Homeಕರ್ನಾಟಕಮಂಗಳೂರು: ಮತ್ತೊಂದು ಅನೈತಿಕ ಪೊಲೀಸ್‌ಗಿರಿ; ಇಬ್ಬರು ಬಜರಂಗದಳ ಕಾರ್ಯಕರ್ತರ ಬಂಧನ

ಮಂಗಳೂರು: ಮತ್ತೊಂದು ಅನೈತಿಕ ಪೊಲೀಸ್‌ಗಿರಿ; ಇಬ್ಬರು ಬಜರಂಗದಳ ಕಾರ್ಯಕರ್ತರ ಬಂಧನ

- Advertisement -
- Advertisement -

ಕರಾವಳಿಯಲ್ಲಿ ಮತ್ತೊಂದು ಅನೈತಿಕ ಪೊಲೀಸ್‌ಗಿರಿ ಘಟನೆ ಶನಿವಾರ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಕಡೆಗೆ ತೆರಳುತ್ತಿದ್ದ ಮುಸ್ಲಿಂ ವ್ಯಕ್ತಿಯ ಕಾರಿನಲ್ಲಿ ಹಿಂದೂ ಮಹಿಳೆಯರಿಬ್ಬರು ಪ್ರಯಾಣಿಸಿದ್ದರು. ಈ ಕಾರನ್ನು ಹಿಂಬಾಲಿಸಿಕೊಂಡು ಬಂದ ಬಿಜೆಪಿ ಬೆಂಬಲಿತ ಸಂಘಟನೆಯಾದ ಬಜರಂಗದಳದ ಕಾರ್ಯಕರ್ತರು ಕೆಸರುಗದ್ದೆ ಎಂಬಲ್ಲಿ ತಡೆದು, ಮುಸ್ಲಿಮರ ಕಾರಿನಲ್ಲಿ ಹಿಂದೂ ಮಹಿಳೆಯರು ಪ್ರಯಾಣಿಸಿದ್ದಕ್ಕೆ ಅವರನ್ನು ನಿಂದಿಸಿ ಹಲ್ಲೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸಮಿತ್ ರಾಜ್ ಮತ್ತು ಸಂದೀಪ್ ಪೂಜಾರಿ ಎಂಬವರನ್ನು ಬಂಧಿಸಲಾಗಿದೆ.

ಘಟನೆಯ ವಿವರ

ಉಡುಪಿ ಜಿಲ್ಲೆಯ ಕಾರ್ಕಳದವರಾದ ಗೀತಾ ಮತ್ತು ಅವರ ಸ್ನೇಹಿತೆ ಮಂಜುಳಾ ಎಂಬವರು ಶನಿವಾರದಂದು ಮೂಡುಬಿದಿರೆಯ ಹನುಮಾನ್ ದೇವಸ್ಥಾನಕ್ಕೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ದಾರಿಯಲ್ಲಿ, ಅವರು ತಮ್ಮ ಸ್ನೇಹಿತೆ ಸೌಧ ಎಂಬವರನ್ನು ಭೇಟಿಯಾಗಿದ್ದರು. ಈ ವೇಳೆ ಅವರ ಸೌಧ ಅವರ ಪತಿ ಅಶ್ರಫ್ ಕೂಡಾ ಇದ್ದರು. ಅವರು ಕೂಡಾ ಮೂಡಬಿದಿರೆ ದಾರಿಯಲ್ಲಿ ಹೋಗುತ್ತಿರುವುದರಿಂದ ಗೀತಾ ಮತ್ತು ಮಂಜುಳಾ ತಮ್ಮ ದ್ವಿಚಕ್ರ ವಾಹನವನ್ನು ಅಲ್ಲಿಯೆ ನಿಲ್ಲಿಸಿ, ಸೌಧ ಮತ್ತು ಅಶ್ರಫ್ ಅವರು ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಹತ್ತಿದ್ದಾರೆ.

ಇದನ್ನೂ ಓದಿ: ಮಂಗಳೂರು: ಅತ್ಯಾಚಾರ ಸಂತ್ರಸ್ತೆ ಮೇಲೆ ಲೈಂಗಿಕ ದೌರ್ಜನ್ಯ- ಪೊಲೀಸ್ ಪೇದೆ ಬಂಧನ

ಕಾರು ಕೆಸರುಗದ್ದೆ ಎಂಬಲ್ಲಿಗೆ ತಲುಪುತ್ತಿದ್ದಂತೆ, ಸುಮಾರು ಆರರಿಂದ ಎಂಟು ಜನ ಬಜರಂಗದಳದ ದುಷ್ಕರ್ಮಿಗಳು ಬೈಕ್‌ಗಳಲ್ಲಿ ಅವರನ್ನು ಹಿಂಬಾಲಿಸಿ ಬಂದು, ಕಾರನ್ನು ತಡೆದಿದ್ದಾರೆ. ನಂತರ ಗೀತಾ ಮತ್ತು ಮಂಜುಳಾ ಅವರನ್ನು ಕಾರಿನಿಂದ ಇಳಿಯಲು ಕೈಹಿಡಿದು ಹೊರಗೆ ಎಳೆದಿದ್ದಾರೆ. ಅಲ್ಲದೆ, ಮುಸ್ಲಿಮರ ಕಾರಿನಲ್ಲಿ ಪ್ರಯಾಣಿಸಿದ್ದಕ್ಕಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೈದಿದ್ದಾರೆ ಎಂದು ಮಹಿಳೆಯರು ದೂರಿದ್ದಾರೆ ಎಂದು ವಾರ್ತಾಭಾರತಿ ಪತ್ರಿಕೆ ವರದಿ ಮಾಡಿದೆ.

ಜೊತೆಗೆ ಅಶ್ರಫ್ ಮತ್ತು ಸೌಧ ಅವರಿಗೂ ದುಷ್ಕರ್ಮಿಗಳು ನಿಂದಿಸಿ, ಹಲ್ಲೆಗೈದಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ. ಘಟನೆಯ ಬಗ್ಗೆ ಮೂಡುಬಿದ್ರಿ ಪೊಲೀಸರು ಐಪಿಸಿ ಸೆಕ್ಷನ್ 354, 153 (ಎ), 504 ಮತ್ತು 506 ರ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಜೊತೆಗೆ ಇಬ್ಬರನ್ನು ಬಂಧಿಸಿದ್ದಾರೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, “ಪ್ರಕರಣದಲ್ಲಿ ಪ್ರಮುಖ ಆರೋಪಿ ಸಹಿತ ಒಟ್ಟು ಇಬ್ಬರನ್ನು ಬಂಧಿಸಿದ್ದೇವೆ. ಇತರ ಆರೋಪಿಗಳ ಪತ್ತೆಗಾಗಿ ಕ್ರಮಕೈಗೊಳ್ಳಲಾಗಿದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ದ.ಕ ಜಿಲ್ಲೆಯಲ್ಲಿ ಮತ್ತೆ ಅನೈತಿಕ ಪೊಲೀಸ್‌ಗಿರಿ; ಬಜರಂಗದಳದ ಕಾರ್ಯಕರ್ತರಿಬ್ಬರ ಬಂಧನ

ಕರಾವಳಿಯಲ್ಲಿ ಬಿಜೆಪಿ ಬೆಂಬಲಿತ ಸಂಘಟನೆಗಳಿಂದ ಇತ್ತೀಚೆಗೆ ಅನೈತಿಕ ಪೊಲೀಸ್‌ಗಿರಿ ಪ್ರಕರಣಗಳು ಹೆಚ್ಚುತ್ತಿದೆ.

“ಇದನ್ನು ಬಿಜೆಪಿಯೇ ನಡೆಸುತ್ತಿದ್ದು, ಮುಂಬರುವ ತಾಲೂಕು ಪಂಚಾಯತ್‌ ಚುನಾವಣೆಗಾಗಿ ಇದು ನಡೆಯುತ್ತಿದೆ. ಜನರು ಬೆಲೆ ಏರಿಕೆ ಮತ್ತು ದೇಶದಲ್ಲಿ ನಡೆಯುತ್ತಿರವ ಆರ್ಥಿಕ ಹಿನ್ನಡೆಯನ್ನು ಪ್ರಶ್ನೆ ಮಾಡುಲು ಶುರುಮಾಡಿದ್ದಾರೆ” ಎಂದು ಮಂಗಳೂರಿನ ಕಾಲೇಜೊಂದರ ಪ್ರಾಧ್ಯಾಪಕರೊಬ್ಬರು ಹೇಳಿದ್ದಾರೆ.

ಹೀಗಾಗಿ ಅದರಿಂದ ಜನರ ಗಮನವನ್ನು ಬೇರೆ ಕಡೆಗೆ ಸೆಳೆಯಲು ಈ ರೀತಿಯ ಘಟನೆಯನ್ನು ಸೃಷ್ಟಿಸುತ್ತಿದ್ದಾರೆ. ಆದರೆ ನಾವು ಜನರಿಗೆ ಬಿಜೆಪಿಯ ದುರಾಡಳಿತವನ್ನು ನಾವು ಇನ್ನೂ ಹೆಚ್ಚು ಹೆಚ್ಚು ತಿಳಿಸಿ ಜನರನ್ನು ಜಾಗೃತಗೊಳಿಸಬೇಕು” ಎಂದು ಅವರು ಹೇಳಿದ್ದಾರೆ.

ಸುರತ್ಕಲ್‌ನಲ್ಲಿ ಇತ್ತೀಚೆಗೆ, ಕಾರಿನಲ್ಲಿ ಜೊತೆಯಾಗಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳನ್ನು, ಬಜರಂಗದಳ ಕಾರ್ಯಕರ್ತರು ತಡೆದು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದರು. ಘಟನೆ ವಿರೋಧಿಸಿ ರಾಷ್ಟ್ರಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಐವರನ್ನು ಬಂಧಿಸಲಾಗಿತ್ತು. ಆದರೆ ಅವರಿಗೆ ಠಾಣೆಯಲ್ಲೇ ಜಾಮೀನು ನೀಡಿ ಬಿಡುಗಡೆ ಮಾಡಲಾಗಿತ್ತು.

ಇದಕ್ಕಿಂತ ಮುಂಚೆ, ಸಹೋದ್ಯೋಗಿ ಹಾಗೂ ಇನ್ನೊಬ್ಬ ಮುಸ್ಲಿಂ ಗೆಳೆಯನೊಂದಿಗೆ ಹೋಟೆಲೊಂದರಲ್ಲಿ ಆಹಾರ ಸೇವಿಸುತ್ತಿದ್ದ ಮಹಿಳೆಗೆ, ಬಜರಂಗದಳದ ಸುಮಾರು ಐದು ಜನರ ತಂಡವೊಂದು ಕಿರುಕುಳ ನೀಡಿತ್ತು. ಈ ಸಂಬಂಧ ಜಿಲ್ಲೆಯ ಪುತ್ತೂರು ನಗರ ಠಾಣೆಯ ಪೊಲೀಸರು ಭಜರಂಗದಳದ ಸದಸ್ಯರನ್ನು ಬಂಧಿಸಿದ್ದರು.

ಬಂಟ್ವಾಳದಲ್ಲಿ ಕಾರಿಂಜ ದೇವಸ್ಥಾನಕ್ಕೆ ತೆರಳಿದ್ದ ಆರು ವಿದ್ಯಾರ್ಥಿಗಳನ್ನು ತಡೆದು ಹಲವು ಗಂಟೆಗಳ ಕಾಲ ಪ್ರಶ್ನಿಸಿದ್ದ ತಂಡದ ಕೆಲವರನ್ನು ಪೊಲೀಸರು ಬಂಧಿಸಿದ್ದರು. ಇದಕ್ಕಿಂಲೂ ಮುಂಚೆ ಬೆಂಗಳೂರಿನ ಕಡೆಗೆ ಪ್ರಯಾಣಿಸುತ್ತಿದ್ದ ಬಸ್‌ನಲ್ಲಿ ವಿಭಿನ್ನಕೋಮಿನ ಯುವಕ ಯುವತಿಯರು ಒಟ್ಟಿಗೆ ಪ್ರಯಾಣಿಸುತ್ತಿದ್ದಾರೆ ಎಂದು ಆರೋಪಿಸಿ ಬಸ್ಸನ್ನು ತಡೆದಿದ್ದು ವರದಿಯಾಗಿತ್ತು.

ಇದನ್ನೂ ಓದಿ: ಪುತ್ತೂರು-ಸುಳ್ಯದಲ್ಲಿ ಅನೈತಿಕ ಪೊಲೀಸ್‌ಗಿರಿ ಉಪದ್ರವ; ಜಿ.ಪಂ-ತಾ.ಪಂ ಚುನಾಚಣೆಗಾಗಿ ಈ ಆಟ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...