ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರು ಬಂಧನದಲ್ಲಿದ್ದು, ಇದುವರೆಗೂ ಜಾಮೀನು ಸಿಕ್ಕಿಲ್ಲ. ಒಂದು ವೇಳೆ ಶಾರುಖ್ ಖಾನ್ ಬಿಜೆಪಿಗೆ ಸೇರ್ಪಡೆಯಾದರೆ, ಅದೇ ಡ್ರಗ್ಸ್ ಸಕ್ಕರೆ ಪೌಡರ್ ಆಗಿ ಮಾರ್ಪಡುತ್ತದೆ ಎಂದು ಮಹಾರಾಷ್ಟ್ರ ಸಚಿವ ಛಗನ್ ಭುಜ್ಬಾಲ್ ಅವರು ವ್ಯಂಗ್ಯವಾಡಿದ್ದಾರೆ.
ತನ್ನ ಮಗನಿಗೆ ಜಾಮೀನು ಪಡೆಯಲು ಶಾರುಖ್ ಖಾನ್ ಹರಸಾಹಸ ಪಡುತ್ತಿದ್ದು, ಈಗಾಗಲೇ ಎರಡು ಬಾರಿ ಆರ್ಯನ್ ಜಾಮೀನು ಅರ್ಜಿಯನ್ನು ಕೊರ್ಟ್ ತಿರಸ್ಕರಿಸಿದೆ.
ಇದನ್ನೂ ಓದಿ: ಈ ವಾರದ ಟಾಪ್ 10 ಸುದ್ದಿಗಳು; ಮಿಸ್ ಮಾಡದೆ ಓದಿ
“ಗುಜರಾತ್‌ನ ಮಂದ್ರಾ ಬಂದರಿನಲ್ಲಿ ವಶಪಡಿಸಿಕೊಂಡ 3,000 ಕೆಜಿ ಹೆರಾಯಿನ್ ಪ್ರಕರಣದ ತನಿಖೆ ನಡೆಸುವ ಬದಲು, ಎನ್‌ಸಿಬಿ ಶಾರೂಖ್ ಖಾನ್‌ರನ್ನು ಬೇಟೆಯಾಡುತ್ತಿದೆ. ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಸಕ್ಕರೆ ಪುಡಿಯಾಗಿ ಮಾರ್ಪಾಡಾಗುತ್ತದೆ” ಎಂದು ಎನ್‌ಸಿಪಿ ನಾಯಕರಾದ ಭುಜ್ಬಾಲ್ ವ್ಯಂಗ್ಯವಾಡಿದ್ದಾರೆ.
ಡ್ರಗ್ಸ್ ಪ್ರಕರಣದಲ್ಲಿ ಆರೋಪಿಯಾಗಿರುವ ಆರ್ಯನ್ ಖಾನ್‌ರನ್ನು ಮುಂಬೈ ಹಡಗಿನಿಂದ ಡ್ರಗ್ಸ್ ಪ್ರಕರಣದಲ್ಲಿ ಅಕ್ಟೋಬರ್ 03 ರಂದು ಎನ್‌ಸಿಬಿ ಬಂಧಿಸಿತ್ತು. ಅರ್ಯನ್‌ಗೆ ಅಕ್ಟೋಬರ್ 20ರಂದು ಜಾಮೀನು ಸಿಗದೆ ಮತ್ತೆ ಜೈಲುಪಾಲಾಗಿದ್ದಾರೆ. ಅಲ್ಲದೆ, ಕಳೆದ ಮೂರು ದಿನಗಳ ಹಿಂದೆ ಎನ್‌ಸಿಬಿ ತಂಡ ಶಾರುಖ್ ಖಾನ್ ಅವರ ಮನೆಗೂ ದಾಳಿ ಮಾಡಿತ್ತು.
ಆರ್ಯನ್ ಖಾನ್ ಪ್ರೈಮಾ ಫೇಸಿಯ ವಾಟ್ಸಾಪ್ ಚಾಟ್‌ಗಳಲ್ಲಿ ಆತ “ಅಕ್ರಮ ಮಾದಕವಸ್ತು ಚಟುವಟಿಕೆಗಳಲ್ಲಿ ತೊಡಗಿದ್ದಾನೆ” ಮತ್ತು ಆತ ಮಾದಕವಸ್ತು ಮಾರಾಟಗಾರರೊಂದಿಗೆ ಸಂಪರ್ಕದಲ್ಲಿದ್ದಾನೆ ಎಂದು ವಿಶೇಷ ನ್ಯಾಯಾಲಯವು ಗಮನಿಸಿದ್ದು, ಆತನಿಗೆ ಜಾಮೀನು ನೀಡಲು ನಿರಾಕರಿಸಿದೆ. ಹೀಗಾಗಿ, ಶಾರುಖ್ ಅವರು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅಲ್ಲಿ, ಅಕ್ಟೋಬರ್ 26ರಂದು ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ.
ಇದನ್ನೂ ಓದಿ: ಸಿಎಂ ‘ಬುರುಡೆ ಬೊಮ್ಮಾಯಿ’ ಬಿಜೆಪಿ ‘ಬಂಡಲ್’: ಸಿದ್ದರಾಮಯ್ಯ


