Homeಕರ್ನಾಟಕಒಂದು ಪ್ರಕರಣಕ್ಕೆ ತಡೆ ಬೆನ್ನಲ್ಲೇ ಹಂಸಲೇಖರ ಹೊಸ ಸಂಯೋಜನೆ ‘ಸಂವಿಧಾನ ಗೀತೆ’ ವೈರಲ್‌

ಒಂದು ಪ್ರಕರಣಕ್ಕೆ ತಡೆ ಬೆನ್ನಲ್ಲೇ ಹಂಸಲೇಖರ ಹೊಸ ಸಂಯೋಜನೆ ‘ಸಂವಿಧಾನ ಗೀತೆ’ ವೈರಲ್‌

"ಓ ಬಡವರ ಗೀತೆ, ಓ ಬಹುಜನ ಮಾತೆ" ಎಂದು ಭಾರತದ ಸಂವಿಧಾನವನ್ನು ಹಂಸಲೇಖ ಅವರು ಬಣ್ಣಿಸಿದ್ದಾರೆ.

- Advertisement -
- Advertisement -

ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖರ ವಿರುದ್ಧ ದಾಖಲಾಗಿದ್ದ ಎರಡು ಪ್ರಕರಣ ಪೈಕಿ ಒಂದು ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದ ಬೆನ್ನಲ್ಲೇ ಹಂಸಲೇಖ ಅವರ ಹೊಸ ಸಂಯೋಜನೆ ‘ಸಂವಿಧಾನ ಗೀತೆ’ ವೈರಲ್ ಆಗಿದೆ.

ಪೇಜಾವರ ಮಠದ ದಿವಂಗತ ವಿಶ್ವೇಶತೀರ್ಥ ಸ್ವಾಮೀಜಿ ಮತ್ತು ಬಿಳಿಗಿರಿ ರಂಗನಾಥ ಸ್ವಾಮಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿದಂತೆ ಸಂಗೀತ ನಿರ್ದೇಶಕ ಹಂಸಲೇಖ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಾಗಿತ್ತು.

‘ನನ್ನ ವಿರುದ್ಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎರಡು ಪ್ರತ್ಯೇಕ ಎಫ್‌ಐಆರ್, ತನಿಖೆ ಮತ್ತು 37ನೇ ಎಸಿಸಿಎಂ ನ್ಯಾಯಾಲಯದ ವಿಚಾರಣೆ ರದ್ದುಪಡಿಸಬೇಕು’ ಎಂದು ಹಂಸಲೇಖ ಅವರು ಕೋರಿದ್ದರು. ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿದ್ದು, ಎರಡು ಪ್ರಕರಣಗಳ ಪೈಕಿ ಒಂದನ್ನು ತಡೆ ಹಿಡಿದಿದೆ.

ಹಂಸಲೇಖರ ಪರ ವಾದ ಮಾಡುತ್ತಿರುವ ವಕೀಲ ಸಿ.ಎಸ್. ದ್ವಾರಕನಾಥ್ ಅವರು, ‘ಹಂಸಲೇಖ ವಿರುದ್ಧದ ಆರೋಪಗಳಲ್ಲಿ ಪರಿಗಣಿಸಬಹುದಾದ ಸಂಜ್ಞೇಯ ಅಪರಾಧ ಕೃತ್ಯಗಳಿಲ್ಲ. ಅರ್ಜಿದಾರರ ವಿರುದ್ಧ ತನಿಖೆ ಮುಂದುವರಿದರೆ ಅವರ ವೈಯಕ್ತಿಕ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುತ್ತದೆ’ ಎಂದು ವಾದಿಸಿದರು.

‘ಅರ್ಜಿದಾರರು ಉದ್ದೇಶಪೂರ್ವಕವಾಗಿ ಎರಡು ವರ್ಗಗಳ ನಡುವೆ ದ್ವೇಷಭಾವನೆ ಉಂಟು ಮಾಡುವ, ಶಾಂತಿ ಕೆಡಿಸುವ ಅಥವಾ ಅವಹೇಳನಕಾರಿ ಹೇಳಿಕೆ ನೀಡುವ ಕೃತ್ಯ ಮಾಡಿಲ್ಲ. ಆದ್ದರಿಂದ, ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಎಲ್ಲಾ ಪ್ರಕ್ರಿಯೆಗೆ ತಡೆ ನೀಡಬೇಕು’ ಎಂದು ಮನವಿ ಮಾಡಿದರು.

ಪ್ರತಿವಾದಿಗಳಾದ ಬಸವನಗುಡಿ ಪೊಲೀಸ್‌ ಠಾಣೆ ಅಧಿಕಾರಿ, ಡಾ.ಮುರಳೀಧರ ಹಾಗೂ ಎಸ್‌.ಎನ್‌.ರವೀಂದ್ರ ಅವರಿಗೆ ನೋಟಿಸ್ ಜಾರಿಗೆ ಆದೇಶಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ.


ಇದನ್ನೂ ಓದಿರಿ: ಹಂಸಲೇಖರವರೊಂದಿಗೆ ಫೋಟೊ, ಸೆಲ್ಫಿ ತೆಗೆದುಕೊಂಡ ಬಸವನಗುಡಿ ಪೊಲೀಸರು


2ನೇ ದೂರು ಕ್ರೈಂ ನಂ.201/2021ರ ತನಿಖೆಗೆ ಹೈಕೋರ್ಟ್ ತಡೆ ನೀಡಿದೆ. ಮೊದಲನೇ ಎಫ್‌ಐಆರ್‌‌ ಕ್ರೈಂ ನಂ. 200/2021ಗೆ ಪ್ರಕರಣ ಮುಂದುವರಿಯಲಿದೆ. ಪೇಜಾವರ ಶ್ರೀಗಳ ವಿರುದ್ಧ ಅವಹೇಳನಕಾರಿಯಾಗಿ ಹಂಸಲೇಖ ಅವರು ಮಾತನಾಡಿದ್ದಾರೆ ಎಂದು ವಿವಾದ ಸೃಷ್ಟಿಸಲಾಗಿತ್ತು. ಬಳಿಕ ಹಂಸಲೇಖ ಅವರು ಕ್ಷಮೆಯನ್ನೂ ಯಾಚಿಸಿದ್ದರು. ಅಷ್ಟಕ್ಕೆ ಸುಮ್ಮನಾಗದೆ ಹಂಸಲೇಖ ಅವರ ವಿರುದ್ಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ ದಾಖಲಿಸಲಾಯಿತು. ಈಗ ಒಂದು ಪ್ರಕರಣಕ್ಕೆ ನ್ಯಾಯಾಲಯ ತಡೆ ನೀಡಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದ ಸಂವಿಧಾನವೇ ನಮ್ಮೆಲ್ಲರ ರಕ್ಷಕ ಎಂಬುದು ನಿರ್ವೀವಾದ. ಹಂಸಲೇಖ ಅವರು ನ್ಯಾಯಾಲಯದ ಮೊರೆ ಹೋದ ಬಳಿಕ ಒಂದು ಪ್ರಕರಣಕ್ಕೆ ತಡೆ ಸಿಕ್ಕ ಬೆನ್ನಲ್ಲೇ ಹಂಸಲೇಖ ಅವರು ತಮ್ಮ ಹೊಸ ಸಂಯೋಜನೆ “ಸಂವಿಧಾನ ಗೀತೆ”ಯನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಭಾರತದ ಸಂವಿಧಾನವನ್ನು, “ಓ ಬಡವರ ಗೀತೆ, ಓ ಬಹುಜನ ಮಾತೆ” ಎಂದು ಅವರು ಬಣ್ಣಿಸಿದ್ದಾರೆ.

“ನಾನು, ನೀನು, ನಮಗಾಗಿರೋದೇ ಕಾನೂನು,

ನಾವೂನು, ನೀವೂನು ಕಾನೂನಡಿಯಲಿ ಬಾಳೋಣು”

ಬಾಳೋಣು, ಬೆಳೆಯೋಣು, ಬಾಂಧವ್ಯವನೇ ಕಣ್ಣೋಣು

ಜೀವನ ವಿಧಾನಯಾನ, ಸಮತಾ ಪ್ರಧಾನ ಗಾನ

ಬಹುತ್‌ ಭಾರತದ ಬೃಹತ್ ಸಂವಿಧಾನ

ಓ ಬಡವರ ಗೀತೆ, ಓ ಬಹುಜನ ಮಾತೆ

ಓ ಬಡವರ ಗೀತೆ, ಓ ಬಹುಜನ ಮಾತೆ

ಅಕ್ಷರ ರೂಪದ ಶಾಂತಿಯ ದನಿಯ

ಪ್ರಜಾಪ್ರಭುತ್ವದ ಇನ್‌ಸ್ಟಿಟ್ಯೂಷನ್‌

“ವಂದೇ ವಂದೇ ಇಂಡಿಯನ್ ಕಾನ್‌ಸ್ಟಿಟ್ಯೂಷನ್‌”

“ವಂದೇ ಇಂಡಿಯನ್ ಕಾನ್‌ಸ್ಟಿಟ್ಯೂಷನ್‌”

“ವಂದೇ ಇಂಡಿಯನ್‌ ಕಾನ್‌ಸ್ಟಿಟ್ಯೂಷನ್‌”

-ಹಂಸಲೇಖ, ಸಂಗೀತ ನಿರ್ದೇಶಕರು ಹಾಗೂ ಚಿತ್ರಸಾಹಿತಿ


ಇದನ್ನೂ ಓದಿರಿ: ’ಸಂಗೀತ ಕದನವನ್ನು ತಪ್ಪಿಸುತ್ತದೆ, ಸರಿಗಮಪಕ್ಕೆ ಬೇಗ ಬಂದು ಸೇರಿಕೊಳ್ಳುತ್ತೇನೆ’: ಡಾ. ಹಂಸಲೇಖ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮ್ಯಾನೇಜ್‌ಮೆಂಟ್‌ ಸರ್ಕಾರ| ಆಡಿಯೊ ನನ್ನದೇ, ರಾಜೀನಾಮೆ ಕೇಳಿದರೆ ಕೊಡುವೆ- ಮಾಧುಸ್ವಾಮಿ

0
ರಾಜ್ಯದ ಕಾನೂನು ಸಚಿವ ಮಾಧುಸ್ವಾಮಿ ಅವರ ಆಡಿಯೊವೊಂದು ಸೋರಿಕೆಯಾಗಿರುವ ಪರಿಣಾಮ ಬಿಜೆಪಿ ಸರ್ಕಾರ ತೀವ್ರ ಮುಜುಗರಕ್ಕೊಳಗಾಗಿದ್ದು ಸರ್ಕಾರದೊಳಗೆ ಆಕ್ರೋಶ ಭುಗಿಲೆದ್ದಿದೆ. ಬಿಜೆಪಿ ನಾಯಕರು ಮಾಧುಸ್ವಾಮಿ ಹೇಳಿಕೆಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ಮಾಧುಸ್ವಾಮಿಯವರೂ ಪ್ರಕರಣಕ್ಕೆ ಸಂಬಂಧಿಸಿದಂತೆ...