Homeಕರ್ನಾಟಕಮೋದಿ ಗೋಡ್ಸೆ ದಿನ ಆಚರಿಸಬಹುದು ಅಷ್ಟೆ: ರೈತ ಮುಖಂಡ ಬಡಗಲಪುರ ನಾಗೇಂದ್ರ

ಮೋದಿ ಗೋಡ್ಸೆ ದಿನ ಆಚರಿಸಬಹುದು ಅಷ್ಟೆ: ರೈತ ಮುಖಂಡ ಬಡಗಲಪುರ ನಾಗೇಂದ್ರ

ಗಾಂಧಿ ಹೆಸರಲ್ಲಿ ಮೌನಾಚಾರಣೆ ಮಾಡುವ ನೈತಿಕತೆ ಅವರಿಗಿಲ್ಲ...

- Advertisement -
- Advertisement -

“ಗಾಂಧಿ ಹೆಸರಲ್ಲಿ ಮೌನಾಚಾರಣೆ ಮಾಡುವ ನೈತಿಕತೆ ಪ್ರಧಾನಿ ಮೋದಿಗಿಲ್ಲ. ಅವರೇನಿದ್ದರೂ ಗೋಡ್ಸೆ ದಿನ ಆಚರಿಸಬಹುದು ಅಷ್ಟೇ” ಎಂದು ರಾಜ್ಯ ರೈತ ಸಂಘದ ಮುಖಂಡ ಬಡಗಲಪುರ ನಾಗೇಂದ್ರ ಆಕ್ರೋಶ ವ್ಯಕಪಡಿಸಿದ್ದಾರೆ.

ಗಾಂಧಿ ಹುತಾತ್ಮ ದಿನ ಭಾಗವಾಗಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಉಪವಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಬಡಗಲಪುರ ನಾಗೇಂದ್ರ, “541 ಸಂಘಟನೆಗಳು ಕೃಷಿ ಮಸೂದೆಗಳ ವಿರುದ್ದ ಹೋರಾಡಲು ಸಂಯುಕ್ತ ಕಿಸಾನ್ ಮೋರ್ಚಾ ರಚನೆಯಾಗಿದೆ. ಕರ್ನಾಟಕದಲ್ಲಿ ನಾವು ಅದರ ಭಾಗವಾಗಿದ್ದೇವೆ. 48 ಸಂಘಟನೆಗಳು ಕರ್ನಾಟಕದಲ್ಲಿ ಒಂದಾಗಿದ್ದೇವೆ. ಈ ದಿನವನ್ನು ಶಾಂತಿಸ್ಥಾಪನೆಗಾಗಿ ಕೃಷಿ ಮಸೂದೆಗಳ ವಾಪಸಾತಿಗಾಗಿ, ಮೊನ್ನೆಯ ಗಲಭೆಯನ್ನು ಖಂಡಿಸಲು ಉಪವಾಸ ಸತ್ಯಾಗ್ರಹವನ್ನು ಮಾಡುತ್ತಿದ್ದೇವೆ” ಎಂದು ಹೇಳಿದರು.

“ಮೊನ್ನೆಯ ಘಟನೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಭಾಗವಹಿಸಿಲ್ಲ. ಅದರೂ ರೈತರ ಹೆಸರಿನಲ್ಲಿ ಅದು ನಡೆದಿದ್ದರಿಂದ ಉಪವಾಸ ಮಾಡುತ್ತಿದ್ದೇವೆ” ಎಂದು ವಿವರಿಸಿದರು.

ಇದನ್ನೂ ಓದಿ: ವಾಸ್ತವ ತಿಳಿಯದೆ ಕೋತಿಯಂತೆ ಮಾತನಾಡುವ ತೇಜಸ್ವಿ ಸೂರ್ಯನಿಗೂ ಉತ್ತರಿಸುತ್ತೇನೆ: ಬಡಗಲಪುರ ನಾಗೇಂದ್ರ

“ಪ್ರಧಾನ ಮಂತ್ರಿಗಳು ಇಂದು 12 ಗಂಟೆಗೆ ಮೌನಾಚರಣೆಗೆ ಕರೆ ನೀಡಿದ್ದಾರೆ. ಅದು ಹೊಸದಲ್ಲ. ನೆಹರೂ ಮೊದಲೇ ಕರೆ ಕೊಟ್ಟಿದ್ದರು. ಇಂದು ರೈತ ವಿರೋಧಿಯಾಗಿರುವ ಮೋದಿಗೆ ಈ ದಿನ ಗಾಂಧಿ ಹೆಸರಲ್ಲಿ ಮೌನಚಾರಣೆ ಮಾಡುವ ನೈತಿಕತೆ ಇಲ್ಲ. ಅವರೇನಿದ್ದರೂ ಗೋಡ್ಸೆ ದಿನ ಆಚರಿಸಬಹುದು ಅಷ್ಟೇ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶಕ್ಕೆ ಅನ್ನ ಹಾಕುವ ರೈತರ ಮೇಲೆ ರಕ್ತವಾಗಿ ಸುಳ್ಳು, ದ್ವೇಷ ತುಂಬಿಕೊಂಡಿರುವ ಬಿಜೆಪಿ, ಕೇಂದ್ರ ಸರ್ಕಾರ ಹುನ್ನಾರ ನಡೆಸುತ್ತಿದೆ. ರೈತರು ಆರಂಭದಿಂದಲೂ ಶಾಂತಿ ಕಾಯ್ದುಕೊಂಡಿದ್ದಾರೆ. ಆದರೆ ಜನವರಿ 26 ರಂದು ನಡೆದ ಗಲಭೆಗೆ ಮೋದಿ-ಶಾ ಅವರೆ ಕಾರಣ ಎಂದು ಆರೋಪಸಿದರು.


ಇದನ್ನೂ ಓದಿ: ಕನಿಷ್ಠ ಕಾಮನ್ ಸೆನ್ಸ್ ಇಲ್ಲದ ಪ್ರಧಾನಿ ಮೋದಿ – ರೈತ ಹೋರಾಟಗಾರ ಬಡಗಲಪುರ ನಾಗೇಂದ್ರ ಆಕ್ರೋಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರತ್ಯೇಕ ರಾಜ್ಯದ ಬೇಡಿಕೆ: ನಾಗಾಲ್ಯಾಂಡ್‌ನ 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ

0
ನಾಗಾಲ್ಯಾಂಡ್‌ನ ಏಕೈಕ ಲೋಕಸಭಾ ಸ್ಥಾನಕ್ಕೆ ಶುಕ್ರವಾರ ಒಂದೇ ಹಂತದಲ್ಲಿ ಮತದಾನ ನಡೆದಿದೆ. ಆದರೆ, ಈಶಾನ್ಯ ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟುಕೊಂಡು ಜನರು ಮತದಾನದಿಂದ ದೂರ ಉಳಿದಿದ್ದಾರೆ ಎಂದು 'ಇಂಡಿಯಾ...