Homeಮುಖಪುಟಹೊನ್ನಾವರ; ಮಹಿಳೆಯ ಸ್ನಾನದ ವಿಡಿಯೋ ವೈರಲ್ ಮಾಡಿದ ಬಿಜೆಪಿ ನಗರಾಧ್ಯಕ್ಷ ನಾಪತ್ತೆ?

ಹೊನ್ನಾವರ; ಮಹಿಳೆಯ ಸ್ನಾನದ ವಿಡಿಯೋ ವೈರಲ್ ಮಾಡಿದ ಬಿಜೆಪಿ ನಗರಾಧ್ಯಕ್ಷ ನಾಪತ್ತೆ?

- Advertisement -
- Advertisement -

ವಿವಾಹಿತ ಮಹಿಳೆ ಸ್ನಾನ ಮಾಡುತ್ತಿದ್ದ ವಿಡಿಯೋ ವೈರಲ್ ಮಾಡಿದ ಹೊನ್ನಾವರ ನಗರ ಬಿಜೆಪಿ ಘಟಕದ ಅಧ್ಯಕ್ಷ ಉಮೇಶ್ ಸಾರಂಗ ವಿರುದ್ದ ಸಂತ್ರಸ್ಥ ಮಹಿಳೆ ಪೊಲೀಸ್ ದೂರು ನೀಡುತ್ತಿದ್ದಂತೆಯೆ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ. ಬಿಜೆಪಿಯ ಹಿಂದುತ್ವದ ದೊಡ್ಡ ದ್ವನಿಯಾಗಿದ್ದ ಸಾರಂಗನ ಬಣ್ಣ ಬಯಲಾಗುತ್ತಿದ್ದಂತೆ ಮುಜುಗರಕ್ಕೀಡಾದ ಬಜೆಪಿ ಜಿಲ್ಲಾ ಘಟಕ ಆತನ ರಾಜಿನಾಮೆ ಪಡೆಯಲು ಹರಸಹಾಸ ಮಾಡಬೇಕಾಗಿ ಬಂದಿದ್ದು ಸಾರ್ವಜನಿಕ ವಲಯದಲ್ಲಿ ಚರ್ಚೆಗೀಡಾಗಿದೆ.

ಮಹಿಳೆಯೊಂದಿಗೆ ರಾಜಿ ನಡೆಸಲು ಮಾಡಿದ ಪ್ರಯತ್ನಗಳೆಲ್ಲ ವಿಫಲವಾದ ನಂತರ ಉಮೇಶ್ ಸಾರಂಗನಿಂದ ನಗರಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಪಡೆಯಲಾಗಿದ್ದು, ಬಂಧನದ ಭಯದಿಂದ ಆರೋಪಿ ತಲೆಮರೆಸಿಕೊಂಡಿದ್ದಾನೆ. ದೂರುದಾರ ಮಹಿಳೆ ಸಾರಂಗನ ಕೇರಿಯವಳೆಯಾಗಿದ್ದು, ಆತನ ಆಟೋ ರಿಕ್ಷಾದಲ್ಲಿ ಪ್ರಯಾಣಿಸುವಾಗ ಪರಿಚಯವಾಗಿತ್ತೆಂದು ಆಕೆ ದೂರಿನಲ್ಲಿ ಹೇಳಿದ್ದಾರೆ. ಆಕೆ ಸ್ನಾನ ಮಾಡುತ್ತಿದ್ದ ವೀಡಿಯೋ ಮಾಡಿ ವಾಟ್ಸಪ್‌ನಲ್ಲಿ ಕಳಿಸಿಕೊಡುವಂತೆ ಪೀಡಿಸತೋಡಗಿದ್ದ ಆಟೋ ಓಡಿಸುವ ವೃತ್ತಿಯ ಸಾರಂಗ್, ವೀಡಿಯೋ ಕಳಿಸದಿದ್ದರೆ ನೀನು ತನ್ನೊಂದಿಗೆ ಸಲಿಗೆಯಿಂದಿರುವುದನ್ನು ನಿನ್ನ ಗಂಡನಿಗೆ ತಿಳಿಸುತ್ತೇನೆಂದು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದನೆಂದು ಮಹಿಳೆ ಹೇಳಿದ್ದಾಳೆ.

ಆತನ ಬೆದರಿಕೆಗೆ ಹೆದರಿ 3-4 ತಿಂಗಳ ಹಿಂದೆ ಸ್ನಾನ ಮಾಡುತ್ತಿರುವ ವೀಡಿಯೋ ಕಳಿಸಿದ್ದಳೆನ್ನಲಾಗಿದೆ. ಆದರೂ ಸಾರಂಗ್ ಪೀಡಿಸುತ್ತಿದ್ದನೆನ್ನಲಾಗಿದೆ. ಹೀಗೆ ನೀನು ಪದೆ-ಪದೆ ಮನೆಯತ್ತ ಬರುವುದು, ಅಸಭ್ಯವಾಗಿ ವರ್ತಿಸುವುದು ಸರಿಯಲ್ಲ; ನನ್ನ ಗಂಡನಿಗೆ, ಕುಟುಂಬದವರಿಗೆ ಇದೆಲ್ಲ ಗೊತ್ತಾದರೆ ಸಮಸ್ಯೆಯಾಗುತ್ತದೆ. ನೀನು ನನ್ನೊಂದಿಗೆ ಇನ್ನು ಮುಂದೆ ಮಾತಾಡಬೇಡ ಎಂದು ಬಿಜೆಪಿ ನಗರಾಧ್ಯಕ್ಷ ಸಾರಂಗನಿಗೆ ಹೇಳಿದ್ದ ಮಹಿಳೆ ಒಂದು ತಿಂಗಳಿಂದ ಆತನ ಸಂಪರ್ಕ ಕಡಿದುಕೊಂಡಿದ್ದರು. ಇದರಿಂದ ಕೆರಳಿದ ಬಿಜೆಪಿ ಮುಖಂಡ ಸಾರಂಗ್ ವಿಡಿಯೋ ವೈರಲ್ ಮಾಡಿದ್ದಾನೆಂದು ಮಹಿಳೆ ಕೊಟ್ಟಿರುವ ಪೊಲೀಸ್ ದೂರಿನಲ್ಲಿ ದಾಖಲಿಸಿದ್ದಾರೆ.

ಮಹಿಳೆ ತನ್ನ ಗಂಡನ ಜತೆ ಠಾಣೆಗೆ ಹೋಗಿ ದೂರು ದಾಖಲಿಸಿದರೂ ಪೊಲೀಸರು ಕೈಗೆ ಸಿಕ್ಕ ಆರೋಪಿ ಆಳುವ ಪಕ್ಷದ ನಗರಾಧ್ಯಕ್ಷನೆಂಬ ಕಾರಣಕ್ಕೆ ಬಂಧಿಸಲಿಲ್ಲವೆಂದು ಆರೋಪಿಸಲಾಗಿದೆ. ರಾಜಕೀಯ ಪ್ರಭಾವದಿಂದ ತಲೆ ಮರೆಸಿಕೊಂಡಿರುವ ಸಾರಂಗ ನಿರೀಕ್ಷಣಾ ಜಾಮೀನು ಪಡೆಯಲು ಅನುಕೂಲಮಾಡಿಕೊಡಲಾಗಿದೆ ಎಂದು ದೂರಲಾಗಿದೆ.


ಇದನ್ನೂ ಓದಿ: ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ರಾಜೇಶ್ವರಿಗೆ ಜಾಮೀನು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...