Homeಮುಖಪುಟಉತ್ತರ ಪ್ರದೇಶ ಚುನಾವಣೆ: ಅಖಿಲೇಶ್ ಯಾದವ್‌ಗೆ ಬೆಂಬಲಿಸಲು ವಾರಣಾಸಿಗೆ ತೆರಳಲಿರುವ ಮಮತಾ ಬ್ಯಾನರ್ಜಿ

ಉತ್ತರ ಪ್ರದೇಶ ಚುನಾವಣೆ: ಅಖಿಲೇಶ್ ಯಾದವ್‌ಗೆ ಬೆಂಬಲಿಸಲು ವಾರಣಾಸಿಗೆ ತೆರಳಲಿರುವ ಮಮತಾ ಬ್ಯಾನರ್ಜಿ

- Advertisement -
- Advertisement -

ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷಕ್ಕೆ ತೃಣಮೂಲ ಕಾಂಗ್ರೆಸ್ ಬೆಂಬಲ ನೀಡಲಿದೆ ಎಂಬ ಸೂಚನೆಯ ಬೆನ್ನಲ್ಲೇ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಮುಂದಿನ ತಿಂಗಳು ವಾರಣಾಸಿಗೆ ಭೇಟಿ ನೀಡುವ ಮುನ್ಸೂಚನೆ ದೊರಕಿದೆ.

“ಅಖಿಲೇಶ್ ಯಾದವ್‌ಗೆ ನಮ್ಮ ಸಹಾಯ ಬೇಕಾದರೆ ನಾವು ಸಹಾಯ ಮಾಡಲು ಸಿದ್ಧರಿದ್ದೇವೆ ಎಂದು ದೀದಿ (ಮಮತಾ ಬ್ಯಾನರ್ಜಿ) ಈಗಾಗಲೇ ದೆಹಲಿಯಲ್ಲಿ ಹೇಳಿದ್ದಾರೆ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಪರವಾಗಿ ಎಸ್‌ಪಿ ಹಿರಿಯ ನಾಯಕಿ ಜಯಾ ಬಚ್ಚನ್ ಮತ ಯಾಚಿಸಿದ್ದರು. ಅದಕ್ಕೆ ಪ್ರತಿಯಾಗಿ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷಕ್ಕೆ ಬೆಂಬಲ ನೀಡಲಾಗುವುದು” ಎಂದು ಲಲಿತೇಶಪತಿ ತ್ರಿಪಾಠಿ ಹೇಳಿದ್ದಾರೆ. ಲಲಿತೇಶಪತಿ ತ್ರಿಪಾಠಿ ಇತ್ತೀಚೆಗೆ ತೃಣಮೂಲ ಕಾಂಗ್ರೆಸ್‌ಗೆ ಸೇರಿದವರು.

“ನಮ್ಮ ಗುರಿ ಒಂದೇ ಆಗಿದೆ. ಈ ಶಕ್ತಿಗಳನ್ನು (ಬಿಜೆಪಿ ನೇತೃತ್ವದ) ಸೋಲಿಸುವುದಕ್ಕೆ ಒಂದಾಗುತ್ತೆವೆ. ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಹೋರಾಟದಲ್ಲಿ ನಾವು ಸಹ ಇದ್ದೇವೆ. ಮಮತಾ ಬ್ಯಾನರ್ಜಿ ಬಹುಶಃ ಜನವರಿ ಎರಡನೇ ವಾರದಲ್ಲಿ ವಾರಣಾಸಿಗೆ ಭೇಟಿ ನೀಡಲಿದ್ದಾರೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಾಗಾಲ್ಯಾಂಡ್ ಬಿಜೆಪಿಯ 12 ಬಂಡಾಯ ನಾಯಕರು ಕೋಲ್ಕತ್ತಾದಲ್ಲಿ: ಟಿಎಂಸಿ ಸೇರುವ ಸಾಧ್ಯತೆ

“ಟಿಎಂಸಿ ಸಭೆಗಳನ್ನು ನಡೆಸುತ್ತಿದ್ದು, ಉತ್ತರ ಪ್ರದೇಶದಲ್ಲಿ ತನ್ನನ್ನು ಹೇಗೆ ಬಲಪಡಿಸಿಕೊಳ್ಳಬೇಕೆಂದು ಚರ್ಚಿಸುತ್ತಿದೆ. ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ವಾರಣಾಸಿ ಭೇಟಿಗೆ ಸಂಬಂಧಿಸಿದಂತೆ, ದಿನಾಂಕ ಅಂತಿಮಗೊಳಿಸಿಲ್ಲ. ಡಿಸೆಂಬರ್‌ನಲ್ಲಿ ಅವರು ಯುಪಿಗೆ ಹೋಗಬೇಕು ಎಂದು ನಾವು ಯೋಚಿಸಿದ್ದೆವು. ಆದರೆ ಹಲವು ಕಾರ್ಯ‌ಕ್ರಮಗಳಿಂದಾಗಿ ಅದು ಸಾಧ್ಯವಾಗುತ್ತಿಲ್ಲ” ಎಂದಿದ್ದಾರೆ.

“ತೃಣಮೂಲದ ತಕ್ಷಣದ ಗಮನ ಉತ್ತರ ಪ್ರದೇಶದ ಮೇಲಿಲ್ಲ. ಸದ್ಯಕ್ಕೆ ಗೋವಾ ಮತ್ತು ತ್ರಿಪುರ ರಾಜ್ಯಗಳ ಮೇಲೆ ಟಿಎಂಸಿ ಹಚ್ಚು ಗಮನವಿಡುತ್ತಿದೆ. ಹೀಗಾಗಿ ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಸ್ಪರ್ಧಿಸುವುದಿಲ್ಲ” ಎಂದು ತ್ರಿಪಾಠಿ ಹೇಳಿದ್ದಾರೆ.

ತೃಣಮೂಲದಲ್ಲಿ ಹೊಸ ಸದಸ್ಯರ ಸೇರ್ಪಡೆಯ ಮೊದಲ ಹಂತವು ವಾರಣಾಸಿ ನಗರದಲ್ಲಿ ನಡೆಯಲಿರುವುದರಿಂದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾರಣಾಸಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಎಸ್‌ಪಿಯ ರಾಷ್ಟ್ರೀಯ ಉಪಾಧ್ಯಕ್ಷ ಕಿರಣ್‌ಮೋಯ್ ನಂದಾ “ನಾವು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಬೆಂಬಲಿಸಿದ್ದೇವೆ. ಚುನಾವಣೆಯಲ್ಲಿ ನಾನೇ ಅವರ ಪರವಾಗಿ ಪ್ರಚಾರ ಮಾಡಿದ್ದೇನೆ. ನಾವು ಬಿಜೆಪಿಯನ್ನು ಸೋಲಿಸಲು ಬಯಸುತ್ತೇವೆ. ದೀದಿ ಕೂಡ ಬಿಜೆಪಿಯನ್ನು ಸೋಲಿಸಲು ಬಯಸುತ್ತಾರೆ. ಅವರು ನಮ್ಮನ್ನು ಬೆಂಬಲಿಸಿದರೆ ಅದನ್ನು ಸಂತೋಷದಿಂದ ಸ್ವಾಗತಿಸುತ್ತೇವೆ” ಎಂದು ಹೇಳಿದ್ದಾರೆ.


ಇದನ್ನೂ ಓದಿ: ತ್ರಿಪುರದಲ್ಲಿ ನಟಿ, ಟಿಎಂಸಿ ನಾಯಕಿ ಸಯೋನಿ ಘೋಷ್ ಮೇಲೆ ಹಲ್ಲೆ, ಬಂಧನ – ಪ್ರತಿಭಟನೆಗೆ ಸಜ್ಜು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಮಮತಾ ಬ್ಯಾನರ್ಜಿ ಅಖಿಲೇಶ್ ಯಾದವ್ ಗೆ ರಾಜಕೀಯ ತಂತ್ರ ಏನು ಹೇಳಬಹುದು UP ಚುನಾವಣಾ ಪ್ರಚಾರದಲ್ಲಿ !ಮಮತಾ ತರಾನೆ ಕೈ ಕಾಲು ಮುರಿದಿದೆ ಅಂತ ಪ್ರಚಾರ ಮಾಡಿ ಅನ್ನಬಹುದೆ !ಅಥವಾ ಯಾದವ್ ಗೆ ಉತ್ತರ ಪ್ರದೇಶದ ಯೋಗಿ ಆಳ್ವಿಕೆ ನೋಡಿ ಹಾರ್ಟ್ ಅಟಾಕ್ ಆಗ್ತಿದೆ ಅಂತ ಪ್ರಚಾರ ಮಾಡಿ ಅಂತ ಹೇಳಬಹುದ! ಯಕ್ಷಪ್ರಶ್ನೇಯಾಗಿದೆ ಜನರಿಗೆ .

LEAVE A REPLY

Please enter your comment!
Please enter your name here

- Advertisment -

Must Read

ಅಮೆರಿಕದ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಬಗ್ಗೆ ಸ್ಯಾಮ್ ಪಿತ್ರೋಡಾ ಕೊಟ್ಟಿದ್ದ ವಿವರಣೆಯನ್ನು ‘ರಾಜಕೀಯ ಅಸ್ತ್ರ’...

0
ಲೋಕಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ಮೋದಿ ಹಾದಿಯಾಗಿ ಬಿಜೆಪಿ ನಾಯಕರು ವಿವಾದಾತ್ಮಕ ಹೇಳಿಕೆ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಮತ್ತು ಕಾಂಗ್ರೆಸ್‌ನ ಪ್ರಣಾಳಿಕೆ ವಿರುದ್ಧ ವಾಗ್ಧಾಳಿ ನಡೆಸುತ್ತಾ ಬಂದಿದ್ದಾರೆ. ಈ ಮಧ್ಯೆ ಭಾರತೀಯ ಸಾಗರೋತ್ತರ...