Homeಮುಖಪುಟಬೆಂಕಿಪೊಟ್ಟಣಕ್ಕೂ ತಟ್ಟಿದ ಬೆಲೆ ಏರಿಕೆ ಬಿಸಿ:14 ವರ್ಷಗಳ ಬಳಿಕ ಶೇ.100 ರಷ್ಟು ಬೆಲೆ ಏರಿಕೆ

ಬೆಂಕಿಪೊಟ್ಟಣಕ್ಕೂ ತಟ್ಟಿದ ಬೆಲೆ ಏರಿಕೆ ಬಿಸಿ:14 ವರ್ಷಗಳ ಬಳಿಕ ಶೇ.100 ರಷ್ಟು ಬೆಲೆ ಏರಿಕೆ

- Advertisement -
- Advertisement -

ಪೆಟ್ರೋಲ್, ಡಿಸೇಲ್, ಎಲ್‌ಪಿಜಿ ಸಿಲಿಂಡರ್‌ ಬೆಲೆ ಏರಿಕೆಯಾಗಿ, ದಿನ ಬಳಕೆ ವಸ್ತುಗಳ ಬೆಲೆ ದಿನ ದಿನಕ್ಕೂ ಹೆಚ್ಚಾಗುತ್ತಲೇ ಇದೆ. ಇದರ ನಡುವೆ ಬರೋಬ್ಬರಿ  14 ವರ್ಷಗಳ ಬಳಿಕ ಬೆಂಕಿಪೊಟ್ಟಣಕ್ಕೂ ಬೆಲೆ ಏರಿಕೆ ಬಿಸಿ ತಟ್ಟಿದ್ದು, ಬೆಂಕಿಪೊಟ್ಟಣದ ಬೆಲೆಯಲ್ಲಿ ಶೇ.100 ರಷ್ಟು ಏರಿಕೆ ಮಾಡಲು ನಿರ್ಧರಿಸಲಾಗಿದೆ.

ತಮಿಳುನಾಡಿನ ಶಿವಕಾಶಿಯಲ್ಲಿರುವ ಆಲ್ ಇಂಡಿಯಾ ಚೇಂಬರ್ ಆಫ್ ಮ್ಯಾಚಸ್ 14 ವರ್ಷಗಳ ನಂತರ ಬೆಂಕಿಪೊಟ್ಟಣದ ಬೆಲೆಯನ್ನು 1 ರಿಂದ 2 ರೂಪಾಯಿಗೆ ಏರಿಸಲು ನಿರ್ಧರಿಸಿದೆ. ಹೆಚ್ಚುತ್ತಿರುವ ವೆಚ್ಚಗಳು ಮತ್ತು ಹಣದುಬ್ಬರವನ್ನು ಉಲ್ಲೇಖಿಸಿ ಈ ಒಕ್ಕೂಟವೂ ಬೆಂಕಿಪೊಟ್ಟಣದ ಬೆಲೆ ಡಿಸೆಂಬರ್ 1 ರಿಂದ ಏರಿಕೆಯಾಗುವುದನ್ನು ಘೋಷಿಸಿದೆ.

ಕಳೆದ 14 ವರ್ಷಗಳಲ್ಲಿ ಬೆಲೆ ಏರಿಕೆ ಕಾಣದ ದಿನ ಬಳಕೆ ವಸ್ತುಗಳಲ್ಲಿದ್ದ ಏಕೈಕ ವಸ್ತು ಬೆಂಕಿಪೊಟ್ಟಣವಾಗಿತ್ತು.  2007ರಲ್ಲಿ ಬೆಂಕಿ ಪೊಟ್ಟಣದ ದರವನ್ನು 50 ಪೈಸೆಗಳಿಂದ 1 ರೂಪಾಯಿಗೆ ಹೆಚ್ಚಿಸಲಾಗಿತ್ತು. ಅದಕ್ಕಿಂತ ಮೊದಲು 1995 ರಲ್ಲಿ ಮ್ಯಾಚ್‌ಬಾಕ್ಸ್‌ನ ಬೆಲೆಯನ್ನು 25 ಪೈಸೆಯಿಂದ 50 ಪೈಸೆಗೆ  ಹೆಚ್ಚಿಸಲಾಗಿತ್ತು ಎನ್ನಲಾಗಿದೆ.

ಇದನ್ನೂ ಓದಿ: ಪೆಟ್ರೋಲ್, ಡೀಸೆಲ್: ಕಳೆದ 25 ದಿನಗಳಲ್ಲಿ 19 ಬಾರಿ ಬೆಲೆ ಏರಿಕೆ!

ಮ್ಯಾಚ್‌ಬಾಕ್ಸ್‌ಗಳನ್ನು ತಯಾರಿಸಲು 14 ಬಗೆಯ ಕಚ್ಚಾ ಸಾಮಗ್ರಿಗಳು ಬೇಕಾಗುತ್ತವೆ ಎಂದು ತಯಾರಕರು ತಿಳಿಸಿದ್ದಾರೆ. ಬೆಂಕಿಪೊಟ್ಟಣ ತಯಾರಿಸಲು ಬೇಕಾಗುವ ಪ್ರಮುಖ ವಸ್ತುವಾದ ಕೆಂಪು ರಂಜಕ ಒಂದು ಕೆಜಿಗೆ 425 ರಿಂದ 810 ರೂಪಾಯಿಯಾಗಿದೆ.

ಮೇಣದ ಬೆಲೆ 58 ರಿಂದ 80 ರೂಪಾಯಿಯಾಗಿದೆ. ಹೊರ ಬಾಕ್ಸ್ ಬೋರ್ಡ್ 36 ರಿಂದ 55 ರೂ. ಒಳಗಿನ ಬಾಕ್ಸ್ ಬೋರ್ಡ್ ಬೆಲೆ 32 ರಿಂದ  58 ರೂಪಾಯಿಗೆ ಏರಿಕೆಯಾಗಿದೆ ಎಂದು ಆಲ್ ಇಂಡಿಯಾ ಚೇಂಬರ್ ಆಫ್ ಮ್ಯಾಚಸ್ ತಿಳಿಸಿದೆ.

ಇದರ ಜೊತೆಗೆ ಪೇಪರ್, ಸ್ಪ್ಲಿಂಟ್ಸ್, ಪೊಟ್ಯಾಶಿಯಂ ಕ್ಲೋರೇಟ್ ಮತ್ತು ಸಲ್ಫರ್ ನಂತಹ ವಸ್ತುಗಳ ಬೆಲೆಯೂ ಹೆಚ್ಚಾಗಿದೆ. ಇವುಗಳು ಕೂಡ ಬೆಂಕಿಪೊಟ್ಟಣ ಬೆಲೆ ಏರಿಕೆಗೆ ಕಾರಣವಾಗಿದೆ. ನಿರಂತರವಾಗಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗಿ ಸಾಗಣೆ ವೆಚ್ಚ ಕೂಡ ಅಧಿಕವಾಗಿದೆ ಎಂದು ತಯಾರಕರು ಹೇಳಿದ್ದಾರೆ.


ಇದನ್ನೂ ಓದಿ: ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ನಿಂತಿಲ್ಲ: ಏಕೆ ಗೊತ್ತೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಸ್ನೇಹಿತರ’ ಮೇಲಿನ ದಾಳಿಯು ಮೋದಿಯ ಕುರ್ಚಿ ಅಲುಗಾಡುತ್ತಿರುವುದನ್ನು ತೋರಿಸುತ್ತದೆ: ಮಲ್ಲಿಕಾರ್ಜುನ ಖರ್ಗೆ

0
ತೆಲಂಗಾಣದಲ್ಲಿ ಚುನಾವಣಾ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಚುನಾವಣೆ ಘೋಷಣೆಯಾದ ಬಳಿಕ ರಾಹುಲ್ ಗಾಂಧಿಯೇಕೆ ಅದಾನಿ–ಅಂಬಾನಿ ಬಗ್ಗೆ ಮಾತನಾಡುತ್ತಿಲ್ಲ. ಏನಾದರೂ ರಹಸ್ಯ ಒಪ್ಪಂದ ಮಾಡಿಕೊಂಡಿದ್ದಾರಾ? ಎಂದು ಪ್ರಶ್ನಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಎಐಸಿಸಿ...