Homeಮುಖಪುಟಪಕ್ಷಗಳನ್ನು ಒಗ್ಗೂಡಿಸಲು ಬಯಸಿದ್ದೆ ಅಷ್ಟೇ, INDIA ಮೈತ್ರಿಯ ಸಂಚಾಲಕರಾಗುವ ಆಸೆ ನನಗಿಲ್ಲ: ನಿತೀಶ್ ಕುಮಾರ್

ಪಕ್ಷಗಳನ್ನು ಒಗ್ಗೂಡಿಸಲು ಬಯಸಿದ್ದೆ ಅಷ್ಟೇ, INDIA ಮೈತ್ರಿಯ ಸಂಚಾಲಕರಾಗುವ ಆಸೆ ನನಗಿಲ್ಲ: ನಿತೀಶ್ ಕುಮಾರ್

- Advertisement -
- Advertisement -

ವಿರೋಧ ಪಕ್ಷಗಳ ಒಕ್ಕೂಟ INDIAದ ಮೂರನೇ ಸಭೆ ಮುಂಬೈನಲ್ಲಿ ಆಗಸ್ಟ್ 31ರಿಂದ ಎರಡು ದಿನಗಳ ಕಾಲ ನಡೆಯುತ್ತಿದೆ. ಈ ಸಭೆಗೆ ಮುನ್ನ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸಂಚಾಲಕರಾಗುತ್ತಾರೆಯೇ ಎನ್ನು ಪ್ರಶ್ನೆಗೆ ಪ್ರತಿಕ್ರಿಸಿದ್ದಾರೆ.

ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ನಿತೀಶ್ ಕುಮಾರ್ ಅವರು, ”ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ಬಯಸಿದ್ದೇನೆ ಆದರೆ INDIA ಒಕ್ಕೂಟದ ಸಂಚಾಲಕರಾಗಲು ಬಯಸುವುದಿಲ್ಲ” ಎಂದು ಹೇಳಿದ್ದಾರೆ.

”ನಾನು ಯಾವ ಹುದ್ದೆಗೂ  ಹೋಗಲು ಬಯಸುವುದಿಲ್ಲ. ನನಗೆ ಯಾವ ಮಹತ್ವಾಕಾಂಕ್ಷೆಗಳು ಇಲ್ಲ ಎಂದು ಮತ್ತೆ ಮತ್ತೆ ಹೇಳುತ್ತಿದ್ದೇನೆ” ಎಂದು ಹೇಳಿದ್ದಾರೆ.

INDIA ಒಕ್ಕೂಟವು ಈ ಸಭೆಯಲ್ಲಿ 11 ಸದಸ್ಯರ ಸಮನ್ವಯ ಸಮಿತಿಯನ್ನು ರಚಿಸುವ ನಿರೀಕ್ಷೆಯಿದೆ ಮತ್ತು ರಾಜ್ಯ ಮಟ್ಟದಲ್ಲಿ ನಿರ್ದಿಷ್ಟ ಸೀಟು ಹಂಚಿಕೆ ವ್ಯವಸ್ಥೆಯ ಬಗ್ಗೆಯೂ ಚರ್ಚಿಸುವ ನಿರೀಕ್ಷಿಸಲಾಗಿದೆ. 2024ರ ಸಾರ್ವತ್ರಿಕ ಚುನಾವಣೆಯ ಪೂರ್ವದಲ್ಲಿ ನಿರ್ದಿಷ್ಟ ಕಾರ್ಯಗಳನ್ನು ನಿರ್ವಹಿಸಲು ಇತರ ಸೂತ್ರವನ್ನು ಸಹ ಚರ್ಚಿಸುವ ಸಾಧ್ಯತೆಯಿದೆ ಇದೆ ಎಂದು ಹೇಳಲಾಗುತ್ತಿದೆ.

INDIA ಒಕ್ಕೂಟದ ಮೊದಲ ಎರಡು ಸಭೆಗಳನ್ನು ಪಾಟ್ನಾ (ಜೂನ್ 23) ಮತ್ತು ಬೆಂಗಳೂರಿನಲ್ಲಿ (ಜುಲೈ 17-18) ನಡೆಸಿತು. ಇದೀಗ ಮೂರನೇ ಸಭೆ ಆಗಸ್ಟ್ 31ರಿಂದ ಎರಡು ದಿನಗಳ ಕಾಲ ಮುಂಬೈನಲ್ಲಿ ನಡೆದಿದೆ.

ಬಿಹಾರದ ಆರ್‌ಜೆಡಿ ಪಕ್ಷದ ನಾಯಕರೊಬ್ಬರು ಮೈತ್ರಿಕೂಟದ ಬಗ್ಗೆ ಮಾತನಾಡಿ, ”ವಿರೋಧ ಪಕ್ಷಗಳನ್ನು ಒಗ್ಗೂಡಿಸುವಲ್ಲಿ ನಿತೀಶ್ ಕುಮಾರ್ ಅವರ ಪ್ರಯತ್ನಗಳಿಗೆ ಖಂಡಿತವಾಗಿಯೂ ಪ್ರತಿಫಲವನ್ನು ಸಿಗಬೇಕು ಎಂದು ಅವರು ಹೇಳಿದರು.

INDIAದ ಸಂಚಾಲಕ ಹುದ್ದೆಯ ಕುರಿತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪ್ರತಿಕ್ರಿಯಿಸಿದಾಗ ಅವರ ಜೊತೆಗಿದ್ದ ತೇಜಸ್ವಿ ಯಾದವ್ ಅವರು, ”ಈ ವಿಷಯದ ಬಗ್ಗೆ ನಿರ್ಧಾರವಾಗಿಲ್ಲ. ನಿರ್ಧಾರವನ್ನು ಸರ್ವಾನುಮತದಿಂದ ತೆಗೆದುಕೊಳ್ಳಲಾಗುವುದು. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇನ್ನು ಕೆಲವು ರಾಜಕೀಯ ಪಕ್ಷಗಳು INDIA ಒಕ್ಕೂಟವನ್ನು ಸೇರಲಿವೆ: ನಿತೀಶ್ ಕುಮಾರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...