Homeಮುಖಪುಟರೈತರ ಪ್ರತಿಭಟನೆ: ಯುಪಿ ಸರ್ಕಾರದ ಕ್ರಮಕ್ಕೆ ಖಂಡನೆ - ಬಿಜೆಪಿ ನಾಯಕರಲ್ಲಿ ಅಸಮಾಧಾನ

ರೈತರ ಪ್ರತಿಭಟನೆ: ಯುಪಿ ಸರ್ಕಾರದ ಕ್ರಮಕ್ಕೆ ಖಂಡನೆ – ಬಿಜೆಪಿ ನಾಯಕರಲ್ಲಿ ಅಸಮಾಧಾನ

"ಯುಪಿ ಸರ್ಕಾರದ ಈ ಕ್ರಮವು ಹರಿಯಾಣದ ಅನೇಕ ಭಾಗಗಳಲ್ಲಿನ ಆಂದೋಲನವನ್ನು ಮತ್ತಷ್ಟು ಚುರುಕುಗೊಳಿಸಬಹುದು ಮತ್ತು ಪಶ್ಚಿಮ ಯುಪಿಯನ್ನು ಮತ್ತೊಂದು ಪ್ರತಿಭಟನಾ ಕೇಂದ್ರವನ್ನಾಗಿ ಪರಿವರ್ತಿಸಬಹುದು" ಎಂದು ಬಿಜೆಪಿ ಸಂಸದರೊಬ್ಬರು ಹೇಳಿದ್ದಾರೆ.

- Advertisement -
- Advertisement -

“ಗಣರಾಜ್ಯೋತ್ಸವದ ಸಂದರ್ಭದಲ್ಲಿ ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರವು ರೈತ ಪ್ರತಿಭಟನೆಯ ವಿಶ್ವಾಸಾರ್ಹತೆಯನ್ನು ಕುಂದುವಂತೆ ಮಾಡಿತ್ತು. ಗಾಜಿಪುರದಲ್ಲಿ ಕೃಷಿ ಪ್ರತಿಭಟನಾ ಸ್ಥಳವನ್ನು ಖಾಲಿ ಮಾಡಲು ಉತ್ತರ ಪ್ರದೇಶದ ಬಿಜೆಪಿ ಸರ್ಕಾರವು ಕೈಗೊಂಡ ಕ್ರಮವು ಕೇಂದ್ರದ ಹೊಸ ಕೃಷಿ ಕಾನೂನುಗಳ ವಿರುದ್ಧದ ಆಂದೋಲನವನ್ನು ಮತ್ತಷ್ಟು ಚುರುಕುಗೊಳಿಸಿದೆ” ಎಂದು ಪಶ್ಚಿಮ ಉತ್ತರಪ್ರದೇಶ ಮತ್ತು ಹರಿಯಾಣದ ಆಡಳಿತ ಪಕ್ಷದ ಹಲವಾರು ಹಿರಿಯ ನಾಯಕರು, ಬಿಜೆಪಿ ಸಂಸದರು ತಿಳಿಸಿದ್ದಾರೆ.

ಬಿಕೆಯು ನಾಯಕ ರಾಕೇಶ್ ಟಿಕಾಯತ್ ನೇತೃತ್ವದಲ್ಲಿ ಪ್ರತಿಭಟಿಸುತ್ತಿರುವ ಹೋರಾಟಗಾರರನ್ನು ಹೊರಹಾಕಲು ಗುರುವಾರ ರಾತ್ರಿ ಭಾರಿ ಪೊಲೀಸ್ ನಿಯೋಜನೆ ಮಾಡಿದ್ದು ರೈತರ ಭಾವನೆಗಳನ್ನು ಕೆರಳಿಸಿದೆ. ಅದರಲ್ಲೂ ವಿಶೇಷವಾಗಿ ಜಾಟ್ ಸಮುದಾಯದ ರೈತರು ಆಕ್ರೋಶಗೊಂಡಿದ್ದಾರೆ. ಪಶ್ಚಿಮ ಯುಪಿ, ಹರಿಯಾಣ ಮತ್ತು ರಾಜಸ್ಥಾನದ ಕೆಲವು ಭಾಗಗಳಲ್ಲಿ ಜಾಟ್ ಸಮುದಾಯವು ಗಮನಾರ್ಹ ರಾಜಕೀಯ ಮಹತ್ವವನ್ನು ಹೊಂದಿದೆ.

ಮುಜಫರ್‌ನಗರದ ಕಿಸಾನ್ ಮಹಾಪಂಚಾಯತ್‌ನಲ್ಲಿ ಶುಕ್ರವಾರ ಭಾರಿ ಜನಸಂದಣಿ ಈ ಮನಸ್ಥಿತಿಯನ್ನು ಪ್ರತಿಬಿಂಬಿಸಿತು. “ಇದು 2013 ರಲ್ಲಿ ಕೋಮು ಗಲಭೆಗೆ ಸಂಬಂಧಿಸಿ ಬಿಜೆಪಿ ನಡೆಸಿದ ಸಭೆಗಿಂತ ದೊಡ್ಡದಾಗಿತ್ತು” ಎಂದು ಪಶ್ಚಿಮ ಯುಪಿಯ ಬಿಜೆಪಿ ನಾಯಕರು ಹೇಳಿದ್ದಾರೆ.

ಇದನ್ನೂ ಓದಿ: ಮೋದಿ ಗೋಡ್ಸೆ ದಿನ ಆಚರಿಸಬಹುದು ಅಷ್ಟೆ: ರೈತ ಮುಖಂಡ ಬಡಗಲಪುರ ನಾಗೇಂದ್ರ

ಪ್ರತಿಭಟನಾಕಾರರನ್ನು ತೆರವುಗೊಳಿಸುವ ಪೋಲಿಸ್ ನಡೆಯನ್ನು ವಿರೋಧಿಸಿ ಟಿಕಾಯತ್ ಮಾಡಿದ ಭಾವನಾತ್ಮಕ ಮನವಿಯ ನಂತರ ಹೊಸದಾಗಿ ರೈತರು ದೊಡ್ಡ ಸಂಖ್ಯೆಯಲ್ಲಿ ಪ್ರತಿಭಟನೆಗೆ ಸೇರುತ್ತಿದ್ದಾರೆ ಎಂಬುದನ್ನು ಉಲ್ಲೇಖಿಸಿದ ಪಶ್ಚಿಮ ಯುಪಿಯ ಬಿಜೆಪಿ ಮುಖಂಡರು, “ಟಿಕಾಯತ್ ಅಳುವ ದೃಶ್ಯಗಳು ಜಾಟ್ ಸಮುದಾಯವನ್ನು ಕಲಕಿದೆ. ನಮ್ಮ ಮಗ ಅಳುತ್ತಿದ್ದಾನೆ, ನಾವು ಹೋಗೋಣ ಮತ್ತು ಬೆಂಬಲಿಸೋಣ ಎಂಬ ಭಾವನೆಯನ್ನು ಮೂಡಿಸಿದೆ. ಇದು ಹಳ್ಳಿಗಳಿಂದ ಅನೇಕರನ್ನು ಪ್ರತಿಭಟನಾ ಸ್ಥಳದ ಕಡೆಗೆ ಮೆರವಣಿಗೆ ಮಾಡಲು ಪ್ರೇರೇಪಿಸಿದೆ” ಎಂದು ಹೇಳಿದ್ದಾರೆ.

ಯುಪಿ ಸರ್ಕಾರ ಪರಿಸ್ಥಿತಿಯನ್ನು ಕೆಟ್ಟದಾಗಿ ನಿರ್ವಹಿಸಿದೆ ಎಂದು ಈ ಪ್ರದೇಶದ ಪಕ್ಷದ ಕೆಲವು ಬಿಜೆಪಿ ಸಂಸದರು ದೂಷಿಸಿದ್ದಾರೆ. “ಯುಪಿ ಸರ್ಕಾರದ ಈ ಕ್ರಮವು ಹರಿಯಾಣದ ಅನೇಕ ಭಾಗಗಳಲ್ಲಿನ ಆಂದೋಲನಕ್ಕೆ ಪ್ರಚೋದನೆ ನೀಡಬಹುದು ಮತ್ತು ಪಶ್ಚಿಮ ಯುಪಿಯನ್ನು ಮತ್ತೊಂದು ಪ್ರತಿಭಟನಾ ಕೇಂದ್ರವನ್ನಾಗಿ ಪರಿವರ್ತಿಸಬಹುದು. ಯುಪಿ ಸರ್ಕಾರದ ಪೊಲೀಸ್ ಕ್ರಮವು ಪಕ್ಷವನ್ನು ಒಂದು ಅನಿಶ್ಚಿತ ಪರಿಸ್ಥಿತಿಯಲ್ಲಿ ಇರಿಸಿದೆ” ಎಂದು ಬಿಜೆಪಿ ಸಂಸದರೊಬ್ಬರು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಹರಿಯಾಣದಲ್ಲಿ, ಪಕ್ಷಾತೀತವಾಗಿ ಹಲವಾರು ಸ್ಥಳೀಯ ಜಾಟ್ ನಾಯಕರು ಟಿಕಾಯತ್ ಅವರನ್ನು ಬೆಂಬಲಿಸಿ ಘಾಜಿಪುರದ ಕಡೆಗೆ ಮೆರವಣಿಗೆ ಆರಂಭಿಸಿದ್ದಾರೆ. ಮತ್ತು ಇತರ ಗಡಿ ಪ್ರತಿಭಟನಾ ತಾಣಗಳಾದ ಸಿಂಘು ಮತ್ತು ಟಿಕ್ರಿ ಗಡಿಗಳತ್ತಲೂ ಹೊರಟಿದ್ದಾರೆ.

“ಐಎನ್‌ಎಲ್‌ಡಿ ಶಾಸಕ ಅಭಯ್ ಚೌಟಾಲ ರೈತರನ್ನು ಬೆಂಬಲಿಸಿ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಅವರ ಸಂಬಂಧಿ ದುಶ್ಯಂತ್ ಚೌಟಾಲ ಅವರ ಮೇಲೆ ಹೆಚ್ಚಿನ ರಾಜಕೀಯ ಒತ್ತಡವನ್ನು ಉಂಟುಮಾಡಬಹುದು” ಎಂದು ಕೆಲವು ಬಿಜೆಪಿ ನಾಯಕರು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ: ಗಾಂಧಿ ಅಂದಿಗೂ ಇಂದಿಗೂ ಒಬ್ಬಂಟಿ. ಗೋಡ್ಸೆ ಅಂದಿಗೂ ಒಬ್ಬಂಟಿಯಲ್ಲ, ಇಂದಿಗೂ..

ಉಪ ಮುಖ್ಯಮಂತ್ರಿ ದುಷ್ಯಂತ್ ಬಿಜೆಪಿಯ ಪ್ರಮುಖ ಮಿತ್ರಪಕ್ಷವಾಗಿರುವ ಜೆಪಿಪಿ ಮುಖ್ಯಸ್ಥರಾಗಿದ್ದಾರೆ. ಬಿಜೆಪಿ 90 ಸ್ಥಾನಗಳಲ್ಲಿ 40 ಸ್ಥಾನಗಳನ್ನು ಹೊಂದಿದ್ದು, ದುಶ್ಯಂತ್ ಚೌಟಾಲ್ ಮತ್ತು ಅವರ 10 ಶಾಸಕರು ಅಧಿಕಾರದ ಕೀಲಿಯನ್ನು ಹೊಂದಿದ್ದಾರೆ.

ಗಣರಾಜ್ಯೋತ್ಸವದ ಹಿಂಸಾಚಾರ ಮತ್ತು ಯುಪಿ ಸರ್ಕಾರದ ತೆರವುಗೊಳಿಸುವ ನಡೆಯನ್ನು ಉಲ್ಲೇಖಿಸಿದ ಬಿಜೆಪಿ ಜನಪ್ರತಿನಿಧಿಯೊಬ್ಬರು, ನಮ್ಮ ಕ್ಷೇತ್ರಗಳಲ್ಲಿನ ಜನರಿಗೆ ನಾವು ಏನು ಹೇಳೋಣ? ಈ ಹಿಂಸಾಚಾರವು ರೈತರ ಐಕ್ಯತೆಯನ್ನು ಮುರಿಯಲು ಮತ್ತು ಚಳವಳಿಯನ್ನು ಕೆಣಕಲು ಸರ್ಕಾರ ನಡೆಸಿದ ಕುತಂತ್ರವಾಗಿದೆ ಎಂದು ಅನೇಕ ನಗರ ಪ್ರದೇಶಗಳಲ್ಲಿ ಜನರು ಹೇಳುತ್ತಿದ್ದಾರೆ. ಗಡಿಯಲ್ಲಿ ರೈತರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವಾಗ ಪೊಲೀಸರು ಏಕೆ ಈ ಕ್ರಮ ಕೈಗೊಳ್ಳಬೇಕಾಯಿತು ಎಂದು ಹಳ್ಳಿಗಳ ಜನರು ಕೇಳುತ್ತಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಹರಿಯಾಣ ಬಿಜೆಪಿ ಸಂಸದರೊಬ್ಬರು, “ವಾಸ್ತವದಲ್ಲಿ ಪೊಲೀಸ್ ಕ್ರಮವು ಹರಿಯಾಣದಲ್ಲಿನ ರೈತರ ಆಂದೋಲನವನ್ನು ಇನ್ನಷ್ಟು ಹುರುಪುಗೊಳಿಸಲು ಪ್ರತಿಭಟನಾಕಾರರಿಗೆ ಒಂದು ಅವಕಾಶ ಸಿಕ್ಕಂತಾಗಿದೆ. ಇದು ಇಲ್ಲಿಯವರೆಗೆ ಪಂಜಾಬ್ ಆಂದೋಲನವಾಗಿ ಉಳಿದಿತ್ತು, ಆದರೆ ಈಗ ಅದು ಹಾಗೇ ಉಳಿದಿಲ್ಲ” ಎಂದು ಹೇಳಿದ್ದಾರೆ.

ಟಿಕಾಯತ್ ಅವರ ಮನವಿಯು ಯುಪಿಯ ಶುಗರ್ ಬೆಲ್ಟ್‌ನಲ್ಲಿ ಕುಟುಂಬದ ರಾಜಕೀಯ ಪರಂಪರೆಯಿಂದಾಗಿ ವಿಶೇಷ ಮಹತ್ವ ಹೊಂದಿದೆ. ದಿವಂಗತ ಮಹೇಂದ್ರ ಸಿಂಗ್ ಟಿಕಾಯತ್ ಪಶ್ಚಿಮ ಯುಪಿಯಲ್ಲಿ ಕಟ್ಟಿದ ರೈತ ಚಳವಳಿ ಇದಕ್ಕೆ ಕಾರಣವಾಗಿದೆ. ಈ ಕುಟುಂಬವು ಪಶ್ಚಿಮ ಯುಪಿಯಲ್ಲಿ ಸಾಕಷ್ಟು ಪ್ರಭಾವ ಹೊಂದಿದೆ.

ಇದನ್ನೂ ಓದಿ: ಗಡಿಯಲ್ಲಿನ ರೈತರ ಮೇಲೆ ಹಲ್ಲೆ: ಪೊಲೀಸರಿಗೆ ತಲ್ವಾರ್ ಬೀಸಿದವ ಸೇರಿ 44 ಮಂದಿ ಬಂಧನ

ಇತ್ತೀಚಿನ ವರ್ಷಗಳಲ್ಲಿ, ಅಜಿತ್ ಸಿಂಗ್ ನೇತೃತ್ವದ ಆರ್‌ಎಲ್‌ಡಿಯ ಜನಪ್ರಿಯತೆ ಇಲ್ಲಿ ಕ್ಷೀಣಿಸಿದ್ದು, ಜಾಟ್ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಧ್ರುವೀಕರಣವನ್ನು ತೀವ್ರಗೊಳಿಸಿದೆ. ಮತ್ತು ಈ ಪ್ರದೇಶದ ಗ್ರಾಮೀಣ ಭಾಗಗಳಲ್ಲಿ ಬಿಜೆಪಿಗೆ ನೆಲೆ ಒದಗಿಸಿದೆ. ಆದರೆ ಈಗ ಅದು ಛಿದ್ರವಾಗಬಹುದು ಎಂಬ ಅಭಿಪ್ರಾಯಗಳಿವೆ.

ಹರಿಯಾಣದಲ್ಲಿ, ರೈತರ ಅಂದೋಲನ ಬೆಂಬಲಿಸಬೇಕು ಮತ್ತು ಬಿಜೆಪಿ ವಿರುದ್ಧ ಆಕ್ರಮಣಕಾರಿ ನಿಲುವು ತೆಗೆದುಕೊಳ್ಳಬೇಕು ಎಂದು ಜೆಜೆಪಿ ಪಕ್ಷವು ದುಷ್ಯಂತ್ ಚೌಟಾಲ ಮೇಲೆ ಒತ್ತಡ ಹಾಕುತ್ತಲೇ ಬಂದಿದೆ. ಇಲ್ಲಿವರೆಗೂ ದುಷ್ಯಂತ್ ಅದನ್ನು ಹೇಗೋ ನಿರ್ವಹಿಸಿಕೊಂಡು ಬಂದಿದ್ದರು. ಅಭಯ್ ಚೌಟಾಲ ರಾಜೀನಾಮೆ ನೀಡಿದ ನಂತರ ಒತ್ತಡದಲ್ಲಿದ್ದ ಅವರನ್ನು ಗುರುವಾರದ ಗಾಜಿಪುರ ಘಟನೆ ಚಿಂತೆಗೀಡು ಮಾಡಿದೆ.

“ದುಶ್ಯಂತ್ ಚೌಟಾಲ ಈಗಾಗಲೇ ತಮ್ಮ ಕೆಲವು ಶಾಸಕರ ನಿಲುವಿನ ಬಗ್ಗೆ ಚಿಂತಿತರಾಗಿದ್ದಾರೆ. ಅವರ ಶಾಸಕರು ಕೃಷಿ ಪ್ರತಿಭಟನೆಯನ್ನು ಬೆಂಬಲಿಸಬೇಕೆಂದು ಬಯಸುತ್ತಾರೆ. ಈ ಪರಿಸ್ಥಿತಿ ಹದಗೆಟ್ಟರೆ ಅದು ಬಿಜೆಪಿಗೆ ತೀವ್ರ ತೊಂದರೆ ಉಂಟುಮಾಡುತ್ತದೆ. ಅದು ಸರ್ಕಾರದ ಪತನಕ್ಕೂ ಕಾರಣವಾಗಬಹುದು ಎಂದು ಮೂಲಗಳು ತಿಳಿಸಿವೆ.


ಇದನ್ನೂ ಓದಿ: ಒಂದೇ ಒಂದು ಇಂಚು ಹಿಂದೆ ಸರಿಯದಿರಿ, ನಿಮ್ಮ ಜೊತೆ ನಾವಿದ್ದೇವೆ: ರೈತರಿಗೆ ರಾಹುಲ್ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...