Homeಚಳವಳಿತೆಲಂಗಾಣ: ಯುವತಿಗೆ ಕಿರುಕುಳ ಕೊಡುತ್ತಿದ್ದ ಯುವಕನನ್ನು ಹೊಡೆದು ಕೊಂದ ಯುವತಿ ಕುಟುಂಬಸ್ಥರು

ತೆಲಂಗಾಣ: ಯುವತಿಗೆ ಕಿರುಕುಳ ಕೊಡುತ್ತಿದ್ದ ಯುವಕನನ್ನು ಹೊಡೆದು ಕೊಂದ ಯುವತಿ ಕುಟುಂಬಸ್ಥರು

- Advertisement -
- Advertisement -

ಪ್ರೀತಿಯ ಹೆಸರಿನಲ್ಲಿ ಯುವತಿಗೆ ಕಿರುಕುಳ ನೀಡಿದ ಆರೋಪದಲ್ಲಿ ಯುವಕನೊಬ್ಬನನ್ನು ಯುವತಿಯ ಕುಟುಂಬಸ್ಥರು ಹೊಡೆದು ಕೊಲೆ ಮಾಡಿರುವ ಘಟನೆ ತೆಲಂಗಾಣದ ನಿರ್ಮಲ್ ಜಿಲ್ಲೆಯ ಖಾನಾಪುರ ಮಂಡಲದ ಸುರ್ಜಾಪುರ ಗ್ರಾಮದಲ್ಲಿ ನಡೆದಿದೆ.

ಯುವತಿಯ ಕುಟುಂಬಸ್ಥರ ಅಮಾನುಷ ಹಲ್ಲೆಯಿಂದ ಮೃತಪಟ್ಟ ಯುವಕನನ್ನು ಆರ್.ಅನಿಲ್ ಎಂದು ಗುರುತಿಸಲಾಗಿದೆ. ಆತ ಹಿಂದುಳಿದ ವರ್ಗದ ಸಮುದಾಯದೊಳಗಿನ ಇನ್ನೊಂದು ಉಪ-ಜಾತಿಗೆ ಸೇರಿದವರಾಗಿದ್ದಾರೆ.

ಮೂಲಗಳ ಪ್ರಕಾರ, ಗೊಲ್ಲ ಸಮುದಾಯಕ್ಕೆ ಸೇರಿದ ಅನಿಲ್, ಕಳೆದ ಒಂದು ತಿಂಗಳಿನಿಂದ ಪ್ರೀತಿಯ ಹೆಸರಿನಲ್ಲಿ ಕಾಪು ಸಮುದಾಯಕ್ಕೆ ಸೇರಿದ ಯುವತಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದು ಮರ್ಯಾದಾಗೇಡು ಹತ್ಯಾ ಪ್ರಕರಣವಾಗಿರಬಹುದು ಎಂಬ ಅನುಮಾನಗಳು ವ್ಯಕ್ತವಾಗಿವೆ.

ಇದನ್ನೂ ಓದಿ: ಬೆಳಗಾವಿ: ಪಾರ್ಕ್‌ಗೆ ಹೊರಟಿದ್ದ ಯುವಕ-ಯುವತಿಗೆ ಥಳಿಸಿ ಮತೀಯ ಗೂಂಡಾಗಿರಿ

ಕಿರುಕುಳ ನೀಡುತ್ತಿದ್ದ ಬಗ್ಗೆ ಯುವತಿಯ ಕುಟುಂಬ ಸದಸ್ಯರು ಖಾನಾಪುರ ಪೊಲೀಸರಿಗೆ ದೂರು ನೀಡಿದ್ದರೂ, ಯುವಕ ತಮ್ಮ ಮಗಳಿಗೆ ತೊಂದರೆ ನೀಡುತ್ತಲೇ ಇದ್ದ ಎಂದು ಯುವತಿಯ ಕುಟುಂಬಸ್ಥರು ಆರೋಪಿಸಿದ್ದಾರೆ. ಕಳೆದ ಬುಧವಾರ ತಡರಾತ್ರಿ, ಯುವತಿಯ ಕುಟುಂಬದ ಸದಸ್ಯರು ಅನಿಲ್ ಅವರನ್ನು ತಮ್ಮ ಮನೆಯ ಬಳಿ ಗಮನಿಸಿದ್ದಾರೆ. ಆತನನ್ನು ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಘಟನೆಯಲ್ಲಿ ಯುವಕ ಗಂಭೀರವಾಗಿ ಗಾಯಗೊಂಡಿದ್ದಾರೆ.

ಯುವತಿ ಕುಟುಂಬದವರು ಹಲ್ಲೆ ಮಾಡುತ್ತಿರುವ ವಿಷಯ ತಿಳಿದ ಅನಿಲ್ ಸಂಬಂಧಿಕರು ಸ್ಥಳಕ್ಕೆ ಧಾವಿಸಿ ಆತನನ್ನು ಖಾನಾಪುರ ಪಿಎಚ್‌ಸಿಗೆ ಕರೆದೊಯ್ದಿದ್ದಾರೆ. ಆತನ ಪರಿಸ್ಥಿತಿ ತೀವ್ರ ಹದಗೆಟ್ಟಿದ್ದರಿಂದ, ಅನಿಲ್ ಅವರನ್ನು ನಿರ್ಮಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಸಾವನ್ನಪ್ಪಿದ್ದಾರೆ.

ಅನಿಲ್ ಬೇರೆ ಉಪಜಾತಿಗೆ ಸೇರಿದವನಾಗಿದ್ದರಿಂದ ಆತನನ್ನು ಕೊಲ್ಲಲಾಗಿದೆ ಎಂದು ಆರೋಪಿಸಿ, ಪೊಲೀಸ್ ಠಾಣೆ ಮುಂದೆ ಆತನ ಕುಟುಂಬದ ಸದಸ್ಯರು ಮೃತದೇಹವನ್ನು ಇಟ್ಟು ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನೆ ಹಿನ್ನೆಲೆ ಡಿಎಸ್‌ಪಿ ಉಪೇಂದರ್ ರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ, ಯುವಕನ ಕುಟುಂಬದ ಸದಸ್ಯರೊಂದಿಗೆ ಚರ್ಚೆ ನಡೆಸಿದ್ದಾರೆ. ಅವರಿಗೆ ನ್ಯಾಯದ ಭರವಸೆ ನೀಡಿದ್ದಾರೆ. ಅನಿಲ್ ತಾಯಿ ಆರ್.ಲಕ್ಷ್ಮಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಇದನ್ನೂ ಓದಿ: ನೈತಿಕತೆ ಮತ್ತು ಪೊಲೀಸ್‌ಗಿರಿ ಕೂಡಿಕೊಂಡರೆ ಅದು ಅನೈತಿಕ ಮನಸ್ಥಿತಿಗಳ ವಿಕೃತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹೆಡ್ಗೆವಾರ್‌ ಸಂಘಪರಿವಾರದವರಿಗೆ ಮಾತ್ರ ಆದರ್ಶ, ರಾಜ್ಯದ ಜನತೆ ಅಲ್ಲ: ಎಸ್‌ಎಫ್‌ಐ ಕಿಡಿ | Naanu Gauri

ಹೆಡ್ಗೆವಾರ್‌ ಸಂಘಪರಿವಾರದವರಿಗೆ ಮಾತ್ರ ಆದರ್ಶ, ರಾಜ್ಯದ ಜನತೆ ಅಲ್ಲ: ಭಗತ್‌ ಸಿಂಗ್‌ ಪಾಠ ಕೈ...

0
ರಾಜ್ಯದ ಪಠ್ಯ ಪುಸ್ತಕದಲ್ಲಿ ಸ್ವಾತಂತ್ಯ ಹೋರಾಟಗಾರ ಭಗತ್‌ ಸಿಂಗ್ ಪಾಠ ಸೇರಿ ಅನೇಕ ಪ್ರಗತಿಪರ ಚಿಂತನೆಯ ಪೂರಕ ಪಾಠಗಳನ್ನು ಕೈ ಬಿಟ್ಟು ಸಂಘಪರಿವಾರದ ಸಂಸ್ಥಾಪಕ ಹೆಡಗೇವಾರ್ ಭಾಷಣ ಸೇರ್ಪಡೆ ಹಾಗೂ ಶಿಕ್ಷಣದ ಕೇಸರೀಕರಣ...