ಹಿಂದೂ ಮಹಿಳೆಗೆ ಕಿರುಕುಳ ನೀಡಿದ್ದಾರೆ ಎಂಬ ಆರೋಪದ ಮೇಲೆ ಗುಂಪಿನಿಂದ ಹಲ್ಲೆಗೊಳಗಾಗಿ, ಬಳಿಕ ಪೊಲೀಸರಿಂದ ಬಂಧಿತರಾಗಿದ್ದ ಬಳೆ ವ್ಯಾಪಾರಿಯನ್ನು ಮಧ್ಯ ಪ್ರದೇಶ ಇಂದೋರ್ ನ್ಯಾಯಾಲಯ ಸೋಮವಾರ (ಡಿ.2) ಖುಲಾಸೆಗೊಳಿಸಿದೆ ಎಂದು ವರದಿಯಾಗಿದೆ.
ಉತ್ತರ ಪ್ರದೇಶದ ತಸ್ಲೀಂ ಅಲೀ ಎಂಬ ಬಳೆ ವ್ಯಾಪಾರಿಗೆ ರಾಖಿ ಹಬ್ಬದ ವೇಳೆ ಬಳೆ ವ್ಯಾಪಾರ ಮಾಡುವ ನೆಪದಲ್ಲಿ ಹಿಂದೂ ಮಹಿಳೆಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಧ್ಯ ಪ್ರದೇಶದ ಇಂದೋರ್‌ನಲ್ಲಿ ಗುಂಪೊಂದು ಥಳಿಸಿತ್ತು. 2021ರ ಆಗಸ್ಟ್ 22ರಂದು ಈ ಘಟನೆ ನಡೆದಿತ್ತು.
ಈ ಕುರಿತ ವೈರಲ್ ವಿಡಿಯೋದಲ್ಲಿ, ತಸ್ಲೀಂ ಅಲೀಗೆ ಥಳಿಸಿದ ಗುಂಪು ಮತ್ತೊಮ್ಮೆ ‘ಹಿಂದೂ ಪ್ರದೇಶ’ ಕ್ಕೆ ಕಾಲಿಡಬೇಡ ಎಂದು ಎಚ್ಚರಿಕೆ ನೀಡಿದ ದೃಶ್ಯವಿತ್ತು. ಈ ವಿಡಿಯೋ ದೇಶದಾದ್ಯಂತ ವೈರಲ್ ಆಗಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.
ತನ್ನ ಮೇಲೆ ಹಲ್ಲೆ ನಡೆಸಿದವರ ಮೇಲೆ ಕ್ರಮ ಕೈಗೊಳ್ಳುವಂತೆ ತಸ್ಲೀಂ ಅಲೀ ದೂರು ನೀಡಿದ್ದರು. ಇದೇ ವೇಳೆ 13 ವರ್ಷದ ಬಾಲಕಿಯೊಬ್ಬಳು ತಸ್ಲೀಂ ಅಲೀ ವಿರುದ್ದ ಪ್ರತಿದೂರು ದಾಖಲಿಸಿದ್ದರು. ಆ ದೂರು ಆಧರಿಸಿ ತಸ್ಲೀಂ ಅಲೀ ಮೇಲೆ ಪೋಕ್ಸೋ ಮತ್ತು ಐಪಿಸಿಯ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿದ್ದ ಪೊಲೀಸರು ಜೈಲಿಗಟ್ಟಿದ್ದರು.
ತನ್ನ ಮೇಲೆ ಹಲ್ಲೆ ನಡೆಸಿದ್ದವರ ವಿರುದ್ಧ ಅಲಿ ಬನಗಂಗಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಐದಾರು ಜನರ ಗುಂಪೊಂದು ತನ್ನ ಹೆಸರನ್ನು ಕೇಳಿ ತನ್ನನ್ನು ಥಳಿಸಿದೆ,ಕೋಮು ನಿಂದನೆಗಳನ್ನು ಮಾಡಿದೆ. ತನ್ನ ಬಳಿಯಿದ್ದ 10,000 ರೂ. ಬೆಲೆಯ ಮೊಬೈಲ್ ಫೋನ್ ಮತ್ತು ಆಧಾರ ಕಾರ್ಡ್ ಸೇರಿದಂತೆ ದಾಖಲೆಗಳನ್ನು ಕಿತ್ತುಕೊಂಡಿದೆ ಎಂದು ಹೇಳಿದ್ದರು.
ಅಲೀ ಅವರ ದೂರಿನ ಆಧಾರದಲ್ಲಿ ಪೋಲಿಸರು ನಾಲ್ವರನ್ನು ಬಂಧಿಸಿದ್ದರು. ಆದರೆ, ಇದರ ಬೆನ್ನಲ್ಲೇ 13 ಹರೆಯದ ಬಾಲಕಿ ದೂರು ನೀಡಿದ್ದರಿಂದ, ಪೊಲೀಸರು ಅಲಿ ವಿರುದ್ಧವೇ ಪೊಕ್ಸೊ ಪ್ರಕರಣ ಹೂಡಿ ಜೈಲಿಗೆ ತಳ್ಳಿದ್ದರು.
ವರದಿಗಳ ಪ್ರಕಾರ, ದೂರು ದಾಖಲಿಸಿದ್ದ ಬಾಲಕಿ ಸೇರಿದಂತೆ ಸಾಕ್ಷಿಗಳು ಪ್ರತಿಕೂಲ ಸಾಕ್ಷ್ಯ ನುಡಿದಿದ್ದರಿಂದ ಇಂದೋರ್ ಜಿಲ್ಲಾ ಮತ್ತು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ವಿ ರಶ್ಮಿ ಬಲ್ಟಾರ್ ಅವರು ತಸ್ಲೀಂ ಅಲಿಯನ್ನು ಖುಲಾಸೆಗೊಳಿಸಿದ್ದಾರೆ ಎಂದು ಅಲೀ ಪರ ವಕೀಲ ಶೇಖ್ ಅಲೀಮ್ ತಿಳಿಸಿದ್ದಾರೆ.
The police, instead of taking action for the hate crime, charged the Muslim victim with fake POSCO charges. He was finally acquitted after almost 4 years.
This another example of apartheid in action – the majoritarian mobs and police working in violent collusion. https://t.co/LcHgaBZC6v
— Sarayu Pani (@sarayupani) December 3, 2024
ಖುಲಾಸೆಗೊಂಡ ಬಳಿಕ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅಲೀ, “ನನಗೆ ಸಂತೋಷ ಮತ್ತು ದುಃಖ ಎರಡೂ ಆಗಿವೆ. ನನ್ನ ಪರವಾಗಿ ನಿಂತವರಿಗೆ, ನನ್ನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದವರಿಗೆ ಮತ್ತು ನನ್ನನ್ನು ಥಳಿಸಿದವರಿಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ನನ್ನ ಧರ್ಮ ಮತ್ತು ನನ್ನ ಹೆಸರಿನ ಕಾರಣದಿಂದಾಗಿ ನನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿತ್ತು” ಎಂದಿದ್ದಾರೆ.
“ನಾನು ಶಾಂತಿ ಬಯಸಿದ್ದೇನೆ, ನಡೆದು ಹೋದ ಘಟನೆಯನ್ನು ಮರೆಯಲು ಬಯಸುತ್ತೇನೆ. ಇಂದೋರ್ ನಗರದ ಬಗ್ಗೆ ನನಗೆ ಯಾವುದೇ ದ್ವೇಷವಿಲ್ಲ. ಅಲ್ಲಿಯ ಎಲ್ಲಾ ನಿವಾಸಿಗಳು ನನ್ನ ಸೋದರ- ಸೋದರಿಯರು. ಜೈಲಿನಲ್ಲಿ ಜೇಲರ್‌ಗಳಾಗಲಿ, ಪೋಲಿಸರಾಗಲಿ ನನಗೆ ಕಿರುಕುಳ ನೀಡಿರಲಿಲ್ಲ. ನಾನು ಸಂವಿಧಾನ ಮತ್ತು ನ್ಯಾಯಾಂಗದಲ್ಲಿ ವಿಶ್ವಾಸವನ್ನು ಹೊಂದಿದ್ದೆ” ಎಂದು ಹೇಳಿದ್ದಾರೆ.
“ಡಿಸೆಂಬರ್ 2021ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದಾಗ ನಾನು ಮತ್ತೊಮ್ಮೆ ಇಂದೋರ್‌ನ ಬೀದಿಗೆ ಹೋಗಿದ್ದೆ. ಆ ವೇಳೆ ನನ್ನಲ್ಲಿ ಭಯ ಆವರಿಸಿತ್ತು. ನನಗೆ ಆರು ಮಕ್ಕಳಿದ್ದಾರೆ. ಅವರ ಹೊಟ್ಟೆ ತುಂಬಿಸಬೇಕಿದೆ. ಹಾಗಾಗಿ, ನಾನು ಮತ್ತೆ ಇಂದೋರ್‌ಗೆ ಹೋಗುತ್ತೇನೆ. ಯುಪಿಯಿಂದ ಪಂಜಾಬ್, ಇಂದೋರ್‌ನ ಬೀದಿಗಳಿಗೆ ತೆರಳಿ ಜಾತ್ರೆ, ಮೇಳಗಳಲ್ಲಿ ಬಳೆ ವ್ಯಾಪಾರ ಮಾಡುವುದೇ ನನ್ನ ಕಾಯಕ. ನನ್ನ ತಂದೆ, ಅಜ್ಜ ಕೂಡ ಇದನ್ನೇ ಮಾಡಿದ್ದರು” ಎಂದು ತಸ್ಲೀಂ ಅಲೀ ತಿಳಿಸಿದ್ದಾರೆ
ವರದಿಗಳ ಪ್ರಕಾರ, ಮುಸ್ಲಿಂ ವ್ಯಾಪಾರಿಯಾದ ತಸ್ಲೀಂ ಅಲೀ ತನ್ನ ಹೆಸರನ್ನು ಮರೆಮಾಚಿ ‘ಗೋಲು ಸಿಂಗ್’ ಎಂಬ ಹೆಸರಿನಲ್ಲಿ ಹಿಂದೂ ಪ್ರದೇಶಗಳಲ್ಲಿ ವ್ಯಾಪಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಹಲ್ಲೆ ನಡೆಸಲಾಗಿದೆ. ಅಸಲಿಗೆ ‘ಗೋಲು’ ಎಂಬುವುದು ತಸ್ಲೀಂ ಅವರ ಊರಿನ ಅಥವಾ ನಿಕ್ ನೇಮ್ ಆಗಿದೆ. ಸಿಂಗ್ ಎನ್ನುವುದು ತಂದೆಯ ಹೆಸರಿನಿಂದ ಬಂದಿದೆ. ತಸ್ಲೀಂ ಅವರ ತಂದೆಯ ಹೆಸರು ಮೊಹರ್ ಅಲೀ. ದಾಖಲೆಗಳಲ್ಲಿ ಅದು ತಪ್ಪಾಗಿ ‘ಮೊಹರ್ ಸಿಂಗ್’ ಎಂದು ಬಂದಿತ್ತು. ನಂತರ ಅದು ಮೊಹರ್ ಅವರ ಮಗ ತಸ್ಲೀಂ ಆಧಾರ್ ಕಾರ್ಡ್‌ನಲ್ಲೂ ಹಾಗೇಯೇ ಮುಂದುವರೆದಿದೆ. ನ್ಯಾಯಾಲಯ ಕೂಡ ಈ ಅಂಶವನ್ನು ಗಮನಿಸಿದೆ. ಪ್ರಾಸಿಕ್ಯೂಷನ್ ತಸ್ಲೀಂ ಅಲೀಯ ಅಪರಾಧವನ್ನು ರುಜುವಾತು ಮಾಡುವಲ್ಲಿ ವಿಫಲವಾಗಿದೆ.
ತಸ್ಲೀಂ ಅಲೀ ಖುಲಾಸೆಗೊಂಡಿರುವ ಕುರಿತು ಎಕ್ಸ್‌ನಲ್ಲಿ ಬರೆದುಕೊಂಡಿರುವ ಖ್ಯಾತ ಫ್ಯಾಕ್ಟ್‌ಚೆಕ್ಕರ್ ಮೊಹಮ್ಮದ್ ಝುಬೈರ್, “ಅಲೀ ಅವರು ಹಲ್ಲೆಗೊಳಗಾದಾಗ ನ್ಯೂಸ್ ಚಾನೆಲ್‌ಗಳು ‘ಲವ್ ಜಿಹಾದ್’ ಎಂಬ ಶೀರ್ಷಿಕೆ ಕೊಟ್ಟು ಸುದ್ದಿ ಮಾಡಿತ್ತು. ಈಗ ಅವರು ಎಲ್ಲಾ ಪ್ರಕರಣಗಳಲ್ಲಿ ಖುಲಾಸೆಗೊಂಡಿದ್ದಾರೆ. ಎಷ್ಟು ಚಾನೆಲ್‌ಗಳು ಸುದ್ದಿ ಮಾಡಿವೆ? ಎಂದು ಪ್ರಶ್ನಿಸಿದ್ದಾರೆ.
"इंदौर में चूड़ी वाले भाई के साथ जो जुर्म हुआ, जो हैवानियत हुई उस पर पुलिस ने ऐक्शन लिया…"
पुलिस ने क्या कार्रवाई की? उन्होंने उस पर POCSO समेत 9 धाराओं के तहत मामला दर्ज किया. तस्लीम को 4 महीने जेल में रहना पड़ा. अब साढ़े तीन साल बाद इंदौर कोर्ट ने तस्लीम को सभी आरोपों से बरी… https://t.co/MTjv5L3ehj pic.twitter.com/qOmDtSP4tA— Mohammed Zubair (@zoo_bear) December 4, 2024
ಅವತ್ತು ‘ಬಳೆ ನೆಪ..ಲವ್ ಜಿಹಾದ್ ಗುರಿ’ ಎಂಬ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟಿಸಿದ್ದ ನೀವು ಖುಲಾಸೆಗೊಂಡ ಬಗ್ಗೆ ಸುದ್ದಿ ಮಾಡಿದ್ದೀರಾ? ಎಂದು ನ್ಯೂಸ್ 18 ಮಧ್ಯ ಪ್ರದೇಶ, ಉತ್ತರಾಖಂಡ ಚಾನೆಲ್‌ಗೆ ಕೇಳಿದ್ದಾರೆ.
ಇದನ್ನೂ ಓದಿ : ಸಂಭಾಲ್ ನಂತರ ಮತ್ತೊಂದು ವಿವಾದ: ಜಾಮಾ ಮಸೀದಿಯ ಮಾಲೀಕತ್ವಕ್ಕಾಗಿ ನ್ಯಾಯಾಲಯದ ಮೊರೆ


