Homeಮುಖಪುಟಯುಪಿ ಉದ್ಯಮಿಯ ಮನೆಗೆ ಐಟಿ ದಾಳಿ: ಇದುವರೆಗೂ ₹ 150 ಕೋಟಿ ಎಣಿಕೆ

ಯುಪಿ ಉದ್ಯಮಿಯ ಮನೆಗೆ ಐಟಿ ದಾಳಿ: ಇದುವರೆಗೂ ₹ 150 ಕೋಟಿ ಎಣಿಕೆ

- Advertisement -
- Advertisement -

ಸುಗಂಧ ದ್ರವ್ಯ ಉದ್ಯಮದ ಭಾಗವಾಗಿರುವ ಕಾನ್ಪುರದ ಉದ್ಯಮಿ ಪಿಯೂಷ್ ಜೈನ್ ಅವರ ಮನೆಗಳ ಮೇಲೆ ಐಟಿ ಇಲಾಖೆ ದಾಳಿ ನಡೆಸಿದ್ದು, ಇದುವರೆಗೆ 150 ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಇಲಾಖೆ ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ದಾಳಿಯ ಸಮಯದಲ್ಲಿ ತೆಗೆಯಲಾಗಿರುವ ಚಿತ್ರಗಳು ವೈರಲ್ ಆಗಿದ್ದು, ಎರಡು ದೊಡ್ಡ ವಾರ್ಡ್‌ರೋಬ್‌ಗಳಲ್ಲಿ ಹಣವನ್ನು ತುಂಬಿರುವುದು ಇದರಲ್ಲಿ ಕಾಣುತ್ತದೆ. ಎಲ್ಲಾ ಕಟ್ಟುಗಳನ್ನು ಪ್ಲಾಸ್ಟಿಕ್ ಕವರ್‌ಗಳಲ್ಲಿ ಸುತ್ತಿ ಹಳದಿ ಟೇಪ್‌ನಿಂದ ಭದ್ರಪಡಿಸಲಾಗಿದೆ. ಫೋಟೋದಲ್ಲಿ 30 ಕ್ಕೂ ಹೆಚ್ಚು ಕಟ್ಟುಗಳು ಗೋಚರಿಸುತ್ತವೆ.

ಇದನ್ನೂ ಓದಿ:ಉತ್ತರ ಪ್ರದೇಶ:ಪ್ರಧಾನಿ ವಿರುದ್ಧ ಪ್ರತಿಭಟನೆಗೆ ಸಜ್ಜಾಗಿದ್ದ 70 ಮಂದಿ ಎಸ್‌ಪಿ ಕಾರ್ಯಕರ್ತರ ಬಂಧನ, ಬಿಡುಗಡೆ

ಮತ್ತೊಂದು ಚಿತ್ರದಲ್ಲಿ ಐಟಿ ಮತ್ತು ಜಿಎಸ್‌ಟಿ ಅಧಿಕಾರಿಗಳು ಕೋಣೆಯ ಮಧ್ಯದಲ್ಲಿ ಹಣದ ರಾಶಿಗಳ ಸುತ್ತ ಕೂತಿದ್ದು, ಮೂರು ನೋಟು ಎಣಿಸುವ ಯಂತ್ರಗಳ ಕೂಡಾ ಇದೆ. ವಶಪಡಿಸಿಕೊಂಡ ಒಟ್ಟು ಹಣದ ಮೊತ್ತವನ್ನು ಇನ್ನೂ ಎಣಿಕೆ ಮಾಡಲಾಗುತ್ತಿದೆ.

ಗುರುವಾರದಿಂದ ದಾಳಿ ಆರಂಭವಾಗಿದ್ದು, ಇನ್ನೂ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ. ಉತ್ತರ ಪ್ರದೇಶದ ಕಾನ್ಪುರ, ಮುಂಬೈ ಮತ್ತು ಗುಜರಾತ್‌ನಲ್ಲಿ ದಾಳಿ ನಡೆಯುತ್ತಿವೆ.

ತೆರಿಗೆ ವಂಚನೆಗಾಗಿ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಅಧಿಕಾರಿಗಳು ಈ ದಾಳಿಗಳನ್ನು ಪ್ರಾರಂಭಿಸಿದ್ದಾರೆ. ವಿವರಗಳನ್ನು ಪತ್ತೆಹಚ್ಚಿದ ನಂತರ, ಆದಾಯ ತೆರಿಗೆ ಇಲಾಖೆಯನ್ನು ಸಹ ದಾಳಿಯಲ್ಲಿ ಸೇರಿಕೊಂಡಿದೆ.

ಇದನ್ನೂ ಓದಿ:ಉತ್ತರ ಪ್ರದೇಶ ಚುನಾವಣೆ: ಅಖಿಲೇಶ್ ಯಾದವ್‌ಗೆ ಬೆಂಬಲಿಸಲು ವಾರಣಾಸಿಗೆ ತೆರಳಲಿರುವ ಮಮತಾ ಬ್ಯಾನರ್ಜಿ

ನಕಲಿ ರಶೀದಿ ಮೂಲಕ ಮತ್ತು ಇ-ವೇ ಬಿಲ್‌ಗಳಿಲ್ಲದ ಸರಕುಗಳ ರವಾನೆಗೆ ಹಣವನ್ನು ಲಿಂಕ್ ಮಾಡಲಾಗಿದೆ ಎಂದು ಜಿಎಸ್‌ಟಿ ಅಧಿಕಾರಿಗಳು ತಿಳಿಸಿದ್ದಾರೆ. ಈ ನಕಲಿ ರಶೀದಿಗಳನ್ನು ಕಾಲ್ಪನಿಕ ಸಂಸ್ಥೆಗಳ ಹೆಸರಿನಲ್ಲಿ ರಚಿಸಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ತಲಾ 50,000 ರೂ.ಗಳ 200 ಕ್ಕೂ ಹೆಚ್ಚು ರಶೀದಿಗಳನ್ನು ಜಿಎಸ್‌ಟಿ ಪಾವತಿಗಳಿಲ್ಲದೆ ರಚಿಸಲಾಗಿದ್ದು, ಇದು ವ್ಯಾಪಾರಿಯ ಗೋದಾಮಿನೊಳಗೆ ನಾಲ್ಕು ಟ್ರಕ್‌ಗಳಲ್ಲಿ ಕಂಡುಬಂದಿವೆ. ಎಲ್ಲಾ ನಾಲ್ಕು ಟ್ರಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ:ಉತ್ತರ ಪ್ರದೇಶದ 6 ವರ್ಷದ ಬಾಲಕಿ ಮೇಲೆ ಕ್ರೂರ ಲೈಂಗಿಕ ದೌರ್ಜನ್ಯ, ಕೊಲೆ: ಆರೋಪಿಯ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ನೀಡುವ ಪ್ರಯತ್ನ ಬೆಂಬಲಿಸಿದ ಭಾರತ

0
ವಿಶ್ವಸಂಸ್ಥೆಯ ಸಂಪೂರ್ಣ ಸದಸ್ಯತ್ವ ಪಡೆಯುವ ಪ್ಯಾಲೆಸ್ತೀನ್‌ನ ಮನವಿಯನ್ನು ಮರು ಪರಿಶೀಲಿಸಿ ಅನುಮೋದಿಸುವ ವಿಶ್ವಾಸವಿದೆ ಎಂದು ಭಾರತ ಬುಧವಾರ ಹೇಳಿದೆ. ಈ ಮೂಲಕ ಪ್ಯಾಲೆಸ್ತೀನ್‌ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ಪಡೆಯುವುದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಇಸ್ರೇಲ್ ಮತ್ತು...