Homeಚಳವಳಿಜಿಯೋ ಟವರ್ ಮೇಲಿನ ರೈತರ ದಾಳಿಗೆ ಬೆದರಿದ ರಿಲಾಯನ್ಸ್: ಗುತ್ತಿಗೆ ಕೃಷಿ ಮಾಡುವುದಿಲ್ಲವೆಂದು ಹೇಳಿಕೆ

ಜಿಯೋ ಟವರ್ ಮೇಲಿನ ರೈತರ ದಾಳಿಗೆ ಬೆದರಿದ ರಿಲಾಯನ್ಸ್: ಗುತ್ತಿಗೆ ಕೃಷಿ ಮಾಡುವುದಿಲ್ಲವೆಂದು ಹೇಳಿಕೆ

- Advertisement -
- Advertisement -

ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ವಿವಾದಾತ್ಮಕ ಮೂರು ಕೃಷಿ ಕಾನೂನುಗಳ ಹಿಂದೆ ರಿಲಾಯನ್ಸ್ ಕಂಪೆನಿಯಿದೆ ಎಂದು ಆಕ್ರೋಶಗೊಂಡಿದ್ದ ಪಂಜಾಬ್ ಮತ್ತು ಹರಿಯಾಣದ ರೈತರು ಜಿಯೋ ಟವರ್‌ಗಳಿಗೆ ಹಾನಿ ಮಾಡಿದ್ದರು. ಇದೀಗ ಕಂಪೆನಿಯು ಗುತ್ತಿಗೆ ಕೃಷಿಯಲ್ಲಿ ತನಗೆ ಆಸಕ್ತಿಯಿಲ್ಲ, ಆದ್ದರಿಂದ ತನಗೂ ಈ ಕಾನೂನಿಗೂ ಸಂಬಂಧವಿಲ್ಲ. ಆದ್ದರಿಂದ ತನ್ನ ಆಸ್ತಿ ಮತ್ತು ಸೇವೆಗಳನ್ನು ಕಾಪಾಡಲು ಸರ್ಕಾರದ ಹಸ್ತಕ್ಷೇಪ ಮಾಡುವಂತೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದೆ.

ಹರಿಯಾಣ ಮತ್ತು ಪಂಜಾಬ್‌ನ ರೈತರು ರಿಲಯನ್ಸ್ ಕಂಪೆನಿಗೆ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸುವುದು ಹಾಗೂ ಕಂಪೆನಿಯ ಜಿಯೋ ಟವರ್‌ಗಳ ಕೇಬಲ್‌ಗಳನ್ನು ಕತ್ತರಿಸುವುದು ಸೇರಿದಂತೆ ಕಂಪೆನಿಯ ಮೂಲಸೌಕರ್ಯಕ್ಕೆ ಹಾನಿ ಮಾಡುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಅಲ್ಲದೇ ಕಳೆದೆರಡು ತಿಂಗಳಿಂದ ಜಿಯೋ ಸಿಮ್‌ನಿಂದ ಹೊರಬರುವಂತೆ ನೀಡಿದ ರೈತರ ಕರೆಗೆ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು ಭಾರತದಲ್ಲಿ ಜಿಯೋ ಗಣನೀಯವಾಗಿ ಕುಸಿಸಿದೆ. ಈಗ ಭಾರತದ ಸಕ್ರಿಯ ಬಳಕೆದಾರರದಲ್ಲಿ ಏರ್‌ಟೆಲ್ ನಂಬರ್ ಒನ್ ಸ್ಥಾನದಲ್ಲಿದೆ.

ಇದನ್ನೂ ಓದಿ: ಜಿಯೋ ಟವರ್‌ಗಳ ಮೇಲಿನ ರೈತರ ದಾಳಿಯನ್ನು ಪರೋಕ್ಷವಾಗಿ ಖಂಡಿಸಿದ ಪ್ರಧಾನಿ

ರಿಲಯನ್ಸ್ ಕಂಪೆನಿಯು ಇಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ಮೊರೆ ಹೋಗಿದ್ದು, ದುಷ್ಕರ್ಮಿಗಳು ನಡೆಸಿದ ಅಕ್ರಮ ವಿಧ್ವಂಸಕ ಕೃತ್ಯಗಳನ್ನು ತಡೆಯಲು ಸರ್ಕಾರದ ತುರ್ತು ಹಸ್ತಕ್ಷೇಪ ಮಾಡುವಂತೆ ಕೋರಿದೆ.

“ಈ ಹಿಂಸಾಚಾರವು ತನ್ನ ಸಾವಿರಾರು ಉದ್ಯೋಗಿಗಳ ಜೀವಕ್ಕೆ ಅಪಾಯ ಉಂಟುಮಾಡಿದೆ. ಎರಡು ರಾಜ್ಯಗಳಲ್ಲಿ ಅಂಗಸಂಸ್ಥೆಗಳ ಪ್ರಮುಖ ಸಂವಹನ ಮೂಲಸೌಕರ್ಯ, ಮಾರಾಟ ಮತ್ತು ಸೇವಾ ಮಳಿಗೆಗಳಿಗೆ ಹಾನಿ ಮತ್ತು ಅಡ್ಡಿಯುಂಟಾಗುತ್ತಿದೆ. ಈ ವಿಧ್ವಂಸಕ ಕೃತ್ಯದಲ್ಲಿ ಪಾಲ್ಗೊಳ್ಳುವ ದುಷ್ಕರ್ಮಿಗಳನ್ನು ಪಟ್ಟಭದ್ರ ಹಿತಾಸಕ್ತಿಗಳು ಮತ್ತು ನಮ್ಮ ವ್ಯಾಪಾರಿ ಪ್ರತಿಸ್ಪರ್ಧಿಗಳು ಪ್ರಚೋದಿಸಿದ್ದಾರೆ ಹಾಗೂ ಸಹಾಯ ಮಾಡಿದ್ದಾರೆ” ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

ಪಟ್ಟಭದ್ರ ಹಿತಾಸಕ್ತಿಗಳು ರಿಲಯನ್ಸ್ ವಿರುದ್ಧ ನಿರಂತರ, ದುರುದ್ದೇಶಪೂರಿತ ಅಭಿಯಾನವನ್ನು ನಡೆಸಿ ರೈತರ ಆಂದೋಲನದ ಲಾಭವನ್ನು ಪಡೆದುಕೊಳ್ಳುತ್ತಿದೆ. ಗುತ್ತಿಗೆ ಕೃಷಿಯಲ್ಲಿ ತನಗೆ ಆಸಕ್ತಿ ಇಲ್ಲದಿರುವುದರಿಂದ ಕೃಷಿ ಕಾನೂನುಗಳೊಂದಿಗೆ ತನಗೂ ಯಾವುದೇ ಸಂಬಂಧವಿಲ್ಲ ಎಂದು ಕಂಪೆನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ’ಜಿಯೋ ಸಿಮ್ ತಿರಸ್ಕರಿಸಿ, ಬಿಎಸ್‌ಎನ್‌ಎಲ್‌ ಸಿಮ್‌ ಪ್ರೋತ್ಸಾಹಿಸಿ’: ಮಂಡ್ಯದಲ್ಲಿ AILU ಪ್ರತಿಭಟನೆ

ಕಾನೂನುಗಳನ್ನು ಗಮನದಲ್ಲಿಟ್ಟುಕೊಂಡು ಪಂಜಾಬ್ ಅಥವಾ ಹರಿಯಾಣದಲ್ಲಿ ತಾನು ಭೂಮಿಯನ್ನು ಖರೀದಿಸುವುದಿಲ್ಲ ಎಂದು ಕಂಪೆನಿಯೂ ಹೇಳಿದ್ದು, “ಭಾರತೀಯರ ಅನ್ನದಾತರಾಗಿರುವ ರೈತರ ಬಗ್ಗೆ ರಿಲಯನ್ಸ್‌ಗೆ ಅಪಾರವಾದ ಗೌರವ ಮತ್ತ ಕೃತಜ್ಞತೆಯಿದೆ” ಎಂದು ಹೇಳಿದೆ.

ಒಕ್ಕೂಟ ಸರ್ಕಾರವು ಜಾರಿ ಮಾಡಿದ ಕಾನೂನುಗಳ ಹಿಂದೆ ಮುಖೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಇದೆ ಎಂದು ಹಲವಾರು ರೈತರು ಈಗಾಗಲೆ ಆರೋಪಿಸಿದ್ದರು. ಈ ಕಾನೂನುಗಳು ತಮ್ಮ ದೀರ್ಘಕಾಲೀನ ಹಿತಾಸಕ್ತಿಗಳಿಗೆ ಹಾನಿಕಾರಕವೆಂದು ಹೇಳುತ್ತಿರುವ ರೈತರು ಇದರ ವಿರುದ್ದ ಕಳೆದ 40 ದಿನಗಳಿಂದ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಪಂಜಾಬ್‌ ರಾಜ್ಯದಲ್ಲಿರುವ ಜಿಯೋ ರಿಲಯನ್ಸ್ ಜಿಯೋದ 9,000 ಟವರ್‌ಗಳಲ್ಲಿ 1,500 ಕ್ಕೂ ಹೆಚ್ಚು ಟವರ್‌ಗೆ ಹಾನಿ ಮಾಡಲಾಗಿದೆ ಎಂದು ಕಂಪೆನಿಯ ಪ್ರತಿನಿಧಿಯೊಬ್ಬರು ತಿಳಿಸಿದ್ದರು. ಘಟನೆಯ ಬಗ್ಗೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಇಂತಹ ವಿಧ್ವಂಸಕ ಕೃತ್ಯಗಳ ವಿರುದ್ಧ ಕಠಿಣ ಎಚ್ಚರಿಕೆ ನೀಡಿದ್ದು, ಇಂತಹ ಪ್ರಕರಣಗಳಲ್ಲಿ ಕಟ್ಟುನಿಟ್ಟಾಗಿ ವರ್ತಿಸುವಂತೆ ಪೊಲೀಸರಿಗೆ ಸೂಚಿಸಿದ್ದರು.

ಇದನ್ನೂ ಓದಿ: ಪಂಜಾಬ್: 1500 ಕ್ಕೂ ಹೆಚ್ಚು ಜಿಯೋ ಟವರ್‌ಗಳಿಗೆ ಹಾನಿ ಮಾಡಿದ ರೈತ ಹೋರಾಟಗಾರರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...