Homeಕರ್ನಾಟಕಭಾರತ ಕ್ರಿಕೆಟ್ ತಂಡವನ್ನು ‘ದಂಡುಪಾಳ್ಯದ ದಂಡಪಿಂಡ’ಗಳು ಎಂದ ದಿಗ್ವಿಜಯ ನ್ಯೂಸ್?: ಆಕ್ರೋಶ

ಭಾರತ ಕ್ರಿಕೆಟ್ ತಂಡವನ್ನು ‘ದಂಡುಪಾಳ್ಯದ ದಂಡಪಿಂಡ’ಗಳು ಎಂದ ದಿಗ್ವಿಜಯ ನ್ಯೂಸ್?: ಆಕ್ರೋಶ

- Advertisement -
- Advertisement -

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌‌ ಪಂದ್ಯಾಟದಲ್ಲಿ ನ್ಯೂಝಿಲ್ಯಾಂಡ್ ವಿರುದ್ದ ಸೋತ ಭಾರತ ತಂಡವನ್ನು ‘ದಿಗ್ವಿಜಯ ನ್ಯೂಸ್‌’ ಕನ್ನಡದ ಸುದ್ದಿ ವಾಹಿನಿಯು ‘ದಂಡುಪಾಳ್ಯದ ದಂಡಪಿಂಡಗಳು’ ಎಂದು ಕರೆದಿದೆ ಎನ್ನಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಇತ್ತೀಚೆಗೆ ನಡೆದ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ವಿರುದ್ದ ಭಾರತ ತಂಡವು ಎಂಟು ವಿಕೆಟ್‌ ಅಂತರದಲ್ಲಿ ಸೋತಿತ್ತು. ಇದಕ್ಕೆ ಭಾರತ ತಂಡದ ಅಭಿಮಾನಿಗಳು ನಿರಾಸೆಯನ್ನೂ ವ್ಯಕ್ತಪಡಿಸಿದ್ದರು. ಆದರೆ ದಿಗ್ವಿಜಯ ನ್ಯೂಸ್ ತಂಡವನ್ನು ದಂಡುಪಾಳ್ಯದ ದಂಡಪಿಂಡಗಳು ಎಂದು ಕರೆದು ಅವಮಾನಿಸಿದೆ ಎಂದು ಆರೋಪಿಸಲಾಗಿದೆ. ದಿಗ್ವಿಜಯ ನ್ಯೂಸ್ ನಡೆಸಿದೆ ಎನ್ನಲಾಗಿರುವ ಕಾರ್ಯಕ್ರಮದ ಸ್ಕ್ರೀನ್‌ ಶಾಟ್‌ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಚಾನೆಲ್ ವಿರುದ್ದ ಕಿಡಿಕಾರಿದ್ದಾರೆ. ತೀವ್ರ ಆಕ್ರೋಶ ವ್ಯಕ್ತವಾದ ನಂತರ ಸದ್ಯಕ್ಕೆ ಆ ವಿಡಿಯೋವನ್ನು ಡಿಲೀಟ್ ಮಾಡಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ತಬ್ಲೀಘಿಗಳನ್ನು ಕೆಟ್ಟದಾಗಿ ಬಿಂಬಿಸಿದ್ದಕ್ಕೆ ಕ್ಷಮೆ ಕೇಳಿದ ‘ನ್ಯೂಸ್‌18 ಕನ್ನಡ’!

ಭಾರತ ತಂಡದ ಮಾಜಿ ಕ್ರಿಕೆಟಿಗ, ಕನ್ನಡಿಗ ದೊಡ್ಡ ಗಣೇಶ್ ಅವರು ಈ ಬಗ್ಗೆ ತಮ್ಮ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದು ಚಾನೆಲ್‌ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ತನ್ನ ಟ್ವೀಟ್‌ನಲ್ಲಿ, “ನಮ್ಮ ಈ ಕನ್ನಡ ನ್ಯೂಸ್ ಚ್ಯಾನಲ್‌ಗಳಿಗೆ ವೃತ್ತಿಪರ ನೀತಿ ಎನ್ನವುದೇ ಇಲ್ವಾ? ಒಂದು ಪಂದ್ಯ ಸೋತ ಮಾತ್ರಕ್ಕೆ ನಮ್ಮ ಆಟಗಾರರನ್ನು ಇಂತಹ ಕೀಳು ಮಟ್ಟದ ಶೀರ್ಷಿಕೆಯಿಂದ ಟೀಕೆ ಮಾಡೋದು ಎಷ್ಟರ ಮಟ್ಟಿಗೆ ಸರಿ ?” ಎಂದು ದಿಗ್ವಿಜಯ ನ್ಯೂಸ್‌ಗೆ ಪ್ರಶ್ನೆ ಮಾಡಿದ್ದಾರೆ.

ಫೇಸ್‌ಬುಕ್‌ನಲ್ಲಿ ಕೂಡಾ ದಿಗ್ವಿಜಯ ನ್ಯೂಸ್‌ ಪದ ಬಳಕೆಗೆ ಆಕ್ರೋಶ ವ್ಯಕ್ತವಾಗಿದೆ. ಬೋಪಣ್ಣ ಬೊಳ್ಳಿಯಂಗಡ ಅಪ್ಪು ಎಂಬವರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, “ಈ ಚಾನಲ್ ಗಳು ಅದೆಷ್ಟು ಕೀಳು ಮಟ್ಟಕ್ಕೆ ಇಳಿಯುತ್ತವೆ ಎನ್ನುವುದು ಈ ಶಿರ್ಷಿಕೆ ನೋಡಿದರೆ ತಿಳಿಯುತ್ತದೆ. ದಿಗ್ವಿಜಯ ನ್ಯೂಸ್‌ ಅವರೆ ಒಂದೇ ಒಂದು ಪಂದ್ಯ, ಅದೂ ಫೈನಲ್‌ನಲ್ಲಿ ಸೋತಿದಕ್ಕೆ ತಂಡವನ್ನು ‘ದಂಡುಪಾಳ್ಯ’ಕ್ಕೆ…’ದಂಡಪಿಂಡ’ಗಳಿಗೆ ಹೋಲಿಸುತ್ತೀರಿ ಎಂದರೆ ನಾಚಿಕೆ ಆಗಬೇಕು ನಿಮಗೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ತಬ್ಲೀಘಿ ಜಮಾತ್‌ ಗುರಿಯಾಗಿಸಿ ಕಾರ್ಯಕ್ರಮ: ಸುವರ್ಣ ನ್ಯೂಸ್‌ ಮತ್ತು ನ್ಯೂಸ್‌‌ 18 ಕನ್ನಡಕ್ಕೆ 1.5 ಲಕ್ಷ ದಂಡ

ದೊಡ್ಡ ಗಣೇಶ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದರು ಕ್ರುಶಿಕ ಎನ್ನುವವರು, “ಪಾಕಿಸ್ತಾನದ ಜೊತೆಗಿನ ಆಟದ ಬಗ್ಗೆ ಹೀಗೆ ವರದಿ ಮಾಡಿ ಮಾಡಿ ಅದನ್ನೇ ನ್ಯೂಜಿಲೆಂಡ್ ಜೊತೆಗಿನ ಆಟಕ್ಕೂ ಹೇಳುತ್ತಾ ಇದ್ದಾರೆ. ಪಾಕಿಸ್ತಾನದ ಜೊತೆಗಿನ ಆಟದ ಸಮಯದಲ್ಲಿ ಕಿತ್ತೊದವರಂತೆ ಬರೆಯುವವರನ್ನು ಜಾಡಿಸಿದ್ದಿದ್ರೆ, ಈಗ ಬುದ್ದಿ ಕಲ್ತಿರೋರು. ಇಂಡಿಯಾದ ಜನಕ್ಕೆ ಭಾವನಾತ್ಮಕತೆಯೇ ಜಾಸ್ತಿ, ಅದೇ ಆಸ್ತಿ. ಆಟವನ್ನು ಆಟ ಅಂತ ನೋಡಲ್ಲ!” ಎಂದು ಹೇಳಿದ್ದಾರೆ.

ದಿಗ್ವಿಜಯ ನ್ಯೂಸ್ ಈ ಹಿಂದೆ ‘ಓಂ ಫಿನಿಶಾಯ ನಮಃ’ ಎಂಬ ಶಿರ್ಷಿಕೆಯನ್ನು ನೀಡಿ ಕಾರ್ಯಕ್ರಮವನ್ನು ನಡೆಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಗಿರಿಧರ ಕಾರ್ಕಳ ಅವರು, ‘ದಿಗ್ವಿಜಯದ ಶಬ್ಧ ದಾರಿದ್ರ್ಯ’ ಎಂದು ಹೇಳಿದ್ದರು.

ಅವರು, “ಇದು ಧೋನಿ ಎಂಬ ಮಹಾನ್ ಕ್ರಿಕೆಟಿಗನ ನಿವೃತ್ತಿಯ ಕುರಿತ ನುಡಿಚಿತ್ರಕ್ಕೆ ದಿಗ್ವಿಜಯ ಟಿವಿ ನೀಡಿದ ತಲೆಬರಹ.. ಅಲ್ಲಲ್ಲ ತಲೆಕೆಟ್ಟ ಬರಹ..!! ಭಾರತೀಯ ಕ್ರಿಕೆಟ್ ಚರಿತ್ರೆಯಲ್ಲೊಂದು ಅದ್ಭುತ ಅಧ್ಯಾಯ ಬರೆದ ಜಂಟಲ್ ಮ್ಯಾನ್ ಯಾರನ್ನು ಫಿನಿಶ್ ಮಾಡಿದರು? ಅಥವಾ ಅವರನ್ನೇ ಅವರು ಫಿನಿಶ್ ಮಾಡಿಕೊಂಡ್ರಾ? ತಲೆಬರಹ ಕೊಡುವವರಿಗೇನಾದರೂ ತಲೆಕೆಟ್ಟಿದೆಯೇ? ನುಡಿಚಿತ್ರ ಕಾರ್ಯಕ್ರಮದಲ್ಲಿ ಸೊಗಸಾದ ‘ಮಾಹಿ’ತಿಯನ್ನೇನೋ ನೀಡಿದರು. ಆದರೆ ನೆಗೆಟಿವ್ ಅರ್ಥ ಕೊಡುವ ತಲೆಬರಹವೇಕೆ?” ಎಂದು ಪ್ರಶ್ನಿಸಿದ್ದರು.


ಇದನ್ನೂ ಓದಿ: ಮಹಾಪಂಚಾಯತ್‌ನಲ್ಲಿ ಎಬಿಪಿ ನ್ಯೂಸ್‌ಗೆ ರಾಜೀನಾಮೆ ನೀಡಿದ ಪತ್ರಕರ್ತನ ಮಾತುಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲಾ ಮಕ್ಕಳು ಆರ್‌ಎಸ್‌ಎಸ್‌ ಗೀತೆ ಹಾಡಿದ ಪ್ರಕರಣ : ತನಿಖೆಗೆ ಆದೇಶಿಸಿದ ಸರ್ಕಾರ

ಹೊಸದಾಗಿ ಚಾಲನೆ ನೀಡಲಾದ ಎರ್ನಾಕುಲಂ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೊದಲ ಸಂಚಾರದ ವೇಳೆ ಶಾಲಾ ಮಕ್ಕಳು ಆರ್‌ಎಸ್‌ಎಸ್‌ ಗೀತೆ (ಗಾನ ಗೀತಂ) ಹಾಡಿದ ಬಗ್ಗೆ ತನಿಖೆಗೆ ಕೇರಳದ ಪ್ರಾಥಮಿಕ ಶಿಕ್ಷಣ ಸಚಿವ...

ಬಿಹಾರ ಚುನಾವಣೆ | ಎಲ್‌ಜೆಪಿ ಸಂಸದೆಯ ಎರಡೂ ಕೈಗಳಲ್ಲಿ ಮತದಾನದ ಶಾಯಿ ಗುರುತು; ಮತಗಳ್ಳತನ ಆರೋಪ

ಬಿಹಾರದಲ್ಲಿ ನವೆಂಬರ್ 6ರಂದು ನಡೆದ ಮೊದಲ ಹಂತದ ಮತದಾನದ ವೇಳೆ ಎನ್‌ಡಿಎ ಭಾಗವಾಗಿರುವ ಲೋಕಜನಶಕ್ತಿ ಪಕ್ಷ (ಎಲ್‌ಜೆಪಿ) ಸಂಸದೆ ಶಾಂಭವಿ ಚೌಧರಿ ಅವರ ಎರಡೂ ಕೈಗಳಲ್ಲಿ ಮತದಾನದ ಗುರುತಿನ ಶಾಯಿ ಕಂಡುಬಂದಿದೆ. ಈ...

ಗೋಲ್ಪಾರದಲ್ಲಿ ತೆರವು ಕಾರ್ಯಾಚರಣೆ ಪುನರಾರಂಭಿಸಿದ ಅಸ್ಸಾಂ ಸರ್ಕಾರ : ನೆಲೆ ಕಳೆದುಕೊಳ್ಳಲಿರುವ 600 ಕುಟುಂಬಗಳು

ದಹಿಕಾಟಾ ಮೀಸಲು ಅರಣ್ಯದೊಳಗಿನ 1,140 ಬಿಘಾ (376 ಎಕರೆಗೂ ಹೆಚ್ಚು) ಅರಣ್ಯ ಭೂಮಿಯ ಮೇಲಿನ ಅತಿಕ್ರಮಣವನ್ನು ತೆರವುಗೊಳಿಸಲು ಅಸ್ಸಾಂ ಸರ್ಕಾರ ಭಾನುವಾರ (ನ.9) ಗೋಲ್ಪಾರ ಜಿಲ್ಲೆಯಲ್ಲಿ ತನ್ನ ತೆರವು ಕಾರ್ಯಾಚರಣೆಯನ್ನು ಪುನರಾರಂಭಿಸಿದೆ. ಇದರಿಂದ...

ದಲಿತ ಸಂಶೋಧನಾ ವಿದ್ಯಾರ್ಥಿಗೆ ಜಾತಿ ತಾರತಮ್ಯ ಆರೋಪ : ತನಿಖೆಗೆ ಆದೇಶಿಸಿದ ಸರ್ಕಾರ

ತಿರುವನಂತಪುರದ ಕೇರಳ ವಿಶ್ವವಿದ್ಯಾಲಯದಲ್ಲಿ ದಲಿತ ಸಂಶೋಧನಾ ವಿದ್ಯಾರ್ಥಿಗೆ ಜಾತಿ ತಾರತಮ್ಯ ಮಾಡಲಾಗಿದೆ ಎಂಬ ಆರೋಪದ ಕುರಿತ ತನಿಖೆಗೆ ಉನ್ನತ ಶಿಕ್ಷಣ ಸಚಿವೆ ಆರ್‌.ಬಿಂದು ಶನಿವಾರ (ನ.8) ಆದೇಶಿಸಿದ್ದಾರೆ. ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ...

ಅಂಡಮಾನ್, ನಿಕೋಬಾರ್ ದ್ವೀಪಗಳಲ್ಲಿ ಭೂಕಂಪ : ರಿಕ್ಟರ್ ಮಾಪಕದಲ್ಲಿ 5.4 ತೀವ್ರತೆ ದಾಖಲು

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಇಂದು (ನ.9, 2025) ಮಧ್ಯಾಹ್ನ 12:06ಕ್ಕೆ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5.4 ತೀವ್ರತೆ ದಾಖಲಾಗಿದೆ. ಭೂಕಂಪದ ಕೇಂದ್ರ ಬಿಂದು ಭೂಮಿಯ 90 ಕಿಲೋ ಮೀಟರ್ ಆಳದಲ್ಲಿ...

ತರಬೇತಿ ನಿರತ ಪೊಲೀಸರಿಗೆ ಭಗವದ್ಗೀತೆ ಪಠಿಸಲು ಆದೇಶ : ಇಲಾಖೆಯ ಕೇಸರೀಕರಣ ಎಂದ ಕಾಂಗ್ರೆಸ್

ಎಂಟು ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿರುವ ಮಧ್ಯಪ್ರದೇಶದ ಸುಮಾರು 4,000 ಹೊಸದಾಗಿ ನೇಮಕಗೊಂಡ ಪೊಲೀಸ್ ಕಾನ್‌ಸ್ಟೆಬಲ್‌ಗಳು ಹಿಂದೂ ಮಾಸದ ಮಾರ್ಗಶಿರದಲ್ಲಿ ಪ್ರತಿದಿನ ಸಂಜೆ 'ಭಗವದ್ಗೀತೆ'ಯ ಅಧ್ಯಾಯಗಳನ್ನು ಓದಲು ನಿರ್ದೇಶಿಸಲಾಗಿದೆ. ತರಬೇತಿಯಲ್ಲಿರುವ ಕಾನ್‌ಸ್ಟೆಬಲ್‌ಗಳಿಗೆ ನೀತಿವಂತ ಮತ್ತು ಶಿಸ್ತಿನ...

ಪಶ್ಚಿಮ ಬಂಗಾಳ : ನಾಲ್ಕು ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ

ನಾಲ್ಕು ವರ್ಷ ವಯಸ್ಸಿನ ಹೆಣ್ಣು ಮಗುವನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯವೆಸಗಿದ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಶುಕ್ರವಾರ (ನ.7) ರಾತ್ರಿ ಈ ಘಟನೆ ನಡೆದಿದೆ. ಅಪರಿಚಿತರು ದುಷ್ಕೃತ್ಯವೆಸಗಿದ್ದಾರೆ. ಮಗುವಿನ...

ವಂದೇ ಭಾರತ್‌ ರೈಲಿನಲ್ಲಿ ಆರ್‌ಎಸ್‌ಎಸ್‌ ಗೀತೆ ಹಾಡಿದ ಮಕ್ಕಳು, ವಿಡಿಯೋ ಹಂಚಿಕೊಂಡ ರೈಲ್ವೆ : ತೀವ್ರ ವಿರೋಧ

ಶನಿವಾರ (ನ.8) ಎರ್ನಾಕುಲಂ-ಬೆಂಗಳೂರು ನಡುವಿನ ನೂತನ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು ಆರ್‌ಎಸ್‌ಎಸ್‌ ಗೀತೆ ಹಾಡಿರುವ ವಿಡಿಯೋವನ್ನು ದಕ್ಷಿಣ ರೈಲ್ವೆ ಹಂಚಿಕೊಂಡಿದ್ದು, ಕೇರಳದಲ್ಲಿ ತೀವ್ರ ಆಕ್ಷೇಪ...

ಶಾಲಾ ಮಕ್ಕಳಿಗೆ ನ್ಯೂಸ್ ಪೇಪರ್‌ನಲ್ಲಿ ಬಿಸಿಯೂಟ ಬಡಿಸಿದ ವಿಡಿಯೋ ವೈರಲ್ : ಪ್ರಧಾನಿ, ಸಿಎಂಗೆ ನಾಚಿಕೆಯಾಗ್ಬೇಕು ಎಂದ ರಾಹುಲ್ ಗಾಂಧಿ

ಮಧ್ಯಪ್ರದೇಶದ ಶಾಲೆಯೊಂದರ ಮಕ್ಕಳು ನ್ಯೂಸ್‌ ಪೇಪರ್‌ನಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿದ ವಿಡಿಯೋ ಹಂಚಿಕೊಂಡಿರುವ ರಾಹುಲ್ ಗಾಂಧಿ, "ಇಂತಹ ದಯನೀಯ ಸ್ಥಿತಿಯಲ್ಲಿ ಭಾರತದ ಭವಿಷ್ಯ ಬೆಳಗುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಮೋಹನ್...

ಬಿಹಾರ ಚುನಾವಣೆ : ರಸ್ತೆ ಬದಿ ಪತ್ತೆಯಾದ ವಿವಿಪ್ಯಾಟ್‌ ಸ್ಲಿಪ್‌ಗಳು

ಬಿಹಾರದ ಸಮಸ್ತಿಪುರ ಜಿಲ್ಲೆಯ ಶೀತಲ್‌ಪಟ್ಟಿ ಗ್ರಾಮದ ಎಸ್‌ಆರ್ ಕಾಲೇಜು ಬಳಿ ಭಾರೀ ಸಂಖ್ಯೆಯಲ್ಲಿ ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿ ಪ್ಯಾಟ್‌) ಸ್ಲಿಪ್‌ಗಳು ಪತ್ತೆಯಾಗಿದ್ದು, ಭಾರತೀಯ ಚುನಾವಣಾ ಆಯೋಗ (ಇಸಿಐ) ಶನಿವಾರ...