Homeಮುಖಪುಟಶ್ರೀಲಂಕಾದಲ್ಲಿ ಹೆಚ್ಚುತ್ತಿದೆ ಚೀನಾ ಸೇನೆಯ ಪ್ರಾಬಲ್ಯ; ತಮಿಳುನಾಡಿಗೆ ಗುಪ್ತಚರ ಸಂಸ್ಥೆ ಎಚ್ಚರಿಕೆ ಕರೆಘಂಟೆ

ಶ್ರೀಲಂಕಾದಲ್ಲಿ ಹೆಚ್ಚುತ್ತಿದೆ ಚೀನಾ ಸೇನೆಯ ಪ್ರಾಬಲ್ಯ; ತಮಿಳುನಾಡಿಗೆ ಗುಪ್ತಚರ ಸಂಸ್ಥೆ ಎಚ್ಚರಿಕೆ ಕರೆಘಂಟೆ

- Advertisement -
- Advertisement -

ಶ್ರೀಲಂಕಾದಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಪ್ರಾಬಲ್ಯ ಹೆಚ್ಚುತ್ತಿರುವ ಬಗ್ಗೆ ತಮಿಳುನಾಡು ರಾಜ್ಯವು ಗಂಭೀರ ಭದ್ರತಾ ಕಳವಳಗಳನ್ನು ವ್ಯಕ್ತಪಡಿಸಿದೆ.

ಕೆಲವು ದಿನಗಳ ಹಿಂದೆ ರಾಜ್ಯದ ಗುಪ್ತಚರ ಸಂಸ್ಥೆ ಎಚ್ಚರಿಕೆಗಳನ್ನು ನೀಡಿದ್ದು, ನೆರೆಯ ದೇಶದಲ್ಲಿ ಚೀನಿಯರ ಚಟುವಟಿಕೆಗಳು ರಾಷ್ಟ್ರೀಯ ಭದ್ರತೆಗೆ ಕಳವಳಕಾರಿಯಾಗಿವೆ ಮತ್ತು ಕರಾವಳಿಯಾದ್ಯಂತ ತೀವ್ರ ಜಾಗರೂಕತೆ ವಹಿಸುವ ಅಗತ್ಯವಿದೆ ಎಂದು ಎಚ್ಚರಿಕೆ ನೀಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಉತ್ತರ ಶ್ರೀಲಂಕಾದಲ್ಲಿ ಪಿಎಲ್‌ಎ ಕೇಡರ್‌ಗಳ ಚಲನವಲನ ಮತ್ತು ಹೈಟೆಕ್ ಗ್ಯಾಜೆಟ್‌ಗಳಾದ ಉಪಗ್ರಹಗಳು, ಡ್ರೋನ್‌ಗಳು, ಇತರ ಸಂವಹನ ಸಾಧನಗಳ ನಿಯೋಜನೆಯನ್ನು ಗಮನಿಸಲು ಕರಾವಳಿ ಜಿಲ್ಲೆಗಳಲ್ಲಿ ನಿರಂತರ ಕಣ್ಗಾವಲು ಅಗತ್ಯವಿದೆ ಎಂದು ರಾಜ್ಯದ ಎಲ್ಲಾ ನಗರಗಳು/ಜಿಲ್ಲೆಗಳಿಗೆ ಸಲಹೆ ಕಳುಹಿಸಲಾಗಿದೆ. ಮೂಲಗಳನ್ನು ಉಲ್ಲೇಖಿಸಿರುವ ಗುಪ್ತಚರ ಸಂಸ್ಥೆ, “ಪಿಎಲ್‌ಎ ಸಮುದ್ರ ಸೌತೆಕಾಯಿ ಕೃಷಿಯನ್ನು ಪ್ರಾರಂಭಿಸುವ ನೆಪದಲ್ಲಿ ಅತ್ಯಾಧುನಿಕ ಗ್ಯಾಜೆಟ್‌ಗಳನ್ನು ನಿಯೋಜಿಸಿದೆ” ಎಂಬ ಎಚ್ಚರಿಕೆಯನ್ನೂ ನೀಡಿದೆ.

ಶ್ರೀಲಂಕಾ ಮೂಲದ ರಾಜಕೀಯ ಪಕ್ಷವೊಂದಕ್ಕೆ ಸೇರಿದ ಕಾರ್ಯಕರ್ತರ ನೆರವಿನೊಂದಿಗೆ ಕೆಲವು ಚೀನಾದ ಪ್ರಜೆಗಳು ರಹಸ್ಯವಾಗಿ ಸಮುದ್ರ ಮಾರ್ಗದ ಮೂಲಕ ಭಾರತವನ್ನು ಪ್ರವೇಶಿಸಿದ್ದಾರೆ ಎಂದು ಅದೇ ಸಂಸ್ಥೆ ಎಚ್ಚರಿಕೆ ನೀಡಿದ ಕೆಲವು ದಿನಗಳ ನಂತರ ಭದ್ರತಾ ಸಲಹೆ ಹೊರಬಿದ್ದಿದೆ.

ತಮಿಳುನಾಡು ಕೋಸ್ಟಲ್ ಸೆಕ್ಯುರಿಟಿ ಗ್ರೂಪ್, ಕೇಂದ್ರ ಗುಪ್ತಚರ ಸಂಸ್ಥೆಯನ್ನು ಉಲ್ಲೇಖಿಸಿದೆ. ಉಪಗ್ರಹಗಳು, ರಾಕೆಟ್‌ಗಳು ಮತ್ತು ಖಂಡಾಂತರ ಕ್ಷಿಪಣಿ ಉಡಾವಣೆಗಳ ಮೇಲೆ ನಿಗಾ ಇರಿಸಲು ಬಳಸುವ ಚೀನಾದ ಹಡಗಿನ ಮೇಲೆ ಎಚ್ಚರಿಕೆ ಅಗತ್ಯ. ಶ್ರೀಲಂಕಾದ ಹಂಬನ್‌ತೋಟ ಬಂದರಿನ ಬೆಳವಣಿಗೆಗಳನ್ನು ಗಮನಿಸಬೇಕು. ಸಾಕಷ್ಟು ಭದ್ರತಾ ವ್ಯವಸ್ಥೆಗಳಿಗೆ ಕರೆ ನೀಡಲಾಗಿದೆ. ತಮಿಳುನಾಡು ಕರಾವಳಿಯುದ್ದಕ್ಕೂ ಗಮನ ಹರಿಸಬೇಕು ಎಂದು ಸೂಚಿಸಲಾಗಿದೆ.

ಮುಲ್ಲೈತೀವು, ಪರುತಿಥೀವು, ಅನಲೈತೀವು, ಮೀಸಲೈ ಮತ್ತು ಚಾವಕ್ಕಚೇರಿ ಸೇರಿದಂತೆ ಉತ್ತರ ಶ್ರೀಲಂಕಾದ ಹಲವು ಭಾಗಗಳಲ್ಲಿ ಚೀನಾದ ಪ್ರಜೆಗಳ ಮುಕ್ತ ಸಂಚಾರವು ತಮಿಳು ಮೀನುಗಾರರಲ್ಲಿ ಅಸಮಾಧಾನವನ್ನು ಉಂಟುಮಾಡಿದೆ. ತಮ್ಮ ಜೀವನಾಧಾರವಾಗಿರುವ ಶ್ರೀಮಂತ ಸಮುದ್ರ ಸಂಪತ್ತನ್ನು ಚೀನಿಯರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ.

ಸದ್ಯದ ಪರಿಸ್ಥಿತಿಯು ಶ್ರೀಲಂಕಾದ ಪ್ರಜೆಗಳ ನಡುವೆ ವಿಭಜನೆ ಉಂಟು ಮಾಡಬಹುದು. ದ್ವೀಪ ರಾಷ್ಟ್ರದ ಉತ್ತರ ಮತ್ತು ಪೂರ್ವ ಭಾಗಗಳಲ್ಲಿ ವಾಸಿಸುವ ತಮಿಳರ ಮೇಲೆ ಭಾರತದ ಪ್ರಭಾವವನ್ನು ಮೊಟಕುಗೊಳಿಸಬಹುದು ಎಂಬುದು ಸ್ಥಳೀಯ ತಮಿಳರ ಭಯವಾಗಿದೆ.

ಶ್ರೀಲಂಕಾದ ಹಂಬಂತೋಟಾ ಬಂದರಿಗೆ ಚೀನಾದ ಸಂಶೋಧನಾ ನೌಕೆ ‘ಯುವಾನ್ ವಾಂಗ್ 5’ ಆಗಮನದ ಕುರಿತು ಕೇಂದ್ರ ಸರ್ಕಾರ ಪ್ರತಿಕ್ರಿಯಿಸಿತ್ತು. ನಂತರ ತಮಿಳುನಾಡು ಆಗ್ನೇಯ ಕರಾವಳಿಯಲ್ಲಿ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಿದೆ. 1,076-ಕಿಮೀ ಉದ್ದದ ಕರಾವಳಿ ಭಾಗದಲ್ಲಿ ಗುಪ್ತಚರ ಚಟುವಟಿಕೆಗಳನ್ನು ಸರ್ಕಾರ ಸಕ್ರಿಯಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ವರ್ಷದ ಆಗಸ್ಟ್‌ನಲ್ಲಿ ಚೀನಾದ ಅನುದಾನಿತ ಹಂಬನ್‌ತೋಟ ಬಂದರಿಗೆ ಚೀನಾದ ಉಪಗ್ರಹ-ಟ್ರ್ಯಾಕಿಂಗ್ ಹಡಗಿನ ಆಗಮನವಾಗಿದ್ದರ ಕುರಿತು ಭಾರತವು ಆತಂಕ ವ್ಯಕ್ತಪಡಿಸಿತ್ತು. ತನ್ನ ಭದ್ರತೆ ಮತ್ತು ಆರ್ಥಿಕ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರುವ ಬೆಳವಣಿಗೆಗಳನ್ನು ಎಚ್ಚರಿಕೆಯಿಂದ ಭಾರತ ಗಮನಿಸುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮತ್ತು ತಮಿಳುನಾಡು ಕರಾವಳಿ ಭದ್ರತಾ ಗುಂಪಿನ ಮುಖ್ಯಸ್ಥ ಸಂದೀಪ್ ಮಿತ್ತಲ್ ಪ್ರತಿಕ್ರಿಯಿಸಿದ್ದು, “ಶ್ರೀಲಂಕಾದಲ್ಲಿ ಚೀನಾದ ಪ್ರಜೆಗಳ ಉಪಸ್ಥಿತಿಯು ಹೆಚ್ಚುತ್ತಿದೆ ಎಂಬುದು ವಿವಾದಾಸ್ಪದ ಸಂಗತಿಯಲ್ಲ. ಆದರೆ ಶ್ರೀಲಂಕಾದಲ್ಲಿರುವ ಚೀನಾದ ರಾಯಭಾರಿಯು ಅಂತಾರಾಷ್ಟ್ರೀಯ ಕಡಲ ಗಡಿ ರೇಖೆಯ ಸಮೀಪವಿರುವ ದ್ವೀಪಗಳಿಗೆ ಆಗಾಗ್ಗೆ ಭೇಟಿ ನೀಡುತ್ತಿರುವುದು ಮತ್ತು ಸಮುದ್ರ ಸೌತೆಕಾಯಿಯನ್ನು ಬೆಳೆಯುವ ನೆಪದಲ್ಲಿ ಆ ಪ್ರದೇಶದಲ್ಲಿ ನಡೆಸಲಾದ ಡ್ರೋನ್ ಸಮೀಕ್ಷೆಯು ಅನುಮಾನಗಳನ್ನು ತಂದಿವೆ” ಎಂದಿದ್ದಾರೆ.

“ಭಾರತದಲ್ಲಿ ಪದವಿಪೂರ್ವ ಕಲಿಕೆಯನ್ನು ಮಾಡುತ್ತಿರುವ ಶ್ರೀಲಂಕಾದ ವಿದ್ಯಾರ್ಥಿಗಳಿಗೆ ಭಾರತವು ವಿದ್ಯಾರ್ಥಿವೇತನವನ್ನು ನೀಡುತ್ತಿದ್ದರೆ, ಶ್ರೀಲಂಕಾದಲ್ಲಿಯೇ ಓದುತ್ತಿರುವ ಸ್ನಾತಕೋತ್ತರ ಶ್ರೀಲಂಕಾ ವಿದ್ಯಾರ್ಥಿಗಳಿಗೆ ಚೀನಾ ಧನಸಹಾಯ ನೀಡುತ್ತಿದೆ. ಅವರು [ಚೀನೀಯರು] ತಮ್ಮ ಭವಿಷ್ಯದ ಯೋಜನೆಗಳನ್ನು ಬೆಂಬಲಿಸಲು ಶ್ರೀಲಂಕಾದಲ್ಲಿ ಯುವಕರನ್ನು ಓಲೈಸಲು ಪ್ರಯತ್ನಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿರಿ: 100ಕ್ಕೂ ಹೆಚ್ಚು ಅಪ್ಲಿಕೇಷನ್‌ ಬಳಸಿ ಸುಲಿಗೆ; ₹ 500 ಕೋಟಿ ಚೀನಾಕ್ಕೆ ಕಳುಹಿಸಿದ ಯುಪಿ ಗ್ಯಾಂಗ್‌ ಅರೆಸ್ಟ್‌‌!

ಚೀನೀಯರು ಭಾರತದ ಜಲಪ್ರದೇಶಕ್ಕೆ ನುಗ್ಗುತ್ತಾರೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ ಎಂದು ರಾಜ್ಯ ಕಡಲ ಭದ್ರತಾ ಸಂಯೋಜಕರೂ ಆಗಿರುವ ಡಾ.ಮಿತ್ತಲ್ ಹೇಳಿದ್ದಾರೆ. “ತಮ್ಮ ಗುಪ್ತಚರ ಚಟುವಟಿಕೆಗಳನ್ನು ಸಕ್ರಿಯಗೊಳಿಸಲು ಮತ್ತು ಕರಾವಳಿಯಾದ್ಯಂತ ಭದ್ರತೆಯನ್ನು ತೀವ್ರಗೊಳಿಸಲು ಎಲ್ಲಾ ಕರಾವಳಿ ಜಿಲ್ಲೆಗಳಿಗೆ ಎಚ್ಚರಿಕೆಯನ್ನು ತಮಿಳುನಾಡು ನೀಡಿದೆ” ಎಂದಿದ್ದಾರೆ.

ಕೇಂದ್ರ ಸರ್ಕಾರವು ಕರಾವಳಿ ಭದ್ರತಾ ಯೋಜನೆಯ ಹಂತ-IIIರ ನಿಧಿಯನ್ನು ಸಕ್ರಿಯಗೊಳಿಸುವ ತುರ್ತು ಅವಶ್ಯಕತೆಯಿದೆ ಎಂದು ತಮಿಳುನಾಡಿನ ಭದ್ರತಾ ಏಜೆನ್ಸಿಗಳು ಹೇಳುತ್ತದೆ. ಹಂತ-II 2020ರಲ್ಲಿ ಕೊನೆಗೊಂಡ ನಂತರ, ಕರಾವಳಿ ಭದ್ರತಾ ಗುಂಪಿಗೆ ಹಣ ಮತ್ತು ಮೂಲಸೌಕರ್ಯದ ಬೆಂಬಲವನ್ನು ನಿಲ್ಲಿಸಲಾಯಿತು.

“ಹೆಚ್ಚುತ್ತಿರುವ ಆತಂಕವನ್ನು ಪರಿಗಣಿಸಿ ಕರಾವಳಿಯುದ್ದಕ್ಕೂ ಅನುಕೂಲಕರ ಸ್ಥಳಗಳಲ್ಲಿ ನೆಲೆಸಲು ಕೆಲವು ಭಾರತೀಯ ಸಮುದ್ರ ಮೀಸಲು ಬೆಟಾಲಿಯನ್‌ಗಳನ್ನು ಹೆಚ್ಚಿಸಲು ಕೇಂದ್ರವು ತಮಿಳುನಾಡಿಗೆ ಸಹಾಯ ಮಾಡಬೇಕು. ತಮಿಳುನಾಡು ಕೋಸ್ಟಲ್ ಸೆಕ್ಯುರಿಟಿ ಗ್ರೂಪ್‌ಗೆ 800 ಸಿಬ್ಬಂದಿಗಳ ಮಂಜೂರಾತಿಯಲ್ಲಿ ಸುಮಾರು 50% ಖಾಲಿ ಇದೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ‘ದಿ ಹಿಂದೂ’ ವರದಿ ಮಡಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...