Homeಮುಖಪುಟಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ನಿಂತಿಲ್ಲ: ಏಕೆ ಗೊತ್ತೆ?

ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ನಿಂತಿಲ್ಲ: ಏಕೆ ಗೊತ್ತೆ?

ಜನರ ಆರ್ಥಿಕ ಸಹಿಷ್ಣುವಿಕೆಯ ಗುಪ್ತ ಸಮೀಕ್ಷೆ ಸರಕಾರ ನಡೆಸುತ್ತಿದೆಯೇ?

- Advertisement -
- Advertisement -

ಗ್ಯಾಸ್, ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ನಿರಂತರವಾಗಿ ಏರಿಕೆ ಆಗುತ್ತಿದ್ದರೂ, ಜನಸಾಮಾನ್ಯರ ಆಕ್ರಂದನ ಸರಕಾರದ ಕಿವಿಗೆ ಏಕೆ ತಲಪುತ್ತಿಲ್ಲ? ಸರಕಾರ ನಿಜವಾಗಿಯೂ ಕಿವುಡಾಗಿದೆಯೇ ಅಥವಾ ಇದರ ಹಿಂದೆ ಏನಾದರೂ ಮಹತ್ತರ ಕಾರಣವಿದೆಯೇ?

ಈ ಹಿಂದೆ ಗ್ಯಾಸ್ ಸಿಲಿಂಡರ್ ಖರೀದಿಸಿದ ನಂತರ ಬರುತ್ತಿದ್ದ ಸರಕಾರದ ಸಬ್ಸಿಡಿ ಹಣ ಖಾತೆಗೆ ಬರುವುದು ಸುಮಾರು ಎರಡು ವರ್ಷದಿಂದ ನಿಂತು ಹೋಗಿದೆ? ಯಾರಿಗೂ ಏನೂ ತಿಳಿಸದೆ ಸರಕಾರ ಸಬ್ಸಿಡಿ ನಿಲ್ಲಿಸಿದ್ದಾರೂ ಏಕೆ? ಸರಕಾರ ಜನತೆಗೆ ಉತ್ತರದಾಯಿ ಅಲ್ಲವೇ? ಪ್ರಶ್ನೆ ಕೇಳುವವರು ಯಾರು? ಮುಖ್ಯವಾಹಿನಿ ಮಾಧ್ಯಮಗಳು ಯಾಕೆ ಮೌನವಾಗಿವೆ?

ಕೆಲವು ವರ್ಷಗಳ ಹಿಂದೆ ಎಲ್ಲಾ ಕುಟುಂಬಗಳಿಗೂ ಸಬ್ಸಿಡಿ ಸಿಲಿಂಡರ್ ಲಭ್ಯವಿತ್ತು. ನಂತರ ರೂ. ಹತ್ತು ಲಕ್ಷಕ್ಕೂ ಹೆಚ್ಚು ವಾರ್ಷಿಕ ಆದಾಯವಿದ್ದ ಅಥವಾ ಸಮರ್ಥ ಕುಟುಂಬಗಳು ತಮ್ಮ ಗ್ಯಾಸ್ ಸಬ್ಸಿಡಿ ಬಿಟ್ಟು ಕೊಡಿ, ಅದರಿಂದ ಅಡುಗೆ ಅನಿಲ ಖರೀದಿಸಲು ಅಸಮರ್ಥ ಕುಟುಂಬಕ್ಕೆ ಉಚಿತ ಸಂಪರ್ಕ ಕಲ್ಪಿಸಬಹುದು ಎಂದು ಪ್ರಧಾನಿಯವರು ಮನವಿ ಮಾಡಿದರು. ಆದರೆ ನಿಜವಾಗಿಯೂ ಎಷ್ಟು ಜನ ತಮ್ಮ ಸಬ್ಸಿಡಿ ಬಿಟ್ಟುಕೊಟ್ಟರು? ಇದರಿಂದ ಎಷ್ಟು ಬಡ ಕುಟುಂಬಗಳಿಗೆ ಉಚಿತ ಸಂಪರ್ಕ ದೊರೆಯಿತು? ಉಚಿತವಾಗಿ ಅನಿಲ ಸಂಪರ್ಕ ಸಿಕ್ಕ ಎಷ್ಟು ಕುಟುಂಬಗಳು ಮೊದಲನೆಯ ಉಚಿತ ಸಿಲಿಂಡರ್ ಮುಗಿದ ನಂತರ ಮತ್ತೆ ಹಣ ಕೊಟ್ಟು ಸಿಲಿಂಡರ್ ಖರೀದಿಸಲೇ ಇಲ್ಲ? ಉಜ್ವಲಾ ಯೋಜನೆಯಿಂದ ನಿಜವಾಗಿ ಬಡ ಕುಟುಂಬಗಳಿಗೆ ಪ್ರಯೋಜನವಾಯಿತೇ? ಇವೆಲ್ಲರ ಅಂಕಿ-ಅಂಶಗಳು ಜನರ ಕೈಗೆ ಸುಲಭವಾಗಿ ಸಿಗುವಂತಿದೆಯೇ? ಇಲ್ಲ.

ಇದನ್ನೂ ಓದಿ: ಬೆಲೆ ಏರಿಕೆ-ಬಸವಳಿದ ಸಾಮಾನ್ಯ; ಪೆಟ್ರೋಲ್-ಡೀಸೆಲ್ ದರದಲ್ಲಿ ನಿರಂತರ ಏರಿಕೆ; ಬಡತನದತ್ತ ಭಾರತ

ಇದೇ ರೀತಿ ಹಲವಾರು ಸಬ್ಸಿಡಿಗಳನ್ನು ಸರಕಾರ ನಿಲ್ಲಿಸಿದೆ. ಮುಖ್ಯವಾಗಿ ಇವು ಬಡ ಜನರಿಗೆ ಸಿಗುತ್ತಿದ್ದ ಸಬ್ಸಿಡಿಗಳು. ಅಡುಗೆ ಅನಿಲ ಸಬ್ಸಿಡಿ ಮತ್ತೆ ಪ್ರಾರಂಭವಾಗಲಿದೆ. ಈ ಹಿಂದೆ ಇದ್ದ ಜಾಲತಾಣದ ತಾಂತ್ರಿಕ ತೊಂದರೆಯಿಂದಾಗಿ ಸಬ್ಸಿಡಿ ನೀಡುವುದನ್ನು ನಿಲ್ಲಿಸಬೇಕಾಯಿತು. ಶೀಘ್ರದಲ್ಲೇ ಮತ್ತೆ ಸಬ್ಸಿಡಿ ಪ್ರಾರಂಭವಾಗಲಿದೆ. ಆದರೆ ಯಾರಿಗೆ ಈ ಸಬ್ಸಿಡಿ ಸಿಗುತ್ತದೆ ಇದರ ಬಗ್ಗೆ ಇನ್ನೂ ಗೊಂದಲ ಪರಿಹಾರವಾಗಿಲ್ಲ ಎಂದು ಹೆಸರು ಹೇಳಲು ಬಯಸದ ಒರ್ವ ತೈಲ ಕಂಪನಿ ಅಧಿಕಾರಿ ಮಾಧ್ಯಮದ ಜೊತೆ ಮಾತನಾಡುವಾಗ ತಿಳಿಸಿದ್ದಾರೆ.

ಒಂದು ಅನಿಸಿಕೆಯ ಪ್ರಕಾರ ಇದರ ಹಿಂದೆ ಸರಕಾರದ ಯೋಚನೆ ಬಹುಶಃ ಹೀಗಿದೆ. ನಿರಂತರ ತೈಲ ಉತ್ಪಾದನೆಗಳ ಬೆಲೆ ಹೆಚ್ಚಳ ಜನರಿಗೆ ಬಾಧಿಸುತ್ತಿದೆ ಎಂಬುದು ನಿಜ ಆದರೂ ಅವುಗಳ ಖರೀದಿಯನ್ನು ಜನರು ಗಣನೀಯವಾಗಿ ಕಡಿಮೆ ಮಾಡಿಲ್ಲ. ಆದ್ದರಿಂದ ಬೆಲೆ ಯಾವ ಮಟ್ಟದ ತನಕ ಏರಿದರೂ ಜನರು ಗೊಣಗುತ್ತಾ ಖರೀದಿಸುತ್ತಾರೋ ಅಲ್ಲಿಯವರೆಗೂ ಸರಕಾರ ಗ್ರಾಹಕರ ಗೊಣಗಾಟದ ಬಗ್ಗೆ ತಲೆ ಕೆಡೆಸಿಕೊಳ್ಳುವುದಿಲ್ಲ. ಯಾವ ಯಾವ ವಸ್ತುಗಳನ್ನು ಮತ್ತು ಯಾವಾಗ ಜನರು ಖರೀದಿಸುವುದನ್ನು ಕಡಿಮೆ ಮಾಡುತ್ತಾರೋ ಅಥವಾ ನಿಲ್ಲಿಸುತ್ತಾರೋ ಅದನ್ನು ಮಾತ್ರ ಸರಕಾರ ಗಮನಿಸುತ್ತಿದೆ. ಯಾವಾಗ ಈ ಉತ್ಪಾದನೆಗಳ ಖರೀದಿ ಪ್ರಮಾಣ ಗಣನೀಯವಾಗಿ ಕಡಿಮೆ ಕುಸಿಯುತ್ತದೋ ಆಗ ಬೆಲೆ ಏರಿಕೆ ನಿಲ್ಲುತ್ತದೆ. ಯಾರು ಯಾರು ಖರೀದಿಸುವುದನ್ನು ಕಡಿಮೆ ಮಾಡಿದರೋ ಅಥವಾ ನಿಲ್ಲಿಸಿದರೋ ಅವರಿಗೆ ಮಾತ್ರ ಸಬ್ಸಿಡಿ ಸಿಗುವ ಸಾಧ್ಯತೆ ಇದೆ!

ಸರಕಾರ ಈ ಬಗ್ಗೆ ಒಂದು ಗುಪ್ತ ಸರ್ವೇಕ್ಷಣೆ ನಡೆಸುತ್ತಿದೆ. ಕೇವಲ ಪೆಟ್ರೋಲಿಯಂ ಉತ್ಪಾದನೆಗಳಷ್ಟೇ ಅಲ್ಲ, ಎಲ್ಲಾ ದಿನೋಪಯೋಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಗ್ಗೆಯೂ ಸರಕಾರ ಜನರ ಖರೀದಿ ಸಾಮರ್ಥ್ಯ ಪರೀಕ್ಷಿಸುತ್ತಿದೆ. ಅದೇ ರೀತಿ ಎಲ್ಲಾ ಸರಕಾರಿ ಸೇವಾ ಶುಲ್ಕದ ಬಗ್ಗೆಯೂ ಸರಕಾರ ಸಮೀಕ್ಷೆ ನಡೆಸುತ್ತಿದೆ. ಜನರ ದುರ್ದೈವದ ಸಂಗತಿ ಎಂದರೆ ಸಾಹುಕಾರರಿಗೆ, ದೊಡ್ಡ ದೊಡ್ಡ ಕಂಪನಿಗೆ ಸಿಗುತ್ತಿದ್ದ ಸಬ್ಸಿಡಿಗಳನ್ನು ಮುಂದುವರೆಸಿದೆ ಮತ್ತು ಅವರ ಸಾಲಗಳನ್ನು ಸರಕಾರ ರೈಟ್ ಆಫ್ ಮಾಡುವುದನ್ನು ಮಾತ್ರ ನಿಲ್ಲಿಸಿಲ್ಲ. ಸಾಹುಕಾರರ ಸಬ್ಸಿಡಿ ಮುಂದುವರಿಕೆಯಿಂದ ಆಡಳಿತ ಪಕ್ಷಕ್ಕೆ ಎಷ್ಟು ಕೋಟಿ ಎಲೆಕ್ಟೋರಲ್ ಬಾಂಡ್ ಬರುತ್ತಿದೆ ಎಂಬುದನ್ನು ಸರಕಾರ ಕಟ್ಟುನಿಟ್ಟಾಗಿ ಗಮನಿಸುತ್ತಿದೆ.


ಇದನ್ನೂ ಓದಿ: ದೇಶದ ಬಂದರುಗಳು ಮತ್ತು ನದಿಗಳು ಮಾರಾಟವಾಗುತ್ತಿರುವುದನ್ನು ನೀವು ಬಲ್ಲಿರೇನು?


ನನಗೆ ನೆನಪಿರುವಂತೆ 70ರ ದಶಕದಲ್ಲಿ ಕೊಲ್ಕತ ನಗರದಲ್ಲಿ ಟ್ರಾಂ ಪ್ರಯಾಣ ಟಿಕೆಟ್ ದರ ಏಳು ಪೈಸೆಯಿಂದ ಹತ್ತು ಪೈಸೆಗೆ ಏರಿಕೆಯಾದ ಕೂಡಲೇ ಹಲವು ಟ್ರಾಂಗಳು ಅಗ್ನಿಗೆ ಆಹುತಿಯಾದವು. ನಮಗೇ ಸೇರಿದ್ದ ಸಾರ್ವಜನಿಕ ಆಸ್ತಿ ನಾಶ ಪಡಿಸುವುದು ಅಕ್ಷಮ್ಯ ಅಪರಾಧ, ಒಪ್ಪುತ್ತೇನೆ, ಆದರೆ ಆಗ ಪ್ರತಿಭಟನೆಯ ಆಕ್ರೋಶ ಆಗಿತ್ತು. ಆದರೆ ಈಗ ವಾಹನ ನಿಯಮ ಉಲ್ಲಂಘನೆಯ ದಂಡವನ್ನು ಕೇಂದ್ರ ಸರ್ಕಾರ ನೂರು ರುಪಾಯಿಯಿಂದ ಸಾವಿರ ರೂಗೆ ಏರಿಕೆ ಮಾಡಿತು. ಯಾರೂ ಸಾರಿಗೆ ಕಚೇರಿಗೆ ಮುತ್ತಿಗೆ ಹಾಕಲಿಲ್ಲ! ಆದ್ದರಿಂದ ಜನರ ಸಹಿಷ್ಣುವಿಕೆಯ ಪರಮಾವಧಿಯನ್ನು ಸರಕಾರ ಪರೀಕ್ಷಿಸುತ್ತಿದೆ ಎಂದು ನನಗಾದರೂ ಅನಿಸುತ್ತದೆ. ನಿಮ್ಮ ಅನಿಸಿಕೆ ಬೇರೆ ಇರಬಹುದು, ಅದನ್ನು ಹಂಚಿಕೊಳ್ಳಿ.

–   ಜಿ.ಆರ್ ವಿದ್ಯಾರಣ್ಯ

(ಜಿ.ಆರ್ ವಿದ್ಯಾರಣ್ಯರವರು ಸುಮಾರು ಇಪ್ಪತ್ತೈದು ವರ್ಷ ವಾಣಿಜ್ಯ ಹಡಗುಗಳಲ್ಲಿ ಕಮ್ಯುನಿಕೇಷನ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದವರು. ಇದಲ್ಲದೆ ಕಂಪ್ಯೂಟರ್ ನೆಟವರ್ಕ್ ರೇಡಿಯೋ ಸುಪರಿಂಟೆಂಡೆಂಟ್ ಆಗಿ ಅಮೇರಿಕಾ, ಸಿಂಗಾಪುರ್, ಚೈನಾ, ಜಪಾನ್, ದೇಶಗಳಲ್ಲಿ ಕೆಲಸ ಮಾಡಿದ್ದಾರೆ. ನೂರಕ್ಕೂ ಹೆಚ್ಚು ದೇಶಗಳನ್ನು ಸುತ್ತಿ ಬಂದಿರುತ್ತಾರೆ. ಸಾಮಾಜಿಕ ಕಳಕಳಿಯುಳ್ಳ ಅವರು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಹಂಬಲದಿಂದ 2001 ರಲ್ಲಿ ಮುಂಬಯಿ ಬಿಟ್ಟು, ಮೈಸೂರಿನಲ್ಲಿ ನೆಲೆಸಿ ಹಲವು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ)


ಇದನ್ನೂ ಓದಿ: ಬೆಲೆ ಏರಿಕೆ-ಬಸವಳಿದ ಸಾಮಾನ್ಯ; ಜೊತೆಗೆ ವೇತನ ಕಡಿತ ಮತ್ತು ನಿರುದ್ಯೋಗದ ಶಾಕ್!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. I’m reading most of ur articles and it’s really open up lots insights to the readers. If we analysed the fact and Figures v strongly feel that something special in ur most of the articals. For that we should appriciat u all. Now in this clamzy atmostpher ur articals r a ray of hope. Keep it up. Wish u all the Best

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರ: ಮತಗಟ್ಟೆ ಬಳಿ ಗುಂಡಿನ ದಾಳಿ ನಡೆಸಿದ ಮೂವರ ಬಂಧನ

0
ಇಂಫಾಲ್ ಪೂರ್ವ ಜಿಲ್ಲೆಯ ಮತದಾನ ಕೇಂದ್ರದ ಬಳಿ ಗುಂಡಿನ ದಾಳಿ ನಡೆಸಿದ ಮೂವರನ್ನು ಮಣಿಪುರ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಬಂಧಿತ ಮೂವರು ವ್ಯಕ್ತಿಗಳು ಶುಕ್ರವಾರ ಇಂಫಾಲ್ ಪೂರ್ವ ಜಿಲ್ಲೆಯ ಮೊಯಿರಂಗ್ಯಾಂಪು ಸಾಜೆಬ್‌ನಲ್ಲಿ ನಡೆದ...