Homeಕರೋನಾ ತಲ್ಲಣ‘ಇಷ್ಟು ನಿಧಾನಕ್ಕೆ ಪ್ರಕ್ರಿಯೆ ನಡೆದರೆ ದೆಹಲಿಯ ವಯಸ್ಕರಿಗೆ ಲಸಿಕೆ ನೀಡಲು 30 ತಿಂಗಳು ಬೇಕು: ಕೇಜ್ರೀವಾಲ್‌

‘ಇಷ್ಟು ನಿಧಾನಕ್ಕೆ ಪ್ರಕ್ರಿಯೆ ನಡೆದರೆ ದೆಹಲಿಯ ವಯಸ್ಕರಿಗೆ ಲಸಿಕೆ ನೀಡಲು 30 ತಿಂಗಳು ಬೇಕು: ಕೇಜ್ರೀವಾಲ್‌

ಒಂದು ತಿಂಗಳಿಗೆ 80 ಲಕ್ಷ ಡೊಸ್‌ಗಳು ದೆಹಲಿಗೆ ಬೇಕು, ಆದರೆ ಮೇ ತಿಂಗಳಲ್ಲಿ ನಾವು 16 ಲಕ್ಷ ಡೋಸ್‌ ಮಾತ್ರ ಪಡೆದಿದ್ದೇವೆ ಎಂದು ಕೇಜ್ರಿವಾಲ್ ಮೋದಿಗೆ ಪತ್ರ ಬರೆದಿದ್ದಾರೆ.

- Advertisement -
- Advertisement -

ದೆಹಲಿಗೆ ಒಂದು ತಿಂಗಳಿಗೆ 80 ಲಕ್ಷ ಡೊಸ್‌ಗಳಂತೆ ಒಟ್ಟು ಮೂರು ತಿಂಗಳು ಕೊರೊನಾ ಲಸಿಕೆಗಳ ಅಗತ್ಯವಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶನಿವಾರ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಆದರೆ ಮೇ ತಿಂಗಳಲ್ಲಿ ರಾಜ್ಯವು ಕೇವಲ 16 ಲಕ್ಷ ಕೊರೊನಾ ಲಸಿಕೆ ಮಾತ್ರ ಪಡೆದುಕೊಂಡಿದೆ ಎಂದು ಮುಖ್ಯಮಂತ್ರಿ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

“ಇಷ್ಟೊಂದು ನಿಧಾನವಾಗಿ ಲಸಿಕೆ ಪ್ರಕ್ರಿಯೆ ನಡೆದರೆ, ವಯಸ್ಕರಿಗೆ ಲಸಿಕೆ ಹಾಕಲು 30 ತಿಂಗಳು ಬೇಕಾಗುತ್ತದೆ” ಎಂದು ಕೇಜ್ರಿವಾಲ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ದೆಹಲಿಗೆ ಕೊರೊನಾ ಲಸಿಕೆಯ ಕೋಟಾವನ್ನು ಹೆಚ್ಚಿಸಬೇಕೆಂದು ಈ ಹಿಂದೆ ಮಾಡಿದ್ದ ಮನವಿಯನ್ನು ಪುನರುಚ್ಚರಿಸಿದ ಅವರು, ಜಾಗತಿಕ ಟೆಂಡರ್‌ಗಳನ್ನು ಹೆಚ್ಚಿಸುವ ತೀರ್ಮಾನವನ್ನು ರಾಜ್ಯಗಳಿಗೆ ಬಿಡುವ ಬದಲು ರಾಷ್ಟ್ರೀಯ ಮಟ್ಟದಲ್ಲಿ ಕೊರೊನಾ ಲಸಿಕೆಗಳನ್ನು ಆಮದು ಮಾಡಿಕೊಳ್ಳುವಂತೆ ಕೇಂದ್ರವನ್ನು ಕೋರಿದ್ದಾರೆ.

ಇದನ್ನೂ ಓದಿ: ಒಂದೇ ಕುಟುಂಬದ 16 ಜನರಿಗೆ ಕೊರೊನಾ: ಮನೆಯಲ್ಲಿದ್ದುಕೊಂಡೇ ಎಲ್ಲರೂ ಗುಣಮುಖ

“ಕೇಂದ್ರವು ನಮಗೆ ನೀಡಿರುವ ಕೊರೊನಾ ಲಸಿಕೆಯು ಮುಗಿದಿರುವುದರಿಂದ ಯುವಕರಿಗೆ ಲಸಿಕೆ ನೀಡುವುದನ್ನು ಇಂದಿನಿಂದ ನಿಲ್ಲಿಸಲಾಗಿದೆ. ಆದ್ದರಿಂದ ಇನ್ನು ಮುಂದೆ ದೆಹಲಿಯಲ್ಲಿ ವ್ಯಾಕ್ಸಿನೇಷನ್‌ ಕೇಂದ್ರವನ್ನು ಯುವಕರಿಗೆ ಮುಚ್ಚಲಾಗುತ್ತದೆ” ಎಂದು ಅವರು ಹೇಳಿದ್ದಾರೆ.

“ತಿಂಗಳಿಗೆ 80 ಲಕ್ಷ ಕೊರೊನಾ ಲಸಿಕೆಯಂತೆ ದೆಹಲಿಗೆ ಮೂರು ತಿಂಗಳು ಲಸಿಕೆ ಬೇಕಾಗುತ್ತದೆ. ಆದಾಗ್ಯೂ, ಮೇ ತಿಂಗಳಲ್ಲಿ ನಾವು ಕೇವಲ 16 ಲಕ್ಷ ಲಸಿಕೆ ಪ್ರಮಾಣವನ್ನು ಮಾತ್ರ ಸ್ವೀಕರಿಸಿದ್ದೇವೆ. ಈ ವೇಗದಲ್ಲಿ, ವಯಸ್ಕರಿಗೆ ಲಸಿಕೆ ಹಾಕಲು 30 ತಿಂಗಳು ಬೇಕಾಗುತ್ತದೆ” ಎಂದು ಕೇಜ್ರಿವಾಲ್ ಹೇಳಿದ್ದಾರೆ.

ದೇಶದಲ್ಲಿ ಲಸಿಕೆ ಲಭ್ಯತೆಯನ್ನು ಹೆಚ್ಚಿಸಲು ಮುಖ್ಯಮಂತ್ರಿ ತಮ್ಮ ಪತ್ರದಲ್ಲಿ ಕೇಂದ್ರಕ್ಕೆ ನಾಲ್ಕು ಮನವಿಗಳನ್ನು ಮಾಡಿದ್ದಾರೆ. “ಭಾರತದಲ್ಲಿ ಲಸಿಕೆ ತಯಾರಿಸುವ ಎಲ್ಲ ಕಂಪನಿಗಳಿಗೆ ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ತಯಾರಿಸಲು ಆದೇಶಿಸಿ” ಎಂದು ದೆಹಲಿ ಸಿಎಂ ತಮ್ಮ ಪತ್ರದಲ್ಲಿ ಶಿಫಾರಸು ಮಾಡಿದ್ದಾರೆ.

ದೇಶದಲ್ಲಿ ಲಸಿಕೆಗಳನ್ನು ತಯಾರಿಸಲು ಅಂತಾರಾಷ್ಟ್ರೀಯ ಲಸಿಕೆ ತಯಾರಕರಿಗೆ ಅನುಮೋದನೆ ನೀಡುವಂತೆ ಕೇಂದ್ರಕ್ಕೆ ಸೂಚಿಸಿದ್ದಾರೆ.

ಕೇಂದ್ರವೇ ರಾಷ್ಟ್ರೀಯ ಮಟ್ಟದಲ್ಲಿ ಲಸಿಕೆಗಳನ್ನು ಆಮದು ಮಾಡಿಕೊಳ್ಳಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಮೇ 24 ರೊಳಗೆ ಭಾರತಕ್ಕೆ ಅಪ್ಪಳಿಸಲಿದೆ ‘ಯಾಸ್‌ ಚಂಡಮಾರುತ’ – ಹವಾಮಾನ ಇಲಾಖೆ ಎಚ್ಚರಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...