Homeಮುಖಪುಟವಿಶ್ವದಲ್ಲೆ ಅಗ್ಗದ ಸ್ಮಾರ್ಟ್‌ಫೋನ್‌‌ ಸೆಪ್ಟೆಂಬರ್‌‌ 10 ರಂದು ಬಿಡುಗಡೆ: ಮುಖೇಶ್‌ ಅಂಬಾನಿ

ವಿಶ್ವದಲ್ಲೆ ಅಗ್ಗದ ಸ್ಮಾರ್ಟ್‌ಫೋನ್‌‌ ಸೆಪ್ಟೆಂಬರ್‌‌ 10 ರಂದು ಬಿಡುಗಡೆ: ಮುಖೇಶ್‌ ಅಂಬಾನಿ

- Advertisement -
- Advertisement -

ಭಾರತದಲ್ಲಿ ವಿಶ್ವದಲ್ಲೇ ಅಗ್ಗದ ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಗೂಗಲ್ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿದ ಹೊಸ ‘ಜಿಯೋಫೋನ್ ನೆಕ್ಸ್ಟ್’ ಸೆಪ್ಟೆಂಬರ್ 10 ರ ಗಣೇಶ ಚತುರ್ಥಿ ದಿನದಂದು ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ರಿಲಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿ ಗುರುವಾರ ತಿಳಿಸಿದ್ದಾರೆ.

“ನಿರ್ದಿಷ್ಟವಾಗಿ ಈ ಫೋನ್‌ಗಾಗಿಯೆ ನಮ್ಮ ತಂಡಗಳು ಆಂಡ್ರಾಯ್ಡ್‌ನ ವಿಶೇಷ ಆವೃತ್ತಿಯನ್ನು ಅತ್ಯುತ್ತಮಗೊಳಿಸಿವೆ. ಈ ಫೋನ್‌ ಅನ್ನು ಭಾರತಕ್ಕಾಗಿಯೆ ತಯಾರಿಸಲಾಗಿದ್ದು, ಮೊದಲ ಬಾರಿಗೆ ಸ್ಮಾರ್ಟ್‌ಫೋನ್ ಬಳಸುವ ಬಳಕೆದಾರರಿಗಾಗಿ ನಿರ್ಮಿಸಲಾಗಿದೆ” ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ.

“ನಮ್ಮ ಜೀವನ ಮತ್ತು ಕೆಲಸದ ಹಲವು ಅಂಶಗಳು ಆನ್‌ಲೈನ್‌ನಲ್ಲಿ ನಡೆಯುತ್ತಿರುವ ಸಮಯದಲ್ಲಿ, ತಂತ್ರಜ್ಞಾನವನ್ನು ಎಲ್ಲರಿಗೂ ಇನ್ನೂ ಸುಲಭವಾಗಿ ಮತ್ತು ಸಹಾಯಕವಾಗುವಂತೆ ಮಾಡುವುದು ಮುಖ್ಯವಾಗಿದೆ. ರಿಲಯನ್ಸ್ ಜಿಯೋ ಜೊತೆಗಿನ ನಮ್ಮ ಪಾಲುದಾರಿಕೆಯ ಮುಖ್ಯ ಗುರಿ ಇದಾಗಿದೆ” ಎಂದು ಸುಂದರ್‌‌ ಪಿಚೈ ಹೇಳಿದ್ದಾರೆ.

ಇದನ್ನೂ ಓದಿ: ಜಿಯೋ ಟವರ್ ಮೇಲಿನ ರೈತರ ದಾಳಿಗೆ ಬೆದರಿದ ರಿಲಾಯನ್ಸ್: ಗುತ್ತಿಗೆ ಕೃಷಿ ಮಾಡುವುದಿಲ್ಲವೆಂದು ಹೇಳಿಕೆ

ಈ ಫೋನ್‌ ಮೊದಲು ಭಾರತದಲ್ಲಿ ಬಿಡುಗಡೆಯಾಗಲಿದ್ದು, ನಂತರ ಅದನ್ನು ವಿಶ್ವದ ಇತರ ಭಾಗಗಳಲ್ಲಿ ಬಿಡುಗಡೆಯಾಗಲಿದೆ.

ಆದರೆ ಭಾರತೀಯರು ಅಗ್ಗದ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಕಡಿಮೆ ಆಸಕ್ತಿ ತೋರುತ್ತಿದ್ದು, ಇಂತಹ ಸಮಯದಲ್ಲಿ ಈ ಸ್ಮಾರ್ಟ್ ಫೋನ್‌ ಬಿಡುಗಡೆಯಾಗುತ್ತಿದೆ.

ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ 100 ಡಾಲರ್‌‌ಗಳ ಸ್ಮಾರ್ಟ್‌ಫೋನ್‌ ಕೇವಲ 12% ರಷ್ಟು ಮಾತ್ರ ಬೇಡಿಕೆಯಿದೆ. ಈ ರೇಂಜ್‌ನ ಫೋನ್‌ಗಳಿಗೆ 2019 ರಲ್ಲಿ 18% ಮತ್ತು 2018 ರಲ್ಲಿ 24% ದಷ್ಟು ಬೇಡಿಕೆಯಿತ್ತು ಎಂದು ಟೆಕ್‌ಕ್ರಂಚ್ ವೆಬ್‌ಸೈಟ್‌ನ ಸಂಶೋಧನಾ ಸಂಸ್ಥೆ ಕೌಂಟರ್‌ಪಾಯಿಂಟ್ ಉಲ್ಲೇಖಿಸಿದೆ.

50 ಡಾಲರ್‌ ರೇಂಜ್‌ನ ಸ್ಮಾರ್ಟ್‌ಫೋನ್‌ಗಳ ಬೇಡಿಕೆ ಇನ್ನೂ ಕಡಿಮೆಯಿದೆ. 2020 ರ ಮಾಹಿತಿಯಂತೆ ಈ ರೇಂಜ್‌ನ ಸ್ಮಾರ್ಟ್‌ಫೋನ್‌ನ ಬೇಡಿಕೆಯು ಮಾರುಕಟ್ಟೆಯಲ್ಲಿ ಕೇವಲ 0.3% ನಷ್ಟಿತ್ತು. ಮಾರುಕಟ್ಟೆಯಲ್ಲಿ ಎರಡು ವರ್ಷಗಳ ಹಿಂದೆ ಈ ರೇಂಜ್‌ನ ಸ್ಮಾರ್ಟ್‌ಫೋನ್‌ಗಳ ಬೇಡಿಕೆಯು 4.3% ಇದ್ದವು.

ಪ್ರಸ್ತುತ ಬಿಡುಗಡೆಯಾಗುತ್ತಿರುವ ಜಿಯೋಫೋನ್‌ನ ಬೆಲೆ ಮತ್ತು ಅದರ ಇತರ ವಿವರಗಳ ಮಾಹಿತಿ ಇನ್ನೂ ಬಿಡುಗಡೆಯಾಗಿಲ್ಲ.

ಇದನ್ನೂ ಓದಿ: ಗುತ್ತಿಗೆ ಕೃಷಿಯಲ್ಲಿ ಆಸಕ್ತಿಯಿಲ್ಲ ಎಂದು ರಿಲಾಯನ್ಸ್‌ನ ಅಂಬಾನಿಗಳು ಹೇಳುತ್ತಿರುವುದು ನಿಜವೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

4 COMMENTS

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯ ಅಧಿಕೃತ ‘ಎಕ್ಸ್’ ಖಾತೆ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಚುನಾವಣಾ ಆಯೋಗ

0
ವಿವಿಧ ಗುಂಪುಗಳು ಮತ್ತು ವರ್ಗಗಳ ನಡುವೆ ದ್ವೇಷ ಹರಡಲು ಮತ್ತು ಉತ್ತೇಜಿಸಲು ಯತ್ನಿಸುತ್ತಿರುವ ಆರೋಪದ ಮೇಲೆ ಬಿಜೆಪಿಯ ಅಧಿಕೃತ ಎಕ್ಸ್ ಖಾತೆ ವಿರುದ್ಧ ಚುನಾವಣಾ ಆಯೋಗ ಎಫ್‌ಐಆರ್‌ನ್ನು ದಾಖಲಿಸಿದೆ. ಈ ಕುರಿತು ಚುನಾವಣಾ ಆಯೋಗ...