Homeಕರ್ನಾಟಕ'ಬಿಜೆಪಿಯವರ ಡಿಎನ್​ಎ ಆಪರೇಶನ್ ಕಮಲ': ಸಲೀಂ ಅಹ್ಮದ್

‘ಬಿಜೆಪಿಯವರ ಡಿಎನ್​ಎ ಆಪರೇಶನ್ ಕಮಲ’: ಸಲೀಂ ಅಹ್ಮದ್

- Advertisement -
- Advertisement -

40ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಹೇಳಿಕೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರು ತಿರುಗೇಟು ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಸಲೀಂ ಅಹಮ್ಮದ್, ”ಬಿಜೆಪಿಯವರ ಡಿಎನ್​ಎ ಆಪರೇಶನ್ ಕಮಲ. ಕಾಂಗ್ರೆಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಹೇಳುವವರು ನಿದ್ದೆಯಲ್ಲಿ ಮಾತಾಡುತ್ತಿರಬಹುದು. ಅವರಿಗೆ ವಾಸ್ತವ ಸ್ಥಿತಿ ಗೊತ್ತಿಲ್ಲ” ಎಂದರು.

”ಈ ಹಿಂದೆ ನಮ್ಮ ಶಾಸಕರನ್ನು ಬಾಂಬೆಗೆ ಕರೆದುಕೊಂಡು ಹೋಗಿ ಸರ್ಕಾರ ಮಾಡಿದ್ದರು. ಮಧ್ಯಪ್ರದೇಶದಲ್ಲಿ ಆಪರೇಶನ್ ಮಾಡಿದ್ದಾರೆ. ಬಿಎಲ್ ಸಂತೋಷ್ ಅವರು ಕನಸು ಕಾಣುತ್ತಿದ್ದಾರೆ. ಸಂತೋಷ್ ನಿದ್ದೆಯಲ್ಲಿ ಮಾತಾಡುತ್ತಿರಬಹುದು. ಬಿಜೆಪಿ ಶಾಸಕರು ನಮ್ಮ ಪಕ್ಷಕ್ಕೆ ಬರುವುದು ಜಗಜ್ಜಾಹೀರಾಗಿದೆ. ಸಂತೋಷ್ ಅವರಿಗೆ ವಾಸ್ತವ ಸ್ಥಿತಿ ಗೊತ್ತಿಲ್ಲ. ಅವರ ಹೇಳಿಕೆಗೆ ನಗಬೇಕೋ ಏನೋ ಮಾಡಬೇಕೋ ಗೊತ್ತಿಲ್ಲ” ಎಂದು ಹೇಳಿದ್ದಾರೆ.

”ಕಳೆದ ಬಾರಿ ಚುನಾವಣೆಯಲ್ಲಿ ಜನ ಬಿಜೆಪಿಗೆ ಉತ್ತರ ಕೊಟ್ಟಿದ್ದಾರೆ. ಮೋದಿ ಸುಳ್ಳು ಹೇಳುತ್ತಾ ಒಂಬತ್ತು ವರ್ಷ ಕಳೆದಿದ್ದಾರೆ. ನಾವು 100 ದಿನದಲ್ಲಿ ನುಡಿದಂತೆ ನಡೆದಿದ್ದೇವೆ. ಯಾವ ಘನಕಾರ್ಯ ಮಾಡೀದ್ದೀರಿ ಅಂತಾ ಜನ ನಿಮಗೆ ಉತ್ತರ‌ ಕೊಡಬೇಕು? ನಾವು ಮುಂದಿನ‌ ದಿನಗಳಲ್ಲಿ ಬಿಜೆಪಿಯನ್ನು ಬೆತ್ತಲೆ ಮಾಡುತ್ತೇವೆ” ಎಂದರು.

”ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ರಾಜೀನಾಮೆ ಕೊಡಿಸಿದ ಕಣ್ಣೀರ ಕಥೆಗೆ ಉತ್ತರ ಕೊಡಬೇಕು. ಕಾಂಗ್ರೆಸ್ ಪಕ್ಷಕ್ಕೆ ಆಪರೇಶನ್ ಹಸ್ತದ ಅವಶ್ತಕತೆ ಇಲ್ಲ. ನಮಗೆ ಅದರ ಅನಿವಾರ್ಯತೆ ಇಲ್ಲ. ಕಾಂಗ್ರೆಸ್ ಒಪ್ಪಿ ಕೆಲವರು ಬರುತ್ತಿದ್ದಾರೆ” ಎಂದು ಸಲೀಂ ಅಹ್ಮದ್ ಹೇಳಿದ್ದಾರೆ.

ಇದನ್ನೂ ಓದಿ: ಆಪರೇಷನ್ ಕಮಲ ಆರಂಭವಾಗುತ್ತದೆ, ಬೇಕಿದ್ದರೆ ಕಾದು ನೋಡಿ: ಪ್ರಿಯಾಂಕ್ ಖರ್ಗೆಗೆ ಈಶ್ವರಪ್ಪ ತಿರುಗೇಟು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...