Homeಕರ್ನಾಟಕಕೇರಳ, ಗೋವಾದ ಬೀಫ್ ಗೋಮಾತೆಯಲ್ಲವೆ: ಬಿಜೆಪಿಗೆ ಸಿದ್ದರಾಮಯ್ಯ ಪ್ರಶ್ನೆ

ಕೇರಳ, ಗೋವಾದ ಬೀಫ್ ಗೋಮಾತೆಯಲ್ಲವೆ: ಬಿಜೆಪಿಗೆ ಸಿದ್ದರಾಮಯ್ಯ ಪ್ರಶ್ನೆ

ಬಿಜೆಪಿ ಹಿಂದುತ್ವದ ಹೆಸರಿನಲ್ಲಿ ದೇಶವನ್ನು ಒಡೆಯುತ್ತಿದೆ. ಮಹಾತ್ಮ ಗಾಂಧೀಜಿ ಹಿಂದೂ ಆಗಿರಲಿಲ್ಲವೆ? ಇಲ್ಲಿ ಕುಳಿತಿರುವ ರೈತ ಮುಖಂಡರು ಹಿಂದೂಗಳಲ್ಲವೆ? ಎಂದು ಅವರು ಕೇಳಿದರು.

- Advertisement -
- Advertisement -

ಬಿಜೆಪಿಯವರು ಗೋಮಾತೆ ಎಂದು ಹೇಳುತ್ತಾ ಇಲ್ಲಿ‌ ಬೀಫ್ ತಿನ್ನಬಾರದೆನ್ನುತ್ತಾರೆ. ಆದರೆ ನ್ಯೂಜಿಲೆಂಡ್, ಆಸ್ಟ್ರೇಲಿಯಾದಿಂದ ಬರುವ ಬೀಫ್ ತಿನ್ನಿ ಎನ್ನುತ್ತಾರೆ. ಅದು ಗೋಮಾತೆ ಅಲ್ಲವೆ? ಗೋವಾ, ಕೇರಳದ್ದು ಗೋಮಾತೆಯಲ್ಲವೆ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ದ ಕಿಡಿಕಾರಿದರು. ಅವರು ಶನಿವಾರ(ಇಂದು) ಬೆಂಗಳೂರಿನ ಫ್ರೀಡಂಪಾರ್ಕ್‌‌ನಲ್ಲಿ ’ಸಂಯುಕ್ತ ಹೋರಾಟ ಕರ್ನಾಟಕ’ ವತಿಯಿಂದ ನಡೆಯುತ್ತಿದ್ದ ನ್ಯಾಯಕ್ಕಾಗಿ ಉಪವಾಸ ಸತ್ಯಾಗ್ರಹದ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ರೈತರ ಹೋರಾಟಗಾರರನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, “ಮಹಾತ್ಮ ಗಾಂಧಿ ಹತ್ಯೆಯಾದ ದಿನವನ್ನು ನಾವು ಹುತಾತ್ಮ ದಿನವನ್ನಾಗಿ ಆಚರಿಸುತ್ತೇವೆ. ಮಹಾತ್ಮ ಗಾಂಧಿ ಯಾರ ವಿರುದ್ಧ ಹೋರಾಟ ಮಾಡಿದರೋ ಅವರ ಕೈಯಿಂದ ಹತ್ಯೆಯಾಗಲಿಲ್ಲ. ಬ್ರಿಟಿಷರ ವಿರುದ್ಧ ಹೋರಾಡಿದ್ದ ಗಾಂಧೀಜಿಯನ್ನು ಬ್ರಿಟಿಷರು ಕೊಂದಿಲ್ಲ. ಅವರನ್ನು ಕೊಂದಿದ್ದು ಮತಾಂಧ ನಾಥೂರಾಮ್ ಗೂಡ್ಸೆ ಮತ್ತು ಅವರ ಸ್ನೇಹಿತರು” ಎಂದು ಹೇಳಿದರು.

ಇದನ್ನೂ ಓದಿ: ‘ದೆಹಲಿ ಗಡಿಯಲ್ಲಿನ ರೈತ ಪ್ರತಿಭಟನೆಗೆ ಸೇರಿಕೊಳ್ಳಿ’: ಕಾರ್ಯಕರ್ತರಿಗೆ ಮನವಿ ಮಾಡಿದ ಅಕಾಲಿ ದಳ

“ಗಾಂಧೀಜಿ ಸ್ವಾತಂತ್ರ್ಯ ಚಳುವಳಿ ಜೊತೆಗೆ ಕಾರ್ಮಿಕ, ವಿದ್ಯಾರ್ಥಿ, ರೈತರ ಪರವಾಗಿಯು ಹೋರಾಟ ಮಾಡಿದ್ದರು. ಸ್ವಾತಂತ್ಯ್ರ ಹೋರಾಟದಲ್ಲಿ ಭಾಗಿಯಾದ ಯಾರಾದರು ಒಬ್ಬರು ಆರೆಸ್ಸೆಸ್ಸ್‌‌ನಲ್ಲಿ ಇದ್ದಾರೆಯೆ? ಬಿಜೆಪಿ ಸಂವಿಧಾನ ರಚನೆ ನಂತರ ಹುಟ್ಟಿದ ಪಕ್ಷವಾಗಿದೆ. ಇವರು ನಮಗೆ ದೇಶ ಭಕ್ತಿ ಹೇಳಿ‌ಕೊಡ್ತಾರೆ. ಕೋಮು ಗಲಭೆಯನ್ನು ಸೃಷ್ಟಿಸೋದು ದೇಶ ಭಕ್ತಿಯೆ? ಜಾತಿ ಜಾತಿಗಳ ನಡುವೆ ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚುವುದು ದೇಶ ಭಕ್ತಿಯೆ? ಇವರು ಬಂದು ನಮಗೆ ದೇಶ ಭಕ್ತಿ ಹೇಳಿಕೊಡಬೇಕೆ?” ಎಂದು ಪ್ರಶ್ನಿಸಿದರು.

ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ಮಾತನಾಡುತ್ತಿರುವ ಲೈವ್ ವಿಡಿಯೋ ನೋಡಿ

“ಎಲ್ಲ ಜಾತಿ, ಧರ್ಮಗಳಿರುವ ದೇಶವಿದು. ಬಿಜೆಪಿ ಹಿಂದುತ್ವದ ಹೆಸರಿನಲ್ಲಿ ದೇಶವನ್ನ ಒಡೆಯುತ್ತಿದೆ. ಮಹಾತ್ಮ ಗಾಂಧೀಜಿ ಹಿಂದೂ ಆಗಿರಲಿಲ್ಲವೆ? ಇಲ್ಲಿ ಕೂತಿರುವ ರೈತ ಮುಖಂಡರು ಹಿಂದೂಗಳಲ್ಲವೆ? ಬಿಜೆಪಿಯವರು ಗೋಮಾತೆ ಎಂದು ಹೇಳುತ್ತಾ ಇಲ್ಲಿ‌ ಬೀಫ್ ತಿನ್ನಬಾರದೆನ್ನುತ್ತಾರೆ. ಆದರೆ ನ್ಯೂಜಿಲೆಂಡ್ ಆಸ್ಟ್ರೇಲಿಯಾದಿಂದ ಬರುವ ಬೀಫ್ ತಿನ್ನಿ ಎನ್ನುತ್ತಾರೆ. ಅದು ಗೋಮಾತೆ ಅಲ್ಲವೆ? ಗೋವಾ, ಕೇರಳದ್ದು ಗೋಮಾತೆಯಲ್ಲವೆ?. ಗೋರಕ್ಷಣಾ ಕಾಯ್ದೆ ನೆಹರೂ ಕಾಲದಲ್ಲೇ ಇತ್ತು. ವಯಸ್ಸಾದ ರಾಸುಗಳನ್ನು ಮಾರಬಹುದೆಂದು ಆಗಲೆ ಕಾನೂನು ತರಲಾಗಿತ್ತು. ಬಿಜೆಪಿಯ ಈ ಕಾನೂನಿನಿಂದ ಹೋರಿ ಕರುಗಳನ್ನು ರೈತರು ಏನು ಮಾಡಬೇಕು? ರೈತರನ್ನು ಹಾಳು ಮಾಡುವ ಕಾನೂನನ್ನು ತಂದಿದ್ದಾರೆ. ಇದರಿಂದ ನಮ್ಮ ರೈತರು ನಿರುದ್ಯೋಗಿಗಳಾಗುತ್ತಾರೆ” ಎಂದು ಹೇಳಿದರು.

ಇದನ್ನೂ ಓದಿ: ರೈತರ ಪ್ರತಿಭಟನೆ: ಯುಪಿ ಸರ್ಕಾರದ ಕ್ರಮಕ್ಕೆ ಖಂಡನೆ – ಬಿಜೆಪಿ ನಾಯಕರಲ್ಲಿ ಅಸಮಾಧಾನ

“ಮೋದಿ ಕಾರ್ಪೊರೇಟ್ ಕಂಪನಿಯವರು ಏನು ಹೇಳುತ್ತಾರೋ ಅದನ್ನೆ ಕಾರ್ಯರೂಪಕ್ಕೆ ತರುತ್ತಾರೆ. ಈ ಬಾರಿ ಮೈನಸ್ ಜಿಡಿಪಿಯಿದೆ. ಆದರೆ ಅವರು ಮುಂದಿನ‌ ವರ್ಷಕ್ಕೆ ಶೇ. ‌11ಕ್ಕೆ ಹೋಗುತ್ತದೆ ಎಂದು ಲೆಕ್ಕ ಹಾಕುತ್ತಿದ್ದಾರೆ. ಇವರು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಜಿಡಿಪಿ ಮನಮೋಹನ್ ಸಿಂಗ್ ಕಾಲದಲ್ಲೇ 11% ಆಗಿತ್ತು. ಬಿಜೆಪಿಯಿಂದಾಗಿ ಅದು 4%ಕ್ಕೆ ಇಳಿದಿದೆ” ಎಂದು ಹೇಳಿದರು.

“ಕೊರೊನಾ ಸಮಯದಲ್ಲಿ ದೀಪ‌ ಹಚ್ಚಿ, ಚಪ್ಪಾಳೆ ತಟ್ಟಿ, ಜಾಗಟೆ ಬಾರಿಸಿ ಎಂದು ಹೇಳಿರುವ ಪ್ರಧಾನಿಯನ್ನು ಜಗತ್ತಿನಲ್ಲಿ ಎಲ್ಲಾದರು ನೋಡಿದ್ದೀರಾ?. ಜನರನ್ನು ಹೇಗೆ ಮೂರ್ಖರನ್ನಾಗಿ ಮಾಡುತ್ತಿದ್ದಾರೆ ನೋಡಿ, ಇವರ ಮಾತು ಕೇಳಿ ಎಲ್ಲರೂ ದೀಪ ಹಚ್ಚಿದರು. ನಮ್ಮ ಪಕ್ಷದ ಕೆಲವರು ದೀಪ ಹಚ್ಚಿದರು. ನಾನು ಅದನ್ನೆಲ್ಲಾ ಮಾಡುವುದಿಲ್ಲ, ಮೌಢ್ಯ ಎಂದು ಅವತ್ತೆ ಹೇಳಿದ್ದೆ. ಪ್ರಧಾನಿ ಎಂತಾ ಸಲಹೆ ಕೊಟ್ಟಿದ್ದಾರೆ ನೋಡಿ” ಎಂದು ಅವರು ಹೇಳಿದರು.

ಇದನ್ನೂ ಓದಿ: ಮೋದಿ ಗೋಡ್ಸೆ ದಿನ ಆಚರಿಸಬಹುದು ಅಷ್ಟೆ: ರೈತ ಮುಖಂಡ ಬಡಗಲಪುರ ನಾಗೇಂದ್ರ

ಕಾರ್ಯಕ್ರಮದ ನಡುವೆ ತೊಂದರೆ ಕೊಡಲು ಬಂದ ಸುವರ್ಣ ನ್ಯೂಸ್ ಚಾನೆಲ್‌ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಹೋರಾಟಗಾರರು- ವಿಡಿಯೋ ನೋಡಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...