಗೆ ಸಂಕಷ್ಟ; ಗಣ್ಯರಿಗೆ ಮನೆ ಬಾಗಿಲಲ್ಲೇ ಸೇವೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕರ್ನಾಟಕದಲ್ಲಿ ಮುಂದುವರೆದಿರುವ ನಡುವೆಯೇ, ಅದರ ಜಾರಿಯಲ್ಲಿ ಸಾಮಾನ್ಯ ಮತದಾರರು ಮತ್ತು ಪ್ರಭಾವಿ ವ್ಯಕ್ತಿಗಳ ಅನುಭವದ ನಡುವಿನ ವ್ಯತ್ಯಾಸದ ಕುರಿತು ಪ್ರಶ್ನೆಗಳು ಎದ್ದಿವೆ. ಮತದಾರರ ಪಟ್ಟಿಯಲ್ಲಿನ...

ದಲಿತ ಬಾಲಕಿ ನಿಶು ಆಜಾದ್ ಕುಟುಂಬಕ್ಕೆ ನಿಲ್ಲದ ಕಿರುಕುಳ; ಅಸಭ್ಯ ಭಾಷೆ – ಬೆದರಿಕೆ ಸಂದೇಶ ರವಾನೆ

ಸಿಜೆಪಿ ಪ್ರತಿಭಟನೆಯಲ್ಲಿ ಗಮನ ಸೆಳೆದಿದ್ದ ಹದಿನಾಲ್ಕು ವರ್ಷ ವಯಸ್ಸಿನ ದಲಿತ ಸಮುದಾಯದ ಕಂಟೆಂಟ್ ಕ್ರಿಯೇಟರ್ ನಿಶು ಆಜಾದ್ ಮತ್ತು ಅವರ ಕುಟುಂಬಕ್ಕೆ ಮೊಬೈಲ್‌ ಫೋನ್‌ ಮೂಲಕ ನಿರಂತರ ಕಿರುಕುಳ ಸಂದೇಶ ಬರುತ್ತಿವೆ ಎಂದು...

ಉತ್ತರ ಪ್ರದೇಶ| 8ನೇ ತರಗತಿಯ ದಲಿತ ವಿದ್ಯಾರ್ಥಿಗೆ ಶಿಕ್ಷಕಿಯಿಂದ ಜಾತಿ ತಾರತಮ್ಯ

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯೊಬ್ಬರು ಶಿಕ್ಷಕಿಯಿಂದ ಜಾತಿ ಆಧಾರಿತ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿದ್ದಾನೆ. ಕೃಷ್ಣ ಎಂದು ಗುರುತಿಸಲ್ಪಟ್ಟ ಈ ವಿದ್ಯಾರ್ಥಿ ಪರಿಶಿಷ್ಟ...

ಯೆಮನ್ | ಸಂಪೂರ್ಣ ರೆಡ್ ಸೀ ಕರಾವಳಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಹೌತಿ ಪಡೆ : ಮಂದೇಬ್ ಜಲಸಂಧಿ ಮೇಲೆಯೂ ಹಿಡಿತ ಸಾಧಿಸಿರುವುದಾಗಿ ವರದಿ

ಮಹತ್ವದ ಬೆಳವಣಿಗೆಯಲ್ಲಿ, ಹೌತಿ ಬಂಡುಕೋರರು ಯೆಮನ್‌ನ ಇಡೀ ಕೆಂಪು ಸಮುದ್ರದ (ರೆಡ್ ಸೀ) ಕರಾವಳಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇರಾನ್ ಬೆಂಬಲಿತ ಹೌತಿ ಸಶಸ್ತ್ರ ಪಡೆಗಳು ಯೆಮನ್ ಸರ್ಕಾರದ ನಿಯಂತ್ರಣದಲ್ಲಿದ್ದ...

ಭಾರತದ ಚುನಾವಣಾ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿದೆ: ಸಿಇಸಿ ಜ್ಞಾನೇಶ್ ಕುಮಾರ್

ಭಾರತದ ಚುನಾವಣಾ ಪ್ರಕ್ರಿಯೆಯು ವಿಶ್ವದಲ್ಲೇ ಅತ್ಯಂತ ಪಾರದರ್ಶಕವಾದದ್ದು ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ (ಸೆ.11) ಹೇಳಿದ್ದಾರೆ. ಗುಜರಾತ್ ವಿಶ್ವವಿದ್ಯಾಲಯದ ಅಟಲ್ ಕಲಾಂ ಸಭಾಂಗಣದಲ್ಲಿ ನಡೆದ 'ಮತಗಟ್ಟೆ ಮಟ್ಟದ ಅಧಿಕಾರಿಗಳೊಂದಿಗೆ...