ಐಸಿಸಿ ಟಿಟ್ವೆಂಟಿ ವಿಶ್ವಕಪ್‌ನ ತನ್ನ ಆರಂಭಿಕ ಪಂದ್ಯದಲ್ಲಿ ಭಾರತವು ಪಾಕಿಸ್ತಾನದ ಎದರು 10 ವಿಕೆಟ್‌ಗಳ ಸೋಲು ಕಂಡಿತು. ಆದರೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಪಂದ್ಯ ಮುಗಿದ ವೇಳೆ ಪಾಕಿಸ್ತಾನದ ಆಟಗಾರ ಮೊಹಮ್ಮದ್ ರಿಜ್ವಾನ್‌ರನ್ನು ಅಪ್ಪಿಕೊಂಡು ಅಭಿನಂದಿಸಿದರು. ಮತ್ತೊಬ್ಬ ಆಟಗಾರ ಪಾಕ್ ನಾಯಕ ಬಾಬರ್ ಅಜಂರಿಗೆ ಅಭಿನಂದನೆ ತಿಳಿಸಿದರು. ಈ ಫೋಟೊ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ “ನಿಜವಾದ ಕ್ರೀಡಾಸ್ಪೂರ್ತಿ” ಎಂಬ ಹೆಗ್ಗಳಿಕೆಗೆ ಪಾತ್ರವಾಗಿವೆ. ಅದೇ ರೀತಿ ಪಂದ್ಯದ ನಂತರ ಭಾರತದ ತಂಡದ ಮೆಂಟರ್ ಮಹೇಂದ್ರ ಸಿಂಗ್ ಧೋನಿ ಪಾಕಿಸ್ತಾನದ ಆಟಗಾರರ ಜೊತೆ ಮಾತುಕತೆ ನಡೆಸಿ ಕ್ರೀಡಾಭಿಮಾನಿಗಳ ಮನಗೆದ್ದಿದ್ದಾರೆ.
ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಫೀಲ್ಡಿಂಗ್ ಆಯ್ದುಕೊಂಡಿತು. ಪಾಕಿಸ್ತಾನದ ಬೌಲರ್‌ಗಳ ಶಿಸ್ತುಬದ್ಧ ದಾಳಿಗೆ ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ಗಳು ತತ್ತರಿಸಿದರು. 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡ ಭಾರತ 151 ರನ್ ಪೇರಿಸಲಷ್ಟೇ ಸಾಧ್ಯವಾಯಿತು. ಅದಕ್ಕೆ ಪ್ರತಿಯಾಗಿ ಪಾಕಿಸ್ತಾನ ಯಾವುದೇ ವಿಕೆಟ್ ನಷ್ಟವಿಲ್ಲದೆ 152 ರನ್ ಗಳಿಸಿ ಗೆಲುವಿನ ಸಿಹಿ ಉಂಡಿತು. ಆ ಮೂಲಕ ಪಾಕಿಸ್ತಾನ ತಂಡವು ವಿಶ್ವಕಪ್ ಪಂದ್ಯಾವಳಿಗಳಲ್ಲಿ ಮೊದಲ ಬಾರಿಗೆ ಭಾರತದ ಎದುರು ಜಯ ದಾಖಲಿಸಿತು. ಬಾಬರ್ ಅಜಂ ಮತ್ತು ಮೊಹಮ್ಮದ್ ರಿಜ್ವಾನ್ ಅದ್ಭುತ ಜೊತೆಯಾಟವಾಡಿದರು.
ಪಾಕ್ ಪಂದ್ಯ ಗೆದ್ದ ನಂತರ ವಿರಾಟ್ ಕೊಹ್ಲಿ ಪಾಕ್ ಆಟಗಾರರನ್ನು ಅಭಿನಂದಿಸುತ್ತಿರುವ ಫೋಟೊ ಹಂಚಿಕೊಂಡಿರುವ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ “Spirit of Cricket” ಎಂದು ಬರೆದಿದೆ.
Spirit of Cricket!! ??? pic.twitter.com/pH6UfrRcKf
— Pakistan Cricket (@TheRealPCB) October 24, 2021
ಸೋತದ್ದು ಒಂದು ಪಂದ್ಯ ಮಾತ್ರ, ಆದರೆ ಗೆದ್ದದ್ದು ಸಹಸ್ರಾರು ಹೃದಯ!
Well done ವಿರಾಟ್ ಕೊಹ್ಲಿ ಎಂದು ರಂಜನ್ ಪ್ರಸಾದ್‌ರವರು ಪ್ರತಿಕ್ರಿಯಿಸಿದ್ದಾರೆ.
ವಿರಾಟ್ ಕೋಹ್ಲಿ ಓರ್ವ ಪ್ರಬುದ್ಧ ಆಟಗಾರ. ಪಂದ್ಯ ಸೋತರೂ ಕೂಡಾ ಪಾಕಿಸ್ತಾನವೂ ಸೇರಿದಂತೆ ವಿಶ್ವದೆಲ್ಲೆಡೆಯ ಕ್ರಿಕೆಟ್ ಅಭಿಮಾನಿಗಳ ಹೃದಯವನ್ನು ಗೆದ್ದ ಕ್ಯಾಪ್ಟನ್ ಎಂದು ಪುನೀತ್ ಅಪ್ಪುರವರು ಬರೆದಿದ್ದಾರೆ.
ನಿಜವಾಗಿಯೂ ಕ್ರಿಕೆಟ್ ಗೆದ್ದಿದೆ..ಅಭಿನಂದನೆಗಳು ಎಂದು ಸುಲೈಮಾನ್ ಕಲ್ಲರ್ಪೆಯವರು ಬರೆದಿದ್ದಾರೆ.
#ArtOfTheDay | #Meiarivu | #INDvPAK | #ViratKohli | @santosanthosh pic.twitter.com/4FkM7zjJXu
— Mei Arivu (@meiarivu) October 25, 2021
ಪಾಕಿಸ್ತಾನ ತಂಡ ಚೆನ್ನಾಗಿ ಆಟವಾಗಿದೆ. ಭಾರತದಿಂದ ಅವರಿಗೆ ಪ್ರೀತಿಪೂರ್ವಕ ಅಭಿನಂದನೆಗಳು ಎಂದು ಹಲವಾರು ಜನ ಶುಭ ಕೋರಿದ್ದಾರೆ.
Captions won't do justice but what a wonderful game of cricket it was.
Kudos to Kohli for his sportsmanship.
Mahendra Singh Dhoni is a LEGEND! pic.twitter.com/kzpqhDRsfa— MAD (@mad_nessss) October 24, 2021
ಪಂದ್ಯ ಆರಂಭಕ್ಕೂ ಮುನ್ನವೇ ಹಲವು ಮಾಧ್ಯಮಗಳು ಭಾರತ-ಪಾಕ್ ಪಂದ್ಯವನ್ನು ವಿಶ್ವಯುದ್ಧವೆಂಬಂತೆ ಬಿಂಬಿಸಿದ್ದವು. ಅಲ್ಲದೇ ಪಾಕಿಸ್ತಾನವನ್ನು ಶತ್ರು ರಾಷ್ಟ್ರವೆಂಬಂತೆ ಕರೆದಿದ್ದವು. ಆದರೆ ಅದನ್ನು ಸ್ವತಃ ಭಾರತದ ತಂಡ ಸುಳ್ಳು ಮಾಡಿತು. ಭಾರತದ ಎಲ್ಲಾ ಆಟಗಾರರು ಕ್ರೀಡಾಸ್ಫೂರ್ತಿ ಮೆರೆದರು. ಹಾಗಾಗಿ ಹಲವಾರು ಕ್ರೀಡಾಭಿಮಾನಿಗಳು ಕೊಹ್ಲಿ ಮತ್ತು ಧೋನಿ ನಡೆಯನ್ನು ಪ್ರೀತಿಯಿಂದ ಬೆಂಬಲಿಸಿದರು.
ಇದನ್ನೂ ಓದಿ; ಭಾರತ ಕ್ರಿಕೆಟ್ ತಂಡವನ್ನು ‘ದಂಡುಪಾಳ್ಯದ ದಂಡಪಿಂಡ’ಗಳು ಎಂದ ದಿಗ್ವಿಜಯ ನ್ಯೂಸ್?: ಆಕ್ರೋಶ



ಆದರೂ ಸಂಘಪರಿವಾರಕ್ಕೆ ಈನಾಯಕರ ನಡೆ ದಹಿಸಬೇಕಿಲ್ಲ.