Homeಮುಖಪುಟಗೋವಾ: ಚಲನಚಿತ್ರೋತ್ಸವದಲ್ಲಿ ಕೈಬಿಟ್ಟ ಜಾತಿ ತಾರತಮ್ಯದ ಕುರಿತ ಕವಿತೆ; ವಿವಾದ

ಗೋವಾ: ಚಲನಚಿತ್ರೋತ್ಸವದಲ್ಲಿ ಕೈಬಿಟ್ಟ ಜಾತಿ ತಾರತಮ್ಯದ ಕುರಿತ ಕವಿತೆ; ವಿವಾದ

- Advertisement -
- Advertisement -

ಗೋವಾದಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಮಟ್ಟದ ಚಲನಚಿತ್ರೋತ್ಸವದಲ್ಲಿ (ಐಎಫ್‌ಎಫ್‌ಐ) ದಿವಂಗತ ಗೋವಾದ ಲೇಖಕ ಮತ್ತು ಮಾಜಿ ಶಾಸಕ ವಿಷ್ಣು ಸೂರ್ಯ ವಾಘ್ ಅವರು ಜಾತಿ ತಾರತಮ್ಯದ ಕುರಿತ ಕವಿತೆಯನ್ನು ಪ್ರಕಟಿಸದ ಉತ್ಸವದ ದಿನಪತ್ರಿಕೆಯ ನಿರ್ಧಾರದ ಬಗ್ಗೆ ವಿವಾದ ಭುಗಿಲೆದ್ದಿದೆ.

IFFI ದಿನಪತ್ರಿಕೆಯ ಭಾನುವಾರದ ಆವೃತ್ತಿ ‘ದಿ ಪೀಕಾಕ್’, ಕಲಾವಿದ ಸಿದ್ಧೇಶ್ ಗೌತಮ್ ಅವರ ಎರಡು ಪುಟಗಳ  ವಿವರಣೆ ಒಳಗೊಂಡಿತ್ತು. ಈ ವಿವರಣೆಯನ್ನು ವಾಘ್ ಅವರ ಸೆಕ್ಯುಲರ್ ಕವಿತೆಯ ಜೊತೆಗೆ ಕೊಂಡೊಯ್ಯಲು ಉದ್ದೇಶಿಸಲಾಗಿತ್ತು ಆದರೆ ಕವಿತೆಯನ್ನು ಶನಿವಾರ ತೆಗೆದುಹಾಕಲಾಗಿದೆ.

ಗೋವಾ ಸರ್ಕಾರದ ಪರವಾಗಿ IFFI ನ್ನು ಆಯೋಜಿಸುವ ನೋಡಲ್ ಏಜೆನ್ಸಿಯಾದ ಎಂಟರ್ಟೈನ್ಮೆಂಟ್ ಸೊಸೈಟಿ ಆಫ್ ಗೋವಾ (ESG), ಕವಿತೆಯನ್ನು ಸೃಜನಾತ್ಮಕ ಕಾರಣಗಳಿಗಾಗಿ ಸೇರಿಸದಿರಲು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ESG ‘ದಿ ಪೀಕಾಕ್‌’ನ ಪ್ರಕಾಶನವನ್ನು ಕೂಡ ಮಾಡುತ್ತದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಗೌತಮ್ ಈ ಕುರಿತು ಬರೆದಿದ್ದು, ಇಂದಿನ ಸಂಚಿಕೆಗಾಗಿ ವಿಷ್ಣು ಸೂರ್ಯ ವಾಘ್ ಅವರ ಕವಿತೆಯನ್ನು ಉಲ್ಲೇಖಿಸದಂತೆ ನನ್ನನ್ನು ಕೇಳಲಾಯಿತು. ವಾಘ್ ಅವರ ಕವಿತೆ ಸೆಕ್ಯುಲರ್, ಇದನ್ನು ನಾನು ಎಚ್ಚರಿಕೆಯಿಂದ ಆರಿಸಿಕೊಂಡಿದ್ದೇನೆ. ಏಕೆಂದರೆ ಇದು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿದಿನ ಅನೇಕರಿಂದ ಜಾತಿ ತಾರತಮ್ಯದ ಹಲವಾರು ಘಟನೆಗಳನ್ನು ವ್ಯಕ್ತಪಡಿಸುತ್ತದೆ. ನನ್ನ ಜೀವನದಲ್ಲಿ ನಾನು ಅಪರಿಚಿತ ವಿದ್ಯಾರ್ಥಿಯಾಗಿ ಮಾತ್ರವಲ್ಲದೆ ಪ್ರಸಿದ್ಧ ಕಲಾವಿದನಾಗಿಯೂ ಇದೇ ರೀತಿಯದ್ದನ್ನು ಅನೇಕ ಬಾರಿ ಅನುಭವಿಸಿದ್ದೇನೆ ಎಂದು ಹೇಳಿದ್ದಾರೆ. ಗೌತಮ್  ಕವಿತೆಯನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಕವಿತೆಯನ್ನು ಮುದ್ರಿಸದಿರುವ ನಿರ್ಧಾರದ ಬಗ್ಗೆ ದಿ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಇಎಸ್‌ಜಿ ಸಿಇಒ ಅಂಕಿತಾ ಮಿಶ್ರಾ, ಲೇಖನವನ್ನು ಮುದ್ರಿಸದಿರುವ ನಿರ್ಧಾರವು ಕೇವಲ ಸೃಜನಶೀಲ ಕಾರಣಗಳಿಗಾಗಿ ತೆಗೆದುಕೊಂಡ ಸಂಪಾದಕೀಯ ನಿರ್ಧಾರ ಮತ್ತು ಲೇಖನದ ವಿಷಯಕ್ಕೆ ಮತ್ತು ಇದಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ವಾಘ್ ಅವರ ಸೋದರಳಿಯ ಕೌಸ್ತುಭ್ ನಾಯ್ಕ್, ವಾಘ್ ಅವರ ಸಂಕಲನ ‘ಸುಧೀರ್ ಸೂಕ್ತ’ ಕವಿತೆಯನ್ನು ಭಾಷಾಂತರಿಸಲು ಪೀಕಾಕ್ ತಂಡವು ಕೆಲವು ದಿನಗಳ ಹಿಂದೆ ಹೇಳಿತ್ತು. ಆದರೆ ಬಳಿಕ ಕವಿತೆಯನ್ನು ಮುದ್ರಿಸಲಾಗುವುದಿಲ್ಲ ಎಂದು ಇಎಸ್‌ಜಿ ಅಧಿಕಾರಿಗಳು ತಿಳಿಸಿದ್ದರು. ಕವಿತೆಯನ್ನು ಪ್ರಕಟಿಸದಿರುವ ನಿರ್ಧಾರದ ಹಿಂದಿನ ಕಾರಣಗಳು ತನಗೆ ತಿಳಿದಿಲ್ಲವಾದರೂ, ವಾಘ್ ಅವರ ಕವಿತೆಗಳಲ್ಲಿನ  ಅಂಶಗಳು ಇದಕ್ಕೆ ಕಾರಣವಾಗಿರಬಹುದು ಎಂದು ಹೇಳಿದ್ದಾರೆ.

ಸುಧೀರ್ ಸೂಕ್ತ ಕವನ ಸಂಕಲನವು 2017ರಲ್ಲಿ ಕೆಲವು ವಿವಾದಗಳನ್ನು ಹುಟ್ಟು ಹಾಕಿತ್ತು.  ವಾಘ್ ಅವರು ತಮ್ಮ ಕವಿತೆ ಮೂಲಕ ಗೋವಾದ ಬಹುಜನ ಸಮಾಜದ ಇತಿಹಾಸಗಳನ್ನು ಉಲ್ಲೇಖಿಸಿದ್ದಾರೆ. ಭಾಷೆಯ ಬಳಕೆ ಮತ್ತು ಅದರ ಚಿತ್ರಣ ಮತ್ತು ವಿಷಯಗಳು ಗೋವಾದ ಸಾಹಿತ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಕವಾಗಿವೆ.  ಸಂವಿಧಾನ ದಿನದ ಮುನ್ನಾದಿನದಂದು ಈ ಸೆನ್ಸಾರ್‌ಶಿಪ್ ಕ್ರಿಯೆ ನಡೆದಿರುವುದು ದುರದೃಷ್ಟಕರ ಎಂದು ಕೌಸ್ತುಭ್ ನಾಯ್ಕ್ ಹೇಳಿದ್ದಾರೆ.

2017ರಲ್ಲಿ ವಾಘ್ ಅವರ ಕೊಂಕಣಿಯಲ್ಲಿನ ಕವನಗಳ ಸಂಕಲನವಾದ ಸುಧೀರ್ ಸೂಕ್ತ – ಶೂದ್ರನ ಗೀತೆಗಳು, ಕವನ ವಿಭಾಗದಲ್ಲಿ ಗೋವಾ ಕೊಂಕಣಿ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿತ್ತು. ಆದರೆ ಅಧಿಕೃತವಾಗಿ ಘೋಷಣೆಯ ಮೊದಲು ಪ್ರಶಸ್ತಿಯ ಸುದ್ದಿ ಸೋರಿಕೆಯಾದ ನಂತರ ಪುಸ್ತಕದ ಬಗ್ಗೆ ವಿವಾದವು ಭುಗಿಲೆದ್ದಿತ್ತು. ವಾಘ್ ಮತ್ತು ಪುಸ್ತಕದ ಪ್ರಕಾಶನ ಸಂಸ್ಥೆಯ ವಿರುದ್ಧ ಗೋವಾ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.

ವಾಘ್ ಅವರ ಸಹೋದರ ರಾಮರಾವ್ ವಾಘ್ ಮಾತನಾಡುತ್ತಾ, ಕವಿತೆಗಳು ಜಾತಿ ತಾರತಮ್ಯ ಮತ್ತು ಬಹುಜನ ಸಮಾಜ ಅನುಭವಿಸುತ್ತಿರುವ ನೋವಿನ ಬಗ್ಗೆ ಮಾತನಾಡುತ್ತವೆ. ಅವರ ಕವಿತೆಗಳು ಸಮಾಜದ ಕಟುವಾದ ಸತ್ಯಗಳನ್ನು ತೆರೆದಿಟ್ಟಿವೆ. ಆದರೆ ಕವಿತೆ ಪ್ರಕಟಿಸದಿರಲು ಕಾರಣ ತಿಳಿದಿಲ್ಲ ಎಂದು ಹೇಳಿದ್ದಾರೆ.

ಇದನ್ನು ಓದಿ: ಲೆಸ್ಬೋಸ್ ದ್ವೀಪದಲ್ಲಿ ಹಡಗು ಮುಳುಗಡೆ: ಭಾರತೀಯರು ಸೇರಿದಂತೆ 13 ಮಂದಿ ನಾಪತ್ತೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...