Homeಮುಖಪುಟಲೆಸ್ಬೋಸ್ ದ್ವೀಪದಲ್ಲಿ ಹಡಗು ಮುಳುಗಡೆ: ಭಾರತೀಯರು ಸೇರಿದಂತೆ 13 ಮಂದಿ ನಾಪತ್ತೆ

ಲೆಸ್ಬೋಸ್ ದ್ವೀಪದಲ್ಲಿ ಹಡಗು ಮುಳುಗಡೆ: ಭಾರತೀಯರು ಸೇರಿದಂತೆ 13 ಮಂದಿ ನಾಪತ್ತೆ

- Advertisement -
- Advertisement -

ಗ್ರೀಕ್‌ನ ಲೆಸ್ಬೋಸ್ ದ್ವೀಪದಲ್ಲಿ ಭಾರತೀಯರು ಸೇರಿದಂತೆ 14 ಮಂದಿಯಿದ್ದ ಸರಕು ಹಡಗು ಮುಳುಗಡೆಯಾಗಿದೆ.

ಸರಕು ಸಾಗಿಸುತ್ತಿದ್ದ ಹಡಗಿನಲ್ಲಿದ್ದ ಓರ್ವ ಸಿಬ್ಬಂದಿ ಸಾವನ್ನಪ್ಪಿದ್ದು, 12 ಮಂದಿ ನಾಪತ್ತೆಯಾಗಿದ್ದಾರೆ ಮತ್ತು ಓರ್ವರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರ್‍ಯಾಪ್ಟರ್‌ ಹೆಸರಿನ ಈ ಹಡಗು ಈಜಿಪ್ಟ್‌ನ ಅಲೆಕ್ಸಾಂಡ್ರಿಯಾದಿಂದ ಇಸ್ತಾನ್‌ಬುಲ್‌ಗೆ 6,000 ಟನ್ ಉಪ್ಪನ್ನು ಹೊತ್ತೊಯ್ಯುತ್ತಿತ್ತು ಎಂದು ಕೋಸ್ಟ್ ಗಾರ್ಡ್ ತಿಳಿಸಿದೆ. ಹಡಗಿನಲ್ಲಿ 8 ಈಜಿಪ್ಟಿಯನ್ನರು, ನಾಲ್ವರು ಭಾರತೀಯರು ಮತ್ತು ಇಬ್ಬರು ಸಿರಿಯನ್ನರು ಸೇರಿದಂತೆ 14 ಸಿಬ್ಬಂದಿಗಳಿದ್ದರು.

ಹಡಗಿನಲ್ಲಿ ಭಾನುವಾರ ಬೆಳಗ್ಗೆ 7 ಗಂಟೆಗೆ ತಾಂತ್ರಿಕ ಸಮಸ್ಯೆ ಕಂಡು ಬಂದಿದೆ.  8.20ಕ್ಕೆ ಸ್ಬೋಸ್‌ನ ನೈರುತ್ಯಕ್ಕೆ 8 ಕಿಮೀ ದೂರದಲ್ಲಿ ಕಣ್ಮರೆಯಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತ ಸಿಬ್ಬಂದಿಯ ಮೃತದೇಹ ಸಿಕ್ಕಿದೆ. ಆದರೆ ಮೃತರ ಗುರುತನ್ನು ಪತ್ತೆ ಮಾಡಲಾಗಿಲ್ಲ. ಓರ್ವ ಈಜಿಪ್ಟ್‌ ರಾಷ್ಟ್ರದ ಪ್ರಜೆಯನ್ನು ಇದೇ ವೇಳೆ ರಕ್ಷಿಸಲಾಗಿದೆ.

ನಾಪತ್ತೆಯಾದವರಿಗೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. 8 ಹಡಗುಗಳು, 2 ಹೆಲಿಕಾಪ್ಟರ್‌ಗಳು ಮತ್ತು ಒಂದು ಗ್ರೀಕ್ ನೌಕಾಪಡೆಯ ಫ್ರಿಗೇಟ್ ನಾಪತ್ತೆಯಾದವರ ಹುಟುಕಾಟ ನಡೆಸುತ್ತಿದೆ. ಸಮುದ್ರ ಪ್ರಕ್ಷುಬ್ಧವಾಗಿದ್ದು, 3 ಕೋಸ್ಟ್ ಗಾರ್ಡ್ ಹಡಗುಗಳು ಈ ಪ್ರದೇಶವನ್ನು ತಲುಪಲು ಸಮಸ್ಯೆ ಎದುರಿಸುತ್ತಿದೆ ಎಂದು ಕೋಸ್ಟ್ ಗಾರ್ಡ್ ವಕ್ತಾರರು ತಿಳಿಸಿದ್ದಾರೆ.

ರಕ್ಷಿಸಲ್ಪಟ್ಟ ಸಿಬ್ಬಂದಿ  ಹಡಗು ಮುಳುಗಡೆಯಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.  ಈ ಪ್ರದೇಶದಲ್ಲಿ ಗಂಟೆಗೆ 80 ಕಿಮೀ ಗಿಂತ ಹೆಚ್ಚಿನ ವೇಗದಲ್ಲಿ ಗಾಳಿ ಬೀಸುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನು ಓದಿ: ಉತ್ತರಪ್ರದೇಶ: ದಲಿತ ಬಾಲಕನಿಗೆ ಥಳಿತ; ಪ್ರಕರಣ ದಾಖಲು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ: ಹಿಂಸೆಗೆ ಪ್ರಚೋದಿಸುವ, ಮುಸ್ಲಿಮರ ವಿರುದ್ಧದ ಜಾಹೀರಾತುಗಳನ್ನು ಅನುಮೋದಿಸಿದ್ದ ಮೆಟಾ: ವರದಿ

0
ಭಾರತದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆ, ಈ ಮಧ್ಯೆ ತಪ್ಪು ಮಾಹಿತಿಯನ್ನು ಹರಡುವ ಸುದ್ದಿಗಳು,  ವೀಡಿಯೊಗಳು ದೇಶದ ಸಾಮರಸ್ಯಕ್ಕೆ ಪ್ರಮುಖ ಬೆದರಿಕೆಯಾಗಿ ಹೊರಹೊಮ್ಮಿವೆ. 2024ರ ಲೋಕಸಭಾ ಚುನಾವಣೆಯ ಸಮಯದಲ್ಲಿ ತಪ್ಪು ಮಾಹಿತಿಯನ್ನು ಹರಡುವ ಹಲವಾರು...