Homeಕರ್ನಾಟಕನೈತಿಕತೆ ಮತ್ತು ಪೊಲೀಸ್‌ಗಿರಿ ಕೂಡಿಕೊಂಡರೆ ಅದು ಅನೈತಿಕ ಮನಸ್ಥಿತಿಗಳ ವಿಕೃತಿ

ನೈತಿಕತೆ ಮತ್ತು ಪೊಲೀಸ್‌ಗಿರಿ ಕೂಡಿಕೊಂಡರೆ ಅದು ಅನೈತಿಕ ಮನಸ್ಥಿತಿಗಳ ವಿಕೃತಿ

- Advertisement -
- Advertisement -

ತಪ್ಪು ಜ್ಞಾನದಿಂದ ಎಚ್ಚರಿಕೆಯಿಂದಿರಿ; ಏಕೆಂದರೆ ಅದು ಅಜ್ಞಾನಕ್ಕಿಂತ ಅಪಾಯಕಾರಿ ಆದದ್ದು.
– ಜಾರ್ಜ್ ಬರ್ನಾಡ್ ಶಾ

ಈ ಅನೈತಿಕ ಪೊಲೀಸ್‌ಗಿರಿಯಲ್ಲಿ ತೊಡಗಿಸಿಕೊಂಡವರಿಗೆ ಸೂಕ್ತವಾಗಿ ಅನ್ವಯವಾಗುವ ಹೇಳಿಕೆ ಇದು. ಆದರೆ ಅವರ ಪ್ರತಿಯೊಂದು ಕಾರ್ಯದಲ್ಲೂ ಇಂತಹ ಜ್ಞಾನ ಅಥವಾ ಗ್ರಹಿಕೆ ಮಾತ್ರ ಇದೆ ಎಂದು ಹೇಳಲು ಆಗುವುದಿಲ್ಲ. ಸಂಪೂರ್ಣವಾಗಿ ಬ್ರೇನ್‌ವಾಷ್ ಆಗಿ ಯಾವುದೋ ಮೂರ್ಖತನದಲ್ಲಿ ಅನೈತಿಕ
ಪೋಲಿಸ್‌ಗಿರಿ ಮಾಡುವವರು ಒಂದು ಕೆಟಗೆರಿ ಆದರೆ, ಒಂದು ನಿರ್ದಿಷ್ಟ ರಾಜಕೀಯ ಅಥವಾ
ಧಾರ್ಮಿಕ ಗುರಿಸಾಧನೆಯ ಭಾಗವಾಗಿ ಮಾಡುವವರದು ಇನ್ನೊಂದು ಕೆಟಗರಿ. ಇದು ಬಹಳ ಅಪಾಯಕಾರಿ ಮತ್ತು ಕಳವಳಕಾರಿ ಸಂಗತಿಯಾಗಿದೆ. ತನ್ನ ಗುರಿ ಸಾಧನೆಗಾಗಿ ಇದು ಸಮಾಜದ ಸ್ವಾಸ್ಥ್ಯವನ್ನು ಎಷ್ಟು ಬೇಕಾದರೂ ಕೆಡಿಸಲು ತಯಾರಾಗಬಲ್ಲದು. ಇವುಗಳ ಜೊತೆಗೆ ಇನ್ನೊಂದಿದೆ, ಅದು ತಕ್ಷಣದ ಖ್ಯಾತಿ ಅಥವಾ
ಸುದ್ದಿಗಾಗಿ ಮಾಡುವುದು. ಇದಕ್ಕೆ ನಂತರ ಬರೋಣ.

ನೈತಿಕತೆ (Morality) ಅಂದರೆ, ಪ್ರಖ್ಯಾತ ಶಬ್ದಕೋಶಗಳ ಪ್ರಕಾರ “ಸಮಾಜದಲ್ಲಿ ಸಾಮಾನ್ಯವಾಗಿ ಸರಿ ಮತ್ತು ತಪ್ಪು ಎಂದು ನಂಬಿರುವ ನಡವಳಿಕೆಗಳ ನಡುವಿನ ವ್ಯತ್ಯಾಸಗಳನ್ನು ಎತ್ತಿ ತೋರಿಸುವ ತತ್ವಗಳು”

ಎಂ ಎಫ್ ಹುಸೇನ್‌

ಸಮಾಜ ಶಾಸ್ತ್ರೀಯ ವಿವರಣೆಯ ಪ್ರಕಾರ ಕಾಲಕಾಲಕ್ಕೆ ಒಂದು ನಿರ್ದಿಷ್ಟ ಪ್ರದೇಶದ ಜನ ತಮ್ಮ ಅಸ್ತಿತ್ವದ ಹೋರಾಟದಲ್ಲಿ, ಒಪ್ಪಿಕೊಂಡು ಅನುಸರಿಸುತ್ತ ಬಂದಂತಹ ನಡವಳಿಕೆಗಳು. ಈ ಪ್ರಕೃತಿಯಲ್ಲಿ ಯುದ್ಧಗಳೂ ಆಗಿರುತ್ತವೆ, ತೆರೆದ ಬಾಹುಗಳಿಂದ ಸ್ವಾಗತವೂ ಆಗಿರುತ್ತದೆ. ಭಾರತದ ಮಟ್ಟಿಗೆ ಹೇಳುವುದಾದರೆ ಇಲ್ಲಿ ಆಕ್ರಮಣಕಾರಿಗಳಾಗಿ ವ್ಯಾಪಾರಕ್ಕಾಗಿ ಅಥವಾ ವಿಹಾರಕ್ಕಾಗಿ ಬಂದವರಿಂದ ಕೂಡ ಈ ನೈತಿಕತೆ ತನ್ನ ವಿಶಿಷ್ಟ ಸಾಮಾಜಿಕ ಸಂರಚನೆಯನ್ನು ಪಡೆದುಕೊಂಡಿದೆ. ಕ್ರಮೇಣ ಎಲ್ಲ ಬಗೆಯ ಜನ ಹೊಂದಿಕೊಂಡು ಹೋಗುವ ಪ್ರಕ್ರಿಯೆಯಲ್ಲಿ ಕೆಲವು ಲಿಖಿತ ಅಥವಾ ಅಲಿಖಿತ ಕಾನೂನುಗಳು ಕಾಯ್ದೆಗಳು ಜಾರಿಗೆ ಬಂದು ಕ್ರಮೇಣ ಸಮಾಜದ ನಿಯಮಗಳೆಂದು ಸಾರ್ವತ್ರಿಕವಾಗಿ ಒಪ್ಪಿಗೆ ಆಗುತ್ತವೆ. ಇದನ್ನು ನಿರ್ಧರಿಸುವವರು ಯಾರು ಎಂದರೆ ಪ್ರಜಾಪ್ರಭುತ್ವದಲ್ಲಿ ಸಂವಿಧಾನ ಕಾನೂನುಗಳು ಎಂದು ಹೇಳಬಹುದು. ಹಾಗಾದರೆ ಜನರ ಪಾತ್ರ ಏನು ಎಂದರೆ ಈ ಸಂವಿಧಾನ ಮತ್ತು ಕಾನೂನಿಗೆ ವಿಧೇಯರಾಗಿ ನಡೆದುಕೊಳ್ಳುವುದು. ಅಕಸ್ಮಾತ್ ಯಾರಾದರೂ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡರೆ ಜನ ಏನು ಮಾಡಬೇಕು? “ಕಾನೂನು ಪಾಲಕರ ಗಮನಕ್ಕೆ ತರಬೇಕು”.

ಇನ್ನು ’ಪೋಲಿಸ್‌ಗಿರಿ’ ಎಂದರೆ ಪೋಲಿಸರಿಂದ ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು. ಈ ಎರಡೂ ಅಂಶಗಳ ವಿವರಣೆ ಇಷ್ಟು ಸ್ಪಷ್ಟವಾಗಿದ್ದಗೂ “ಅನೈತಿಕ ಪೊಲೀಸ್‌ಗಿರಿ” ಹೆಚ್ಚಲು ಕಾರಣ ಕೆಲವು ಮನುಷ್ಯರ ಮಾನಸಿಕ ವಿಕೃತಿ.

ಅನೈತಿಕ ಪೊಲೀಸ್‌ಗಿರಿ ಎಂದ ತಕ್ಷಣ ಕಲ್ಪನೆಗೆ ಬರುವುದು ಎರಡು ಬೇರೆಬೇರೆ ಧರ್ಮ ಅಥವಾ ಜಾತಿಗೆ ಸೇರಿದ ಗಂಡು ಹೆಣ್ಣುಗಳನ್ನು ಅವರು ಮದುವೆ ಆದರು ಎಂಬ ಕಾರಣಕ್ಕೆ, ಪ್ರೀತಿಸಿ ಓಡಿ ಹೋದರು ಎಂಬ ಕಾರಣಕ್ಕೆ ಅಥವಾ ಮೊನ್ನೆ ಬೆಂಗಳೂರು ಮತ್ತು ಶಿವಮೊಗ್ಗದಲ್ಲಿ ಆದಂತೆ ಕೇವಲ ಗಾಡಿಯಲ್ಲಿ ಡ್ರಾಪ್ ತೆಗೆದುಕೊಂಡರು ಎಂಬ ಕಾರಣಕ್ಕೆ ಹಿಡಿದು ಹೊಡೆದು ಕೊಂದ ಅಥವಾ ಅಪಮಾನಗೊಳಿಸಿದ ಘಟನೆಗಳು. ಈ ನೈತಿಕ ಪೊಲೀಸ್‌ಗಿರಿಯ ಅತ್ಯಂತ ಕ್ರೂರ ಮತ್ತು ವಿಕೃತ ಮುಖ ಎಂದರೆ ಮರ್ಯಾದೆಗೇಡು ಹತ್ಯೆಗಳು. ಇತ್ತೀಚಿನವರೆಗೂ ಉತ್ತರ ಭಾರತದ ಹಳ್ಳಿಗಳಲ್ಲಿ ಫ್ಯೂಡಲ್ ಮನಸ್ಥತಿಗಳು ತಾಂಡವವಾಡುವ ಜಾಗಗಳಲ್ಲಿ ’ಖಾಪ್’ ಪಂಚಾಯಿತಿಗಳ ತೀರ್ಮಾನಗಳಿಂದ ನಡೆಯುತ್ತಿದ್ದ ಕ್ರೌರ್ಯಗಳು ಈಗ ಇಡೀ ದೇಶವನ್ನು ವ್ಯಾಪಿಸುತ್ತಿವೆ. ಇಡೀ ದೇಶಕ್ಕೆ ಅತ್ಯಂತ ಸಭ್ಯಸ್ಥರ ನಾಡು, ಆಧುನಿಕ ಭಾರತದ ಮುಖ, ಅಕ್ಷರಸ್ಥಿರ ರಾಜ್ಯ ಎಂದೆಲ್ಲ ಹೆಮ್ಮೆಯಿಂದ ಕೊಚ್ಚಿಕೊಳ್ಳುತ್ತಿದ್ದ ನಮ್ಮ ಕರ್ನಾಟಕದಲ್ಲಿಯೂ ಇವು ಹೆಚ್ಚಾಗುತ್ತಿವೆ ಎಂದರೆ ಸಮಸ್ಯೆ ಸಣ್ಣದಾಗಿ ಉಳಿದಿಲ್ಲ ಬದಲಿಗೆ ಒಂದು ಮನೋರೋಗವಾಗಿ ವ್ಯಾಪಿಸಿದೆ ಎಂದರ್ಥ.

2012ರ ಮಂಗಳೂರು ಘಟನೆ ಒಂದು ಕೆಟ್ಟ ಅಧ್ಯಾಯಕ್ಕೆ ಮುನ್ನುಡಿ ಬರೆದಂತೆ ಇತ್ತು. ಅಂದಿನ ದಿನ ಸಮಾಜದ ಕೆಲವೊಂದು ಜವಾಬ್ದಾರಿಯುತ ಸ್ಥಾನದಲ್ಲಿದ್ದವರು ಇದನ್ನು ಕಠಿಣವಾಗಿ ವಿರೋಧಿಸಿದ್ದರೆ ಚಿತ್ರಣ ಬೇರೆಯಾಗುವ ಸಾಧ್ಯತೆ ಇತ್ತು. ಅಲ್ಲಿಂದೀಚೆಗೆ ನೂರಾರು ಘಟನೆಗಳು, ದೇಶಾದ್ಯಂತ ಸಾವಿರಾರು ಘಟನೆಗಳು ಮರುಕಳಿಸುತ್ತಲೇ ಹೋದವು. ಈ ಅನೈತಿಕ ಪೋಲಿಸ್‌ಗಿರಿಗೆ ಇನ್ನು ಅನೇಕ ಮುಖಗಳಿವೆ. ಕೇವಲ ಗಂಡು ಹೆಣ್ಣಷ್ಟೇ ಇವರ ಟಾರ್ಗೆಟ್ ಅಲ್ಲ. ತಮ್ಮ ಪುರೋಗಾಮಿ ಮನಸ್ಥಿತಿಯ ಅಜ್ಞಾನಕ್ಕೆ ಜಗ್ಗದ ಎಲ್ಲವೂ ಇವರಿಗೆ ಒಂದು ಸಮಸ್ಯೆಯೇ. ಎಂ ಎಫ್ ಹುಸೇನ್‌ರ ಕಲಾಕೃತಿಗಳನ್ನು ಧಾರ್ಮಿಕ ಭಾವನೆಗೆ ಧಕ್ಕೆ ತಂದರೆಂದು ಹರಿದು ಹಾಕಿದ, ಜೈಪುರದಲ್ಲಿ ನಡೆಯುತ್ತಿದ್ದ ಕಲಾಕೃತಿ ಪ್ರದರ್ಶನದಲ್ಲಿ ನಗ್ನ ಕಲಾಕೃತಿಗಳಿವೆ ಎಂದು ಅವುಗಳನ್ನು ಹರಿದು ಹಾಕಿದ ಮನುಷ್ಯರಿಗೆ “ಕಲೆ” ಎಂಬ ಅಭಿವ್ಯಕ್ತಿ ಮಾಧ್ಯಮದಲ್ಲಿ ಕೇವಲ ನಗ್ನತೆ ಮಾತ್ರ ಕಂಡಿದ್ದಕ್ಕೆ ಏನೆನ್ನಬೇಕು?

ಜೈಪುರದ ಕಲಾಕೃತಿಗಳನ್ನು ಹರಿದು ಹಾಕಿದ ಜನರ ಮುಂಚೂಣಿ ವಹಿಸಿದ್ದು ಹೇಮಲತಾ ಎಂಬ ಹೆಂಗಸು. ಆಕೆ ಹೇಳಿದ್ದು ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತಾನು ಚಲಾಯಿಸಿ ಹರಿದಿದ್ದೇನೆ ಎಂದು. ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದಕ್ಕೆ ಈ ರೀತಿಯಲ್ಲಿ ಜನ ವಿವರಿಸ ಹೊರಟಾಗ ಅದರ ರಕ್ಷಣೆ ಮಾಡಬೇಕಾದ ಪೋಲಿಸರು, ಅದಕ್ಕೆ ಬದಲಾಗಿ ಇಂತಹ ವಿಕೃತಿಯನ್ನು ಪೋಷಿಸುವ ಮೂಕಪ್ರೇಕ್ಷಕರಾದಾಗ ಇದನ್ನೇ ಅನೈತಿಕ ಪೊಲೀಸ್‌ಗಿರಿ ಎನ್ನುವುದು. ಇಂಥ ಜನ ಲೈಂಗಿಕ ಅಲ್ಪಸಂಖ್ಯಾತರು, ಸಲಿಂಗಿಗಳು ಮುಂತಾದ LGBTQ ಸಮುದಾಯದವರನ್ನು ಮನುಷ್ಯರಂತೆಯೇ ಕಾಣುವುದಿಲ್ಲ. ಅವರ ಪ್ರತಿಯೊಂದು ನಡವಳಿಕೆಯೂ ಇವರಿಗೆ ಅನೈತಿಕ ಎನಿಸುತ್ತದೆ. ಇವರ ಸೀಮಿತ ನೈತಿಕತೆಯ ಪರಿಭಾಷೆಯಲ್ಲಿ, ತೀವ್ರ ಪ್ರತಿಗಾಮಿ ರಾಜಕೀಯ ಪಕ್ಷಗಳ ನೂರಾರು ಅಂಗಸಂಸ್ಥೆಗಳ ಮೂಲಕ ತಮ್ಮ ಮನದಾಳದ ವಿಷಯವನ್ನು ವಿವಿಧ ರೂಪದಲ್ಲಿ ಹೊರಗೆ ಹಾಕುತ್ತಲೇ ಇರುತ್ತಾರೆ.

Right to Expression ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯ ಒಂದು ಧನಾತ್ಮಕ ವಿವರಣೆಯಾಗಿದೆ. ಪ್ರತಿಯೊಬ್ಬ ಪ್ರಜೆಯ ಈ ಸ್ವಾತಂತ್ರ್ಯವನ್ನು ರಕ್ಷಿಸುವುದೂ ದೇಶದ ಕಾನೂನಿನ ಕೆಲಸವಾಗಿದೆ. ಅಕಸ್ಮಾತ್ ಯಾರಾದರೂ ಸಮಾಜದ ನಿರ್ದಿಷ್ಟ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡರೆ ಕಾನೂನಿನ ಮೂಲಕ ಸಮಾಧಾನಕ್ಕೆ ಪ್ರಯತ್ನಿಸಬೇಕೆ ಹೊರತು ಕಾನೂನನ್ನು ಕೈಗೆ ತೆಗೆದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ಯಾವಾಗ ಪೊಲೀಸರು ಅಥವಾ ಸರ್ಕಾರ ನಿಷ್ಕ್ರಿಯರಾಗುತ್ತಾರೋ ಆಗ ಇಂಥ ಜನರಿಗೆ, ಸಂಘಟನೆಗಳಿಗೆ ಬಲ ಬರುತ್ತದೆ. ಕೆಲವೊಮ್ಮೆ ಈ ಅನೈತಿಕ ಪೊಲೀಸ್‌ಗಿರಿ ಕೇವಲ ತಕ್ಷಣದ ಖ್ಯಾತಿ ಹೊಂದುವ ಉದ್ದೇಶದಿಂದ ಅಥವಾ ಸುದ್ದಿ ಚಾನೆಲ್‌ಗಳಲ್ಲಿ ಕಾಣಿಸಿಕೊಳ್ಳುವಂತಹ ಕಾರಣಗಳಿಗೂ ಆಗುತ್ತವೆ. ’ಪದ್ಮಾವತ್’ ಸಿನಿಮಾ ಬಿಡುಗಡೆಯಾದಾಗ ಕರಣಿ ಸೇನಾ ಎನ್ನುವ ಒಂದು ಗುಂಪು ದೀಪಿಕಾ ಪಡುಕೋಣೆ ಮೂಗು ಕತ್ತರಿಸಿದವರಿಗೆ ಬಹುಮಾನ ಕೊಡುವುದಾಗಿ ಘೋಷಿಸಿತ್ತು. ರಜಪೂತರ ಮಾನ ನಷ್ಟವಾಗಿದೆ ಎಂದು ಹಾರಾಡಿತ್ತು. ಆದರೆ
ವಿಚಿತ್ರವೆಂದರೆ ಪ್ರತಿಭಟನೆಯಲ್ಲಿ ಭಾಗವಹಿಸಿದವರ್‍ಯಾರು ಚಲನಚಿತ್ರವನ್ನು ಇನ್ನೂ ನೋಡಿಯೇ ಇರಲಿಲ್ಲ. ಬೆಂಗಳೂರಲ್ಲಿ ವಕೀಲೆಯೊಬ್ಬಳು ಲೇಖಕ ಭಗವಾನ್ ಅವರಿಗೆ ಮಸಿ ಬಳಿದಳು. ಇಂಥ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ.

ಹಾಗಾದರೆ ಇಂತಹ ಘಟನೆಗಳನ್ನು ತಡೆಯುವುದು ಸಾಧ್ಯವಿಲ್ಲವೆ ಎಂಬ ಪ್ರಶ್ನೆಗಳು ಸಹಜವಾಗಿ ಜನಸಾಮಾನ್ಯರಿಗೆ ಕಾಡುತ್ತವೆ. ಖಂಡಿತವಾಗಿಯೂ ಸಾಧ್ಯವಿದೆ. ಗೂಂಡಾ ಕಾಯ್ದೆಗಳ ಅನ್ವಯ, IPC ಮತ್ತು CRPCಗಳ ಅನ್ವಯವೇ ಇವನ್ನು ಮಟ್ಟ ಹಾಕಬಹುದು. ಆದರೆ ಅದಕ್ಕೆ ಪೊಲೀಸ್ ಹಾಗೂ ಸರ್ಕಾರದ ಇಚ್ಛಾಶಕ್ತಿ ಬೇಕು.

ಕೇವಲ ಫ್ರಿಜ್‌ನಲ್ಲಿ ದನದ ಮಾಂಸವಿದೆ ಎಂಬ ಕಾರಣಕ್ಕೆ ಜನ ಒಬ್ಬ ವ್ಯಕ್ತಿಯ ಜೀವ ತೆಗೆಯುತ್ತಾರೆ ಎಂದಾದಾಗ, ಟ್ರೇನಿನಲ್ಲಿ ಹೋಗುವಾಗ ಒಬ್ಬ ಯುವಕನ ಪ್ರಾಣ ತೆಗೆಯುವಾಗ, ದನದ ಕಳ್ಳಸಾಗಣೆ ಮಾಡುತ್ತಿದ್ದ ಎಂದು ವ್ಯಕ್ತಿಯೊಬ್ಬನನ್ನು ಬೆಂಕಿ ಹಚ್ಚಿ ಅದನ್ನು ವಿಡಿಯೋ ಮಾಡಿ ಸಾಧನೆಯಂತೆ ಹಂಚಿಕೊಂಡಾಗ ಪ್ರತಿಯೊಂದು ಹಂತದಲ್ಲೂ ಮನುಷ್ಯ ಹಂತ ಹಂತವಾಗಿ ಮನುಷ್ಯತ್ವವನ್ನು ಕಳೆದುಕೊಂಡು ಮೃಗವಾಗುತ್ತಿರುವಂತೆ ಭಾಸವಾಗುತ್ತದೆ. ಈ ಎಲ್ಲ ಕೃತ್ಯಗಳು ಘೋರ ಅಪರಾಧಿತ ಕೃತ್ಯಗಳು ಆದರೆ ಇವುಗಳ ಮೂಲ ಸರಳವಾಗಿ ಕಾಣುವ ಅನೈತಿಕ ಪೊಲೀಸ್‌ಗಿರಿಯ ಆಳದಲ್ಲಿ ಅಡಗಿದೆ.

ಒಂದು ರಾಜ್ಯದ ಆರೋಗ್ಯಮಂತ್ರಿ (ಡಾ. ಸುಧಾಕರ್) ’ಮಾರ್ಡನ್ ವುಮೆನ್ ಮಕ್ಕಳನ್ನು ಹೆರಲು ಬಯಸುವುದಿಲ್ಲ’ ಎಂಬಂತಹ ಹೇಳಿಕೆ ಕೊಟ್ಟಾಗ ಇಂಥ ಜನ ಇಷ್ಟೊಂದು ಓದಿ ಸಮಾಜದ ಬದಲಾವಣೆಯ ಹಿಂದಿನ ಕಾರಣಗಳನ್ನು ಅರಿತುಕೊಳ್ಳಲಾರದಷ್ಟು ಅಪ್ರಬುದ್ಧರಾಗಿದ್ದಾರಲ್ಲಾ ಎಂದು ಮರುಕ ಉಂಟಾಗುತ್ತದೆ.

ಕೇಂದ್ರ ಮಂತ್ರಿ ಅನುರಾಗ್ ಠಾಕೂರ್ ’ಗೋಲಿಮಾರೋ ಸಾಲೋಂಕೊ’ ಎಂದಾಗ, ಬಸನಗೌಡ ಯತ್ನಾಳ ದೊರೆಸ್ವಾಮಿಯವರಂಥ ವ್ಯಕ್ತಿತ್ವದ ಕುರಿತು ತುಚ್ಛವಾಗಿ ಮಾತಾಡುವುದು ನೋಡಿದಾಗ ಈ ಸಮಯದ, ಈ ಸಾಮಾಜಿಕ ಅಧೋಗತಿಯ ಬಗ್ಗೆ ತೀವ್ರ ಆತಂಕ ಉಂಟಾಗುತ್ತದೆ. ಪ್ರಧಾನಮಂತ್ರಿಯಾಗಿದ್ದು ಮಹಿಳೆಯೊಬ್ಬರನ್ನು ಕುರಿತು ಬೀದಿ ಬದಿ ರೋಮಿಯೋಗಳ ತರಹ “ದೀದೀ ಓ ದೀದೀ” ಅಂದದ್ದನ್ನು ಚಿಕ್ಕ ಮಕ್ಕಳು ಅನುಕರಿಸಿದ್ದನ್ನು ಅವರ ಪೋಷಕರು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಾಗ, ನಮ್ಮ ಮುಂದಿನ ಪೀಳಿಗೆಗೆ ಅದೆಂಥ ಕೆಟ್ಟ ವಾತಾವರಣ ಸೃಷ್ಟಿಸುತ್ತಿದ್ದೇವೆ ಎಂದು ಭಯವಾಗುತ್ತದೆ.

ಅನೈತಿಕ ಪೊಲೀಸ್‌ಗಿರಿ ಕೇವಲ ಸಂವಿಧಾನದ ಉಲ್ಲಂಘನೆ ಮಾತ್ರ ಅಲ್ಲ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಮಹಿಳೆಯರ ಘನತೆಯ ಉಲ್ಲಂಘನೆ ಕೂಡ. ಬೇಗ ಎಚ್ಚೆತ್ತುಕೊಂಡಷ್ಟೂ ಸಮಾಜದ ಸ್ವಾಸ್ಥ್ಯಕ್ಕೆ ಒಳ್ಳೆಯದು.

ರಾಜಲಕ್ಷ್ಮಿ ಅಂಕಲಗಿ

ರಾಜಲಕ್ಷ್ಮಿ ಅಂಕಲಗಿ
ಹೈಕೋರ್ಟ್ ವಕೀಲರು, ಹಲವು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಕಾನೂನು ವಿಷಯಗಳ ಮೇಲೆ ಹಲವು ಲೇಖನಗಳನ್ನು ಪ್ರಕಟಿಸಿದ್ದಾರೆ.


ಇದನ್ನೂ ಓದಿ: ಮಂಗಳೂರು: ಮತ್ತೊಂದು ಅನೈತಿಕ ಪೊಲೀಸ್‌ಗಿರಿ; ಇಬ್ಬರು ಬಜರಂಗದಳ ಕಾರ್ಯಕರ್ತರ ಬಂಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...