Homeಮುಖಪುಟಕಳೆದ 5 ವರ್ಷಗಳಲ್ಲಿ ಭಾರತದ ಪೌರತ್ವ ಪಡೆದವರಿಗಿಂತ ತ್ಯಜಿಸಿದವರು 56 ಪಟ್ಟು ಜಾಸ್ತಿ!

ಕಳೆದ 5 ವರ್ಷಗಳಲ್ಲಿ ಭಾರತದ ಪೌರತ್ವ ಪಡೆದವರಿಗಿಂತ ತ್ಯಜಿಸಿದವರು 56 ಪಟ್ಟು ಜಾಸ್ತಿ!

ದೇಶದ ಪೌರತ್ವವನ್ನು ಪಡೆಯುವವರ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ

- Advertisement -

ಕಳೆದ 5 ವರ್ಷಗಳಲ್ಲಿ ಭಾರತದ ಪೌರತ್ವ ಪಡೆದವರಿಗಿಂತ, ಇಲ್ಲಿನ ಪೌರತ್ವ ತ್ಯಜಿಸಿದವರು 56 ಪಟ್ಟು ಜಾಸ್ತಿ ಎಂದು ಒಕ್ಕೂಟ ಸರ್ಕಾರ ಮಂಗಳವಾರ ಹೇಳಿದೆ. ಐದು ವರ್ಷಗಳಲ್ಲಿ ಆರು ಲಕ್ಷಕ್ಕೂ ಹೆಚ್ಚು ಭಾರತೀಯರು ತಮ್ಮ ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ ಎಂದು ಸರ್ಕಾರ ಹೇಳಿದ್ದು, ಐದು ವರ್ಷಗಳಲ್ಲಿ ಭಾರತದ ಪೌರತ್ವಕ್ಕಾಗಿ ಅರ್ಜಿ ಹಾಕಿದ್ದು ಕೇವಲ 10,645 ಜನರು ಎಂದು ಸರ್ಕಾರ ಲೋಕಸಭೆಯಲ್ಲಿ ಹೇಳಿದೆ.

ಕಳೆದ ಐದು ವರ್ಷಗಳಲ್ಲಿ ಅರ್ಜಿ ಸಲ್ಲಿಸಿದ 10,645 ಮಂದಿಯಲ್ಲಿ ಒಟ್ಟು 4,177 ಜನರಿಗೆ ಪೌರತ್ವ ನೀಡಲಾಗಿದೆ ಎಂದು ಒಕ್ಕೂಟ ಸರ್ಕಾರದ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಮಾಹಿತಿ ನೀಡಿದ್ದಾರೆ. ಭಾರತೀಯ ಪೌರತ್ವ ಪಡೆದವರಲ್ಲಿ 227 ಮಂದಿ ಅಮೆರಿಕದವರು, 7,782 ಜನರು ಪಾಕಿಸ್ತಾನದವರು, 795 ಜನರು ಅಫ್ಘಾನಿಸ್ತಾನದಿಂದ ಮತ್ತು 184 ಜನರು ಬಾಂಗ್ಲಾದೇಶಕ್ಕೆ ಸೇರಿದವರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:ಮುಸ್ಲಿಮೇತರ ನಿರಾಶ್ರಿತರಿಂದ ಪೌರತ್ವಕ್ಕಾಗಿ ಅರ್ಜಿ ಆಹ್ವಾನಿಸಿದ ಕೇಂದ್ರ ಸರ್ಕಾರ

ಕಾಂಗ್ರೆಸ್ ಸಂಸದ ಹಿಬಿ ಈಡನ್ ಈ ಬಗ್ಗೆ ಪ್ರಶ್ನೆಯನ್ನು ಒಕ್ಕೂಟ ಸರ್ಕಾರದ ಮುಂದೆ ಇಟ್ಟಿದ್ದರು.

2017 ರಲ್ಲಿ 1,33,049, 2018 ರಲ್ಲಿ 1,34,561, 2019 ರಲ್ಲಿ 1,44,017, 2020 ರಲ್ಲಿ 85,248 ಮತ್ತು ಸೆಪ್ಟೆಂಬರ್ 30, 2021 ರವರೆಗೆ 1,11,287 ಭಾರತೀಯರು ದೇಶದ ಪೌರತ್ವವನ್ನು ತ್ಯಜಿಸಿ ಬೇರೆ ದೇಶದ ಪೌರತ್ವವನ್ನು ಪಡೆದಿದ್ದಾರೆ ಎಂದು ಸಚಿವರು ಹೇಳಿದ್ದಾರೆ.

ಭಾರತೀಯ ಪೌರತ್ವವನ್ನು ತ್ಯಜಿಸಿ ಇತರ ದೇಶಗಳ ಪೌರತ್ವವನ್ನು ಪಡೆದ ಭಾರತೀಯರ ಸಂಖ್ಯೆ

ಮಾಹಿತಿ: ಒಕ್ಕೂಟ ಸರ್ಕಾರೆ

ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಒಟ್ಟು 1,33,83,718 ಭಾರತೀಯರು ವಿದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಒಕ್ಕೂಟ ಸರ್ಕಾರ ಹೇಳಿದೆ ಹೇಳಿದೆ.

ಇದನ್ನೂ ಓದಿ:ಕನ್ಹಯ್ಯ ಕುಮಾರ್ ಪೌರತ್ವ ರದ್ದುಗೊಳಿಸಿ ಎಂದ ಅರ್ಜಿದಾರನಿಗೆ 25 ಸಾವಿರ ದಂಡ!

ಲೋಕಸಭೆಯ ಮುಂದೆ ನೀಡಿದ ಮಾಹಿತಿಯಂತೆ ದೇಶದ ಪೌರತ್ವವನ್ನು ಪಡೆಯುವವರ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ. 2016 ರಲ್ಲಿ 1,106 ಅರ್ಜಿದಾರರಿಗೆ ಭಾರತೀಯ ಪೌರತ್ವವನ್ನು ನೀಡಲಾಯಿತು. ಈ ಸಂಖ್ಯೆಯು 2017 ರಲ್ಲಿ ಕೇವಲ 817 ಜನರಿಗೆ ನೀಡುವುದರೊಂದಿಗೆ ಇಳಿದಿದೆ. 2018 ರಲ್ಲಿ 628, 2019 ರಲ್ಲಿ 987 ಮತ್ತು 2020 ರಲ್ಲಿ 639 ಜನರಿಗೆ ದೇಶದ ಪೌರತ್ವ ನೀಡಲಾಗಿದೆ.

ಕಳೆದ ಐದು ವರ್ಷಗಳಲ್ಲಿ ಭಾರತೀಯ ಪೌರತ್ವವನ್ನು ಪಡೆದ ವ್ಯಕ್ತಿಗಳ ಸಂಖ್ಯೆ

ಇದನ್ನೂ ಓದಿ:ಫ್ಯಾಕ್ಟ್‌‌ಚೆಕ್: ಝಾಕಿರ್‌ ನಾಯಕ್‌ಗೆ ಮಲೇಷಿಯನ್ ಪೌರತ್ವ ನೀಡಲಾಗಿದೆಯೆ?

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಯಾರು ಯಾರು ಅಕ್ರಮ ದಿಂದ ಬಂದು ಭಾರತದಲ್ಲಿ ನೆಲೆಸಿದ್ದರೋ ಅವರಿಗೆ ಇನ್ನು ಭಾರತದಲ್ಲಿ ತಮ್ಮ ಬೇಳೆ ಬೇಯಲ್ಲಾ ಎಂದು ತಮಗೆ ತಾವೇ ಜಾಗ ಕಾಲಿ ಮಾಡಿದ್ದು ಉತ್ತಮವೇ ,ಮುಂದಿನ ದಿನಗಳಲ್ಲಿ ಕೆಲ ದೇಶ ದ್ರೋಹಿ ಮೀಡಿಯಾಗಳಿಗೂ ಈ ಪರಿಸ್ಥಿತಿ ಲಬಿಸಿದರೆ ಇನ್ನೂ ಸಂತೋಷವೇ

LEAVE A REPLY

Please enter your comment!
Please enter your name here

- Advertisment -

Must Read

ಎಸ್‌‌ಪಿ ನಾಯಕ ಮುಲಾಯಂ ಸೊಸೆ ಬಿಜೆಪಿಗೆ ಸೇರ್ಪಡೆ: ಮಾಧ್ಯಮಗಳಲ್ಲಿ ಮರೆಯಾದ ಒಂದು ಅಂಶ!

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್ ಅವರ ಸೊಸೆ ಅಪರ್ಣಾ ಯಾದವ್‌ ಅವರು ಬಿಜೆಪಿ ಸೇರಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ. ಎಸ್‌ಪಿಗೆ ಹಿನ್ನೆಡೆಯಾಗುವ ಸಾಧ್ಯತೆ ಎಂದು ಕೆಲವು...
Wordpress Social Share Plugin powered by Ultimatelysocial