Homeಕರ್ನಾಟಕಬೆಲೆ ಏರಿಕೆ ವಿರುದ್ಧ ಟ್ರೆಂಡ್ ಆದ ’ಏರಿದ ಬೆಲೆ ಉರಿಯದ ಒಲೆ’ ಅಭಿಯಾನ

ಬೆಲೆ ಏರಿಕೆ ವಿರುದ್ಧ ಟ್ರೆಂಡ್ ಆದ ’ಏರಿದ ಬೆಲೆ ಉರಿಯದ ಒಲೆ’ ಅಭಿಯಾನ

- Advertisement -
- Advertisement -

ದೇಶದಲ್ಲಿ ಸತತವಾಗಿ ಪೆಟ್ರೋಲ್, ಡೀಸೆಲ್, ಅಗತ್ಯ ವಸ್ತುಗಳ ಬೆಲೆ ಏರಿಕೆ ನಡೆಯುತ್ತಿರುವುದನ್ನು ಖಂಡಿಸಿ ಕರ್ನಾಟಕ ಕ್ರಾಂತಿಕಾರಿ ಪಡೆ ಕರೆ ನೀಡಿದ್ದ ಟ್ವಿಟರ್‌ ಅಭಿಯಾನಕ್ಕೆ ಭಾರಿ ಸ್ಪಂದನೆ ಸಿಕ್ಕಿದ್ದು, #ಏರಿದಬೆಲೆ_ಉರಿಯದಒಲೆ ಟ್ವಿಟರ್‌ನಲ್ಲಿ ನಂಬರ್ ಒನ್ ಟ್ರೆಂಡ್ ಆಗಿದೆ.

ಕರ್ನಾಟಕ ಟ್ರೆಂಡ್ಸ್‌ನಲ್ಲಿ ಮೊದಲ ಸ್ಥಾನದಲ್ಲಿ ಏರಿದಬೆಲೆ_ಉರಿಯದಒಲೆ ಹ್ಯಾಶ್‌ಟ್ಯಾಗ್‌ ಟ್ರೆಂಡ್ ಆಗಿದೆ. ಈ ಬರಹ ಬರೆಯುವ ಹೊತ್ತಿಗೆ ಸುಮಾರು 10 ಸಾವಿರ ಮಂದಿ ಈ ಹ್ಯಾಶ್‌ಟ್ಯಾಗ್ ಬಳಸಿದ್ದಾರೆ. ಬೆಲೆ ಏರಿಕೆ ಖಂಡಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಕೊರೊನಾ ಸಮಯದಲ್ಲಿ ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಜನರಿಗೆ ಬೆಲೆ ಏರಿಕೆ ಬರೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಕಿವೆ. ಜನ ವಿರೋಧಿ, ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ಇವುಗಳ ನೀತಿಯನ್ನು ವಿರೋಧಿಸಿ ಟ್ವಿಟರ್‌ ಅಭಿಯಾನದಲ್ಲಿ ಪಾಲ್ಗೊಳ್ಳಿ ಎಂದು ಕರ್ನಾಟಕ ಕ್ರಾಂತಿಕಾರಿ ಪಡೆ ಕರೆ ನೀಡಿತ್ತು.

ಇದನ್ನೂ ಓದಿ:  ಟ್ವಿಟರ್ ಅಭಿಯಾನದ ಮೂಲಕ ಸಾಮಾಜಿಕ ಹೋರಾಟಗಳಿಗೆ ಜೊತೆಯಾದ ಕರ್ನಾಟಕ ಕ್ರಾಂತಿಕಾರಿ ಪಡೆ!

’ಆತ್ಮ ನಿರ್ಬರ!, ಅಚ್ಚೇ ದಿನ್! ನಯಾ ಭಾರತ್! ಮೇಕ್ ಇನ್ ಇಂಡಿಯಾ!, ಬೇಟೀ ಬಚಾವ್, ಬೇಟೀ ಪಡಾವ್!, ಹೀಗೇ ಒಂದರ ನಂತರ ಒಂದರಂತೆ ಘೋಷಣೆಗಳನ್ನು ಹುಟ್ಟುಹಾಕುತ್ತಾ ಇನ್ನೆಷ್ಟು ದಿನ ಜನರನ್ನು ದಿಕ್ಕು ತಪ್ಪಿಸುತ್ತೀರಿ..? ಮೋಸ ಮಾಡುತ್ತೀರಿ..? ತೆರಿಗೆ ಇಳಿಸಿ! ದರ ಇಳಿಸಿ!’ ಎಂದು ರಾಕಿ ಎಂಬ ಟ್ವಿಟರ್‌ ಖಾತೆ ಬಳಕೆದಾರರು ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ನಾಯಕ ಶ್ರೀವತ್ಸ ಟ್ವೀಟ್‌ ಮಾಡಿ, ಕಳೆದ ಒಂದು ವರ್ಷದಲ್ಲಿ ಪೆಟ್ರೋಲ್ 26 ರೂ., ಡೀಸೆಲ್ 25 ರೂ, ಎಲ್‌ಪಿಜಿ ಸಿಲಿಂಡರ್‌ 250 ರೂ, ಅಡುಗೆ ಎಣ್ಣೆ 80 ರೂ, ಬೆಳೆ 50 ರೂ. ಏರಿಕೆಯಾಗಿರುವುದನ್ನು ತಿಳಿಸಿದ್ದಾರೆ. ಜೊತೆಗೆ ಜಿಡಿಪಿ, ಕೆಲಸಗಳು, ಆರ್ಥಿಕತೆ ಕುಸಿತವಾಗಿರುವುದನ್ನು ಟೀಕಿಸಿದ್ದಾರೆ. ಇಷ್ಟೇಲ್ಲದರ ನಡುವೆಯೂ ಮೋದಿಜಿ ಅಚ್ಚೇ ದಿನ ಜಪ ಮಾಡುತ್ತಿದ್ದಾರೆ ಎಂದಿದ್ದಾರೆ.

 

’ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಪ್ರಚಾರ ಮತ್ತು ಚುನಾವಣಾ ರಾಜಕೀಯದಿಂದ ಸಮಯ ಸಿಗುತ್ತಿಲ್ಲ. ಹಾಗಾಗಿ ಅದರ ನಾಯಕರಿಗೆ ಬಡಜನರ ಜೀವನದ ವಾಸ್ತವತೆಯ ಅರಿವೇ ಇಲ್ಲ. ಬೆಲೆ ಏರಿಕೆಯಿಂದ ಬಡ ಮತ್ತು ಮಧ್ಯಮ ವರ್ಗದ ಜನರ ಬದುಕು ದುಸ್ತರವಾಗಿದೆ. ಆದರೆ, ಸರ್ಕಾರಗಳು ಬೆಲೆ ಏರಿಕೆ ತಡೆಗಟ್ಟುವಲ್ಲಿ ವಿಫಲವಾಗಿವೆ!!” ಎಂದು ಲಾವಣ್ಯ ಬಲ್ಲಾಳ್ ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ: ನಕಲಿ ಲಸಿಕೆ ಜಾಲದಿಂದ ಮೋಸಹೋದ ಟಿಎಂಸಿ ಸಂಸದೆ ಮಿಮಿ ಚಕ್ರವರ್ತಿ : ಓರ್ವನ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಬಡವರ ಬದುಕು ಮೂರ ಬಟ್ಟೆ ಬಿ ಜೆ ಪಿ ಪಕ್ಷ ನಂಬಿ ಕರ್ನಾಟಕ ಜನತೆ ಊಟ ತಿಂಡಿ ಬಿಟ್ಟೆ ಬಿಟ್ಟೆ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...