Homeಮುಖಪುಟಜ್ಞಾನವಾಪಿ ಮಸೀದಿ ಪ್ರಕರಣ: ತೀರ್ಪಿಗೆ ಮೊದಲು ಅಲಹಾಬಾದ್ ಹೈಕೋರ್ಟ್‌ನ ಹೊಸ ಪೀಠಕ್ಕೆ ವರ್ಗಾವಣೆ

ಜ್ಞಾನವಾಪಿ ಮಸೀದಿ ಪ್ರಕರಣ: ತೀರ್ಪಿಗೆ ಮೊದಲು ಅಲಹಾಬಾದ್ ಹೈಕೋರ್ಟ್‌ನ ಹೊಸ ಪೀಠಕ್ಕೆ ವರ್ಗಾವಣೆ

- Advertisement -
- Advertisement -

ಜ್ಞಾನವಾಪಿ ಮಸೀದಿ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ಕೊನೆಯ ಕ್ಷಣದಲ್ಲಿ ಟ್ವಿಸ್ಟ್‌ ಸಿಕ್ಕಿದ್ದು,  ಶುಕ್ರವಾರದ ವಿಚಾರಣೆ ಮುಗಿದ ನಂತರ ಪ್ರಕ್ರಿಯೆಗಳನ್ನು ಅಲಹಾಬಾದ್ ಹೈಕೋರ್ಟ್‌ನ ಹೊಸ ಪೀಠಕ್ಕೆ ವರ್ಗಾಯಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ  ತೀರ್ಪಿಗೆ ದಿನ ಕಾಯ್ದಿರಿಸಲಾಗಿದ್ದರೂ, ಯಾವುದೇ ವಿವರಣೆಯನ್ನು ನೀಡದೆ ಅಲಹಾಬಾದ್ ಹೈಕೋರ್ಟ್‌ನ ಬೇರೆ ಪೀಠಕ್ಕೆ  ಪ್ರಕರಣ ವರ್ಗಾಯಿಸಲಾಗಿದೆ.

ನ್ಯಾಯಮೂರ್ತಿ ಪ್ರಕಾಶ್ ಪಾಡಿಯಾ ಅವರ ಪೀಠವು ಈ ಹಿಂದೆ ಪ್ರಕರಣದ ತೀರ್ಪನ್ನು ಕಾಯ್ದಿರಿಸಿತ್ತು ಮತ್ತು ತೀರ್ಪು ನೀಡಲು ಇಂದು ದಿನ ನಿಗದಿಪಡಿಸಿತ್ತು.

ಜ್ಞಾನವಾಪಿ ಮಸೀದಿ ಪರ  ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯು,  ಜ್ಞಾನವಾಪಿ ಮಸೀದಿ-ಕಾಶಿ ವಿಶ್ವನಾಥ ದೇವಾಲಯದ ವಿವಾದ ಪ್ರಕರಣಗಳನ್ನು ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸಲು ಆಕ್ಷೇಪಿಸಿದೆ.

ಈ ವಿಷಯವನ್ನು ಮುಖ್ಯ ನ್ಯಾಯಮೂರ್ತಿ ಪ್ರಿಂಕರ್ ದಿವಾಕರ್ ಅವರು ಕೈಗೆತ್ತಿಕೊಂಡಾಗ, ಹಿರಿಯ ವಕೀಲ ಎಸ್‌ಎಫ್‌ಎ ನಖ್ವಿ ಅವರು ಪ್ರಕರಣಗಳ ವರ್ಗಾವಣೆಗೆ ಸಂಬಂಧಿಸಿದಂತೆ ತಮ್ಮ ಆಕ್ಷೇಪಣೆಯನ್ನು ಎತ್ತಿದರು.

ಪ್ರಕರಣದ ವರ್ಗಾವಣೆಗೆ ಮುಸ್ಲಿಂ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಕಾನೂನು ಪ್ರಕ್ರಿಯೆಗಳಿಗೆ ವಿರುದ್ಧವಾಗಿದೆ ಎಂದು ಪ್ರತಿಪಾದಿಸಿದೆ.

ಕಾಶಿ ವಿಶ್ವನಾಥ ದೇವಾಲಯದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆಯು ಆಗಸ್ಟ್ 4 ರಂದು ಪ್ರಾರಂಭವಾಯಿತು. ಅಲಹಾಬಾದ್ ಹೈಕೋರ್ಟ್ ಆದೇಶದ ನಂತರ ASIಗೆ 17ನೇ ಶತಮಾನದ ಮಸೀದಿಯನ್ನು ಸಮೀಕ್ಷೆ ನಡೆಸಲು ಅನುಮತಿ ನೀಡಲಾಗಿತ್ತು.

ಜ್ಞಾನವಾಪಿ ಮಸೀದಿಯನ್ನು ಎಎಸ್‌ಐಗೆ ಸರ್ವೆ ಮಾಡಲು ನಿರ್ದೇಶಿಸಿದ ಕೆಳ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ಈ ಹಿಂದೆ  ಹೈಕೋರ್ಟ್ ವಜಾಗೊಳಿಸಿ ಸರ್ವೆಗೆ ಅನುಮತಿ ನೀಡಿತ್ತು. ಮರುದಿನ ಹೈಕೋರ್ಟ್ ಆದೇಶವನ್ನು  ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು.

ಇದನ್ನು ಓದಿ: ವಿಶ್ವ ಅಥ್ಲೆಟಿಕ್‌ನಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ನೀರಜ್‌ ಚೋಪ್ರಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಶೀಲ್ಡ್ ಲಸಿಕೆಯ ಅಡ್ಡ ಪರಿಣಾಮಗಳ ಪರೀಕ್ಷೆ, ಸಂತ್ರಸ್ತರಿಗೆ ಪರಿಹಾರ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

0
ಔಷಧೀಯ ಕಂಪನಿ ಅಸ್ಟ್ರಾಜೆನೆಕಾ ತನ್ನ ಕೋವಿಶೀಲ್ಡ್ ಲಸಿಕೆ ಅಪರೂಪದ ಅಡ್ಡ ಪರಿಣಾಮಗಳನ್ನು ಉಂಟು ಮಾಡಬಹುದು ಎಂದು ಒಪ್ಪಿಕೊಂಡ ಹಿನ್ನೆಲೆ, ವಕೀಲರೊಬ್ಬರು ಈ ಲಸಿಕೆಯ ಅಡ್ಡ ಪರಿಣಾಮಗಳು ಮತ್ತು ಅಪಾಯದ ಅಂಶಗಳನ್ನು ಪರೀಕ್ಷಿಸಲು ವೈದ್ಯಕೀಯ...