Homeಮುಖಪುಟಪೆಟ್ರೋಲ್, ಡೀಸೆಲ್: ಕಳೆದ 25 ದಿನಗಳಲ್ಲಿ 19 ಬಾರಿ ಬೆಲೆ ಏರಿಕೆ!

ಪೆಟ್ರೋಲ್, ಡೀಸೆಲ್: ಕಳೆದ 25 ದಿನಗಳಲ್ಲಿ 19 ಬಾರಿ ಬೆಲೆ ಏರಿಕೆ!

ನಿಲ್ಲದ ಇಂಧನ ಬೆಲೆ ಏರಿಕೆ: ಮತ್ತೆ ಪೆಟ್ರೊಲ್‌, ಡೀಸೆಲ್‌ ಬೆಲೆ ತಲಾ 35 ಪೈಸೆ ಹೆಚ್ಚಳ

- Advertisement -
- Advertisement -

ದೇಶಾದ್ಯಂತ ಸತತ ಮೂರನೇ ದಿನವೂ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ತಲಾ 35 ಪೈಸೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್‌ ದರ 110.63 ಆಗಿದ್ದು, ಡೀಸೆಲ್ ದರ 101.41ರೂ ಆಗಿದೆ. ಬೆಲೆ ಏರಿಕೆಯಿಂದ ಜನರು ತತ್ತರಿಸುವಂತಾಗಿದೆ.

ಪೆಟ್ರೋಲ್ ಮೇಲೆ ಕೇಂದ್ರ ಸರ್ಕಾರವು ಪ್ರತಿ ಲೀಟರ್‌ಗೆ 32ರೂ ಮತ್ತು ರಾಜ್ಯ ಸರ್ಕಾರವು 27 ರೂ ಸುಂಕ ವಸೂಲಿ ಮಾಡುತ್ತಿದೆ. ಹಾಗೆಯೇ ಡೀಸೆಲ್ ಮೇಲೆ ಕೇಂದ್ರವು 31 ರೂ ಹಾಗೂ ರಾಜ್ಯವೂ 18 ರೂ ತೆರಿಗೆ ವಿಧಿಸುತ್ತಿದೆ.

ದೇಶದಾದ್ಯಂತ ಇಂದನ ಬೆಲೆ ಏರಿಕೆ ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿದ್ದು, ದೆಹಲಿಯಲ್ಲಿ ಪೆಟ್ರೋಲ್‌ ಬೆಲೆ ಪ್ರತಿ ಲೀಟರ್‌ಗೆ 106.89 ರೂ ಹಾಗೂ ಮುಂಬೈನಲ್ಲಿ 112.78 ರೂ ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌ ಬೆಲೆ 100ರ ಗಡಿ ದಾಟಿದ್ದು, ಡಿಸೇಲ್‌ ಬೆಲೆಯೂ ಹಲವು ರಾಜ್ಯಗಳಲ್ಲಿ 100 ರೂ ದಾಟಿದೆ.

ಸೆಪ್ಟೆಂಬರ್‌ 28ರಿಂದ ಈವರೆಗೆ ಒಟ್ಟು 19 ಬಾರಿ ಪೆಟ್ರೋಲ್‌ ಬೆಲೆ ಏರಿಕೆ ಮಾಡಿದ್ದು ಪ್ರತಿ ಲೀಟರ್‌ಗೆ ಸುಮಾರು 5.7 ರೂ ಹೆಚ್ಚಿಸಲಾಗಿದೆ. ಡೀಸೆಲ್‌ ಬೆಲೆಯು ಸೆಪ್ಟೆಂಬರ್‌ 24ರಿಂದ ಇಂದಿನವರೆಗೆ ಸುಮಾರು 22 ಬಾರಿ ಹೆಚ್ಚಳವಾಗಿದ್ದು, ಪ್ರತಿ ಲೀಟರ್‌ಗೆ 7ರೂ ಹೆಚ್ಚಳವಾಗಿದೆ.

ತರಕಾರಿ ಸೇರಿದಂತೆ ದಿನನಿತ್ಯದ ಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ನಲುಗುತ್ತಿರುವ ಜನಸಾಮಾನ್ಯರಿಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಇಂಧನ ಬೆಲೆ ಏರಿಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಜನಸಾಮಾನ್ಯರ ಬದುಕನ್ನು ಹಸನುಗೊಳಿಸಲು ಸಹಕಾರಿಯಾಗಬೇಕಿದ್ದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸುಂಕ ವಸೂಲಾತಿಯಲ್ಲಿ ಮುಳುಗಿರುವುದು ಬೇಸರದ ಸಂಗತಿ.


ಇದನ್ನೂ ಓದಿ: ಪೆಟ್ರೋಲ್ ದರ ಹೆಚ್ಚಳಕ್ಕೆ ಆಯಿಲ್ ಬಾಂಡ್ ಕಾರಣ? – BJP ನಾಯಕರ ಹೇಳಿಕೆಯ ನಿಜಾಂಶವೇನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಪೆಟ್ರೋಲ್ ಬೆಲೆ ಇಳಿಕೆ ಆಗಬೇಕೆಂದು ತಮ್ಮಲ್ಲಿ ವಿನಂತಿ ಕಲ್ಲೂರ್ ಬಾಯ್ಸ್

LEAVE A REPLY

Please enter your comment!
Please enter your name here

- Advertisment -

Must Read

ಅಮಿತ್‌ ಶಾ ಸ್ಪರ್ಧಿಸುವ ಗಾಂಧಿನಗರದಲ್ಲಿ ಸ್ಪರ್ಧಿಸದಂತೆ ಅಭ್ಯರ್ಥಿಗಳಿಗೆ ಬಿಜೆಪಿ ನಾಯಕರು ಮತ್ತು ಪೊಲೀಸರಿಂದ ಬೆದರಿಕೆ?

0
ಗುಜರಾತ್‌ನ ಸೂರತ್ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಈಗಾಗಲೇ ಅವಿರೋಧವಾಗಿ ಗೆದ್ದುಕೊಂಡಿದೆ. ಇದರ ಬೆನ್ನಲ್ಲಿ ಅಮಿತ್ ಶಾ ಪ್ರತಿನಿಧಿಸುವ ಗಾಂಧಿನಗರ ಕ್ಷೇತ್ರದಲ್ಲಿ ಅಭ್ಯರ್ಥಿಗಳಿಗೆ ತಮ್ಮ ನಾಮಪತ್ರವನ್ನು ಹಿಂತೆಗೆದುಕೊಳ್ಳುವಂತೆ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ. ಗುಜರಾತ್‌ನ...